What's Hot
- ಮಂಗಳೂರು ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ: ಎಐ ತಂತ್ರಜ್ಞಾನ ಪ್ರಯೋಗ, ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒತ್ತು
- ಮಂಗಳೂರು : ಕ್ರಿಸ್ ಮಸ್ ಹಬ್ಬ ಸಮಾಜದಲ್ಲಿ ಸತ್ಯ,ನ್ಯಾಯ ಹಾಗೂ ಸಹ ಜೀವನದ ಮೌಲ್ಯಗಳನ್ನು ಮರುಸ್ಥಾಪಿಸುವ ವಿಶಿಷ್ಟ ಅವಕಾಶ ಒದಗಿಸುತ್ತದೆ ; ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ.
- ಡಿಸೆಂಬರ್ 25ರಂದು ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಎಂ.ಆರ್.ಜಿ. ಗ್ರೂಪ್ನ ಆಶಾ–ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಸಮಾಜಮುಖಿ ಯೋಜನೆ ‘ನೆರವು–2025’
- ಉಡುಪಿ: ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಪಿಂಪ್ಗಳನ್ನು ಬಂಧಿಸಿದ ಪಡುಬಿದ್ರೆ ಪೊಲೀಸರು
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
- ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕ ಸ್ಥಾನ , ನಿರ್ದೇಶಕರ ಭವಿಷ್ಯ ಕುರಿತಾಗಿ ಚರ್ಚೆಗೂ ದಾರಿ ?
- ಮಂಗಳೂರು: MDMA ಸಾಗಾಟ ಜಾಲ ಭೇದಿಸಿದ ಸಿಸಿಬಿ; ಮೂವರು ಆರೋಪಿಗಳು ಬಂಧನ
- ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸ್ ಕ್ರಮ ಖಂಡನೀಯ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ತೀವ್ರ ಆಕ್ರೋಶ
Author: Tulunada Surya
ನವದೆಹಲಿ:ಪ್ರಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ಅವರನ್ನು 2023ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾರತೀಯ ಚಿತ್ರರಂಗದ ಕ್ಷೇತ್ರದಲ್ಲಿ ಅತ್ಯುನ್ನತ ಗೌರವವಿರುವ ಈ ಪ್ರಶಸ್ತಿಗೆ ಅವರು ಭಾಜನರಾಗಿರುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. 1978ರಲ್ಲಿ ಬಿಡುಗಡೆಯಾದ ತಿರನೊಟ್ಟಂ ಎಂಬ ಮಲಯಾಳಂ ಚಿತ್ರದ ಮೂಲಕ ಸಿನಿಜಗತ್ತಿಗೆ ಪ್ರವೇಶ ಮಾಡಿದ ಮೋಹನ್ ಲಾಲ್, ಸುಮಾರು ನಾಲ್ಕು ದಶಕಗಳ ಪ್ರಯಾಣದಲ್ಲಿ ಮಲಯಾಳಂ ಭಾಷೆಯ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿಯೂ 400ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನೈಸರ್ಗಿಕ ಅಭಿನಯ ಶೈಲಿ, ವಿಶಿಷ್ಟ ಪಾತ್ರ ನಿರ್ವಹಣೆಯಲ್ಲಿ ತಾವು ತೋರಿದ ನಿಪುಣತೆ ಮತ್ತು ವಿಭಿನ್ನ ಶೈಲಿಯ ಸಿನಿಮಾಗಳಲ್ಲಿ ನಟಿಸಿದ ಕಾರಣದಿಂದಾಗಿ ಅವರು ಭಾರತಾದ್ಯಾಂತ ಪ್ರಶಂಸೆ ಪಡೆದಿದ್ದಾರೆ. ಅಭಿನಯದ ಜತೆಗೆ, ನಿರ್ದೇಶನ ಹಾಗೂ ನಿರ್ಮಾಣದ ಕ್ಷೇತ್ರಗಳಲ್ಲಿಯೂ ಅವರು ಗುರುತಿಸಿಕೊಂಡಿದ್ದಾರೆ. ಚಿತ್ರರಂಗದ ಪ್ರಗತಿಗೆ ಅವರು ನೀಡಿದ ಪ್ರಮುಖ ಕೊಡುಗೆಗಳು, ಅವರಿಗೆ ಈ ಬಾರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಂದುಕೊಟ್ಟಿವೆ. 1969ರಲ್ಲಿ ಸ್ಥಾಪಿತವಾದ…
ಮಂಗಳೂರು: ತುಳು ಭಾಷೆ, ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿ ಬೆಳೆಸಿ, ಇದರ ಬಲವರ್ಧನೆಗೆ ದೇಶ ವಿದೇಶದ ಸಮಸ್ತ ಜಾತ್ಯಾತೀತ ತುಳುವರು, ತುಳು ಭಾಷೆ ಸಂಘ ಸಂಸ್ಥೆಗಳು ಜೊತೆಯಾಗಿ ಒಗ್ಗಟ್ಟಾಗಿ ನಿರಂತರ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಒಡಿಯೂರು ಶ್ರೀಗಳು ಅಖಿಲ ಭಾರತ ತುಳು ಒಕ್ಕೂಟದ ಪದಾಧಿಕಾರಿಗಳ ಸೌಹಾರ್ದ ಭೇಟಿಯ ಸಂದರ್ಭದಲ್ಲಿ ಸಲಹೆ ನೀಡಿದರು.ತುಳು ಭಾಷೆಯ ಉನ್ನತೀಕರಣಕ್ಕಾಗಿ ಕರ್ನಾಟಕ ಸರಕಾರವು ಮಂಗಳೂರು ವಿಶ್ವವಿದ್ಯಾನಿಲಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಧ್ಯಾ ಕಾಲೇಜಿನಲ್ಲಿ ಪ್ರಾರಂಭಿಸಿ, ಕಾರ್ಯ ನಿರ್ವಹಿಸುತ್ತಿದ್ದ ತುಳು (ಸ್ನಾತಕೋತ್ತರ) ಎಂ.ಎ. ಅಧ್ಯಯನ ಕೇಂದ್ರವನ್ನು ದೂರದಲ್ಲಿರುವ ಮಂಗಳ ಗಂಗೋತ್ರಿಯ ಕೋಣಾಜೆಗೆ ಸ್ಢಳಾಂತರಿಸಲು ಸಿದ್ಧತೆಗಳು ನಡೆಯುತ್ತಿದೆ ಎನ್ನಲಾದ ಮಾಹಿತಿಯನ್ನು ಶ್ರೀಗಳ ಗಮನಕ್ಕೆ ತಂದರು.ಅಖಿಲ ಭಾರತ ತುಳು ಒಕ್ಕೂಟ ದೇಶ ವಿದೇಶಗಳಲ್ಲಿ 48 ತುಳು ಸೇವಾ ಸಂಘ ಸಂಸ್ಥೆಗಳು ಇದರ ಸದಸ್ಯರಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ನಿರಂತರ ತುಳು ಸಂಬAಧಿ ಕೆಲಸ ಕಾರ್ಯಗಳನ್ನು ನಡೆಸುತ್ತಿರುವುದು ಸಂತಸದ ಸಂಗತಿ ಎಂದ ಅವರು ಇದನ್ನು ಇನ್ನಷ್ಟು ಬಲಪಡಿಸಬೇಕೆಂದು ಶ್ರೀಗಳು ಅಭಿಪ್ರಾಯ ಪಟ್ಟರು.ಒಕ್ಕೂಟದ ಕಳೆದ…
ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ನಡೆಸುವ ಸಮೀಕ್ಷೆಯನ್ನು ದಿನಾಂಕ:22-09-2025 ರಿಂದ 07-10-2025ರವರೆಗೆ ಕೈಗೊಳ್ಳುವಂತೆ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ. ಈ ಮೂಲಕ ಸಿಎಂ ಸಿದ್ಧರಾಮಯ್ಯ ಹೇಳಿದಂತೆ ಜಾತಿಗಣತಿ ಸಮೀಕ್ಷೆ ಮುಂದೂಡಿಕೆ ಮಾಡುವುದಿಲ್ಲ. ನಿಗದಿಯಂತೆ ಸಮೀಕ್ಷೆ ನಡೆಸುವುದು ಖಚಿತವಾಗಿದೆ ಈ ಕುರಿತಂತೆ ರಾಜ್ಯ ಸರ್ಕಾರದಿಂದ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳಲು ಸರ್ಕಾರದ ಅನುಮೋದನೆ ನೀಡಿ ಆದೇಶಿಸಿದೆ. ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಇವರು ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ದಿನಾಂಕ:22-09-2025 ರಿಂದ 07-10-2025ರವರೆಗೆ ಕೈಗೊಳ್ಳಲು ಉದ್ದೇಶಿಸಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ರವರಿಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಹಾಗೂ ಸಮೀಕ್ಷಾದಾರರಿಗೆ ಅಗತ್ಯ…
ಮಂಗಳೂರು: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ಸ್ಥಾಪನೆಯಾದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ నిಯಮಿತವು ರೂ.300 ಕೋಟಿ ಮೀರಿ ವ್ಯವಹಾರ ನಡೆಸುವ ಮುಖೇನ ಅಪೂರ್ವ ಸಾಧನೆಗೈದಿದೆ. ಪ್ರಸಕ್ತ ಆರ್ಥಿಕ ಸಾಲಲ್ಲಿ 30 ಲಕ್ಷ ಮೀರಿ ಲಾಭ ಗಳಿಸಿರುವ ಸಂಸ್ಥೆ, ಸದಸ್ಯರಿಗೆ ಈ ಬಾರಿ ಶೇ. 11 ಡಿವಿಡೆಂಡ್ ನೀಡಲಿದೆ’ಯೆಂದು ಅಧ್ಯಕ್ಷ ಗಣೇಶ್ ಶೆಣೈ ಘೋಷಿಸಿದರು. 70 ಲಕ್ಷ ಷೇರು:ಸೆ.14ರಂದು ಭಾನುವಾರ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣೇಶ್ ಶೆಣೈ ‘ಸಂಸ್ಥೆಯು ಪ್ರಸ್ತುತ 70 ಲಕ್ಷ ಷೇರು ಬಂಡವಾಳ, 35 ಕೋಟಿ ರೂ.ಠೇವಣಿಗಳು, 28 ಕೋಟಿ ವಿನಿಯೋಗಗಳು, 37 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಶ್ರೀ ಪೂರ್ಣಾನಂದ ಪ್ರೊಡಕ್ಟ್ಸ್ ವ್ಯಾಪಾರ ಒಳಗೊಂಡಂತೆ 300 ಕೋಟಿ ರೂ. ಮೀರಿ ವ್ಯವಹಾರ ದಾಖಲಿಸಿದೆ ‘ಎಂದು ಅಂಕಿಅಂಶ ನೀಡಿದರು. ‘ದೇಶ ಮಾತ್ರವಲ್ಲ ವಿದೇಶಗಳಲ್ಲಿರುವ ಸಂಸ್ಥೆ ಸದಸ್ಯರು ಗೂಗಲ್ ಪೇ ಮುಖೇನ…
