- ಉಡುಪಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಗ್ರ ಸಾಧನೆಗೆ ತುರವೇ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಅಭಿನಂದನೆ
- ಮಂಗಳೂರು :ಏಪ್ರಿಲ್ 12ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಮಹತ್ವದ ಅಧಿವೇಶನ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ
- ಬೆಂಗಳೂರು–ಮೈಸೂರು ಮಾರ್ಗಕ್ಕೆ ಇನ್ನಷ್ಟು ವೇಗ ಮತ್ತು ಸುಧಾರಣೆ : ಕುಮಾರಸ್ವಾಮಿ ಮೈಸೂರು ವಿಭಾಗದಲ್ಲಿ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿದೆ: ಸೋಮಣ್ಣ
- ಸರ್ಕಾರಿ ಕಚೇರಿಗಳಲ್ಲಿ ನಿಯಮ ಪಾಲನೆ ಕಡ್ಡಾಯ: ಲೋಕಾಯುಕ್ತ ಡಿವೈಎಸ್ಪಿ ದಿನಕರ ಶೆಟ್ಟಿ ಎಚ್ಚರಿಕೆ
- ನೆತ್ತಿಲ ಕೋಟೆಕಾರ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತಿಭಾವದಿಂದ ನೆರವೇರಿದ ಧಾರ್ಮಿಕ ಕಾರ್ಯಕ್ರಮ
- ಕುಂದಾಪುರ: ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ರಾಜ್ಯ ಮಟ್ಟದ ಅದ್ಭುತ ಸಾಧನೆ
- ದ್ವಿತೀಯ ಪಿಯುಸಿ ಫಲಿತಾಂಶ: ಆಳ್ವಾಸ್ ಕಾಲೇಜಿನ ದಿಶಾ ಟಾಪರ್ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಮೂಡುಬಿದಿರೆಯ ದಿಶಾ – 600ಕ್ಕೆ 600 ಅಂಕಗಳ ಸಾಧನೆ
- ಏಪ್ರಿಲ್ 12ರಂದು 3 ಗಂಟೆಗೆ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಪ್ರಮುಖ ಸಭೆ, ಸದಸ್ಯರಿಗೆ ಕಡ್ಡಾಯ ಹಾಜರಾತಿ, ಸಂಘಟನಾ ಅಭಿವೃದ್ಧಿಗೆ ಮಹತ್ವದ ಚರ್ಚೆ
Author: Tulunada Surya
ಸಿದ್ದಾಪುರ | ಕುಂದಾಪುರಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಜನ್ಸಾಲೆ ಪ್ರದೇಶದಲ್ಲಿರುವ ತೆಂಗಿನ ಎಣ್ಣೆ ಮಿಲ್ ಒಂದರಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿ ಅಪಾರ ಆರ್ಥಿಕ ನಷ್ಟ ಉಂಟಾದ ಘಟನೆ ವರದಿಯಾಗಿದೆ.ಶ್ರೀ ಮಧುಮಾಯ ಆಯಿಲ್ಸ್ (ಮಧು) ಫ್ಯಾಕ್ಟರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಕುಂದಾಪುರ, ಬೈಂದೂರು ಹಾಗೂ ಹೊಸಂಗಡಿ ಕೆಪಿಟಿಸಿಎಲ್‌ನಿಂದ ತಲಾ ಒಂದೊಂದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡವು.