What's Hot
- ಮಂಗಳೂರು ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ: ಎಐ ತಂತ್ರಜ್ಞಾನ ಪ್ರಯೋಗ, ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒತ್ತು
- ಮಂಗಳೂರು : ಕ್ರಿಸ್ ಮಸ್ ಹಬ್ಬ ಸಮಾಜದಲ್ಲಿ ಸತ್ಯ,ನ್ಯಾಯ ಹಾಗೂ ಸಹ ಜೀವನದ ಮೌಲ್ಯಗಳನ್ನು ಮರುಸ್ಥಾಪಿಸುವ ವಿಶಿಷ್ಟ ಅವಕಾಶ ಒದಗಿಸುತ್ತದೆ ; ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ.
- ಡಿಸೆಂಬರ್ 25ರಂದು ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಎಂ.ಆರ್.ಜಿ. ಗ್ರೂಪ್ನ ಆಶಾ–ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಸಮಾಜಮುಖಿ ಯೋಜನೆ ‘ನೆರವು–2025’
- ಉಡುಪಿ: ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಪಿಂಪ್ಗಳನ್ನು ಬಂಧಿಸಿದ ಪಡುಬಿದ್ರೆ ಪೊಲೀಸರು
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
- ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕ ಸ್ಥಾನ , ನಿರ್ದೇಶಕರ ಭವಿಷ್ಯ ಕುರಿತಾಗಿ ಚರ್ಚೆಗೂ ದಾರಿ ?
- ಮಂಗಳೂರು: MDMA ಸಾಗಾಟ ಜಾಲ ಭೇದಿಸಿದ ಸಿಸಿಬಿ; ಮೂವರು ಆರೋಪಿಗಳು ಬಂಧನ
- ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸ್ ಕ್ರಮ ಖಂಡನೀಯ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ತೀವ್ರ ಆಕ್ರೋಶ
Author: Tulunada Surya
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು, ತನ್ನ 2024-2025 ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದು ಕಾರ್ಯನಿರ್ವಹಿಸುತ್ತಿರುವ ‘ಅ’ ವರ್ಗದ ಸಹಕಾರಿ ಸಂಘಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದೆ. ಈ ಸಾಲಿನಲ್ಲಿ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಜಿಲ್ಲಾ ಬ್ಯಾಂಕಿನ ತೃತೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದು ಸಂಘದ ಗಮನಾರ್ಹ ಸಾಧನೆಗೆ ಸಾಕ್ಷಿಯಾಗಿದೆ. ಅಗಸ್ಟ್ 30ರಂದು ನಡೆದ ಮಹಾಸಭೆಯಲ್ಲಿ ಜಿಲ್ಲಾ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಈ ಸಾಧನೆಯನ್ನು ಪ್ರಶಂಸಿಸಿ, ಉಪ್ಪೂರು ಸಂಘದ ಅಧ್ಯಕ್ಷ ಎನ್. ರಮೇಶ್ ಶೆಟ್ಟಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ ಶೆಟ್ಟಿ ಅವರಿಗೆ ಪ್ರಶಸ್ತಿ ಪತ್ರ ಮತ್ತು ಸನ್ಮಾನ ಗೌರವ ನೀಡಿ ಅಭಿನಂದಿಸಿದರು. ಈ ಸನ್ಮಾನ ಸಮಾರಂಭದಲ್ಲಿ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರು ಅಶೋಕ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ರಾಜೇಶ್ ರಾವ್ ಪಾಂಗಾಳ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಮತ್ತು ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಶ್ರೀಮತಿ ಲಾವಣ್ಯ ಕೆ.ಆರ್. ಅವರು ಉಪಸ್ಥಿತರಿದ್ದರು.
