Author: Tulunada Surya

ಕುಸುಮ ತಿಮ್ಮಪ್ಪ ರೈ ಬೆಳ್ಯ , 9೦ ವರ್ಷಗಳಿಗೂ ಹೆಚ್ಚು ಕಾಲ ಬದುಕಿದ ಒಬ್ಬ ಅಸಾಧಾರಣ ಮಹಿಳೆ. ಬೆಳ್ಯ ವೆಂಕಮ್ಮ ರೈ ಮತ್ತು ಮಿಯೋನಿ ಪಟ್ಟೆ ಸುಬ್ಬಣ್ಣ ರೈ ದಂಪತಿಗಳ ಪ್ರಥಮ ಪುತ್ರಿಯಾಗಿ ಜನಿಸಿದ ಇವರು, ಕೊಡಗಿನ ದಿವಂಗತ ಬಿ. ಎಸ್. ತಿಮ್ಮಪ್ಪ ರೈ ಅವರನ್ನು ವಿವಾಹವಾದರು. ತಿಮ್ಮಪ್ಪ ರೈ ವಿಜಯ ಬ್ಯಾಂಕಿನ ಸೂಪರಿಂಟೆಂಡೆಂಟ್ ಆಗಿದ್ದರು.ಕುಸುಮ ರೈ ಅವರ ಕುಟುಂಬವು ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಗಾಢವಾದ ಸಂಬಂಧ ಹೊಂದಿತ್ತು. ಇವರ ಮಗ ಮತ್ತು ಸೊಸೆ ಇಬ್ಬರೂ ವಿಜಯ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಹಿರಿಯ ಮಗಳು ಮತ್ತು ಅಳಿಯ ಕೂಡ ವಿಜಯ ಬ್ಯಾಂಕಿನಿಂದ ನಿವೃತ್ತರಾಗಿದ್ದಾರೆ. ಇವರ ಎರಡನೇ ಮಗಳು ಶಿಕ್ಷಕಿಯಾಗಿದ್ದು, ಆಕೆಯ ಗಂಡ ಮೊತಿಮಹಲ್‌ನ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಇವರ ಕಿರಿಯ ಮಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯಾಗಿದ್ದು, ಈಗ ನಿವೃತ್ತಿಯಾಗಿದ್ದಾರೆ. ಆಕೆಯ ಗಂಡ ಕುಂಜಾಡಿ ಕುಟುಂಬದ ಮಾಜಿ ಭೂಮಾಲೀಕರಾಗಿದ್ದರು.ಕುಸುಮ ರೈ ಅವರು ಒಂಟಿ ತಾಯಿಯಾಗಿ…

Read More

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದನಕಟ್ಟೆ ಗ್ರಾಮದಲ್ಲಿ ನಡೆದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಅಶ್ವಿನಿ (20) ಆತ್ಮಹತ್ಯೆ ಪ್ರಕರಣಕ್ಕೆ ತೀವ್ರ ತಿರುವು ದೊರೆತಿದೆ. ಮೊದಲು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಆತ್ಮಹತ್ಯೆ ಎನ್ನುತ್ತಿದ್ದ ಶಂಕೆಗೆ ಇದೀಗ ಅವಳ ಮೊಬೈಲ್‌ ಪತ್ತೆಯಾದ ವಾಟ್ಸಪ್ ಸಂದೇಶಗಳು ಹಾಗೂ ಆಡಿಯೋ ಕ್ಲಿಪ್ ಹೊಸ ಬೆಳಕು ಹರಡಿವೆ. ಪ್ರೇಮ, ಮೋಸ ಮತ್ತು ಆತ್ಮಹತ್ಯೆ ಅಶ್ವಿನಿ ತನ್ನ ಪಕ್ಕದ ಆಶ್ರಿಯಾಳ ಗ್ರಾಮದ ಚೇತನ್ ಎಂಬ ಯುವಕನೊಂದಿಗೆ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿ ತೊಡಗಿದ್ದಳು. ಆದರೆ ಇತ್ತೀಚೆಗೆ ಚೇತನ್ ಮತ್ತೊಬ್ಬ ಯುವತಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಮಾಹಿತಿ ಅಶ್ವಿನಿಗೆ ಲಭಿಸಿದ್ದು, ಈ ವಿಷಯವಾಗಿ ಇಬ್ಬರ ನಡುವೆ ಗಲಾಟೆ ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಆತ್ಮಹತ್ಯೆಗೆ ಮುನ್ನಾ ಮೆಸೇಜ್, ಆಡಿಯೋ, ಸೆಲ್ಫಿ! ಆತ್ಮಹತ್ಯೆಗೆ ಕೆಲವೇ ಕ್ಷಣಗಳ ಮೊದಲು ಅಶ್ವಿನಿ ಚೇತನ್‌ಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದು, “ನನಗಾದ ಮೋಸ ಯಾರಿಗೂ ಆಗಬಾರದು,” ಹಾಗೂ “ನಿನಗೆ ತಕ್ಕ ಪಾಠ ಕಲಿಸುತ್ತೇನೆ” ಎಂಬ ಆಡಿಯೋ ಕೂಡಾ…