ತೆಂಗಿನೆಣ್ಣೆ ಸಂಗ್ರಹ ಹೆಚ್ಚಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿ ನಿಯಂತ್ರಣಕ್ಕೆ ತರಲು ಸಾಕಷ್ಟು ಸಮಯ ತೆಗೆದುಕೊಂಡಿತು. ಸ್ಥಳೀಯರ ಸಹಕಾರದೊಂದಿಗೆ ರಾತ್ರಿಯಿಂದ ಬೆಳಿಗ್ಗೆ ಸುಮಾರು 9 ಗಂಟೆಯವರೆಗೆ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮಂಗಳೂರು | ಜನವರಿ 2 ಯುನಿವೆಫ್ ಕರ್ನಾಟಕದ ವತಿಯಿಂದ ಸೆಪ್ಟೆಂಬರ್ 19ರಿಂದ ಜನವರಿ 2ರವರೆಗೆ ನಡೆಯುತ್ತಿರುವ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಪ್ರವಾದಿ ಸಂದೇಶ ಪ್ರಚಾರ ಅಭಿಯಾನದ ಸಮಾರೋಪ ಸಮಾರಂಭವು (ಜನವರಿ 2) ಶುಕ್ರವಾರ ಸಂಜೆ 6.45ಕ್ಕೆ ನಗರದ ಪುರಭವನದಲ್ಲಿ ಜರಗಲಿದೆ ಎಂದು ಅಭಿಯಾನ ಸಂಚಾಲಕರಾದ ಯು. ಕೆ. ಖಾಲಿದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. “ಶೋಷಿತ ಸಮಾಜ, ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)” ಎಂಬ ಕೇಂದ್ರೀಯ ವಿಷಯದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಚಿಕ್ಕಮಗಳೂರಿನ ವಿಶ್ವಧರ್ಮಪೀಠ, ಜಯಬಸವಾನಂದ ತಪೋವನದ ಡಾ. ಶ್ರೀ ಜಯಬಸವಾನಂದ ಸ್ವಾಮೀಜಿ, ಸಿ.ಆರ್.ಐ ಅಧ್ಯಕ್ಷ ಹಾಗೂ ಪ್ಯಾರಿಷ್ ಧರ್ಮಗುರು ರೆವೆ. ಡಾ. ಡೊಮಿನಿಕ್ ವಾಸ್, ಕರ್ನಾಟಕ ಸರ್ಕಾರದ ಮಾಜಿ ಸಚಿವ ಬಿ. ರಮಾನಾಥ ರೈ ಮತ್ತು ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಜನಾಬ್ ಅಬ್ದುಸ್ಸಲಾಮ್ ಪುತ್ತಿಗೆ ವಹಿಸಲಿದ್ದಾರೆ. ಸದ್ಭಾವನಾ ವೇದಿಕೆ ಜೆಪ್ಪು ಅಧ್ಯಕ್ಷ ಹಾಗೂ…
ಉಡುಪಿ | ಜನವರಿ 1, 2026 ಸಂತೆಕಟ್ಟೆ, ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಔರೋ ಸ್ಕಿಲ್ಲಿಯುವಂ ಅಕಾಡೆಮಿ ಎಲ್‌ಎಲ್‌ಪಿ ಸಂಸ್ಥೆಯ ಸ್ಥಾಪಕರಾದ ಅನುಶ್ರೀ ಚಂದ್ರಶೇಖರ ಹಾಗೂ ಅಭಿಷೇಕ್ ಜಿ. ಅವರಿಗೆ ಜೀವ ಬೆದರಿಕೆ, ಸುಲಿಗೆ ಮತ್ತು ಸಂಸ್ಥೆ ಮುಚ್ಚುವಂತೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳ ವಿರುದ್ಧ ತ್ವರಿತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ (ರಿ) ಉಡುಪಿ ಜಿಲ್ಲಾ ಘಟಕವು ಒತ್ತಾಯಿಸಿದೆ. ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಅವರು, ಈ ಪ್ರಕರಣ ಅತ್ಯಂತ ಗಂಭೀರ ಹಾಗೂ ಸಮಾಜದ ಶಾಂತಿ ಮತ್ತು ಕಾನೂನು ವ್ಯವಸ್ಥೆಗೆ ಸವಾಲು ಎಸೆಯುವಂತಹದ್ದು ಎಂದು ಹೇಳಿದರು. ಸಂತ್ರಸ್ತರು ನೀಡಿರುವ ದೂರಿನ ಪ್ರಕಾರ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ಸಿಬ್ಬಂದಿಗಳು ನಂಬಿಕೆ ದ್ರೋಹ ನಡೆಸಿ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ…
