What's Hot
- ಮಂಗಳೂರು ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ: ಎಐ ತಂತ್ರಜ್ಞಾನ ಪ್ರಯೋಗ, ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒತ್ತು
- ಮಂಗಳೂರು : ಕ್ರಿಸ್ ಮಸ್ ಹಬ್ಬ ಸಮಾಜದಲ್ಲಿ ಸತ್ಯ,ನ್ಯಾಯ ಹಾಗೂ ಸಹ ಜೀವನದ ಮೌಲ್ಯಗಳನ್ನು ಮರುಸ್ಥಾಪಿಸುವ ವಿಶಿಷ್ಟ ಅವಕಾಶ ಒದಗಿಸುತ್ತದೆ ; ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ.
- ಡಿಸೆಂಬರ್ 25ರಂದು ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಎಂ.ಆರ್.ಜಿ. ಗ್ರೂಪ್ನ ಆಶಾ–ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಸಮಾಜಮುಖಿ ಯೋಜನೆ ‘ನೆರವು–2025’
- ಉಡುಪಿ: ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಪಿಂಪ್ಗಳನ್ನು ಬಂಧಿಸಿದ ಪಡುಬಿದ್ರೆ ಪೊಲೀಸರು
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
- ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕ ಸ್ಥಾನ , ನಿರ್ದೇಶಕರ ಭವಿಷ್ಯ ಕುರಿತಾಗಿ ಚರ್ಚೆಗೂ ದಾರಿ ?
- ಮಂಗಳೂರು: MDMA ಸಾಗಾಟ ಜಾಲ ಭೇದಿಸಿದ ಸಿಸಿಬಿ; ಮೂವರು ಆರೋಪಿಗಳು ಬಂಧನ
- ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸ್ ಕ್ರಮ ಖಂಡನೀಯ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ತೀವ್ರ ಆಕ್ರೋಶ
Author: Tulunada Surya
ಯಕ್ಷಗಾನ ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು: ಡಾ.ಎಂ.ಪ್ರಭಾಕರ ಜೋಶಿ ಮುಂಬಯಿ: ‘ ಯಕ್ಷಗಾನವಿಂದು ಕೇವಲ ಕರಾವಳಿಯ ಕಲೆಯಾಗಿ ಉಳಿದಿಲ್ಲ. ತನ್ನ ವಿಶಿಷ್ಟವಾದ ಪ್ರಭಾವ ಮತ್ತು ಪ್ರಯೋಗಶೀಲತೆಯಿಂದ ನಾಡು – ಹೊರನಾಡುಗಳಲ್ಲಿ ಮೆರೆದು ಸೀಮೋಲ್ಲಂಘನೆ ಮಾಡಿರುವ ಯಕ್ಷಗಾನ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಪರಿಪೂರ್ಣ ರಂಗಕಲೆಯಾಗಿ ಗಮನ ಸೆಳೆದಿದೆ. ಅದು ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು. ಅದರ ಮೌಖಿಕ ವಿಭಾಗವಾದ ತಾಳಮದ್ದಳೆಯನ್ನು ಮುಂಬಯಿಯಲ್ಲಿ ಜನಪ್ರಿಯಗೊಳಿಸಿರುವ ಅಜೆಕಾರು ಬಾಲಕೃಷ್ಣ ಶೆಟ್ಟರ ಕಾರ್ಯ ಶ್ಲಾಘನೀಯ’ ಎಂದು ಹಿರಿಯ ಯಕ್ಷಗಾನ ಅರ್ಥಧಾರಿ, ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.ಮುಂಬಯಿ ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ಮಂದಿರದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 24 ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸರಣಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಯಕ್ಷಗಾನಕ್ಕೆ ದೀರ್ಘ ಪರಂಪರೆ:ಮುಂಬಯಿಯ ಹಿರಿಯ ಅರ್ಥಧಾರಿ ಕೆ.ಕೆ.ಶೆಟ್ಟಿ ಅವರು ಶ್ರೀದೇವಿ ಸನ್ನಿಧಿಯಲ್ಲಿ ದೀಪ ಬೆಳಗಿ 2024 – 25 ನೇ ಸಾಲಿನ ಸರಣಿ ತಾಳಮದ್ದಳೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ‘ಮುಂಬಯಿಯಲ್ಲಿ ಯಕ್ಷಗಾನಕ್ಕೆ ದೀರ್ಘ ಪರಂಪರೆಯಿದೆ.…
ಚಿಕ್ಕಮಗಳೂರು: ಕಲುಷಿತ ಆಹಾರ ಸೇವನೆಯಿಂದ 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಚಿಕ್ಕಮಗಳೂರು ನಗರದ ಪೊಲೀಸ್ ಬಡಾವಣೆಯಲ್ಲಿರುವ ಆಲ್ದೂರು ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ಊಟ ಮಾಡಿದ ಬಳಿಕ ಮಕ್ಕಳಲ್ಲಿ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಘಟನೆಯ ವಿವರ: ಶನಿವಾರ ರಾತ್ರಿ ಊಟದ ಬಳಿಕ ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. 25 ಮಕ್ಕಳು ಅಸ್ವಸ್ಥಗೊಂಡಿದ್ದು, ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡ ಎಲ್ಲ ಮಕ್ಕಳನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ವಿದ್ಯಾರ್ಥಿಗಳ ಆರೋಪ: ವಸತಿ ಶಾಲೆಯ ಮಕ್ಕಳು ಊಟದಲ್ಲಿ ಹುಳಗಳು ಕಂಡುಬಂದಿದ್ದವು ಎಂದು ಆರೋಪಿಸಿದ್ದಾರೆ. ಊಟದಲ್ಲಿನ ಕಲುಷಿತ ಅಂಶದಿಂದಲೇ ಈ ಪರಿಸ್ಥಿತಿ ಉಂಟಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಡಳಿತ ಮಂಡಳಿ ಹೇಳಿಕೆ: ಈ ಘಟನೆ ಕುರಿತು ಶಾಲಾ ಆಡಳಿತ ಮಂಡಳಿ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ…
ಮಂಗಳೂರು : ತುಳು ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 1999ರಲ್ಲಿ ಪ್ರಾರಂಭವಾದ ತುಳುನಾಡಿನ ಮೊದಲ ಸುದ್ದಿ ವಾಹಿನಿ ‘ನಮ್ಮಕುಡ್ಲ’ ಈಗ 25 ವರ್ಷಗಳನ್ನು ಪೂರೈಸಿದೆ. ಈ ಸಾರ್ಥಕ ಪಯಣದ ನೆನಪಿಗಾಗಿ ‘ನಮ್ಮಕುಡ್ಲ ಬೊಳ್ಳಿ ಪರ್ಬ 2025’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಗಸ್ಟ್ 12 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಈ ಕಾರ್ಯಕ್ರಮವು ದಿನವಿಡೀ ನಡೆಯಲಿದೆ ಎಂದು ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಮ್ಮಕುಡ್ಲ ವಾಹಿನಿಯ ಯಶೋಗಾಥೆಬಿ.