Read More

ಸಿಂಗಾಪುರ:ತುಳು ಸಾಹಿತ್ಯ ಮತ್ತು ಸಂಗೀತ ಲೋಕಕ್ಕೆ ಮತ್ತೊಂದು ಬೆಳ್ಳಿ ಕಂಚಿನಂತ ಹೊಸ ಕೊಡುಗೆ ಆಗಿ, “ಒಸರ್” ಎಂಬ ಹೊಸ ತುಳು ಗೀತೆ ಆಗಸ್ಟ್ 31, 2025, ಐತವಾರ ಸಂಜೆ 6:00 (ಭಾರತೀಯ ಕಾಲಮಾನ)ಕ್ಕೆ ಝೂಮ್ ವೇದಿಕೆಯಲ್ಲಿ ಲೋಕಾರ್ಪಣೆಯಾಗಲಿದೆ. ಈ ಹೊಸ ಬಾವುಟದ ಕವಿತೆ – ಪತ್ರಕರ್ತೆ, ಕವಿ ಕವಿತಾ ಅಡೂರ್ ಅವರ ಕಲ್ಪನೆಯ ಪುತ್ತೆರ್ನ “ಉಡಲ್ದ ಪಸೆ” ತುಳುವಪದ – ಸಿಂಗಾಪುರ ತುಳುವೆರ್ ಕೂಟದ ಸಹಕಾರದೊಂದಿಗೆ ಮೂಡಿಬಂದಿದೆ. 🎵 ಸಂಗೀತ ಸಂಯೋಜನೆ: ವಿಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್🎤 ಗಾನ ವೈಭವ: ಹೊಸತ್ತಾದ ಧ್ವನಿಯಾಗಿ, ಸುಳ್ಯದ ಪ್ರತಿಭಾಶಾಲಿ ಗಾಯಕಿ ಸುಮಾ ಕೋಟೆ ಹಾಡುಗೆ ಜೀವ ತುಂಬಿದ್ದಾರೆ. ಪದವು ಆಳವಾದ ಭಾವನೆಗಳೊಡನೆ ಕನಸು, ಪ್ರೇಮ ಮತ್ತು ನಿರೀಕ್ಷೆಗಳ ಕಥಾನಕವನ್ನು ಬಿಚ್ಚಿಡುತ್ತಾ, ತುಳು ಸಾಹಿತ್ಯ-ಸಂಗೀತ ಲೋಕದಲ್ಲಿ ಹೊಸ ತಿರುವು ನೀಡುವ ವಿಶ್ವಾಸವಿದೆ. ✍️ ಪದ ಬರೆಹ: ಆಸ್ಟ್ರೇಲಿಯಾದ ಸಿಡ್ನಿ ತುಳುಕೂಟದ ರೂವಾರಿ, ತುಳು ಭಾಷಾ ಪ್ರೇಮಿ ಹಾಗೂ ಲಿಪಿ ಶಿಕ್ಷಕ ಸುರೇಶ ಪೂಂಜಾ ಅವರು…