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಾಳಕೇರಿಯ ಯುವ ಬರಹಗಾರ ಬಂಡಾಯ ಕವಿಯೆಂದೆ ಜನಮನ್ನಣೆ ಪಡೆಯುತ್ತಿರುವ ಶ್ರೀ ರಾಘವೇಂದ್ರ ಎಚ್ ಹಳ್ಳಿ ಸಾಹಿತಿಗಳು ನಡೆದ ಬಂದ ಸಾಹಿತ್ಯದ ದಾರಿ ಅಷ್ಟೊಂದು ಸರಳವಾದದ್ದು ಅಲ್ಲಾ ಅನೇಕ ಅಪಮಾನ ಅವಮಾನ ಎದುರಿಸುತ್ತಾ ಹಲವಾರು ಕಷ್ಟ ನೋವು ಸಹಿಸಿಕೊಳುತ್ತಾ ತಮ್ಮ ಸಾಹಿತ್ಯ ದಾರಿ ಕಂಡುಕೊಂಡವರು ಇವರ ಸಂಕ್ಷಿಪ್ತ ಸಾಧನೆ ಬಗ್ಗೆ ಹೇಳುವುದಾದರೆ ನವ ಮಹಿಳಾ ಜಾಗೃತಿ ವೇದಿಕೆ ಬೆಂಗಳೂರು ಇವರು ಕೊಡುಮಾಡುವ ಪ್ರತಿಷ್ಠಿತ ” 7-08-2022 ರಲ್ಲಿ ಕರ್ನಾಟಕ ರತ್ನ ಶ್ರೀ” ಲಭಿಸಿದೆ “11-8-2024 ರಂದು ಗಂಗಾವತಿಯಲ್ಲಿ ನಡೆದ ಬಸವಜ್ಞಾನ ದೀಪೋತ್ಸವ ಹಾಗೂ ಕವಿನಾದ ಸಂಭ್ರಮೋತ್ಸೋವ ಕಾರ್ಯಕ್ರಮದಲ್ಲಿ ಅಕ್ಷರನಾದ ” ಬಸವ ಶ್ರೀ ರತ್ನ ಪ್ರಶಸ್ತಿ ” ದೊರಕಿದ್ದು ಇನ್ನು ದಿನನಿತ್ಯ ಕರ್ನಾಟಕದ್ಯಾದಂತ ಸಾಹಿತ್ಯ ಬಳಗ ನಡೆಸುವ ಕವನ ಸ್ಪರ್ಧೆಯಲ್ಲಿ ಬಾಗವಸಿದಕ್ಕಾಗಿ ಸಾವಿರಾರು ಅಭಿನಂದನಾ ಪತ್ರ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ ಪ್ರಸ್ತುತ 25-5-2025 ರಂದು ಬಳ್ಳಾರಿ ಜಿಲ್ಲೆಯ ತಾಳೂರಲ್ಲಿ ನಡೆದ ನಕ್ಷತ್ರ ಸಾಹಿತ್ಯ ಶೈಕ್ಷಣಿಕ ಹಾಗೂ…
ನವದೆಹಲಿ, ಸೆಪ್ಟೆಂಬರ್ 18:2001ರಲ್ಲಿ ಮುಂಬೈನ ಗೋಲ್ಡನ್ ಕ್ರೌನ್ ಹೋಟೆಲ್‌ನ ಮಾಲೀಕರಾಗಿದ್ದ ಜಯಾ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಬಾಂಬೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಈ ತೀರ್ಪು ನೀಡಿದ್ದು, ರಾಜ್ಯ ಸರಕಾರದ ಪರವಾಗಿ ಕೇಂದ್ರ ತನಿಖಾ ದಳ (CBI) ಸಲ್ಲಿಸಿದ್ದ ಮೇಲ್ಮನವಿಗೆ ಸ್ಪಂದಿಸಿದೆ. “ಅವನು 27 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ, ನಾಲ್ಕು ಗಂಭೀರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿ. ಇಂತಹವನಿಗೆ ಜಾಮೀನು ನೀಡಬೇಕಾದ ಅಗತ್ಯವೇನು?” ಎಂದು ಪೀಠವು ಗಂಭೀರ ಪ್ರಶ್ನೆ ಎತ್ತಿದೆ. CBI ಪರವಾಗಿ ಹಾಜರಾದ ಹೆಚ್ಚುವರಿ ಸಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ಛೋಟಾ ರಾಜನ್‌ಗಾಗಿ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಬಾಂಬೆ ಹೈಕೋರ್ಟ್ ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದುದಾಗಿ ಪೀಠಕ್ಕೆ ಮಾಹಿತಿ ನೀಡಿದರು. ಕೊಲೆ ಪ್ರಕರಣದ ಹಿನ್ನೆಲೆ:2001ರ ಜುಲೈನಲ್ಲಿ, ದಕ್ಷಿಣ ಮುಂಬೈನ ಗೋಲ್ಡನ್ ಕ್ರೌನ್ ಹೋಟೆಲ್‌ನ ಮಾಲೀಕರಾಗಿದ್ದ ಜಯಾ ಶೆಟ್ಟಿ ಅವರು ಸುಲಿಗೆ ಹಣವನ್ನು…
