What's Hot
- ಮಂಗಳೂರು ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ: ಎಐ ತಂತ್ರಜ್ಞಾನ ಪ್ರಯೋಗ, ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒತ್ತು
- ಮಂಗಳೂರು : ಕ್ರಿಸ್ ಮಸ್ ಹಬ್ಬ ಸಮಾಜದಲ್ಲಿ ಸತ್ಯ,ನ್ಯಾಯ ಹಾಗೂ ಸಹ ಜೀವನದ ಮೌಲ್ಯಗಳನ್ನು ಮರುಸ್ಥಾಪಿಸುವ ವಿಶಿಷ್ಟ ಅವಕಾಶ ಒದಗಿಸುತ್ತದೆ ; ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ.
- ಡಿಸೆಂಬರ್ 25ರಂದು ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಎಂ.ಆರ್.ಜಿ. ಗ್ರೂಪ್ನ ಆಶಾ–ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಸಮಾಜಮುಖಿ ಯೋಜನೆ ‘ನೆರವು–2025’
- ಉಡುಪಿ: ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಪಿಂಪ್ಗಳನ್ನು ಬಂಧಿಸಿದ ಪಡುಬಿದ್ರೆ ಪೊಲೀಸರು
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
- ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕ ಸ್ಥಾನ , ನಿರ್ದೇಶಕರ ಭವಿಷ್ಯ ಕುರಿತಾಗಿ ಚರ್ಚೆಗೂ ದಾರಿ ?
- ಮಂಗಳೂರು: MDMA ಸಾಗಾಟ ಜಾಲ ಭೇದಿಸಿದ ಸಿಸಿಬಿ; ಮೂವರು ಆರೋಪಿಗಳು ಬಂಧನ
- ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸ್ ಕ್ರಮ ಖಂಡನೀಯ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ತೀವ್ರ ಆಕ್ರೋಶ
Author: Tulunada Surya
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ) ದ. ಕ. ಮತ್ತು ಉಡುಪಿ ಜಿಲ್ಲೆಉಳ್ಳಾಲ ವಲಯ.ಇಂದು ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ನಮ್ಮ ವಲಯದ ಹಿರಿಯ ಸದಸ್ಯರು ಗೌರವ ಸಲಹೆಗರಾರು ಆಗಿರುವ ಶ್ರೀ ಅಶೋಕ್ ಉಳ್ಳಾಲ್ ಅವರನ್ನು ಅವರ ನಿವಾಸ ದಲ್ಲಿ ಸನ್ಮಾನಿಸಲಾಯಿತು.ವಲಯದ ಅಧ್ಯಕ್ಷರು ವಲಯ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನಿತರಿಗೆ ಶುಭ ಹಾರೈಸಿದರು.
*ದಿನಾಂಕ: 19-08-2025 ರಂದು ಬೆಳಿಗ್ಗೆ 11-00 ಗಂಟೆಯಿಂದ ಅಪರಾಹ್ನ 1.00 ಗಂಟೆಯವರೆಗೆ ಉಳ್ಳಾಲ ನಗರ ಸಭೆ ಕಛೇರಿಯ ಸಭಾಂಗಣ, ಉಳ್ಳಾಲ ತಾಲೂಕು ಇಲ್ಲಿ “ಲೋಕಾಯುಕ್ತ ಜನ ಸಂಪರ್ಕ ಸಭೆ” ಯನ್ನು ಆಯೋಜಿಸಿದ್ದುಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಮಂಗಳೂರು ರವರು ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡುವಂತೆ ಸಾರ್ವಜನಿಕರಿಗೆ ತಿಳಿಸಿರುತ್ತಾರೆ ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಮಂಗಳೂರು ರವರು ಸೂಕ್ತ ಮಾರ್ಗದರ್ಶನ ನೀಡಿ ರುತ್ತಾರೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 15 ದೂರುಗಳು ಸಾರ್ವಜನಿಕರಿಂದಸ್ವೀಕೃತವಾಗಿರುತ್ತದೆ.“ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಕುಮಾರ ಚಂದ್ರ ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಮಂಗಳೂರು, ಪೊಲೀಸ್ ಉಪಾ ಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್…
ಉಳ್ಳಾಲ: – ತೊಕ್ಕೊಟ್ಟು ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆದ ಮೊಸರುಕುಡಿಕೆ ಉತ್ಸವದ ಮೆರವಣಿಗೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಇಬ್ಬರು ಯುವಕರು ಬಂಧನಕ್ಕೊಳಗಾಗಿದ್ದಾರೆ. ಅಸೈಗೋಳಿಯ ದೀಪಕ್ ಮತ್ತು ತೊಕ್ಕೊಟ್ಟು ನಿವಾಸಿ ಕಿರಣ್ ಬಂಧಿತ ಆರೋಪಿಗಳಾಗಿದ್ದು, ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ಗಳು 126(2), 132, 74, ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೆರವಣಿಗೆಯ ಟ್ಯಾಬ್ಲೋ ಹಾಗೂ ನಾಸಿಕ್ ಬ್ಯಾಂಡ್ ರಾತ್ರಿ ಸುಮಾರು 11:50ಕ್ಕೆ ಒಳಪೇಟೆ ಪ್ರದೇಶ ತಲುಪಿದ್ದು, ಯುವಕರ ಗುಂಪು ನೃತ್ಯ ಮಾಡುತ್ತಿದ್ದ ಕಾರಣ ಟ್ಯಾಬ್ಲೋಗಳ ಮುಂದೆ ಸಾಗುವಿಕೆ ವಿಳಂಬವಾಗಿತ್ತು. ಮಹಿಳಾ ಪೇದೆಗಳು ನಿಯಂತ್ರಣಕ್ಕೆ ಮುಂದಾದಾಗ, ದೀಪಕ್ ಅವರು ಅಸಭ್ಯವಾಗಿ ವರ್ತಿಸಿ, ಮಹಿಳಾ ಸಿಬ್ಬಂದಿಗೆ ಬೆದರಿಕೆ ಒಡ್ಡಿದ ಕಾರಣ ಪ್ರಕರಣ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಕಿರಣ್ ಕೂಡ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದು, ಇಬ್ಬರೂ ಪೊಲೀಸರ ವಶದಲ್ಲಿದ್ದಾರೆ. ಇವರ ವಿರುದ್ಧ ಮಾನಭಂಗ ಮತ್ತು ಸಾರ್ವಜನಿಕ ಸೇವಕರ ಕಾರ್ಯನಿರ್ವಹಣೆಗೆ ಅಡಚಣೆ ಮಾಡುವ ಹಿನ್ನಲೆಯಲ್ಲಿ…
ಪಡುಬಿದ್ರೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 47/2024 ಮತ್ತು ಬೈಂದೂರು ಠಾಣಾ ಅಪರಾಧ ಕ್ರಮಾಂಕ 240/2024ರಲ್ಲಿ ದಾಖಲಾದ ಪ್ರಕರಣಗಳಲ್ಲಿ ಆಪಾದಿತರಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಕೊಡಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ವೈ.ಟಿ ರಾಘವೇಂದ್ರ ವಿಶೇಷ ಸರಕಾರಿ ಅಭಿಯೋಜಕರು, ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಫಾಸ್ಟ್ ಟ್ರ್ಯಾಕ್ -(ಪೋಕ್ಸ್), ಉಡುಪಿ ಇವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾ ಕಚೇರಿಯಲ್ಲಿ ಪ್ರಶಂಸನ ಪತ್ರ ನೀಡಿ ಕಾರ್ಯವೈಖರಿಯನ್ನು ಶ್ಲಾಘಿಸಿರುತ್ತಾರೆ.
ಉಳ್ಳಾಲ: ಕಿನ್ಯ ಬೆಳರಿಂಗೆ ಮಹಮ್ಮಾಯಿ ಮಿತ್ರ ಮಂಡಲ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಹಾಗೂ ಬ್ರಹತ್ ಶೋಭ ಯಾತ್ರೆ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಸದಸ್ಯರು, ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಫಾರೂಕ್ ಕಿನ್ಯ ನೇತೃತ್ವದಲ್ಲಿ ಹೋಟೆಲ್ ಆಲಿಯಾ ಮಾಲಕರಾದ ರೌಫ್,ಸ್ಥಳೀಯ ಸದಸ್ಯರಾದ ಫಯಾಜ್,ಹಮೀದ್ ರವರ ಸಹಕಾರದಿಂದ ಮುಸ್ಲಿಂ ಫ್ರೆಂಡ್ಸ್ ಸರ್ಕಲ್ ಸಹೋದರರಾದ ಮುಸ್ತಫಾ ELECTRO POIT ಶಾಲಾ ಹಳೆ ವಿದ್ಯಾರ್ಥಿ ಅಧ್ಯಕ್ಷರಾದ ಸಿರಾಜ್ ಸಾಗ್,ಇಜಾಜ್ ಕಲ್ಲಾಂಡ,ನೌಫಲ್ ಕಲ್ಲಾಂಡ,ನಾಸಿರ್ ಕಲ್ಲಾಂಡ,ಇಲ್ಯಾಸ್ ಪಾಲದಡಿ,ಇಸಾಕ್ ಸಾಗ್,ಅನ್ನಿ ಕಲ್ಲಾಂಡ,ಜವಾಜ್ ಕಲ್ಲಾಂಡ ಸಾರ್ವಜನಿಕರಿಗೆ ಸಿಹಿತಿಂಡಿ ಮತ್ತು ಪಾನೀಯ ವ್ಯವಸ್ಥೆಯನ್ನು ಮೊಸರು ಕುಡಿಕೆ ಶೋಭ ಯಾತ್ರೆ ವೇಳೆ ವಿತರಿಸಿದರು.
ದಿನಾಂಕ 16-08-2025 ರಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರನ್ನು ಮಂಗಳೂರಿನ ಕೇಂದ್ರೀಯ ಮಂಡಳಿ ಕಚೇರಿಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಜೊತೆ ಭೇಟಿ ಮಾಡಿ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಉತ್ತಮ ಸಾಧನೆ ಗುರುತಿಸಿ. ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದು. ತುಳುನಾಡ ರಕ್ಷಣಾ ವೇದಿಕೆ ಸೇರ್ಪಡೆ ಗೊಂಡ ಬಳಿಕ ತುಳುನಾಡಿನ ದೈವ ದೇವರುಗಳ ದಯೆಯಿಂದ ಬಹಳಷ್ಟು ಗೆಲುವು ಮತ್ತು ಪ್ರಶಸ್ತಿಗಳು ನನ್ನ ಹುಡುಕಿಕೊಂಡು ಬಂದಿವೆ. ಹೆಚ್ಚಿನ ಬೆಂಬಲ ಕೂಡ ದೊರೆಯುತ್ತಿದೆ. ಬಹಳಷ್ಟು ಜನರು ಸಂಘಟನೆಗೆ ಸೇರುತ್ತಿದ್ದಾರೆ. ಈ ಹಿಂದೆ ನನ್ನ ಏಳಿಗೆಗೆ ತನ್ನ ಜೊತೆ ನಿಂತು ಬೆಂಬಲಿಸಿ, ಪ್ರೋತ್ಸಾಹಿಸಿ, ಆಶೀರ್ವಾದಿಸಿದೀರಿ ಇನ್ನೂ ಮುಂದಕ್ಕೂ ಸದಾ ಆಶೀರ್ವಾದವಿರಲಿ ಎಂದು ಸತೀಶ್ ಖಾರ್ವಿ ಯವರು ಯೋಗೀಶ್ ಶೆಟ್ಟಿ ಜಪ್ಪು ರವರ ಬಳಿ ತಿಳಿಸಿದಾಗ “ತಾವು ತಮ್ಮ ಪ್ರಾಮಾಣಿಕ ಪ್ರಯತ್ನ ದಿಂದಾಗಿ ನೀವು ಇಷ್ಟು ಎತ್ತರಕ್ಕೆ ಬೆಳೆದಿದ್ದೀರಿ ತಾವು ಇದೇ ರೀತಿ ಮುಂದುವರೆದರೆ ದೇವರ ಆಶೀರ್ವಾದ…
