Author: Tulunada Surya

ಮಂಗಳೂರು, ಆಗಸ್ಟ್ 24: ವಿಯೆಟ್ನಾಂನಲ್ಲಿ ಆ.13ರಿಂದ 17ರ ವರೆಗೆ ನಡೆದ ಫ್ಯಾಷನ್ ರನ್‌ವೇ ಇಂಟರ್‌ನ್ಯಾಷನಲ್ ಆಯೋಜನೆಯ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮಂಗಳೂರು ಮೂಲದ 8 ವರ್ಷದ ಬಾಲ ಪ್ರತಿಭೆ ರುಶಭ್ ರಾವ್ “Prince Category”ಯಲ್ಲಿ ಪ್ರಥಮ ಸ್ಥಾನ ಗಳಿಸಿ ‘ಸೂಪರ್ ಟ್ಯಾಲೆಂಟ್’ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಪ್ರಾತಿನಿಧ್ಯ ಮಾಡುವ ಅಪರೂಪದ ಗೌರವಕ್ಕೆ ಪಾತ್ರನಾದ ರುಶಭ್, ದೇಶದ ಹೆಮ್ಮೆ ಹೆಚ್ಚಿಸಿದ್ದಾರೆ. 🛬 ಹೂಗುಚ್ಚದ ಸ್ವಾಗತ ಮಂಗಳೂರಲ್ಲಿ ಇಂದು ಮಂಗಳೂರಿಗೆ ಹಿಂದಿರುಗಿದ ರುಶಭ್ ರಾವ್ ಅವರನ್ನು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಹೂಗುಚ್ಚ ನೀಡಿ ಅದರಂಗದಿಂದ ಸ್ವಾಗತಿಸಿದರು. ಅಭಿಮಾನಿಗಳ ಚಪ್ಪಾಳೆಗಳ ಮಧ್ಯೆ ಕಿರಿಯ ವಯಸ್ಸಿನ ಈ ಸಾಧಕ ಮಿಂಚುತ್ತಿರುವುದು ಸ್ಥಳೀಯರಲ್ಲಿಯೂ ಸಂತಸದ ವಾತಾವರಣ ಸೃಷ್ಟಿಸಿದೆ. 🏫 ಬಿಜೈಯಾ ಲೂರ್ಡ್ಸ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿ ಕುಲಶೇಖರ ಮೂಲದ ರುಶಭ್, ಬಿಜೈಯಾ ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿರುವ ಪ್ರತಿಭಾವಂತ ಬಾಲಕ. ಕಿರಿಯ ವಯಸ್ಸಿನಲ್ಲಿ ನೃತ್ಯ, ಅಭಿನಯ…

Read More

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇದೇ ಸೆ.30 ರಂದು ನಡೆಯಲಿರುವ ‘ಕುಡ್ಲದ ಪಿಲಿ ಪರ್ಬ-ಸೀಸನ್ 4’ ಇದರ ಆಮಂತ್ರಣ ಪತ್ರಿಕೆಯನ್ನು ನಗರದ ಅಟಲ್ ಸೇವಾ ಕೇಂದ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಬಳಿಕ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಗಿರಿಧ‌ರ್ ಶೆಟ್ಟಿ ಯವರು, ಕಳೆದ ನಾಲ್ಕು ವರ್ಷಗಳಿಂದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದು, ಪ್ರತಿ ವರ್ಷದಂತೆ ನಗರದ ಕೇಂದ್ರ ಮೈದಾನದಲ್ಲಿ ಈ ಬಾರಿಯ ಪಿಲಿಪರ್ಬವು ಸಂಭ್ರಮದಿಂದ ನಡೆಯಲಿದೆ. ನಮ್ಮ ಪ್ರತಿಷ್ಠಾನದ ಮೂಲ ಉದ್ದೇಶ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಆಯೋಜನೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ರೀತಿಯ ಅನುಮತಿ ಪಡೆಯಲಾಗಿದ್ದು ಸಾರ್ವಜನಿಕರೆಲ್ಲರಿಗೂ ಸಂಭ್ರಮದ ಪಿಲಿಪರ್ಬಕ್ಕೆ ಸ್ವಾಗತ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ದಿವಾಕರ್ ಪಾಂಡೇಶ್ವರ ಪ್ರಮುಖರಾದ ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಕಿರಣ್ ಶೆಣೈ, ಜಗದೀಶ್…