ಮಂಗಳೂರು ತಾಲ್ಲೂಕಿನ ತಲಪಾಡಿಯ ಮೇಲಿನ ಪೇಟೆಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ದುರ್ಮರಣಕ್ಕೆ ಒಳಗಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಇನ್ನೂ ಏಳು ಮಂದಿಯನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ವಿವರಗಳುಅಪಘಾತ ಮಧ್ಯಾಹ್ನ 1.30ರ ಸುಮಾರಿಗೆ ಸಂಭವಿಸಿದ್ದು, ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದ ರಿಕ್ಷಾಗೆ ವೇಗವಾಗಿ ಬಂದ ವಾಹನದೊಂದು ಡಿಕ್ಕಿ ಹೊಡೆದಿದೆ. ಪರಿಣಾಮ, ರಿಕ್ಷಾ ಹಾಗೂ ಅದರಲ್ಲಿದ್ದ ಪ್ರಯಾಣಿಕರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಮೃತರ ವಿವರಘಟನೆಯಲ್ಲಿ ಸಾವನ್ನಪ್ಪಿದವರನ್ನು: ಹೈದರ್ ಅಲಿ (45), ರಿಕ್ಷಾ ಚಾಲಕ, ಕೋಟೆಕಾರ್ ಅವ್ವಮ್ಮ (60), ಫರಂಗಿಪೇಟೆ ಖತೀಜಾ, ಹಸ್ನಾ, ನಫೀಸಾ (52), ತಾಯಿ–ಮಗಳುಗಳು, ಕೋಟೆಕಾರ್ ಆಯಿಷಾ ಫಿದಾ (19), ಅಜ್ಜಿನಡ್ಕ ಕೆ.ಸಿ. ರಸ್ತೆ ನಿವಾಸಿ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಮಗು ಸೇರಿದಂತೆ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಮಹಿಳೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ ಬಳಿಕ ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಗಂಭೀರ ಗಾಯಗಳಾದವರುಅಪಘಾತದಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು,…
ಕುಸುಮ ತಿಮ್ಮಪ್ಪ ರೈ ಬೆಳ್ಯ , 9೦ ವರ್ಷಗಳಿಗೂ ಹೆಚ್ಚು ಕಾಲ ಬದುಕಿದ ಒಬ್ಬ ಅಸಾಧಾರಣ ಮಹಿಳೆ. ಬೆಳ್ಯ ವೆಂಕಮ್ಮ ರೈ ಮತ್ತು ಮಿಯೋನಿ ಪಟ್ಟೆ ಸುಬ್ಬಣ್ಣ ರೈ ದಂಪತಿಗಳ ಪ್ರಥಮ ಪುತ್ರಿಯಾಗಿ ಜನಿಸಿದ ಇವರು, ಕೊಡಗಿನ ದಿವಂಗತ ಬಿ. ಎಸ್. ತಿಮ್ಮಪ್ಪ ರೈ ಅವರನ್ನು ವಿವಾಹವಾದರು. ತಿಮ್ಮಪ್ಪ ರೈ ವಿಜಯ ಬ್ಯಾಂಕಿನ ಸೂಪರಿಂಟೆಂಡೆಂಟ್ ಆಗಿದ್ದರು.ಕುಸುಮ ರೈ ಅವರ ಕುಟುಂಬವು ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಗಾಢವಾದ ಸಂಬಂಧ ಹೊಂದಿತ್ತು. ಇವರ ಮಗ ಮತ್ತು ಸೊಸೆ ಇಬ್ಬರೂ ವಿಜಯ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಹಿರಿಯ ಮಗಳು ಮತ್ತು ಅಳಿಯ ಕೂಡ ವಿಜಯ ಬ್ಯಾಂಕಿನಿಂದ ನಿವೃತ್ತರಾಗಿದ್ದಾರೆ. ಇವರ ಎರಡನೇ ಮಗಳು ಶಿಕ್ಷಕಿಯಾಗಿದ್ದು, ಆಕೆಯ ಗಂಡ ಮೊತಿಮಹಲ್‌ನ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಇವರ ಕಿರಿಯ ಮಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯಾಗಿದ್ದು, ಈಗ ನಿವೃತ್ತಿಯಾಗಿದ್ದಾರೆ. ಆಕೆಯ ಗಂಡ ಕುಂಜಾಡಿ ಕುಟುಂಬದ ಮಾಜಿ ಭೂಮಾಲೀಕರಾಗಿದ್ದರು.