ಮುಂಬಯಿ: ‘ಕರಾವಳಿ ಭಾಗದಲ್ಲಿ ಹುಟ್ಟಿ ಬೆಳೆದ ಯಕ್ಷಗಾನವಿಂದು ಜಗದಗಲ ತನ್ನ ಪ್ರಭಾವವನ್ನು ಬೀರಲು ಅಲ್ಲಲ್ಲಿ ನೆಲೆಸಿರುವ ಕಲಾಸಕ್ತರು ಮತ್ತು ಕರಾವಳಿ ಮೂಲದ ಸಂಘ – ಸಂಸ್ಥೆಗಳು ಪ್ರಮುಖ ಕಾರಣವೆನ್ನಬಹುದು. ಇದರಲ್ಲಿ ಮಠ – ಮಂದಿರಗಳ ಕೊಡುಗೆಯೂ ಅಪಾರ. ದೇಶ ವಿದೇಶಗಳಲ್ಲಿರುವ ಪ್ರಸಿದ್ಧ ಸಂಸ್ಥಾನಗಳ ಶಾಖಾಮಠಗಳು ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ ನೀಡಿವೆ. ಈ ನಿಟ್ಟಿನಲ್ಲಿ ಚೆಡ್ಡಾನಗರ ಶ್ರೀ ಸುಬ್ರಮಣ್ಯ ಮಠದಲ್ಲಿ ನಡೆಯುತ್ತಿರುವ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಾರ್ಹವೆನಿಸಿವೆ. ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ಸ್ವಾಮೀಜಿರ ಮಾರ್ಗದರ್ಶನ ಮತ್ತು ಆರಿಕ್ಕಾಡಿ ಅಶೋಕ ಭಟ್ಟರಂತಹ ಸಂಸ್ಕೃತಿ ಪ್ರಿಯರ ಕಾರ್ಯಶೀಲತೆಯಿಂದ ಇದು ಸಾಧ್ಯವಾಗಿದೆ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಚೆಂಬೂರು ಪಶ್ಚಿಮದ ಚೆಡ್ಡಾ ನಗರ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 24ನೇ ತಾಳಮದ್ದಳೆ ಸರಣಿ ಅಂಗವಾಗಿ ಆಗಸ್ಟ್ 14ರಂದು ಜರಗಿದ ‘ಶ್ರೀರಾಮ…
ಅಟಲ್ ಬಿಹಾರಿ ವಾಜಪೇಯಿ ಆಟೋ ರಿಕ್ಷಾ ಪಾರ್ಕ್ ಏರ್ಪೋರ್ಟ್ ಗೇಟ್ ಕೆಂಜಾರು ಇದರ ನೂತನ ಪದಾಧಿಕಾರಿಗಳು ಅಧ್ಯಕ್ಷರಾಗಿ ರಾಕೇಶ್ ಪೂಜಾರಿ ಕೆಂಜಾರು,ಉಪಾಧ್ಯಕ್ಷರಾಗಿ ಧನರಾಜ್ ಪೂಜಾರಿ,ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಶೆಟ್ಟಿ,ಜೊತೆ ಕಾರ್ಯದರ್ಶಿಯಾಗಿ ಸಂದೀಪ್ ಪೂಜಾರಿ,ಕೋಶಾಧಿಕಾರಿ ಯಾಗಿ ಚಂದ್ರಶೇಖರ್,ಖಜಾಂಚಿಯಾಗಿ ದಯಾನಂದ ಶೆಟ್ಟಿ ಆಯ್ಕೆಯಾಗಿದ್ದಾರೆ
79 ನೇ ಸ್ವಾತಂತ್ರೋತ್ಸವದ ಶುಭ ಸಂದರ್ಭದಲ್ಲಿ ಬಜ್ಪೆ ಪಟ್ಟಣ ಪಂಚಾಯತಿನ 4ನೇ ವಾರ್ಡಿನ ಕಿನ್ನಿಪದವು ಝರಾ ಸೆಂಟರ್ ಮುಂದುಗಡೆ “ಗಾಂಧಿ ಪಾರ್ಕ್”ಹೆಸರಿನಲ್ಲಿ ಉದ್ಯಾನವನವನ್ನು ಬಜ್ಪೆ ಲೆಜೆಂಡ್ಸ್ ಟ್ರಸ್ಟ್ (ರಿ) ಇವರ ನಿರ್ವಹಣೆಯೊಂದಿಗೆ ಮುಡಾ ಆಯುಕ್ತರಾದ ಮೊಹಮದ್ ನಜೀರ್ ರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಈ ಉದ್ಯಾನವನಕ್ಕೆ ಮುಡಾದಿಂದ ಬೇಕಾಗುವ ಮೂಲ ಸೌಕರ್ಯಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು .ವಾರ್ಡಿನ ಮಾಜಿ ಸದಸ್ಯರು,ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರು ಮತ್ತು ಈ ಉದ್ಯಾನವನದ ಮೂಲ ಕಾರಣೀಕರ್ತರಾದ ಸಿರಾಜ್ ಬಜ್ಪೆ ಮಾತನ್ನಾಡಿ,ಪಾಲು ಬಿದ್ದ ಈ ಪಾರ್ಕಿನ ಅಭಿವೃದ್ದಿಗಾಗಿ,ಈ ಭಾಗದ ಜನರ ಬೇಡಿಕೆಗೆ ಅನುಗುಣವಾಗಿ ನಿರ್ವಹಣೆ ಮಾಡಲು ಮುಂದೆ ಬಂದಿರುವ ಬಜ್ಪೆ ಲೆಜೆಂಡ್ಸ್ ಟ್ರಸ್ಟ್ (ರಿ )ರವರ ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ಅಭಿನಂದಿಸಿದರು.ಈ ಸಂದರ್ಭದಲ್ಲಿ ಬಜ್ಪೆ ಲೆಜೆಂಡ್ಸ್ ಟ್ರಸ್ಟ್ ನ ಅಧ್ಯಕ್ಷರಾದ ಮೊಹಮದ್ ಶಾಫಿ,ಪ್ರಧಾನಕಾರ್ಯದರ್ಶಿಯಾದ ಅಖ್ತರ್ ಬ್ರೈಟ್,ಅನಿವಾಸಿ ಭಾರತೀಯ ಉದ್ಯಮಿ ಹೈದರ್ ಅಲಿ ಯುನೈಟೆಡ್ ಹಿರಿಯರಾದ ಮೊನಕ, ಬಜ್ಪೆ ಲೆಜೆಂಡ್ಸ್ ಟ್ರಸ್ಟ್ ನ ಸದಸ್ಯರಾದ ಅಲ್ತಾಫ್ ,ಹಕೀಮ್…
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿ 79 ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ದಿವಂಗತ ರಾಮ ದೇವಾಡಿಗ ಅವರ ಸ್ಮರಣಾರ್ಥ ಕೊಡುಗೆಯಾಗಿ ನಿರ್ಮಿಸಲಾಗಿರುವ ಹೊಸ ಧ್ವಜಾಸ್ತಂಭವನ್ನು ಅವರ ಧರ್ಮಪತ್ನಿ ಸೀತಾ ದೇವಾಡಿಗರವರು ಉದ್ಘಾಟಿಸಿದರು. SDMC ಅಧ್ಯಕ್ಷರಾದ ಗುಣಪಾಲ್ ದೇವಾಡಿಗರವರು ಧ್ವಜಾರೋಹಣ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದಿವಂಗತ ರಾಮ ದೇವಾಡಿಗರ ಸ್ಮರಣಾರ್ಥ ಶಾಲೆಗೆ ನೂತನ ಧ್ವಜಸ್ತಂಭವನ್ನುನಿರ್ಮಿಸಿ ಕೊಟ್ಟ ಸೀತಾ ದೇವಾಡಿಗ ಹಾಗೂ ಅವರ ಕುಟುಂಬವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಕೋರ್ದಬ್ಬು ದೈವಸ್ಥಾನ ಕರಂಬಾರು ನ ಅಧ್ಯಕ್ಷರಾದ ಜಗನಾಥ್ ಸಾಲ್ಯಾನ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಲಕ್ಷ್ಮಣ್ ಬಂಗೇರ, ನಮ್ಮ ಕ್ಲಿನಿಕ್ ಮಳವೂರಿನ ವೈದ್ಯಾಧಿಕಾರಿ ಡಾ! ಸಮೀಕ್ಷಾ ಡಿ. ಪಿ , ನಮ್ಮ ಜವನೆರ್ ಕರಂಬಾರು ಅಧ್ಯಕ್ಷರಾದ ರಮೇಶ್ ಸುವರ್ಣ, ಶ್ರೀ ದೇವಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಅಧ್ಯಕ್ಷರಾದ ರವಿ ಶೆಟ್ಟಿ, ಓಂಕಾರ್ ಫ್ರೆಂಡ್ಸ್ ಕ್ಲಬ್…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