ಮಂಗಳೂರು: ತುಳುನಾಡಿನ ಸರ್ವಧರ್ಮೀಯರ ಹಬ್ಬಗಳು, ಆಚರಣೆಗಳು ಹಾಗೂ ಆಯನ ಜಾತ್ರೆ ಸೇರಿದಂತೆ ನಾಡಿನ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಸಮಗ್ರವಾಗಿ ದಾಖಲಿಸಿರುವ “ಕಾಲ ಕೋಂದೆ” ತುಳು ದಿನದರ್ಶಿಕೆಯ 13ನೇ ವರ್ಷದ ಸಂಚಿಕೆ ನಗರದ ಪತ್ರಿಕಾಭವನದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿತು. ತುಳುನಾಡಿನ ಆಚರಣೆಗಳ ಜೀವಂತ ದಾಖಲೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಥಮ ಡಿಜಿಟಲ್ ತುಳು ಲಿಪಿ ವಿನ್ಯಾಸಕ ಡಾ. ಪ್ರವೀಣ್ ರಾಜ್ ಎಸ್. ರಾವ್ ಅವರು, ತುಳುವರ ‘ಸಿಂಗೊಡೆ’ಯಿಂದ ಆರಂಭಿಸಿ ಸಂಕ್ರಾಂತಿ, ತಿಥಿ, ನಕ್ಷತ್ರಗಳು (ಭರಣಿ, ಕೃತ್ತಿಕೆ ಮೊದಲಾದವು), ಕೆಡ್ವಾಸ, ತುಳು ದೀಪಾವಳಿ ಬಲಿಲೆಪ್ಪುನ ದಿನ, ಪತ್ತನಾಜೆ, ಆಟಿ, ಸೋಣ, ಮಾರ್ನಮಿ, ಆಯನೊ, ಕೋಲ, ಕೊಡಿ, ತೇರ್ ಹಾಗೂ ವಿವಿಧ ಜಾತ್ರೆಗಳ ವಿವರಗಳನ್ನು ಈ ಕ್ಯಾಲೆಂಡರ್ ಒಳಗೊಂಡಿದೆ ಎಂದು ತಿಳಿಸಿದರು. ಜೊತೆಗೆ ಮೌಡ್ಯ ಹಾಗೂ ಗ್ರಹಣ ಕಾಲಗಳ ನಿಖರ ಮಾಹಿತಿಯೊಂದಿಗೆ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ ಹಾಗೂ ಜೈನ ಧರ್ಮಗಳ ಹಬ್ಬಗಳ ವಿವರಗಳನ್ನು ನೀಡಿರುವ ಈ ದಿನದರ್ಶಿಕೆ ನಾಡಿನ ಸಮಸ್ತ ಜನತೆಗೆ ಬಹುಪಯೋಗಿಯಾಗಲಿದೆ ಎಂದರು. ‘ತೌಳವ’ ಲಿಪಿಯಲ್ಲಿ ರೂಪಿತ…
ಉಡುಪಿ | ಶಿರ್ವ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳವು ಪ್ರಕರಣವನ್ನು ಶಿರ್ವ ಪೊಲೀಸರು ಭೇದಿಸಿ, ಅಂತರ್‌ರಾಜ್ಯ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಸ್ಕೂಟರ್ ಕಳವು ಪ್ರಕರಣದ ವಿವರ ಶಿರ್ವ ಪಿರ್ಯಾದಿದಾರರಾದ ಶ್ರೀಮತಿ ಗುಣವತಿ ಅವರ ಪುತ್ರ ಕೌಶಿಕ್ ಅವರು ದಿನಾಂಕ 05-12-2025ರಂದು ಪಿರ್ಯಾದಿದಾರರ ಮಾಲೀಕತ್ವದ KA-20 HD-8622 ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಬಂಟಕಲು ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿಗೆ ತೆಗೆದುಕೊಂಡು