ಕುಸುಮ ರೈ ಅವರು ಒಂಟಿ ತಾಯಿಯಾಗಿ…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದನಕಟ್ಟೆ ಗ್ರಾಮದಲ್ಲಿ ನಡೆದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಅಶ್ವಿನಿ (20) ಆತ್ಮಹತ್ಯೆ ಪ್ರಕರಣಕ್ಕೆ ತೀವ್ರ ತಿರುವು ದೊರೆತಿದೆ. ಮೊದಲು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಆತ್ಮಹತ್ಯೆ ಎನ್ನುತ್ತಿದ್ದ ಶಂಕೆಗೆ ಇದೀಗ ಅವಳ ಮೊಬೈಲ್ ಪತ್ತೆಯಾದ ವಾಟ್ಸಪ್ ಸಂದೇಶಗಳು ಹಾಗೂ ಆಡಿಯೋ ಕ್ಲಿಪ್ ಹೊಸ ಬೆಳಕು ಹರಡಿವೆ. ಪ್ರೇಮ, ಮೋಸ ಮತ್ತು ಆತ್ಮಹತ್ಯೆ ಅಶ್ವಿನಿ ತನ್ನ ಪಕ್ಕದ ಆಶ್ರಿಯಾಳ ಗ್ರಾಮದ ಚೇತನ್ ಎಂಬ ಯುವಕನೊಂದಿಗೆ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿ ತೊಡಗಿದ್ದಳು. ಆದರೆ ಇತ್ತೀಚೆಗೆ ಚೇತನ್ ಮತ್ತೊಬ್ಬ ಯುವತಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಮಾಹಿತಿ ಅಶ್ವಿನಿಗೆ ಲಭಿಸಿದ್ದು, ಈ ವಿಷಯವಾಗಿ ಇಬ್ಬರ ನಡುವೆ ಗಲಾಟೆ ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಆತ್ಮಹತ್ಯೆಗೆ ಮುನ್ನಾ ಮೆಸೇಜ್, ಆಡಿಯೋ, ಸೆಲ್ಫಿ! ಆತ್ಮಹತ್ಯೆಗೆ ಕೆಲವೇ ಕ್ಷಣಗಳ ಮೊದಲು ಅಶ್ವಿನಿ ಚೇತನ್‌ಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದು, “ನನಗಾದ ಮೋಸ ಯಾರಿಗೂ ಆಗಬಾರದು,” ಹಾಗೂ “ನಿನಗೆ ತಕ್ಕ ಪಾಠ ಕಲಿಸುತ್ತೇನೆ” ಎಂಬ ಆಡಿಯೋ ಕೂಡಾ…
ಸಿಂಗಾಪುರ:ತುಳು ಸಾಹಿತ್ಯ ಮತ್ತು ಸಂಗೀತ ಲೋಕಕ್ಕೆ ಮತ್ತೊಂದು ಬೆಳ್ಳಿ ಕಂಚಿನಂತ ಹೊಸ ಕೊಡುಗೆ ಆಗಿ, “ಒಸರ್” ಎಂಬ ಹೊಸ ತುಳು ಗೀತೆ ಆಗಸ್ಟ್ 31, 2025, ಐತವಾರ ಸಂಜೆ 6:00 (ಭಾರತೀಯ ಕಾಲಮಾನ)ಕ್ಕೆ ಝೂಮ್ ವೇದಿಕೆಯಲ್ಲಿ ಲೋಕಾರ್ಪಣೆಯಾಗಲಿದೆ. ಈ ಹೊಸ ಬಾವುಟದ ಕವಿತೆ – ಪತ್ರಕರ್ತೆ, ಕವಿ ಕವಿತಾ ಅಡೂರ್ ಅವರ ಕಲ್ಪನೆಯ ಪುತ್ತೆರ್ನ “ಉಡಲ್ದ ಪಸೆ” ತುಳುವಪದ – ಸಿಂಗಾಪುರ ತುಳುವೆರ್ ಕೂಟದ ಸಹಕಾರದೊಂದಿಗೆ ಮೂಡಿಬಂದಿದೆ. 