Read More

ಕಾಪು : ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತವಾಗಿದ್ದು ಖ್ಯಾತ ಡಿಜೆ ಮರ್ವಿನ್ ಸಾವನ್ನಪ್ಪಿದ್ದು ಮತ್ತಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಕಾಪು ತಾಲೂಕಿನ ಮೂಳೂರು ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ ಗಾಯಗೊಂಡವರನ್ನುಪ್ರಜ್ವಲ್ ಮತ್ತು ಪ್ರಸಾದ್ ಎಂದು ಗುರುತಿಸಲಾಗಿದೆ.ಗಾಯಾಳುಗಳನ್ನು ಉಚ್ಚಿಲ ಆ್ಯಂಬುಲೆನ್ಸ್ ನ ಜಲಾಲುದ್ದೀನ್, ಹಮೀದ್, ಕೆ ಎಂ ಸಿರಾಜ್ ಮತ್ತು ಅನ್ವರ್ ಕೋಟೇಶ್ವರ ಉಡುಪಿಯ ಆಸ್ಪತ್ರೆಗೆ ಸಾಗಿಸಿದರು. ಉಡುಪಿ, ಮಂಗಳೂರಿನ ಪ್ರಸಿದ್ದ ಡಿಜೆಯಾಗಿದ್ದ ಮರ್ವಿನ್ ಮೆಂಡೋನ್ಸಾ, ಹಲವಾರು ಕೊಂಕಣಿ ಮ್ಯೂಸಿಕ್ ವಿಡಿಯೋಗಳನ್ನು ಕೂಡಾ ನಿರ್ದೇಶನ ಮಾಡಿದ್ದರು. ನಿನ್ನೆಯಷ್ಟೇ ಅವರ ಹೊಸ ಕೊಂಕಣಿ ಮ್ಯೂಸಿಕ್ ವಿಡಿಯೋ ಬಿಡುಗಡೆ ಆಗಿತ್ತು.

Read More

ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪೂರ್ಣ ಪ್ರಮಾಣದ ಸಭೆಯು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರ ಅಧ್ಯಕ್ಷತೆಯಲ್ಲಿ ಇಂದು ನಗರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.70ಕ್ಕೂ ಮಿಕ್ಕಿದ ಸದಸ್ಯರು ಸ್ವಯಂಸ್ಪೂರ್ತಿಯಿಂದ ಭಾಗವಹಿಸಿರುವುದು ಕಾರ್ಯಕ್ರಮದ ಹುಮ್ಮಸ್ಸನ್ನು ಹೆಚ್ಚಿಸಿದೆ. ಕಾರ್ಯಕ್ರಮದ ವರ್ಣರಂಜಿತ ಕರಪತ್ರವನ್ನು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟಾನಿ ಆಲ್ವಾರೀಸ್ ರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.ಸೆಪ್ಟೆಂಬರ್ 11ರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಹಲವರು ಸಭೆಯಲ್ಲಿ ಮಾತನಾಡುವ ಮೂಲಕ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಕೆಥೋಲಿಕ್ ಸಭಾದ ಅಧ್ಯಕ್ಷರಾದ ಸಂತೋಷ್ ಡಿಸೋಜ ಬಜಪೆ,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಾಯಕರಾದ ಲಕ್ಷ್ಮಣ್, ಯೆನಪೋಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜೀವನ್ ರಾಜ್ ಕುತ್ತಾರ್,ಸಂತ ಅಲೋಶಿಯಸ್ ಕಾಲೇಜ್ ನ ಪ್ರಾಧ್ಯಾಪಕರಾದ ಫ್ಲೋರಾ ಕ್ಯಾಸ್ಟಲಿನೋ, ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್,ಮಹಿಳಾ ಮುಖಂಡರಾದ ಸುಮತಿ ಎಸ್ ಹೆಗ್ಡೆ, ವೇದಿಕೆಯ ಪ್ರಮುಖರಾದ ಡೋಲ್ಫಿ ಡಿಸೋಜರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಮುಖರಾದ ಸ್ಟಾನಿ ಲೋಬೋ, ಡಾ…