Read More

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರವಾದ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವ ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ, ಅರ್ಧಕುಮಾರಿ ಬಳಿ ಇರುವ ಇಂದ್ರಪ್ರಸ್ಥ ಭೋಜನಾಲಯದ ಸಮೀಪ ಈ ಭೂಕುಸಿತ ಸಂಭವಿಸಿತು. ಘಟನೆಯ ವೇಳೆ, ಮಾರ್ಗದಲ್ಲಿ ನೂರಾರು ಯಾತ್ರಿಕರು ಸಾಗುತ್ತಿರುವ ವೇಳೆ ಹಿಮಪಾತದಂತ ಭೂಕುಸಿತ ಉಂಟಾಗಿದ್ದು, ಹಲವರು ಮಣ್ಣಿನಡಿ ಸಿಲುಕಿದ್ದರು. ಗಾಯಗೊಂಡವರನ್ನು ತ್ವರಿತವಾಗಿ ಕತ್ರಾ ಮತ್ತು ಜಮ್ಮುವಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಿರಂತರ ಮಳೆಯಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಹಾನಿಯಾಗಿದೆ. ಜಮ್ಮು-ಶ್ರೀನಗರ ಮತ್ತು ಕಿಶ್ತ್ವಾರ್-ದೋಡಾ ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದ್ದು, ಹಲವಾರು ಪರ್ವತದ ಮಾರ್ಗಗಳು ಭೂಕುಸಿತ ಮತ್ತು ತೀವ್ರ ಪ್ರವಾಹದಿಂದ ನಾಶವಾಗಿದೆ. ವಿದ್ಯುತ್ ಕಂಬಗಳು ಮತ್ತು ಮೊಬೈಲ್ ಟವರ್‌ಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ದೂರಸಂಪರ್ಕ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸಂಬಂಧಿಕರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಆಸ್ಪತ್ರೆಗಳು ಮತ್ತು ಮೂಲ ಶಿಬಿರಗಳಲ್ಲಿ ಜನರು ಮುಗಿ ಬಂದಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ…

Read More

ಮಂಗಳೂರು, ಆಗಸ್ಟ್ 27:ಜಪ್ಪಿನಮೊಗರು ಗ್ರಾಮದಲ್ಲಿ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 17ನೇ ವರ್ಷದ ಮಹಾ ಗಣಪತಿ ಪ್ರತಿಷ್ಠಾಪನಾ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು. ಶ್ರದ್ಧಾ, ಭಕ್ತಿ ಮತ್ತು ಸಾಂಸ್ಕೃತಿಕ ವೈಭವದ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯರ ಜೊತೆ ಗಣ್ಯರೂ ಹಾಜರಿದ್ದು, ಪವಿತ್ರತೆಯನ್ನು ಇನ್ನಷ್ಟು ಮೆರೆಯಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಸಮಿತಿಯ ಅಧ್ಯಕ್ಷರಾದ ನಾಗೇಂದ್ರ ಅವರು, ಕಳೆದ 17 ವರ್ಷಗಳಿಂದ ಈ ಹಬ್ಬವನ್ನು ಮುಂದುವರೆಸಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರ ಮಾರ್ಗದರ್ಶನವನ್ನು ಸ್ಮರಿಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರಿಗೆ ಹಾರ್ದಿಕ ಸ್ವಾಗತ ಕೋರಿದರು. ಪಾಲೆಮಾರ್ ಅಭಿಮಾನಭರಿತ ಮಾತು:ಉದ್ಘಾಟನಾ ಭಾಷಣ ಮಾಡಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು, “ಗಣಪತಿ ಆರಾಧನೆಯ ಮೂಲಕ ಗ್ರಾಮದಲ್ಲಿ ಧಾರ್ಮಿಕ ಚೇತನೆಯನ್ನು ಹುಟ್ಟುಹಾಕಲಾಗಿದೆ. ಇದು ಸಾತ್ವಿಕತೆಯ ಕಡೆಗೆ ಗ್ರಾಮಸ್ಥರ ಹೆಜ್ಜೆಯಾಗಿದೆ” ಎಂದು ಅಭಿಪ್ರಾಯಪಟ್ಟರು. ಅವರು, ಈ ಸಮಿತಿಯ ಮುಂದಿನ ಹೆಜ್ಜೆ – ಸ್ಥಳ ಖರೀದಿಗೆ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ತಿಳಿಸಿದರು. ಜೊತೆಗೆ ಗಣೇಶ…