🎵 ಸಂಗೀತ ಸಂಯೋಜನೆ: ವಿಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್🎤 ಗಾನ ವೈಭವ: ಹೊಸತ್ತಾದ ಧ್ವನಿಯಾಗಿ, ಸುಳ್ಯದ ಪ್ರತಿಭಾಶಾಲಿ ಗಾಯಕಿ ಸುಮಾ ಕೋಟೆ ಹಾಡುಗೆ ಜೀವ ತುಂಬಿದ್ದಾರೆ. ಪದವು ಆಳವಾದ ಭಾವನೆಗಳೊಡನೆ ಕನಸು, ಪ್ರೇಮ ಮತ್ತು ನಿರೀಕ್ಷೆಗಳ ಕಥಾನಕವನ್ನು ಬಿಚ್ಚಿಡುತ್ತಾ, ತುಳು ಸಾಹಿತ್ಯ-ಸಂಗೀತ ಲೋಕದಲ್ಲಿ ಹೊಸ ತಿರುವು ನೀಡುವ ವಿಶ್ವಾಸವಿದೆ. ✍️ ಪದ ಬರೆಹ: ಆಸ್ಟ್ರೇಲಿಯಾದ ಸಿಡ್ನಿ ತುಳುಕೂಟದ ರೂವಾರಿ, ತುಳು ಭಾಷಾ ಪ್ರೇಮಿ ಹಾಗೂ ಲಿಪಿ ಶಿಕ್ಷಕ ಸುರೇಶ ಪೂಂಜಾ ಅವರು…
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರವಾದ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವ ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ, ಅರ್ಧಕುಮಾರಿ ಬಳಿ ಇರುವ ಇಂದ್ರಪ್ರಸ್ಥ ಭೋಜನಾಲಯದ ಸಮೀಪ ಈ ಭೂಕುಸಿತ ಸಂಭವಿಸಿತು. ಘಟನೆಯ ವೇಳೆ, ಮಾರ್ಗದಲ್ಲಿ ನೂರಾರು ಯಾತ್ರಿಕರು ಸಾಗುತ್ತಿರುವ ವೇಳೆ ಹಿಮಪಾತದಂತ ಭೂಕುಸಿತ ಉಂಟಾಗಿದ್ದು, ಹಲವರು ಮಣ್ಣಿನಡಿ ಸಿಲುಕಿದ್ದರು. ಗಾಯಗೊಂಡವರನ್ನು ತ್ವರಿತವಾಗಿ ಕತ್ರಾ ಮತ್ತು ಜಮ್ಮುವಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಿರಂತರ ಮಳೆಯಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಹಾನಿಯಾಗಿದೆ. ಜಮ್ಮು-ಶ್ರೀನಗರ ಮತ್ತು ಕಿಶ್ತ್ವಾರ್-ದೋಡಾ ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದ್ದು, ಹಲವಾರು ಪರ್ವತದ ಮಾರ್ಗಗಳು ಭೂಕುಸಿತ ಮತ್ತು ತೀವ್ರ ಪ್ರವಾಹದಿಂದ ನಾಶವಾಗಿದೆ. ವಿದ್ಯುತ್ ಕಂಬಗಳು ಮತ್ತು ಮೊಬೈಲ್ ಟವರ್‌ಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ದೂರಸಂಪರ್ಕ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸಂಬಂಧಿಕರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಆಸ್ಪತ್ರೆಗಳು ಮತ್ತು ಮೂಲ ಶಿಬಿರಗಳಲ್ಲಿ ಜನರು ಮುಗಿ ಬಂದಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ…
ಮಂಗಳೂರು, ಆಗಸ್ಟ್ 27:ಜಪ್ಪಿನಮೊಗರು ಗ್ರಾಮದಲ್ಲಿ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 17ನೇ ವರ್ಷದ ಮಹಾ ಗಣಪತಿ ಪ್ರತಿಷ್ಠಾಪನಾ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು. ಶ್ರದ್ಧಾ, ಭಕ್ತಿ ಮತ್ತು ಸಾಂಸ್ಕೃತಿಕ ವೈಭವದ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯರ ಜೊತೆ ಗಣ್ಯರೂ ಹಾಜರಿದ್ದು, ಪವಿತ್ರತೆಯನ್ನು