ಮಂಗಳೂರು : ಮಂಗಳೂರು ಮಲ್ಲಿಕಟ್ಟೆ ಪ್ರದೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಕೋಟ್ಯಂತರ ರೂ. ಸಾಲವನ್ನು ವಂಚಿಸಿ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. Electro World Enterprises ಹಾಗೂ M H Enterprises ಎಂಬ ಎರಡು ಸಂಸ್ಥೆಗಳು MSME ಯೋಜನೆಯ ಅಡಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಕ್ರಮವಾಗಿ ₹1.20 ಕೋಟಿ ಮತ್ತು ₹1.30 ಕೋಟಿಗಳ ಸಾಲವನ್ನು ಮಂಜೂರು ಮಾಡಿಕೊಂಡಿದ್ದು, ಈ ಮೊತ್ತವನ್ನು ನಿಗದಿತ ವ್ಯಾಪಾರದ ಬದಲು ವೈಯಕ್ತಿಕವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಎಸ್.ಬಿ.ಐ ಚೀಫ್ ಮ್ಯಾನೇಜರ್ ಸೆಪ್ಟೆಂಬರ್ 16 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅದರಂತೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 316(2), 316(5), 318(2), 318(3) ಮತ್ತು 3(5) ಅಡಿಯಲ್ಲಿ ಅ.ಕ್ರ 130/2025 ಮತ್ತು 131/2025 ಎಂಬ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು…
ಮಂಗಳೂರು: ಮಂಗಳೂರಿನ ಪ್ರಸಿದ್ಧ ಪೂಂಜಾ ಇಂಟರ್‌ನ್ಯಾಶನಲ್ ಹೊಟೇಲ್‌ನ ಸ್ಥಾಪಕರಾದ ಪ್ರಭಾಕರ ಪೂಂಜಾ (72) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರ ನಿಧನರಾದರು. ಮೂಲತಃ ಬಂಟ್ವಾಳದವರಾದ ಪೂಂಜಾ, ಮಂಗಳೂರು ಉದ್ಯಮ ಕ್ಷೇತ್ರದಲ್ಲಿ ಖಾಸಾ ಹೆಸರು ಗಳಿಸಿದ್ದವರು. 1980ರ ದಶಕದಲ್ಲಿ ಮುಂಬೈಯಲ್ಲಿ ಭೂಗತ ಜಗತ್ತಿನ ಸಂಪರ್ಕದಲ್ಲಿದ್ದ ಅವರು, ಅಲ್ಲಿ ಪ್ರಭಾವಿ ಡಾನ್ ಗೆ ಚಾಲಕರಾಗಿದ್ದವರು. 1986ರ ವೇಳೆಗೆ ಮಂಗಳೂರಿಗೆ ವಾಪಸಾಗಿದ ಅವರು, city’s skyline ಗೆ ಹೊಸ ರೂಪ ನೀಡಿದ ಪೂಂಜಾ ಇಂಟರ್‌ನ್ಯಾಶನಲ್ ಎಂಬ ಬೃಹತ್ ಹೊಟೇಲ್‌ನ್ನು ಆರಂಭಿಸಿದರು. ಆ ಕಾಲದಲ್ಲಿ ಮೋತಿ ಮಹಲ್ ಹೊರತುಪಡಿಸಿದರೆ, ಇಂತಹ ಅದ್ದೂರಿ ಹೊಟೇಲ್ ಮಂಗಳೂರಿನಲ್ಲಿ ವಿರಳವೇ. ಕನ್ನಡ ಭಾಷೆಯಲ್ಲಿ ನಿಪುಣತೆ ಇಲ್ಲದಿದ್ದರೂ, ಅವರು ಹಿಂದಿ, ತುಳು ಮತ್ತು ಮರಾಠಿಯಲ್ಲಿ ಸುಸ್ಪಷ್ಟವಾಗಿ ಮಾತನಾಡುತ್ತಿದ್ದರು. ಮುಂಬೈ ಮತ್ತು ಮಂಗಳೂರಿನ ಅನೇಕ ಪೊಲೀಸ್ ಅಧಿಕಾರಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಪೂಂಜಾ, ಹಳೆಯ ಭೂಗತ ಸಂಬಂಧಗಳನ್ನು ಪಕ್ಕಕ್ಕಿಟ್ಟು ಮಂಗಳೂರಿನಲ್ಲಿ ಉದ್ಯಮ ಶುರು ಮಾಡಿದವರು. ಶರದ್ ಶೆಟ್ಟಿ ಅವರ…
