What's Hot
- ಮಂಗಳೂರು ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ: ಎಐ ತಂತ್ರಜ್ಞಾನ ಪ್ರಯೋಗ, ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒತ್ತು
- ಮಂಗಳೂರು : ಕ್ರಿಸ್ ಮಸ್ ಹಬ್ಬ ಸಮಾಜದಲ್ಲಿ ಸತ್ಯ,ನ್ಯಾಯ ಹಾಗೂ ಸಹ ಜೀವನದ ಮೌಲ್ಯಗಳನ್ನು ಮರುಸ್ಥಾಪಿಸುವ ವಿಶಿಷ್ಟ ಅವಕಾಶ ಒದಗಿಸುತ್ತದೆ ; ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ.
- ಡಿಸೆಂಬರ್ 25ರಂದು ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಎಂ.ಆರ್.ಜಿ. ಗ್ರೂಪ್ನ ಆಶಾ–ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಸಮಾಜಮುಖಿ ಯೋಜನೆ ‘ನೆರವು–2025’
- ಉಡುಪಿ: ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಪಿಂಪ್ಗಳನ್ನು ಬಂಧಿಸಿದ ಪಡುಬಿದ್ರೆ ಪೊಲೀಸರು
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
- ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕ ಸ್ಥಾನ , ನಿರ್ದೇಶಕರ ಭವಿಷ್ಯ ಕುರಿತಾಗಿ ಚರ್ಚೆಗೂ ದಾರಿ ?
- ಮಂಗಳೂರು: MDMA ಸಾಗಾಟ ಜಾಲ ಭೇದಿಸಿದ ಸಿಸಿಬಿ; ಮೂವರು ಆರೋಪಿಗಳು ಬಂಧನ
- ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸ್ ಕ್ರಮ ಖಂಡನೀಯ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ತೀವ್ರ ಆಕ್ರೋಶ
Author: Tulunada Surya
ಶ್ರೀದೇವಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಕೆಂಜಾರು ಕರಂಬಾರು 2025-2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಚೇತನ್ ಕುಲಾಲ್, ಉಪಾಧ್ಯಕ್ಷರಾಗಿ ಉಮೇಶ್ ಅಮೀನ್, ಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಪೂಜಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜೇಶ್ ಅಮೀನ್, ಸುನಿಲ್, ನಿರಂಜನ್ ಪುತ್ರನ್, ಪ್ರದೀಪ್ ಅಮೀನ್, ಲೋಕೇಶ್, ಧನಂಜಯ ಪೂಜಾರಿ, ಹರೀಶ್ ಪೂಜಾರಿ, ವಾಸು ಸಾಲ್ಯಾನ್, ರತನ್ ಸಾಲ್ಯಾನ್, ಶಂಭು, ಗುರುಕಿರಣ್ ಕುಂದರ್, ವೀಕ್ಷಿತ್, ವಿಹಾರ್, ಪರಶುರಾಮ್ ಪೂಜಾರಿ, ಯಶವಂತ್, ಸುರೇಶ್, ಕಿಶೋರ್ ಆಯ್ಕೆಯಾಗಿದ್ಧಾರೆ.