ಇನ್ನಷ್ಟು ಮೆರೆಯಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಸಮಿತಿಯ ಅಧ್ಯಕ್ಷರಾದ ನಾಗೇಂದ್ರ ಅವರು, ಕಳೆದ 17 ವರ್ಷಗಳಿಂದ ಈ ಹಬ್ಬವನ್ನು ಮುಂದುವರೆಸಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರ ಮಾರ್ಗದರ್ಶನವನ್ನು ಸ್ಮರಿಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರಿಗೆ ಹಾರ್ದಿಕ ಸ್ವಾಗತ ಕೋರಿದರು. ಪಾಲೆಮಾರ್ ಅಭಿಮಾನಭರಿತ ಮಾತು:ಉದ್ಘಾಟನಾ ಭಾಷಣ ಮಾಡಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು, “ಗಣಪತಿ ಆರಾಧನೆಯ ಮೂಲಕ ಗ್ರಾಮದಲ್ಲಿ ಧಾರ್ಮಿಕ ಚೇತನೆಯನ್ನು ಹುಟ್ಟುಹಾಕಲಾಗಿದೆ. ಇದು ಸಾತ್ವಿಕತೆಯ ಕಡೆಗೆ ಗ್ರಾಮಸ್ಥರ ಹೆಜ್ಜೆಯಾಗಿದೆ” ಎಂದು ಅಭಿಪ್ರಾಯಪಟ್ಟರು. ಅವರು, ಈ ಸಮಿತಿಯ ಮುಂದಿನ ಹೆಜ್ಜೆ – ಸ್ಥಳ ಖರೀದಿಗೆ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ತಿಳಿಸಿದರು. ಜೊತೆಗೆ ಗಣೇಶ…
ಮಂಗಳೂರಿನ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮಂಗಳೂರು ಇವರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭವು ಭಕ್ತಿ-ಭಾವಪೂರ್ಣ ವಾತಾವರಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, “ಗಣೇಶ ಚತುರ್ಥಿಗೆ ಐತಿಹಾಸಿಕ ಹಿನ್ನೆಲೆ ಇದೆ. ಗಣೇಶನಲ್ಲಿ ಪರಕೀಯರನ್ನು ದೂರ ಮಾಡುವ ಶಕ್ತಿ ಇದೆ. ಆದ್ದರಿಂದ ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವನ್ನಾಗಿಸದೆ, ನಗರ ಸ್ವಚ್ಛತೆಯ ಸಂಕಲ್ಪದೊಂದಿಗೆ ಆಚರಿಸಬೇಕು. ಪರಿಸರ ಕಾಳಜಿ ಇರಲಿ,” ಎಂದರು. ಧ್ವಜಾರೋಹಣವನ್ನು ಲೆ.ಕ. ರಮಾನಾಥ ಶೆಟ್ಟಿ ಮತ್ತು ಕ್ಷಮಾ ರಮಾನಾಥ ಶೆಟ್ಟಿ ನೆರವೇರಿಸಿದರು. ತೆನೆ ವಿತರಣೆ ಕಾರ್ಯವನ್ನು ಡಾ. ಮಹಾಬಲ ರೈ ಮತ್ತು ಮಲ್ಲಿಕಾ ಎಂ. ರೈ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ಸಮಾರಂಭದಲ್ಲಿ ಹಲವಾರು ಬಂಟರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. ಪುತ್ತೂರು, ಬಂಟ್ವಾಳ, ಬಜಪೆ, ಜಪ್ಪಿನಮೊಗರು ಮತ್ತು…