ಹೋಗಿದ್ದರು. ಮಧ್ಯಾಹ್ನ 12:45ರ ಸುಮಾರಿಗೆ ಊಟದ ವಿರಾಮದ ವೇಳೆ ಬಂಟಕಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ ಸ್ಕೂಟರ್ ಪಾರ್ಕಿಂಗ್ ಮಾಡಿ ಊಟಕ್ಕೆ ತೆರಳಿದ್ದು, ಮಧ್ಯಾಹ್ನ 1:15ಕ್ಕೆ ಮರಳಿ ಬಂದಾಗ ಸ್ಕೂಟರ್ ಕಳವು ಆಗಿರುವುದು ಗೊತ್ತಾಗಿದೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪಿರ್ಯಾದಿ ದಾಖಲಾಗಿದ್ದು, ಕಳವಾದ ಸ್ಕೂಟರಿನ ಅಂದಾಜು ಮೌಲ್ಯ ರೂ.60,000 ಆಗಿದೆ. ವಿಶೇಷ ತಂಡದ ಕಾರ್ಯಾಚರಣೆ ಪ್ರಕರಣದ ಗಂಭೀರತೆಯನ್ನು ಮನಗಂಡ…
ಕಲ್ಲೂರು ಪ್ರತಿಷ್ಠಾನದ ಆಶ್ರಯದಲ್ಲಿ ಪೇಜಾವರ ಶ್ರೀ ವಿಶ್ವೇಶ್ವರತೀರ್ಥರ ಸ್ಮರಣೆ ಮತ್ತು ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ‘ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ನಮನ – 2025’ ಕಾರ್ಯಕ್ರಮವನ್ನು ದಿನಾಂಕ 29 ಡಿಸೆಂಬರ್ 2025, ಸೋಮವಾರ ಮಂಗಳೂರಿನ ವಾದಿರಾಜ ಮಂಟಪದಲ್ಲಿ ಭಕ್ತಿಭಾವದಿಂದ ಆಯೋಜಿಸಲಾಯಿತು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಸಮಾರಂಭವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಸಮಾಜಸೇವೆಯಲ್ಲಿ ಸುದೀರ್ಘ ಹಾಗೂ ನಿರಂತರ ಸೇವೆ ಸಲ್ಲಿಸಿರುವ ಗಣ್ಯರಿಗೆ‘ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’ಪ್ರದಾನಿಸಿ ಗೌರವಿಸಲಾಯಿತು. ಈ ಗೌರವವನ್ನು ಸ್ವೀಕರಿಸಿದವರುಶ್ರೀ ಜೇಮ್ಸ್ ವಿನ್ಸಂಟ್ ಮೆಂಡೋನ್ಸಾ (ಸಮಾಜಸೇವಕ, ಶಿಕ್ಷಣ ಪ್ರೋತ್ಸಾಹಕ ಹಾಗೂ ವಿವಿಧ ಸಂಘ–ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಗಣ್ಯರು) ಪಾಲಿಮಾರು ಮಠ, ಪೇಜಾವರ ಮಠ, ಏದನೀರು ಮಠ ಹಾಗೂ ಮೂಡಬಿದ್ರೆ ಜೈನ ಮಠಗಳ ಶ್ರೀ ಶ್ರೀ ಸ್ವಾಮೀಜಿಗಳ ಪವಿತ್ರ ಸಾನ್ನಿಧ್ಯದಲ್ಲಿ ಪ್ರಶಸ್ತಿ…
ಶ್ರೀ ಮಂಗಳಾದೇವಿ ಅಯ್ಯಪ್ಪ ಭಕ್ತ ವೃಂದದ ಆಶ್ರಯದಲ್ಲಿ 54ನೇ ವರ್ಷದ ಶಬರಿಮಲೆ ಯಾತ್ರೆಯ ಅಂಗವಾಗಿ ಆಯೋಜಿಸಲಾದ 43ನೇ ವರ್ಷದ ಮಂಡಲಪೂಜೆಯ ಭಜನಾ ಮಹೋತ್ಸವವು ಡಿಸೆಂಬರ್ 27, 2025ರ ಶನಿವಾರ ಭಕ್ತಿಭಾವ ಮತ್ತು ವೈಭವದಿಂದ ನೆರವೇರಿತು. ಸೂರ್ಯಾಸ್ತದ ಸಮಯ ಸಂಜೆ 6.02ಕ್ಕೆ ಶ್ರೀ ನಾಗರಾಜ್–ರೇಖಾ ನಾಗರಾಜ್ ದಂಪತಿಗಳು ನಂದಾದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಗುರುಪುರ ವಜ್ರದೇಹಿ ಮಠದ ಯತಿಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಸಂಕೀರ್ತನೆಯೊಂದಿಗೆ ಭಜನಾ ಮಹೋತ್ಸವವನ್ನು ಉದ್ಘಾಟಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ರಾತ್ರಿ 8.00 ಗಂಟೆಗೆ ಮಂಡಲಪೂಜೆಯ ವಿಶೇಷ ಪೂಜೆ ನೆರವೇರಿದ್ದು, ಬಳಿಕ ಮರುದಿನ ಸೂರ್ಯೋದಯದವರೆಗೆ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು. ವಿವಿಧ ಭಜನಾ ತಂಡಗಳು ಸಂಕೀರ್ತನೆಗಳಲ್ಲಿ ಭಾಗವಹಿಸಿ ಸಂಪೂರ್ಣ ವಾತಾವರಣವನ್ನು ಭಕ್ತಿಮಯವನ್ನಾಗಿ ಮಾಡಿದರು. ಈ ಅವಧಿಯಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ಜಾಮ ಪೂಜೆಗಳು ಭಕ್ತಿಪೂರ್ವಕವಾಗಿ ನೆರವೇರಿದವು. ಕಾರ್ಯಕ್ರಮದಲ್ಲಿ ಶಾಸಕ ಶ್ರೀ ವೇದವ್ಯಾಸ ಕಾಮತ್, ಮಾಜಿ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಸಾಸ್…
ಮಂಗಳೂರು: ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಮಂಗಳೂರು ಕಂಬಳ ಸಮಿತಿಯ ವತಿಯಿಂದ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ 9ನೇ ವರ್ಷದ ಮಂಗಳೂರು ಕಂಬಳ ಅದ್ದೂರಿಯಾಗಿ ನೆರವೇರಿತು. ಪರಂಪರೆ, ಸಂಭ್ರಮ ಮತ್ತು ಸ್ಪರ್ಧಾತ್ಮಕತೆಯ ಸಂಗಮವಾಗಿ ಮೂಡಿಬಂದ ಈ ಕಂಬಳ ಕೂಟದಲ್ಲಿ ಒಟ್ಟು 141 ಜೊತೆ ಕೋಣಗಳು ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿವೆ. ವಿಭಾಗವಾರು ಸ್ಪರ್ಧೆಯಲ್ಲಿ ಕನೆಹಲಗೆ ವಿಭಾಗದಲ್ಲಿ 9 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 10 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 17 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 26 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 19 ಜೊತೆ ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ 60 ಜೊತೆ ಕೋಣಗಳು ಪೈಪೋಟಿ ನಡೆಸಿದವು. ಫಲಿತಾಂಶಗಳು: ಅಡ್ಡಹಲಗೆ ವಿಭಾಗ ಹಗ್ಗ ಹಿರಿಯ ವಿಭಾಗ ಹಗ್ಗ ಕಿರಿಯ ವಿಭಾಗ ನೇಗಿಲು ಹಿರಿಯ ವಿಭಾಗ ನೇಗಿಲು ಕಿರಿಯ ವಿಭಾಗ ಪರಂಪರೆಯ ಕ್ರೀಡೆಗೆ ಹೊಸ ಉತ್ಸಾಹ ತುಂಬಿದ ಈ ವರ್ಷದ ಮಂಗಳೂರು ಕಂಬಳ ಕೂಟವು ಅಪಾರ ಜನಸ್ತೋಮದ ನಡುವೆ ಯಶಸ್ವಿಯಾಗಿ ಸಂಪನ್ನವಾಯಿತು.