Read More

ಮಂಗಳೂರಿನ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮಂಗಳೂರು ಇವರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭವು ಭಕ್ತಿ-ಭಾವಪೂರ್ಣ ವಾತಾವರಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, “ಗಣೇಶ ಚತುರ್ಥಿಗೆ ಐತಿಹಾಸಿಕ ಹಿನ್ನೆಲೆ ಇದೆ. ಗಣೇಶನಲ್ಲಿ ಪರಕೀಯರನ್ನು ದೂರ ಮಾಡುವ ಶಕ್ತಿ ಇದೆ. ಆದ್ದರಿಂದ ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವನ್ನಾಗಿಸದೆ, ನಗರ ಸ್ವಚ್ಛತೆಯ ಸಂಕಲ್ಪದೊಂದಿಗೆ ಆಚರಿಸಬೇಕು. ಪರಿಸರ ಕಾಳಜಿ ಇರಲಿ,” ಎಂದರು. ಧ್ವಜಾರೋಹಣವನ್ನು ಲೆ.ಕ. ರಮಾನಾಥ ಶೆಟ್ಟಿ ಮತ್ತು ಕ್ಷಮಾ ರಮಾನಾಥ ಶೆಟ್ಟಿ ನೆರವೇರಿಸಿದರು. ತೆನೆ ವಿತರಣೆ ಕಾರ್ಯವನ್ನು ಡಾ. ಮಹಾಬಲ ರೈ ಮತ್ತು ಮಲ್ಲಿಕಾ ಎಂ. ರೈ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ಸಮಾರಂಭದಲ್ಲಿ ಹಲವಾರು ಬಂಟರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. ಪುತ್ತೂರು, ಬಂಟ್ವಾಳ, ಬಜಪೆ, ಜಪ್ಪಿನಮೊಗರು ಮತ್ತು…

Read More

📍 ಪುಣೆ | ಆಗಸ್ಟ್ 27, 2025 | ತುಳುನಾಡ ಸೂರ್ಯ ನ್ಯೂಸ್ ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ ರಾತ್ರಿ ನಡೆದ ಭೀಕರ ಘಟನೆ ಒಂದು ಸಮುದಾಯವನ್ನೇ ಬೆಚ್ಚಿ ಬೀಳಿಸಿದೆ. ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ಮೂಲದವರು ಹಾಗೂ ಪುಣೆಯಲ್ಲಿ ಹೊಟೇಲ್ ಉದ್ಯಮಿಯಾಗಿ ನೆಲೆಯೂರಿದ್ದ ಸಂತೋಷ್ ಶೆಟ್ಟಿ (46) ಅವರು, ತಮ್ಮದೇ ಉದ್ಯಮದಲ್ಲಿ ಕೆಲಸ ಮಾಡಿದ ಸಿಬ್ಬಂದಿಯೊಬ್ಬನಿಂದ ಕತ್ತಿಯಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. 🛑 ಮದ್ಯಪಾನ – ಗದರಿಕೆ – ಹತ್ಯೆ ವಿವರಗಳ ಪ್ರಕಾರ, ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನು ವೆಯ್ಸರ್ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ರಾತ್ರಿ ಕೆಲಸದ ವೇಳೆಯಲ್ಲಿಯೇ ಮದ್ಯಪಾನ ಮಾಡಿಕೊಂಡಿದ್ದ ಆತನನ್ನು, ಮಾಲೀಕರಾದ ಸಂತೋಷ್ ಶೆಟ್ಟಿ ಗದರಿಸಿ ಬುದ್ದಿವಾದ ನೀಡಿದಾಗ ಸಿಟ್ಟಿಗೆದ್ದು ಕಿಚನ್‌ನಿಂದ ಕತ್ತಿ ತೆಗೆದುಕೊಂಡು ಬಂದು, ಶೆಟ್ಟಿಯವರು ಕುಳಿತಿದ್ದ ಸಮಯದಲ್ಲಿ ಹಿಂಬದಿಯಿಂದ ಕುತ್ತಿಗೆಗೆ ಕಡಿದು ಹತ್ಯೆ ಮಾಡಿದ್ದಾನೆ. 🕙 ಘಟನೆ ಸಮಯ: ರಾತ್ರಿ 10 ಗಂಟೆ ಸುಮಾರಿಗೆ 😨 ಸ್ಥಳೀಯರಲ್ಲಿ ಆತಂಕ, ಆಕ್ರೋಶ ಈ ಭೀಕರ ಘಟನೆ…