📍 ಪುಣೆ | ಆಗಸ್ಟ್ 27, 2025 | ತುಳುನಾಡ ಸೂರ್ಯ ನ್ಯೂಸ್ ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ ರಾತ್ರಿ ನಡೆದ ಭೀಕರ ಘಟನೆ ಒಂದು ಸಮುದಾಯವನ್ನೇ ಬೆಚ್ಚಿ ಬೀಳಿಸಿದೆ. ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ಮೂಲದವರು ಹಾಗೂ ಪುಣೆಯಲ್ಲಿ ಹೊಟೇಲ್ ಉದ್ಯಮಿಯಾಗಿ ನೆಲೆಯೂರಿದ್ದ ಸಂತೋಷ್ ಶೆಟ್ಟಿ (46) ಅವರು, ತಮ್ಮದೇ ಉದ್ಯಮದಲ್ಲಿ ಕೆಲಸ ಮಾಡಿದ ಸಿಬ್ಬಂದಿಯೊಬ್ಬನಿಂದ ಕತ್ತಿಯಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. 🛑 ಮದ್ಯಪಾನ – ಗದರಿಕೆ – ಹತ್ಯೆ ವಿವರಗಳ ಪ್ರಕಾರ, ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನು ವೆಯ್ಸರ್ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ರಾತ್ರಿ ಕೆಲಸದ ವೇಳೆಯಲ್ಲಿಯೇ ಮದ್ಯಪಾನ ಮಾಡಿಕೊಂಡಿದ್ದ ಆತನನ್ನು, ಮಾಲೀಕರಾದ ಸಂತೋಷ್ ಶೆಟ್ಟಿ ಗದರಿಸಿ ಬುದ್ದಿವಾದ ನೀಡಿದಾಗ ಸಿಟ್ಟಿಗೆದ್ದು ಕಿಚನ್‌ನಿಂದ ಕತ್ತಿ ತೆಗೆದುಕೊಂಡು ಬಂದು, ಶೆಟ್ಟಿಯವರು ಕುಳಿತಿದ್ದ ಸಮಯದಲ್ಲಿ ಹಿಂಬದಿಯಿಂದ ಕುತ್ತಿಗೆಗೆ ಕಡಿದು ಹತ್ಯೆ ಮಾಡಿದ್ದಾನೆ. 🕙 ಘಟನೆ ಸಮಯ: ರಾತ್ರಿ 10 ಗಂಟೆ ಸುಮಾರಿಗೆ 😨 ಸ್ಥಳೀಯರಲ್ಲಿ ಆತಂಕ, ಆಕ್ರೋಶ ಈ ಭೀಕರ ಘಟನೆ…
ಮಂದಾರ ಕಾವ್ಯದಲ್ಲಿ ತುಳು ಸಂಸ್ಕೃತಿ ಅನಾವರಣ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೂಡುಬಿದಿರೆ: ‘ಮಂದಾರ ಕೇಶವ ಭಟ್ಟರು ತುಳು ಸಂಸ್ಕೃತಿ ಮತ್ತು ಪರಂಪರೆಯ ಸೊಗಡನ್ನು ತಮ್ಮ ಕಾವ್ಯದಲ್ಲಿ ಎಳೆ ಎಳೆಯಾಗಿ ಚಿತ್ರಿಸಿದ್ದಾರೆ. ಕಾವ್ಯಯಾನದಂತಹ ಜನಪ್ರಿಯ ಮಾಧ್ಯಮದ ಮೂಲಕ ಅದು ಸಾರ್ವಜನಿಕವಾಗಿ ಅನಾವರಣಗೊಳ್ಳುತ್ತಿದೆ. ಕಾವ್ಯವು ಸಂಗೀತದೊಡನೆ ಸೇರಿ ಕಲಾ ರಸಿಕರಿಗೆ ವಿಶೇಷ ಅನುಭೂತಿ ನೀಡುತ್ತದೆ’ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.ತುಳುವ ಮಹಾಸಭೆ ಮೂಡುಬಿದಿರೆ, ಧವಳತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ, ಮಂದಾರ ಪ್ರತಿಷ್ಠಾನ ಮಂಗಳೂರು, ತುಳು ಕೂಟ ಬೆದ್ರ ಸಹಯೋಗದಲ್ಲಿ ಮೂಡುಬಿದಿರೆ ಜೈನಮಠದಲ್ಲಿ ಭಾನುವಾರ ಜರಗಿದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ‘ಬೀರದ ಬೊಲ್ಪು’ ಕಾವ್ಯಯಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ಮಂದಾರ ರಾಜೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾವ್ಯಯಾನ: ಸುಗಿಪು – ದುನಿಪುಶ್ರೀಕೃಷ್ಣನ ಬಾಲಲೀಲೆಯ ಕುರಿತಾದ ‘ಬೀರದ ಬೊಲ್ಪು’ ತುಳು ಕಾವ್ಯದ ಸುಗಿಪು – ದುನಿಪು (ವಾಚನ -…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