ಮಂಗಳೂರು : ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ಇದರ ಆಶ್ರಯದಲ್ಲಿ “ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ ಸೆಪ್ಟಂಬರ್ 21 ರಂದು ಭಾನುವಾರ ಬೆಳಿಗ್ಗೆ 8.30 ಕ್ಕೆ ಕುದ್ಮಲ್ ರಂಗರಾವ್ ಪುರಭವನ ಮಂಗಳೂರಿನಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಲಯನ್ ರಾಜೇಶ್ ಶೆಟ್ಟಿ ಶಬರಿಯವರು ತಿಳಿಸಿದ್ದಾರೆ. ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುಮಾರು 25 ತಂಡಗಳು ಭಾಗವಹಿಸಲಿದ್ದು ಸೆಟ್ಟಿಂಗ್ ಸೇರಿ ಒಂದು ತಂಡಕ್ಕೆ 20 ನಿಮಿಷಗಳ ಕಾಲಾವಧಿ ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ನಗದು ಸಹಿತ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಪ್ರಧಾನ ಅತಿಥಿಗಳಾಗಿ ಖ್ಯಾತ ಹಿನ್ನಲೆ ಗಾಯಕಿ ಬಿ.ಕೆ. ಸುಮಿತ್ರ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಲಯನ್ಸ್ ಜಿಲ್ಲೆ 317 ಡಿ ಜಿಲ್ಲಾ ಗವರ್ನರ್ ಕುಡ್ಲಿ ಅರವಿಂದ ಶೆಣೈ ಸಮಾರಂಭವನ್ನು ಉದ್ಘಾಟಿಸಲಿದ್ದು ಹಾಗೂ ಬಹುಮಾನ ವಿತರಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕರಾದ ವೇದಮೂರ್ತಿ ಹರಿನಾರಾಯಣ ಅಸ್ರಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ,…
ಉಡುಪಿ, ಸೆಪ್ಟೆಂಬರ್ 16:ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆ ತೆರೆಯಲು ಆಸಕ್ತ ನಾಗರಿಕರು ಹಾಗೂ ವ್ಯಾಪಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸುಡುಮದ್ದು ಮಾರಾಟಕ್ಕೆ ತಾತ್ಕಾಲಿಕ ಪರವಾನಿಗೆ ಪಡೆಯಲು ಇಚ್ಛಿಸುವವರು ಅಕ್ಟೋಬರ್ 10ರ ಒಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಐಇ-5 ನಮೂನೆ ಬೇಕಾಗಿದ್ದು, ಅದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದೆ. ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ರಚಿಸಲಾದ ಸಮಿತಿಗೆ ಅರ್ಜಿ ಸಲ್ಲಿಸಿ ಅಗತ್ಯ ನಿರಾಕ್ಷೇಪಣಾ ಪತ್ರ ಪಡೆದು, ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ₹300 ಪರಿಶೀಲನಾ ಶುಲ್ಕ ಮತ್ತು ಪರವಾನಿಗೆ ಮಂಜೂರಾದ ಬಳಿಕ ₹600 ಪರವಾನಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಅರ್ಜಿ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು: ತಾತ್ಕಾಲಿಕ ಅಂಗಡಿ ತೆರೆಯುವ ಸ್ಥಳದ ನೀಲಿ ನಕ್ಷೆ ಅರ್ಜಿದಾರರ ಭಾವಚಿತ್ರ ಜಮೀನಿನ ಇತ್ತೀಚಿನ ಪಹಣಿ ಪತ್ರ ಖಾಸಗಿ ಜಮೀನಾಗಿದ್ದರೆ ಮಾಲಕರ ಒಪ್ಪಿಗೆ ಪತ್ರ (₹100 ಸ್ಟಾಂಪ್ ಪೇಪರ್‌ನಲ್ಲಿ) ಸರ್ಕಾರಿ ಜಮೀನಾದರೆ…
ಮಂಗಳೂರು, ಸೆಪ್ಟೆಂಬರ್ 16: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೊನ್ನಕಟ್ಟೆ – ಕಾನಾ ರೈಲ್ವೆ ಮೇಲ್ಸೇತುವೆಯಲ್ಲಿ ಕಾಂಕ್ರೀಟೀಕರಣ ಕಾರ್ಯ ಪ್ರಾರಂಭವಾಗುತ್ತಿರುವುದರಿಂದ, ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16ರವರೆಗೆ, ಒಟ್ಟು 30 ದಿನಗಳ ಕಾಲ ಸೇತುವೆ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗವಿವರ: ➡️ ಮಂಗಳೂರು → ಎಂ.ಆರ್.ಪಿ.ಎಲ್ (MRPL) ಕಡೆಗೆ ಹೋಗುವ ವಾಹನಗಳು: ➡️ MRPL → ಮಂಗಳೂರು ಕಡೆಗೆ ಬರುವ ವಾಹನಗಳು: ಸುರತ್ಕಲ್–ಗೋವಿಂದದಾಸ್ ಮಾರ್ಗದಲ್ಲಿ ಹೆಚ್ಚುವರಿ ನಿಯಂತ್ರಣೆ: ಸಾರ್ವಜನಿಕರಿಗೆ ಮನವಿ: ಮಹಾನಗರಪಾಲಿಕೆ ಆಯುಕ್ತರು ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನಿಸಿ ಸಹಕರಿಸಲು ಕೋರಿದ್ದಾರೆ. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ಮುಂಬರುವ ದಿನಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.