Read More

ಮಂದಾರ ಕಾವ್ಯದಲ್ಲಿ ತುಳು ಸಂಸ್ಕೃತಿ ಅನಾವರಣ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೂಡುಬಿದಿರೆ: ‘ಮಂದಾರ ಕೇಶವ ಭಟ್ಟರು ತುಳು ಸಂಸ್ಕೃತಿ ಮತ್ತು ಪರಂಪರೆಯ ಸೊಗಡನ್ನು ತಮ್ಮ ಕಾವ್ಯದಲ್ಲಿ ಎಳೆ ಎಳೆಯಾಗಿ ಚಿತ್ರಿಸಿದ್ದಾರೆ. ಕಾವ್ಯಯಾನದಂತಹ ಜನಪ್ರಿಯ ಮಾಧ್ಯಮದ ಮೂಲಕ ಅದು ಸಾರ್ವಜನಿಕವಾಗಿ ಅನಾವರಣಗೊಳ್ಳುತ್ತಿದೆ. ಕಾವ್ಯವು ಸಂಗೀತದೊಡನೆ ಸೇರಿ ಕಲಾ ರಸಿಕರಿಗೆ ವಿಶೇಷ ಅನುಭೂತಿ ನೀಡುತ್ತದೆ’ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.ತುಳುವ ಮಹಾಸಭೆ ಮೂಡುಬಿದಿರೆ, ಧವಳತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ, ಮಂದಾರ ಪ್ರತಿಷ್ಠಾನ ಮಂಗಳೂರು, ತುಳು ಕೂಟ ಬೆದ್ರ ಸಹಯೋಗದಲ್ಲಿ ಮೂಡುಬಿದಿರೆ ಜೈನಮಠದಲ್ಲಿ ಭಾನುವಾರ ಜರಗಿದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ‘ಬೀರದ ಬೊಲ್ಪು’ ಕಾವ್ಯಯಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ಮಂದಾರ ರಾಜೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾವ್ಯಯಾನ: ಸುಗಿಪು – ದುನಿಪುಶ್ರೀಕೃಷ್ಣನ ಬಾಲಲೀಲೆಯ ಕುರಿತಾದ ‘ಬೀರದ ಬೊಲ್ಪು’ ತುಳು ಕಾವ್ಯದ ಸುಗಿಪು – ದುನಿಪು (ವಾಚನ -…