Read More

ದಿನಾಂಕ 22/08/2025 ರಂದು ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್ ಹಾಗು ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ರವಿ ಪವಾರ್ ರವರು ಸಿಬ್ಬಂದಿಯವರೊಂದಿಗೆ ಮಂಗಳೂರಿನ ಮಣ್ಣಗುಡ್ಡ ದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಬಾಲಕ ಮತ್ತು ಬಾಲಕಿಯರ ವಸತಿ ಗೃಹ ಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು. ಪರಿಶೀಲನೆ ವೇಳೆ ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದು, ಮುಖ್ಯವಾಗಿ ವಸತಿ ಗೃಹದ ಅಡುಗೆ ಕೋಣೆಯಲ್ಲಿ ಶುಚಿತ್ವ ಇರುವುದಿಲ್ಲ, ದವಸ ಧಾನ್ಯಗಳ ಸ್ಟಾಕ್ ಇರುವುದಿಲ್ಲ, ಅಕ್ಕಿಯಲ್ಲಿ ಹುಳುಗಳು ಇರುವುದು ಕಂಡುಬಂದಿದೆ.ಸ್ಟಾಕ್ ರಿಜಿಸ್ಟರ್ ಇರುವುದಿಲ್ಲ. ಅಡುಗೆಗೆ ಕಡಿಮೆ ಗುಣಮಟ್ಟದ ಹೆಚ್ಚು ಪ್ಯಾಟ್ ಇರುವ ಪಾಮೋಲಿನ್ ಅಡುಗೆ ಎಣ್ಣೆಯನ್ನು ಬಳಸುವುದು ಕಂಡುಬಂದಿದೆ. ವಸತಿ ಗೃಹದಲ್ಲಿ 33 ಮಕ್ಕಳಿದ್ದರು ಅವರಿಗೆ ಪೌಷ್ಟಿಕ ಯುಕ್ತ ಆಹಾರ ನೀಡಿರುವುದಿಲ್ಲ. ಊಟದ ಹಾಲ್ ನಲ್ಲಿ ಹೆಚ್ಚಿನ ಸ್ಥಳವಕಾಶ ಇಲ್ಲದಿದ್ದರೂ ಕೂಡ ಎರಡು ವಸತಿ ಗ್ರಹದಲ್ಲಿನ ಬಾಲಕರಿಗೆ ಮತ್ತು ಬಾಲಕಿಯರಿಗೆ ಒಂದೇ ಕಡೆಯಲ್ಲಿ ಊಟದ ವ್ಯವಸ್ಥೆ ಕಲ್ಪಿಸುವುದು ಕಂಡುಬಂದಿದೆ.ಸ್ಕಾಲರ್ಶಿಪ್…