ಮಂಗಳೂರು:ಸೆಪ್ಟೆಂಬರ್ 16 ಮಂಗಳೂರಿನಿಂದ ತುಳು ಎಂ.ಎ. ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರವನ್ನು ಕೋಣಾಜೆಗೆ ಸ್ಥಳಾಂತರಿಸುವ ವಿಶ್ವವಿದ್ಯಾನಿಲಯ ನಿರ್ಧಾರವನ್ನು ಹಿಂಪಡೆಯುಮಂತೆ ಸಲಹೆ ನೀಡಲು ಅಖಿಲ ಭಾರತ ತುಳು ಒಕ್ಕೂಟ (ರಿ.) ಸ್ಪೀಕರ್ ಯು.ಟಿ. ಖಾದರ್‌ಗೆ ಮನವಿ.ಮಂಗಳೂರು: ಮಂಗಳೂರಿನಿಂದ ತುಳು ಎಂ.ಎ. ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರವನ್ನು ಕೋಣಾಜೆಗೆ ಸ್ಥಳಾಂತರಿಸುವ ವಿಶ್ವವಿದ್ಯಾನಿಲಯ ನಿರ್ಧಾರವನ್ನು ಹಿಂಪಡೆಯುವಂತೆ ಸಲಹೆ ನೀಡಲು ಅಖಿಲ ಭಾರತ ತುಳು ಒಕ್ಕೂಟ (ರಿ.) ಸ್ಪೀಕರ್ ಯು.ಟಿ. ಖಾದರ್‌ಗೆ ಮನವಿ ಸಲ್ಲಿಸಿದೆ.2018ರಲ್ಲಿ ವಿಶ್ವ ವಿದ್ಯಾನಿಲಯದ ಹಂಪನಕಟ್ಟೆಯ ಸಂಧ್ಯಾ ಕಾಲೇಜಿನಲ್ಲಿ ಪ್ರಾರಂಭಿಸಿದ ತುಳು ಎಂ.ಎ. ಸ್ನಾತಕೋತ್ತರ ಪದವಿ ಅಧ್ಯಯನವು ತುಳುನಾಡ ಜನರಿಗೆ ನೀಡಿದ ಅತ್ಯಂತ ಪ್ರಮುಖ ಕೊಡುಗೆಯಾಗಿದೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳಿದ್ದು ಅನುಕೂಲವಾಗಿರುತ್ತದೆ. ಇದೀಗ ಈ ಅಧ್ಯಯನ ಕೇಂದ್ರವನ್ನು ಕೋಣಾಜೆಯ ಮಂಗಳ ಗಂಗೋತ್ರಿಗೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿರುವುದು ಇದಕ್ಕೆ ಅಖಿಲ ಭಾರತ ತುಳು ಒಕ್ಕೂಟ ಹಾಗೂ ಸರ್ವ ಧರ್ಮದ ತುಳುವರು ಈ ನಿರ್ಧಾರವನ್ನು ಹಿಂತೆಗೆಯಲು ವಿಶ್ವವಿದ್ಯಾನಿಲಯವನ್ನು ಆಗ್ರಹಿಸುತ್ತಿದೆ.ಬಹಳಷ್ಟು ವಿದ್ಯಾರ್ಥಿಗಳು ಹಗಲಿನಲ್ಲಿ ಬೇರೆ…
ಉಳ್ಳಾಲ: ಮಂಗಳೂರು ಕಡೆಯಿಂದ ತಲಪಾಡಿ ಗಡಿ ಪ್ರದೇಶದಲ್ಲಿ ಇರುವ ಹಲವಾರು ಮರದ ಮಿಲ್ಲು – ಫ್ಲೈವುಡ್ ಕಾರ್ಖಾನೆಗಳಿಗೆ ದಿನದ 24 ಗಂಟೆಯೂ ಮರದ ದಿಮ್ಮಿಗಳು ನಿರಂತರವಾಗಿ ಓವರ್ ಲೋಡ್ ಆಗಿ ಹೋಗುತ್ತಿದ್ದು ನಿನ್ನೆ ರಾತ್ರಿ ಹೊತ್ತು ಬೀರಿ ಸಮೀಪದ ಉಚ್ಚಿಲದಲ್ಲಿ ಟಯರ್ ಬ್ಲಾಸ್ಟ್ ಆಗಿ ಲಾರಿಯೊಂದು ನಡು ರಸ್ತೆಯಲ್ಲಿ ಬಾಕಿಯಾಗಿದೆ.ದೇವಿಪುರ ದೇವಸ್ಥಾನ ರಸ್ತೆ ಮತ್ತು ಟೋಲ್ ಮುಖಾಂತರ ಪಾಸಾಗಿ ಲಘು ವಾಹನಗಳು ಇದ್ದ ರಸ್ತೆಯನ್ನೇ ಉಪಯೋಗಿಸಿಕೊಂಡು ಕಳ್ಳ ಮಾರ್ಗದ ಮೂಲಕ ಜನವಸತಿ ಪ್ರದೇಶದ ಜಾಗದಲ್ಲಿ ಅಣಬೆಗಳು ಹುಟ್ಟಿದಂತೆ ಹುಟ್ಟಿಕೊಂಡ ಹತ್ತಾರು ಅಕ್ರಮ ಮರದ ಮಿಲ್ಲುಗಳಿಗೆ ಮರಗಳು ಸಾಗುತ್ತಿದೆ. ಕೆಲವು ಅಧಿಕಾರಿಗಳು, ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳ ತುಂಬು ಹೃದಯದ ಸಹಕಾರದಿಂದ ಜನವಸತಿ ಪ್ರದೇಶದಲ್ಲಿ ಅಕ್ರಮ ಕೈಗಾರಿಕಾ ಪ್ರದೇಶದಂತೆ ಮಾಡಿ ಈ ಅಕ್ರಮ ಮಿಲ್ಲುಗಳು ತಲೆಯೆತ್ತಿವೆತಲಪಾಡಿಯಿಂದ ದೇವಿಪುರ ತನಕ ಆದ ಸುಂದರ ಕಾಂಕ್ರೀಟ್ ರಸ್ತೆಯು ಇಲ್ಲಿ ಹಾದು ಹೋಗುವ ಈ ಅಕ್ರಮ ದಂದೆಕೋರರ ಕಾರುಬಾರಿನಿಂದ ಹಲವಾರು ವರ್ಷಗಳು ಬಾಳಿಕೆ ಬರಬೇಕಾದ ರಸ್ತೆಯು ಬಿರುಕುಬಿಟ್ಟು…
ಮಂಗಳೂರು, ಸೆಪ್ಟೆಂಬರ್ 14: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 14 ರಿಂದ 16ರ ವರೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳು, ಮತ್ತು ಮೊಸರುಕುಡಿಕೆ ಉತ್ಸವಗಳು ನಡೆಯಲಿವೆ. ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ವ್ಯತ್ಯಯ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಎತ್ತಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಮದ್ಯ ಸೇವನೆಯಿಂದಾಗಿ ಕಿಡಿಗೇಡಿಗಳು ಗಲಭೆ ಸೃಷ್ಟಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದೇಶದಡಿಯಲ್ಲಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಬಾರ್, ವೈನ್ ಶಾಪ್‌ಗಳು ಹಾಗೂ ಲೈಸನ್ಸ್ ಹೊಂದಿರುವ ಮದ್ಯದಂಗಡಿಗಳು ಸೆಪ್ಟೆಂಬರ್ 14ರಿಂದ 16ರ ವರೆಗೆ ಮುಚ್ಚಿರಬೇಕು. ಈ ಅವಧಿಯಲ್ಲಿ ಯಾವುದೇ ರೀತಿಯ ಮದ್ಯ ಮಾರಾಟವೂ ನಿಷಿದ್ಧವಾಗಿದೆ. ಜಿಲ್ಲಾ ಆಡಳಿತ ಹಾಗೂ ಪೊಲೀಸ್ ಇಲಾಖೆ ಶಾಂತಿಯುತ ಉತ್ಸವಕ್ಕೆ ತಯಾರಿ ನಡೆಸುತ್ತಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಕೋರಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 2023-24 ನೇ ಸಾಲಿನಲ್ಲಿ ₹1174 ಕೋಟಿ ವ್ಯವಹಾರ ನಡೆಸಿದ್ದು, ₹12.79 ಕೋಟಿ ನಿವ್ವಳ ಲಾಭ ದಾಖಲಿಸುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ದೈನಂದಿನ ಹಾಲು ಶೇಖರಣೆಯು ಪ್ರಸ್ತುತ 3.97 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. 2024-25 ನೇ ಸಾಲಿನಲ್ಲಿ ದಿನದ ಸರಾಸರಿ ಶೇಖರಣೆಯು 3.42 ಲಕ್ಷ ಲೀಟರ್ ಆಗಿತ್ತು, ಮತ್ತು ಈಗ 2025-26 ನೇ ಸಾಲಿನಲ್ಲಿ 16% ಶೇಖರಣೆ ಪ್ರಗತಿ ಕಂಡುಬಂದಿದೆ. ಮಾರಾಟ ಮತ್ತು ಉತ್ಪನ್ನಗಳ ವಿಸ್ತರಣೆ ದಿನದ ಮೂಲದ ಮೇಲೆ 4.02 ಲಕ್ಷ ಲೀಟರ್ ಹಾಲು ಮತ್ತು 81,000 ಕೆ.ಜಿ. ಮೊಸರು ಮಾರಾಟವಾಗುತ್ತಿದೆ. ಹಾಲು, ಮೊಸರು ಜೊತೆಗೆ ಕಹಾಮ್ ಉತ್ಪನ್ನಗಳ ಮಾರಾಟವೂ ಜೋರು ಹೊಂದಿದೆ. ರೈತ ಕಲ್ಯಾಣ ಮತ್ತು ವಿಮಾ ಯೋಜನೆಗಳು 55000 ಹೈನುಗಾರ ರೈತರ ಹಿತದೃಷ್ಟಿಯಿಂದ ಸ್ಥಾಪಿಸಲಾದ ರೈತ…
ಮಂಗಳೂರು: ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ.ಕ.ಜಿಲ್ಲೆ ಮತ್ತು ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯಲ್ಲಿ ಸೆಪ್ಟೆಂಬರ್ 14 ತಾರೀಕಿನ 2025 ರಂದು ನಡೆದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಟಿ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಸದಸ್ಯ ಶ್ರೀಯುತ ಹಮೀದ್ ಹಸನ್ ಮಾಡೂರು ಇವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ ಗೆ ಭಾಜನರಾಗಿರುತ್ತಾರೆ.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆಯು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಕಛೇರಿ ಯಲ್ಲಿ ಬ್ಲಾಕ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ರವರ ಅಧ್ಯಕ್ಷತೆಯಲ್ಲಿ ಜರುಗಿತು. 5ನೇ ವಾರ್ಡ್ ಚೊಕ್ಕಬೆಟ್ಟು ಟಿ . ಮೊಹಿದ್ದೀನ್ ಕೃಷ್ಣಾಪುರ ತನ್ನದೇ ಸ್ವಂತ ಕರ್ಚಿನಿಂದ ಇಂದಿರಾ ಸೇವಾ ಕೇಂದ್ರ ಕಚೇರಿ 8th ಎ ಬ್ಲಾಕ್ ಕೃಷ್ಣಾಪುರದಲ್ಲಿ ಸರಕಾರದ 5 ಗ್ಯಾರಂಟಿ ನೊಂದವನೆ ಹಾಗೂ ಅದರಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ಜನಪರ ಕೆಲಸಗಳನ್ನು ಮಾಡಿ ಕೊಡುವಲ್ಲಿ ಯಶಸ್ವಿ ಆಗಿದ್ದಾರೆ ಅದಲ್ಲದೆ ಮತದಾನ ಗುರುತು ಚೀಟಿ (voter id) ನೊಂದಾಯಿಸಲು ಸಹಾಯ ಇನ್ನಿತರ ಸರ್ಕಾರ ಸೌಲಭ್ಯ ಒದಗಿಸಲು ಪ್ರಯತ್ನಿಸಿ ಸಮಾಜ ಸೇವೆ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಗುರುತಿಸಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿಯವರು ಸನ್ಮಾನಿಸಿದರು.ಈ ಸಭೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