ಖ್ಯಾತ ಸಂಶೋಧಕ ಸಾಹಿತಿ ನಿವೃತ್ತ ಉಪನ್ಯಾಸಕ ಡಾ. ಕೆ. ಜಿ. ವಸಂತ ಮಾಧವರು ಸೆಪ್ಟಂಬರ್ 17ರ ರಾತ್ರಿಬೆಂಗಳೂರಿನ ಮಗಳ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರೊಫೆಸರ್ ಡಾ. ಕೆ.ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ) ಅವರು 1937ರ ಏಪ್ರಿಲ್ 9ರಂದು ಜನಿಸಿದರು.ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಕೆನರಾದ ರಾಜಕೀಯ ಇತಿಹಾಸ : 1565-1763 ಎನ್ನುವ ವಿಷಯದ ಮೇಲೆ ಮಹಾಪ್ರಬಂಧವನ್ನು ರಚಿಸಿ ಪಿಎಚ್.ಡಿ. ಪದವಿಯನ್ನು ಪಡೆದವರು. ಮುಲ್ಕಿ ವಿಜಯಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ೩೨ ವರ್ಷ ಕರ್ತವ್ಯ ನಿರ್ವಹಿಸಿದ ವಸಂತ ಮಾಧವರು. ನಿವೃತ್ತಿಯ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್‌ರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ಇಪ್ಪತ್ತರಷ್ಟು ಇತಿಹಾಸ ಕೃತಿಗಳನ್ನು ಮತ್ತು ಸಾವಿರಾರು ಲೇಖನಗಳನ್ನು ಬರೆದಿದ್ದಾರೆ. ವಸಂತ ಮಾಧವರ ಕುರಿತಾದ ಕೃತಿಯನ್ನು ಡಾ. ಎಸ್. ಪದ್ಮನಾಭ ಭಟ್ಟರು ರಚಿಸಿದ್ದು ನಾಡಿಗೆ…
ಉಡುಪಿ: ನಗರದಲ್ಲಿ ಮಾದಕ ವಸ್ತು ಎಂ.ಡಿ.ಎಂ.ಎ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಆತನಿಂದ 43,800 ಮೌಲ್ಯದ ಎಂ.ಡಿ.ಎಂ.ಎ ಸಹಿತ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ ಹಾಗೂ ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಂಜುನಾಥ್. ವಿ ಬಡಿಗೇರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.ಬಂಧಿತ ಆರೋಪಿ ಇಕ್ಬಾಲ್ (33) ಎಂದು ತಿಳಿಯಲಾಗಿದೆ.ಆರೋಪಿ ಮೂಡನಿಡಂಬೂರು ಗ್ರಾಮದ ಗರಡಿ ರಸ್ತೆಯಲ್ಲಿ ಸ್ಕೂಟಿಯಲ್ಲಿ ನಿಷೇದಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 172/2025 ಕಲಂ NARCOTIC DRUGS & PSYCHOTROPIC SUBSTANCES ACT, 1985 (U/s-8(C) 20(b)(II)(A) ರಂತೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