Read More

ಮಂಗಳೂರು ಮರೋಳಿಯ ಲಾಲ್ ಬಹಾದುರ್ ಶಾಸ್ತ್ರಿ ಲೇಔಟ್ ನ ಸುದರ್ಶನ್ ಬಿ.ರೈ ಹಾಗೂ ಸುಶ್ಮಿತಾ ಎಸ್. ರೈ ಅವರ ಪುತ್ರನಾಗಿರುವ ಸುರಾಗ್ ಎಸ್. ರೈ ತಂದೆ ಯೊಂದಿಗೆ ಮೊಬೈಲ್ ನಲ್ಲಿ ರೀಲ್ಸ್ ನೋಡಿ ಆಕರ್ಷಿತ ನಾಗಿ ತಾನು ಮೋಟೋ ಕ್ರಾಸ್ ಡರ್ಟ್ ಬೈಕ್ ರೇಸ್ ನಲ್ಲಿ ಪಾಲ್ಗೊಂಡು ಮಡಂತ್ಯಾರು ಬಳ್ಳಮಂಜ ಮೊಸರುಕುಡಿಕೆಯಲ್ಲಿಮೋಟೋ ಕ್ರಾಸ್ ಡರ್ಟ್ ಬೈಕ್ ರೇಸ್ ನಲ್ಲಿ ಹವಾ ಎಬ್ಬಿಸಿದ ಸುರಾಗ್ ಬೈಕ್ ರೇಸ್ ನೋಡಿ ಜನರು ಶಹಬ್ಬಾಸ್ ಗಿರಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಾಹಸ ಮೆಚ್ಚಿ ದಿನಾಂಕ 21-08-2025 ರಂದು ಸಂಜೆ 4.30 ಕ್ಕೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಕಚೇರಿಯಲ್ಲಿ 6 ವರ್ಷದ ಬಾಲಕ ಸುರಗ್ ಎಸ್ ರೈ ಗೆ ತುಳುನಾಡ ರಕ್ಷಣಾ ವೇದಿಕೆ ಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲು ಹೊದಿಸಿ ಮಾಲೇ, ಫಲ ಪುಷ್ಪ ಮತ್ತು ಟ್ರೋಫಿ ನೀಡಿ ಸನ್ಮಾನಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಮೆಚ್ಚುಗೆ ವ್ಯಕ್ತಪಡಿಸಿದರು.…

Read More

ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಕೆಂಪುಕಲ್ಲು, ಮರಳು ಹಾಗೂ ಇತರ ನಿರ್ಮಾಣ ಸಾಮಗ್ರಿಗಳ ತೀವ್ರ ಅಭಾವ ಉಂಟಾಗಿ, ನಿರ್ಮಾಣ ಕಾರ್ಯಗಳು ಸಂಪೂರ್ಣವಾಗಿ ನಿಂತುಹೋಗಿವೆ. ಈ ಪರಿಣಾಮದಿಂದಾಗಿ ನೂರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಉದ್ಯೋಗವಿಲ್ಲದೆ ತೊಂದರೆಗೆ ಒಳಗಾಗುತ್ತಿದ್ದಾರೆ. ವಿಶೇಷವಾಗಿ ದಿನ ಕೂಲಿ ಕೆಲಸದಲ್ಲಿ ಜೀವನ ನಿರ್ವಹಿಸುತ್ತಿರುವ ಕಾರ್ಮಿಕರು, ಕೆಲ ದಿನಗಳೂ ಕೆಲಸವಿಲ್ಲದ ಕಾರಣ ತಮ್ಮ ಕುಟುಂಬದ ಆಧಾರಗಳಾದ ಆಹಾರ, ಆರೋಗ್ಯ, ಮಕ್ಕಳ ಶಿಕ್ಷಣ ಮೊದಲಾದ ಎಲ್ಲಾ ಮೂಲಭೂತ ಅಗತ್ಯಗಳನ್ನು ಪೂರೈಸಲಾಗದ ಸ್ಥಿತಿಗೆ ತಲುಪಿದ್ದಾರೆ. ಇವರು ಆರ್ಥಿಕ ಉಳಿತಾಯವಿಲ್ಲದ, ಪ್ರತಿದಿನವೂ ದುಡಿದು ದಿನಚರ್ಯೆ ನಿರ್ವಹಿಸುವವರು. ಇದರಿಂದಾಗಿ ಇಡೀ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುತ್ತಿವೆ. ಈ ಸಮಸ್ಯೆಯು ಕೇವಲ ಕಾರ್ಮಿಕರಷ್ಟೇ ಅಲ್ಲದೆ, ಲಾರಿ, ಟಿಪ್ಪರ್ ಮಾಲಕರು, ಗುತ್ತಿಗೆದಾರರು ಹಾಗೂ ನಿರ್ಮಾಣ ಸಾಮಗ್ರಿ ವ್ಯವಹಾರಗಾರರಿಗೂ ತೀವ್ರ ಸಂಕಷ್ಟ ಉಂಟುಮಾಡಿದೆ. ಈ ಅವ್ಯವಸ್ಥೆಯಿಂದ ನಮ್ಮ ಜಿಲ್ಲೆಯ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. 1) ತಕ್ಷಣಕ್ಕೆ ಜಿಲ್ಲಾಡಳಿತದ ವತಿಯಿಂದ ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ…