ಪಿ. ಕರ್ಕೇರ ಮತ್ತು ಲಕ್ಷ್ಮೀ ಕರ್ಕೇರ ಅವರ ಆಶಯದಂತೆ ಕರ್ಕೇರಾ ಸಹೋದರರ ನೇತೃತ್ವದಲ್ಲಿ ಆರಂಭವಾದ ‘ನಮ್ಮಕುಡ್ಲ’ ತುಳುನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದೆ. ಆರಂಭದಲ್ಲಿ CCE ಇಂಡಿಯಾ ಚಾನೆಲ್‌ನಲ್ಲಿ ತುಳು ವಾರ್ತೆಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ನಂತರ ‘ನಮ್ಮಕುಡ್ಲ ಲೈವ್’ ಚಾನೆಲ್, 24 ಗಂಟೆಗಳ ನಿರಂತರ ಸುದ್ದಿ ವಾಹಿನಿ ‘ನಮ್ಮಕುಡ್ಲ 24×7’ ಆಗಿ ಪರಿವರ್ತನೆಗೊಂಡಿತು. ವಾಹಿನಿಯು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದೆ. ಅವುಗಳಲ್ಲಿ ಪ್ರಮುಖವಾದವುಗಳು: ‘ನಮ್ಮ ಆರೋಗ್ಯ’…
ತುಳು ಸಂಗೀತ ಲೋಕದಲ್ಲಿ ಸತ್ವಯುತ ಸಾಹಿತ್ಯದ ಕೊರತೆಯನ್ನು ನೀಗಿಸಲು ಪಣತೊಟ್ಟ ಐಲೆಸಾ- ದಿ ವಾಯ್ಸ್ ಆಫ್ ಓಷನ್ (ರಿ) ಸಂಸ್ಥೆಗೆ ಇದೇ ಆಗಸ್ಟ್ ಹದಿನೈದಕ್ಕೆ ಐದು ವರ್ಷ ತುಂಬುತ್ತದೆ . ಕರೋನ ದುರಿತ ಕಾಲದಲ್ಲಿ ಹುಟ್ಟಿದ ಐಲೇಸಾ ಸಂಸ್ಥೆ ಸಂಗೀತ-ಸಾಹಿತ್ಯ- ಸಹಾಯ ಈ ಮೂರು ಮುಖ್ಯ ಧ್ಯೇಯಗಳನ್ನು ಇಟ್ಟುಕೊಂಡು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ತುಳು ಭಾವಗೀತೆಗಳಲ್ಲಿ ಅರ್ಥಪೂರ್ಣ ಸಾಹಿತ್ಯ ತುಂಬಿಕೊಂಡು, ಹೊಸಪ್ರತಿಭೆಗಳ ಧ್ವನಿಯಲ್ಲಿ ವಿ ಮನೋಹರ್ , ಪ್ರಮೋದ್ ಸಪ್ರೆ, ನಾಗಭೂಷಣ್ ಉಡುಪ, ಪ್ರೇಮಲತಾ ದಿವಾಕರ್ ಒಡಗೂಡಿದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಹಾಡುಗಳನ್ನು ಸಂಯೋಜಿಸಿ ಬಿಡುಗಡೆ ಮಾಡುತ್ತಿದೆ . ತುಳು ಸಂಗೀತ ಲೋಕಕ್ಕೆ ನೂರಾ ಒಂದು ಅತ್ಯುತ್ತಮ ಹಾಡುಗಳನ್ನು ಕೊಡಬೇಕು ಎನ್ನುವುದು ಐಲೇಸಾದ ಅಭಿಲಾಷೆ . ಈಗಾಗಲೇ ಹದಿನೆಂಟು ಹಾಡುಗಳನ್ನು ಬಿಡುಗಡೆ ಮಾಡಿ ಸುಮಾರು ಮೂವತ್ತೈದು ಹಾಡುಗಳನ್ನು ತನ್ನ ಜೋಳಿಗೆಯಲ್ಲಿಟ್ಟುಕೊಂಡು ತನ್ನ ಪ್ರಯತ್ನದ ಅರ್ಧ ದಾರಿಯನ್ನು ಸಂಸ್ಥೆ ಈಗಾಗಲೇ ಕ್ರಮಿಸಿದೆ ನಾಡಿನ ಖ್ಯಾತ ಹಿನ್ನಲೆ ಗಾಯಕ ಡಾ. ರಮೇಶ್ಚಂದ್ರ…
ದಿನಾಂಕ 09/08/25 ರ ಬೆಳಿಗ್ಗೆ 6 ಗಂಟೆಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಮಹಿಳಾ ನಾಯಕಿಯಾದ ಕಂದಾವರ ಗ್ರಾ ಪಂ ಮಾಜಿ ಅಧ್ಯಕ್ಷರಾದ ವಿಜಯ ಗೋಪಾಲ ಸುವರ್ಣ ರವರ ನೇತೃತ್ವದಲ್ಲಿ ಮುರ ನಗರದ ಅರಸು ವೃತ್ತದಲ್ಲಿ ,ಹದಗೆಟ್ಟ ರಸ್ತೆಯಾ ಹೊಂಡಗಳಿಗೆ ಮಣ್ಣು ತುಂಬಿಸುವ ಮೂಲಕ ಶ್ರಮದಾನ ಮಾಡಿದರು. ಮುರ ನಗರದ ಆಟೋ ಚಾಲಕ ಮಾಲಕರು ಮತ್ತು ಮುರ ನಗರದ ನಾಗರಿಕರು ಸಾಥ್ ನೀಡಿದರು .ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಗೌರ್ವಾನಿತ ಸದಸ್ಯರಾದ ನಿಸಾರ್ ಕರಾವಳಿ ,SDPI ಕೊಳಂಬೆ ಭಾಗದ ಅಧ್ಯಕ್ಷರಾದ ಹಮೀದ್ ಕೊಳಂಬೆ,ಕಂದಾವರ ಗ್ರಾ ಪಂ ಮಾಜಿ ಸದಸ್ಯರಾದ ಶರ್ಮಿಳಾ,ಅಶ್ರಫ್ ,ಹಾಲಿ ರುಕಯ್ಯ್ ಕಿಶೋರ್ ಸಂತು ಹಫೀಜ್ ಕೊಳಂಬೆ ಚೆರಿಯೋಣಕ್ ಅಝರ್ ಚೆಯ್ಯ್ ಮತ್ತು ,ಸ್ಥಳೀಯ ನಾಗರಿಕರು ಶ್ರಮದಾನ ಮಾಡಿ ಊರಿನ ಜನರ ಪ್ರಶಂಸೆಗೆ ಪಾತ್ರರಾದರು
ಮಂಗಳೂರು: ನಗರದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು, ಪಾರ್ಲರ್ ಮಾಲಕಿ ತನ್ನ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಮಸಾಜ್ ದಂಧೆ ನಡೆಯುತ್ತಿದೆ ಎಂದು ಸಹ ಅವರು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಸೋಮವಾರದ ಘಟನೆಯ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಸಂತ್ರಸ್ತ ಮಹಿಳೆ, ಹಂಪನಕಟ್ಟೆ ಮತ್ತು ಜ್ಯೋತಿ ಸರ್ಕಲ್ ನಡುವಿನ ಯುನಿಸೆಕ್ಸ್ ಬ್ಯೂಟಿ ಪಾರ್ಲರ್‌ನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸಕ್ಕೆ ಸೇರಿದ್ದರು. ಘಟನೆ ನಡೆದಿದ್ದು ಹೀಗೆ: ಪಾರ್ಲರ್‌ನ ಮಾಲಕರು, ಗ್ರಾಹಕರಿಗೆ ವಿಶೇಷ ಸೇವೆಗಳನ್ನು ನೀಡುವಂತೆ ಮತ್ತು ಅದಕ್ಕೆಂದೇ ರೂ. 500ರಿಂದ 1000 ಹೆಚ್ಚುವರಿ ಶುಲ್ಕ ಪಡೆಯುವಂತೆ ಸೂಚಿಸಿದ್ದರು. ಈ ಮಾತಿನಂತೆ ನಡೆದುಕೊಂಡಿದ್ದ ಯುವತಿ ಮೇಲೆ ಮಾಲಕಿ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆತ್ತಲೆ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ. ಮರುದಿನ ಯುವತಿಯ ಪತಿಯನ್ನು ಕರೆಸಿ ಈ ವಿಡಿಯೋ ತೋರಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಈ ಘಟನೆಯಿಂದ…
ಮಂಗಳೂರು: 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಉರ್ವ ಶಾಖೆಯು ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿರುವ ಚೇತನ ವಿಶೇಷ ಶಾಲೆಗೆ ಭೇಟಿ ನೀಡಿ 120 ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿತು. ಈ ಕಾರ್ಯಕ್ರಮವು ಶಾಲೆಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು, ಸೆಂಟ್ ಮಿಲಾಗ್ರಿಸ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಈ ಉತ್ತಮ ಕಾರ್ಯವನ್ನು ಶ್ಲಾಘಿಸಿದರು. ಸೊಸೈಟಿಯಂತಹ ಸಂಸ್ಥೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಮಾಜದ ಏಳಿಗೆಗೆ ಕೈಜೋಡಿಸಿರುವುದು ಉತ್ತಮ ಬೆಳವಣಿಗೆ ಎಂದರು. ಮುಂದಿನ ದಿನಗಳಲ್ಲೂ ಇಂತಹ ಕಾರ್ಯಗಳು ಮುಂದುವರಿಯಲಿ ಎಂದು ಅವರು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಭಾರತೀಯ (ಸಿಇಒ) ಪೃಥ್ವಿ ಪಾಲ್ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮವನ್ನು ಶ್ರೀಮತಿ ಪ್ರತಿಮಾ ನಿರೂಪಿಸಿದರು. ಕುಮಾರಿ ರಕ್ಷಿತಾ ಸಂಸ್ಥೆಯ ಕಿರು ಪರಿಚಯ ನೀಡಿದರು. ಕುಮಾರಿ ಸಿಂಚನ ಸ್ವಾಗತ ಭಾಷಣ ಮಾಡಿದರು ಮತ್ತು…
ಕೈಕಂಬ: ಶಿಕ್ಷಣದಿಂದ ಸಾಮಾಜಿಕ ಕೌಶಲ್ಯ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ, ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ್ಯ ಬೆಳೆಸಲು ಸಹಾಯ ಮಾಡುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಶಂಕರ್ ಮಾಸ್ಟರ್ ರವರು ಹೇಳಿದರು.ಅವರು ಕೈಕಂಬದ ಮುಂಡಾಲ ಸಮಾಜ (ರಿ) ಆಯೋಜಿಸಿದ್ದ ಆಟಿ ತಿಂಗಳ ಆಟ – ಊಟ – ಕೂಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಅವರು ಮಾತನಾಡುತ್ತಾ, ಶಿಕ್ಷಣದಿಂದ ಸೃಜನಶೀಲತೆ ಸೃಷ್ಟಿಯಾಗುತ್ತದೆ. ಇದರಿಂದ ಮುಂಡಾಲ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೋನಪ್ಪ ಅದ್ಯಪಾಡಿರವರು ಮಾತನಾಡುತ್ತಾ, ಮುಂಡಾಲ ಯುವಜನರು ಸ್ವ – ಉದ್ಯೋಗಿಗಳಾಗಿ, ಉಳಿತಾಯದ ಮನೋಭಾವನೆಯನ್ನು ಬೆಳೆಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು. ವೇದಿಕೆಯಲ್ಲಿ ಮುಂಡಾಲ ಸಮಾಜ (ರಿ) ಗುರುಪುರ ಕೈಕಂಬ. ಇದರ ಅಧ್ಯಕ್ಷರಾದ ಜಯಂತ್ ಕೊಳಂಬೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉದಯ್ ಆರ್ ರಾವ್, ಸುನೀಲ್ ಅದ್ಯಪಾಡಿ, ಮಹೇಶ್ ಅಮೀನ್ ಮುಲ್ಲಕಾಡ್, ಕೃಷ್ಣ ಕುಳಾಯಿ,ಮಾಲತಿ ಅದ್ಯಪಾಡಿ, ಶ್ರೀಮತಿ ವಿಜಯಾ ಗೋಪಾಲ್ ಸುವರ್ಣ, ಶ್ರೀಮತಿ ಕವಿತಾ, ರವಿ ಪಂಪ್ ವೆಲ್,…
ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ – ಶೈಕ್ಷಣಿಕ ಕ್ಷೇತ್ರದಲ್ಲಿ ಇತಿಹಾಸಾತ್ಮಕ ಸಾಧನೆ ಮಂಗಳೂರಿನ ಹೆಸರಾಂತ ವಿದ್ಯಾಸಂಸ್ಥೆ ಕೆನರಾ ಇಂಜಿನಿಯರಿಂಗ್ ಕಾಲೇಜು (CEC), ತನ್ನ ಶೈಕ್ಷಣಿಕ ಯಾತ್ರೆಯಲ್ಲಿ ಮತ್ತೊಂದು ಮಹತ್ತರ ಮೈಲಿಗಲ್ಲು ತಲುಪಿದೆ. ಕೆನರಾ ಹೈಸ್ಕೂಲ್ ಅಸೋಸಿಯೇಷನ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಾಲೇಜಿಗೆ ಇತ್ತೀಚೆಗೆ ಸ್ವಾಯತ್ತ ಸ್ಥಾನಮಾನ (Autonomous