ಪ್ರಮುಖ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ ಮತ್ತು ಪ್ರಸಾದ ಪೂಜಾರಿ ಭಟ್ಕಳ ವಿವಿಧ ಪಾತ್ರ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಕರಾವಳಿ ಉತ್ಸವ – 2025 ಅಂಗವಾಗಿ ದಶಂಬರ 21ರಂದು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಜರಗಿತು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ನೇತೃತ್ವದ ಆಕಾಶವಾಣಿ ಮತ್ತು ದೂರದರ್ಶನ ಖ್ಯಾತಿಯ ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡವು ಕರಾವಳಿ ಉತ್ಸವದ ವಸ್ತು ಪ್ರದರ್ಶನ ವೇದಿಕೆಯಲ್ಲಿ ‘ವೀರಮಣಿ ಕಾಳಗ’ ಪ್ರಸಂಗವನ್ನು ಪ್ರಸ್ತುತಪಡಿಸಿತು. ಯಕ್ಷಗಾನ ರಂಗದ ಪ್ರಮುಖ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ ಮತ್ತು ಪ್ರಸಾದ ಪೂಜಾರಿ ಭಟ್ಕಳ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಭಾಗವತ ಹರೀಶ ಶೆಟ್ಟಿ ಸೂಡ ಅವರ ಹಾಡುಗಾರಿಕೆಗೆ ವಿಕಾಸ್ ರಾವ್ ಕೆರೆಕಾಡ್ , ಶ್ರೀಶ ರಾವ್ ನಿಡ್ಲೆ…
ಮಂಗಳೂರು: ರಾಜ್ಯದ ಕಾರಾಗೃಹ ವ್ಯವಸ್ಥೆಯ ಮೇಲ್ವಿಚಾರಣೆಯ ಭಾಗವಾಗಿ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ಮಂಗಳೂರು ಸೂಕ್ಷ್ಮ ಕಾರಾಗೃಹಕ್ಕೆ ಔಪಚಾರಿಕವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಒಟ್ಟು 54 ಕಾರಾಗೃಹಗಳಿದ್ದು, ಅವುಗಳನ್ನು ಸಮಯಕ್ಕೆ ಸರಿಯಾಗಿ ಪರಿಶೀಲಿಸುವುದು ಅಗತ್ಯವಿದೆ ಎಂದು ಅವರು ಹೇಳಿದರು. ಮಂಗಳೂರು ಕಾರಾಗೃಹವನ್ನು ‘ಸೂಕ್ಷ್ಮ’ ಎಂದು ಗುರುತಿಸಿದ ಡಿಜಿಪಿ, ಈಗಾಗಲೇ ಇಲ್ಲಿ ವಿವಿಧ ರೈಡ್‌ಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು. ಒಳಗಡೆ ಗಲಾಟೆ ಸೃಷ್ಟಿಸಿದ ಖೈದಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದ್ದು, ಇನ್ನೂ ಕೆಲವರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎಂದರು. ಉತ್ತಮ ನಡತೆ ಹೊಂದಿರುವ ಖೈದಿಗಳಿಗೆ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಕಾರಾಗೃಹದೊಳಗೆ ನಿಷೇಧಿತ ವಸ್ತುಗಳ ಪ್ರವೇಶವನ್ನು ತಡೆಗಟ್ಟುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದ್ದು, ಯಾವ ರೀತಿಯಲ್ಲಿ ಅಕ್ರಮ ವಸ್ತುಗಳು ಒಳಗೆ ಬರುತ್ತಿವೆ ಎಂಬುದರ ಕುರಿತು ಸಮಗ್ರ ಪರಿಶೀಲನೆ ನಡೆಯುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಟ್ರಯಲ್ ಬೇಸಿಸ್‌ನಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದರ ಪರಿಣಾಮಕಾರಿತ್ವವನ್ನು…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