Read More

ಮಂಗಳೂರು, ಆಗಸ್ಟ್ 20: ಸರ್ಕಾರಿ ಸೇವೆಗಳಲ್ಲಿ ಯುವಜನರ ಆಕರ್ಷಣೆ ಹೆಚ್ಚಿಸುವ ಹಾಗೂ ಐಎಎಸ್, ಐಪಿಎಸ್ ಹೀಗೆ ಉನ್ನತ ಹುದ್ದೆಗಳನ್ನು ಗುರಿಯಾಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಯ ರೂಪದಲ್ಲಿ, ಕೂಳೂರು ಘಟಕದ ಕಥೋಲಿಕ್ ಸಭಾ ಮತ್ತು ಎಪಿಸ್ಕೋಪಲ್ ಸಿಟಿ ವಲಯದ ಸಹಯೋಗದಲ್ಲಿ “ಪ್ರೇರಣ್ – ಕ್ಯಾಚ್ ದೆಮ್ ಯಂಗ್” ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಶಿಬಿರವು ಕೂಳೂರು ಚರ್ಚಿನ ಸಭಾಂಗಣದಲ್ಲಿ ನಡೆಯಿತು. ಇದರಲ್ಲಿ 7ನೇ ತರಗತಿಯಿಂದ ಪಿಯುಸಿ ಮತ್ತು ಪದವಿ ಅಧ್ಯಯನದಲ್ಲಿರುವ ವಿದ್ಯಾರ್ಥಿಗಳಿಗಾಗಿ ನಾಗರಿಕ ಸೇವೆಗಳ ಕುರಿತು ಮಾಹಿತಿ ಮತ್ತು ಪ್ರೇರಣಾತ್ಮಕ ಮಾರ್ಗದರ್ಶನ ನೀಡಲಾಯಿತು. ಕಾರ್ಯಕ್ರಮವನ್ನು ವಂದನೀಯ ವಿಕ್ಟರ್ ವಿಜಯ್ ಲೋಬೊ ಉದ್ಘಾಟಿಸಿದರು. ಅವರು ಯುವಜನರಲ್ಲಿ ಸರಕಾರಿ ಸೇವೆಗಳ ಪ್ರಾಮುಖ್ಯತೆ ಮತ್ತು ಸಿದ್ಧತೆಯ ಅಗತ್ಯತೆ ಕುರಿತು ಮನದಟ್ಟಾಗುವಂತೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಎಪಿಸ್ಕೋಪಲ್ ಸಿಟಿ ವಲಯದ ಅಧ್ಯಕ್ಷ ಐಡ ಪುರ್ಟಾಡೊ, ಮಾಜಿ ಅಧ್ಯಕ್ಷ ಸ್ಟೀವನ್ ರೊಡ್ರಿಗಸ್, ಕಾರ್ಯದರ್ಶಿ ರೋಹನ್ ಸಿಕ್ವೇರಾ, ವಲಯ ಸಂಚಾಲಕ ದೀಪಕ್ ಡಿಸೋಜಾ, ಘಟಕದ ಅಧ್ಯಕ್ಷ ರೋವಿನ್ ಡಿ ಸೋಜಾ, ಕಾರ್ಯದರ್ಶಿ ಸವಿತಾ ವೇಗಸ್,…