Status) ಲಭಿಸಿದ್ದು, ಇದರಿಂದ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಹಾಗೂ ಉದ್ಯೋಗಯೋಗ್ಯತೆಯನ್ನು ಮತ್ತಷ್ಟು ಉತ್ತೇಜಿಸುವ ಸಾಧ್ಯತೆ ದೊರೆತಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (UGC), ಕಾಲೇಜಿನ ಶೈಕ್ಷಣಿಕ ಗುಣಮಟ್ಟ, ಮೂಲಸೌಕರ್ಯ, ಆಡಳಿತ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಸಾಧನೆಗಳನ್ನು ಆಧರಿಸಿ ಈ ಮಾನ್ಯತೆಯನ್ನು ಮಂಜೂರು ಮಾಡಿದೆ. ಈ ಪ್ರಕ್ರಿಯೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಶಿಫಾರಸು ನೀಡಿದ್ದು, ರಾಜ್ಯ ಸರ್ಕಾರದ ಅನುಮೋದನೆಯೊಂದಿಗೆ ಸ್ಥಾನಮಾನ ಅಧಿಕೃತವಾಗಿದೆ. ಸ್ವಾಯತ್ತತೆ ಪಡೆದ ನಂತರ, CEC ಈಗ: ಪಠ್ಯಕ್ರಮವನ್ನು ಸ್ವತಂತ್ರವಾಗಿ ರೂಪಿಸಬಹುದು ಕೈಗಾರಿಕಾ ಅಗತ್ಯತೆಗಳಿಗೆ ಅನುಗುಣವಾಗಿ ಹೊಸ ಕೋರ್ಸ್‌ಗಳನ್ನು ಪರಿಚಯಿಸಬಹುದು ತನ್ನದೇ ಆದ ಪರೀಕ್ಷಾ ವ್ಯವಸ್ಥೆ ಮತ್ತು ಫಲಿತಾಂಶ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ-ನಿರ್ದೇಶಕರು, ಬಂಟರ ಸಂಘ ಮುಂಬೈ ಇದರ ಟ್ರಸ್ಟಿ, ರಾಕ್ಷಿ ದೇವಲಪರ್ಸ್ ಪ್ರೈ. ಲಿ.ಮುಂಬೈ ಇದರ ಸಿ. ಎಂ. ಡಿ. ಹಾಗೂ ಅತ್ತೂರು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರು ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಕೊಡುಗೈ ದಾನಿ ಅತ್ತೂರು ಭಂಡಾರಮನೆ ಶ್ರೀ ರಾಜೇಶ್ ಎನ್. ಶೆಟ್ಟಿಯವರ ಮಾತೃಶ್ರೀಯವರು ಮಾನವೀಯತೆಯ ಸಾಕಾರ ಮೂರ್ತಿ,ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಸರ್ವರಿಗೂ ಪ್ರೀತಿಪಾತ್ರರಾದ ಅತ್ತೂರು ಭಂಡಾರಮನೆ ಆಶಾಲತಾ ನಾರಾಯಣ್ ಶೆಟ್ಟಿಯವರ 80ನೇ ವರ್ಷದ ಜನ್ಮದಿನದ ಸಂಭ್ರಮಕ್ಕೆ ಒಕ್ಕೂಟದ ಪರವಾಗಿ ಶ್ರೀ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹೂ ಗುಚ್ಛ ನೀಡಿದರು ದೇವರು ಶತಾಯುಷ್ಯ ಆರೋಗ್ಯಭಾಗ್ಯ ಕೊಟ್ಟು ಸದಾ ಕಾಪಾಡಲಿ ಎಂದು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ , ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ , ಗೌರವ ಕಾರ್ಯದರ್ಶಿಯಾದಜಯಕರ್ ಶೆಟ್ಟಿ ಇಂದ್ರಾಳಿ ,ಕೋಶಾಧಿಕಾರಿಉಳ್ತೂರು ಮೋಹನದಾಸ್ ಶೆಟ್ಟಿ ,ಜೊತೆ -ಕಾರ್ಯದರ್ಶಿಚಂದ್ರಹಾಸ್ ಡಿ. ಶೆಟ್ಟಿ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು.…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