Read More

ಮಂಗಳೂರು, ಆಗಸ್ಟ್ 24: ವಿಯೆಟ್ನಾಂನಲ್ಲಿ ಆ.13ರಿಂದ 17ರ ವರೆಗೆ ನಡೆದ ಫ್ಯಾಷನ್ ರನ್‌ವೇ ಇಂಟರ್‌ನ್ಯಾಷನಲ್ ಆಯೋಜನೆಯ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮಂಗಳೂರು ಮೂಲದ 8 ವರ್ಷದ ಬಾಲ ಪ್ರತಿಭೆ ರುಶಭ್ ರಾವ್ “Prince Category”ಯಲ್ಲಿ ಪ್ರಥಮ ಸ್ಥಾನ ಗಳಿಸಿ ‘ಸೂಪರ್ ಟ್ಯಾಲೆಂಟ್’ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಪ್ರಾತಿನಿಧ್ಯ ಮಾಡುವ ಅಪರೂಪದ ಗೌರವಕ್ಕೆ ಪಾತ್ರನಾದ ರುಶಭ್, ದೇಶದ ಹೆಮ್ಮೆ ಹೆಚ್ಚಿಸಿದ್ದಾರೆ. 🛬 ಹೂಗುಚ್ಚದ ಸ್ವಾಗತ ಮಂಗಳೂರಲ್ಲಿ ಇಂದು ಮಂಗಳೂರಿಗೆ ಹಿಂದಿರುಗಿದ ರುಶಭ್ ರಾವ್ ಅವರನ್ನು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಹೂಗುಚ್ಚ ನೀಡಿ ಅದರಂಗದಿಂದ ಸ್ವಾಗತಿಸಿದರು. ಅಭಿಮಾನಿಗಳ ಚಪ್ಪಾಳೆಗಳ ಮಧ್ಯೆ ಕಿರಿಯ ವಯಸ್ಸಿನ ಈ ಸಾಧಕ ಮಿಂಚುತ್ತಿರುವುದು ಸ್ಥಳೀಯರಲ್ಲಿಯೂ ಸಂತಸದ ವಾತಾವರಣ ಸೃಷ್ಟಿಸಿದೆ. 🏫 ಬಿಜೈಯಾ ಲೂರ್ಡ್ಸ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿ ಕುಲಶೇಖರ ಮೂಲದ ರುಶಭ್, ಬಿಜೈಯಾ ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿರುವ ಪ್ರತಿಭಾವಂತ ಬಾಲಕ. ಕಿರಿಯ ವಯಸ್ಸಿನಲ್ಲಿ ನೃತ್ಯ, ಅಭಿನಯ…

Read More

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇದೇ ಸೆ.30 ರಂದು ನಡೆಯಲಿರುವ ‘ಕುಡ್ಲದ ಪಿಲಿ ಪರ್ಬ-ಸೀಸನ್ 4’ ಇದರ ಆಮಂತ್ರಣ ಪತ್ರಿಕೆಯನ್ನು ನಗರದ ಅಟಲ್ ಸೇವಾ ಕೇಂದ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಬಳಿಕ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಗಿರಿಧ‌ರ್ ಶೆಟ್ಟಿ ಯವರು, ಕಳೆದ ನಾಲ್ಕು ವರ್ಷಗಳಿಂದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದು, ಪ್ರತಿ ವರ್ಷದಂತೆ ನಗರದ ಕೇಂದ್ರ ಮೈದಾನದಲ್ಲಿ ಈ ಬಾರಿಯ ಪಿಲಿಪರ್ಬವು ಸಂಭ್ರಮದಿಂದ ನಡೆಯಲಿದೆ. ನಮ್ಮ ಪ್ರತಿಷ್ಠಾನದ ಮೂಲ ಉದ್ದೇಶ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಆಯೋಜನೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ರೀತಿಯ ಅನುಮತಿ ಪಡೆಯಲಾಗಿದ್ದು ಸಾರ್ವಜನಿಕರೆಲ್ಲರಿಗೂ ಸಂಭ್ರಮದ ಪಿಲಿಪರ್ಬಕ್ಕೆ ಸ್ವಾಗತ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ದಿವಾಕರ್ ಪಾಂಡೇಶ್ವರ ಪ್ರಮುಖರಾದ ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಕಿರಣ್ ಶೆಣೈ, ಜಗದೀಶ್…

Read More