Read More

ತುಳುನಾಡಿನ ಸ್ವಾತಂತ್ರ್ಯ ಹೋರಾಟಗಾರ ಸಮರವೀರ ಕೆದಂಬಾಡಿ ರಾಮಯ್ಯಗೌಡರ ಹೆಸರನ್ನು ಮಂಗಳೂರಿನಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಮತ್ತು ತುಳುನಾಡಿನ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕನ ಹೆಸರನ್ನು ಮಂಗಳೂರಿನಲ್ಲಿರುವ ಲೇಡಿಗೋಶನ್ ಹೆರಿಗೆ ಆಸ್ಪತ್ರೆಗೆ ನಾಮಕರಣ ಮಾಡಲು ತುಳುನಾಡ ರಕ್ಷಣಾ ವೇದಿಕೆ ಒತ್ತಾಯ ದಿನಾಂಕ 20-08-2025 ರಂದು ತುಳುನಾಡ ರಕ್ಷಣಾ ವೇದಿಕೆ ನಿಯೋಗ ಜಿಲ್ಲಾಧಿಕಾರಿ ಭೇಟಿ ಮಾಡಿ 1837 ರಲ್ಲಿ ಬ್ರಿಟಿಷರ ಅಟ್ಟಹಾಸ, ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಸೆಟೆದು ನಿಂತವರು ಕೆಚ್ಚೆದೆಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರು. ಸುಳ್ಯದ ತನ್ನ ಮನೆ ಮದುವೆ ಗದ್ದೆಯಲ್ಲಿ ಬ್ರಿಟಿಷರ ತೆರಿಗೆ ಪಾವತಿ ನಿಯಮದ ವಿರುದ್ಧ ಸಮರ ಸಾರಲು ಬೇಕಾದ ಆಯುಧಗಳನ್ನು ಜೋಡಿಸಿ ಊರಿನ ರೈತರನ್ನು ಸೇರಿಸಿ ಅವರಿಗೆ ತರಬೇತಿ ನೀಡಿ ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡು ಮಹಾದಂಡ ನಾಯಕ ಕೆದಂಬಾಡಿ ರಾಮಯ್ಯ ಗೌಡರು ತನ್ನ 2000 ಕ್ಕೂ ಅಧಿಕ ರೈತ ಸೇನಾನಿಗಳೊಂದಿಗೆ ತಮ್ಮ ಮನೆಯಿಂದ ಹೊರಟು ಬೆಳ್ಳಾರೆಯಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷರನ್ನು ಬಗ್ಗು ಬಡಿದು ಪುತ್ತೂರನ್ನು ವಶಪಡಿಸಿ, ಪಾಣೆಮಂಗಳೂರು…

Read More

ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನವು ಡಾ.ಡಿ.ಕೆ. ಚೌಟ ದತ್ತಿನಿಧಿಯಿಂದ ನೀಡುವ ಯಕ್ಷಗಾನ ಪ್ರಶಸ್ತಿಗೆ 2025ನೇ ಸಾಲಿನಲ್ಲಿ ತೆಂಕು ತಿಟ್ಟು ಯಕ್ಷಗಾನದ ಹೆಸರಾಂತ ಸ್ತ್ರೀವೇಷಧಾರಿ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಆಯ್ಕೆಯಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಬಡಗು ತಿಟ್ಟಿನ ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರನ್ನೊಳಗೊಂಡ ಸಲಹಾ ಸಮಿತಿಯು ಈ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಪ್ರಮಾಣ ಫಲಕವನ್ನೊಳಗೊಂಡಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಸಿಎ ವೈ.ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಆ.23 – ಪ್ರಶಸ್ತಿ ಪ್ರದಾನ:ಇದೇ ಆಗಸ್ಟ್ 23ರಂದು ಭಾನುವಾರ ಮಂಗಳೂರಿನ ಕರಂಗಲಪಾಡಿ ಎ.ಜೆ.ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುವ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 29ನೇ ವಾರ್ಷಿಕ ಮಹಾಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Read More