Author: Tulunada Surya

ತುಳುವೆರ್ ಉಡುಪಿ ಇವರ ವತಿಯಿಂದ ಉಡುಪಿ ಪುತ್ತಿಗೆ ಪರ್ಯಾಯೋತ್ಸವ ಪ್ರಯುಕ್ತ 17/01/2024 ಸಂಜೆ 7:30 ಕ್ಕೆ ಹಳೆ KSRTC ನಿಲ್ದಾಣದಲ್ಲಿ ನಡೆಯಲಿದೆ. ತುಳುನಾಡ ಪರ್ಯಾಯ ವೈಭವ 2024 ರ ಆಮಂತ್ರಣ ಪತ್ರಿಕೆಯನ್ನು ಶಿರೂರು ಮಠದ ಶ್ರೀಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥರು ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಮಠದ ದಿವಾನರಾದ ಉದಯ್ ಕುಮಾರ್ ಸರಳತ್ತಾಯ ತುಳುವೆರ್ ಉಡುಪಿಯ ಪಧಾದಿಕಾರಿಗಳಾದ ರೋಹಿತ್ ಕರಂಬಳ್ಳಿ , ಅಜರುದ್ದೀನ್ ಸುಬ್ರಹ್ಮಣ್ಯನಗರ ,ಸುರೇಂದ್ರ ನಿಟ್ಟೂರು , ವಿಜಯ್ ಕುಮಾರ್ , ಶರತ್ ಕರಂಬಳ್ಳಿ ಮೊದಲಾದವರು ಉಪಸ್ಥಿತರಿದ್ದರು

Read More

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನವು ಇಲ್ಲಿಯವರೆಗೆ ಕಾಲಮಿತಿ ಪದ್ಧತಿಯಲ್ಲಿ ನಡೆಯುತ್ತಿದ್ದು, ಆರೂ ಮೇಳಗಳ ಯಕ್ಷಗಾನ ಜ. 14ರಿಂದ ಮತ್ತೆ ಹಳೆಯ ಪದ್ಧತಿಯಲ್ಲಿ ಇಡೀ ರಾತ್ರಿ ಪ್ರದರ್ಶನ ಕಾಣಲಿದೆ ಎಂದು ಮಂಡಳಿ ತಿಳಿಸಿದೆ. ಕಳೆದ ವರ್ಷದಿಂದ ಕಾಲಮಿತಿಗೆ ಒಳಪಟ್ಟಿದ್ದ ಕಟೀಲು ಮೇಳ ಈ ಬಾರಿಯೂ ಸುಮಾರು ಒಂದೂವರೆ ತಿಂಗಳ ಕಾಲ ಕಾಲಮಿತಿಯಲ್ಲಿ ಪ್ರದರ್ಶನ ನೀಡಿದೆ.ಇನ್ನು ಉಚ್ಚ ನ್ಯಾಯಾಲಯದ ಆದೇಶ ಮತ್ತು ಶ್ರೀ ಕ್ಷೇತ್ರದ ಭಕ್ತರ ಅಪೇಕ್ಷೆ ಮೇರೆಗೆ ಜ. 14ರ ಮಕರ ಸಂಕ್ರಮಣದಿಂದ ಬೆಳಗ್ಗಿನವರೆಗೆ ಯಕ್ಷಗಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಆನುವಂಶಿಕ ಮುಕ್ತೇಸರ ಕೊಡೆತ್ತೂರುಗುತ್ತು ಸನತ್‌ ಕುಮಾರ್‌ ಶೆಟ್ಟಿ ಹಾಗೂ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದ್ದಾರೆ.

Read More

ಸುರತ್ಕಲ್ ಇಲ್ಲಿನ HPCL ನಲ್ಲಿ ಸುಮಾರು 25 ವರ್ಷಗಳಿಂದ ಬುಲೇಟ್ ಟ್ಯಾಂಕರ್ ಗ್ಯಾಸ್ ಫಿಲ್ಲಿಂಗ್ ಮಾಡಲು ಕ್ಲೀನರ್ ಗಳ ಮೂಲಕವೇ ಒಳಗೆ ಪ್ರವೇಶಿಸಲು ಅನುಮತಿ.ಆದ್ದರಿಂದ ಇಲ್ಲಿನ ಟ್ಯಾಂಕರ್ ಚಾಲಕರಿಗೆ ಅವರ ಗಾಡಿ ಲೊಕೇಷನ್ ಸೀರಿಯಲ್ ಬರಲು ಎರಡು ಮೂರು ದಿನ ತಗಲುವ ಸಲುವಾಗಿ ಪರ್ಮನೆಂಟ್ ಕ್ಲೀನರ್ ನೇಮಿಸಲು ಅವರಿಗೆ ಹೊರೆಯಾಗುತ್ತಿದೆ…ಆದ್ದರಿಂದ ಅವರು ಇಲ್ಲಿಯ ಸ್ಥಳೀಯ ನಿವಾಸಿಗಳನ್ನು ಕ್ಲೀನರಾಗಿ ಅವಲಂಬಿಸಿರುತ್ತಾರೆ. ಇದರಿಂದ ಇಲ್ಲಿನ ಸುಮಾರು ಎಂಟು ನೂರು ಅಧಿಕ ಸ್ಥಳೀಯ ಯುವಕರು ಸಹ ಸುಮಾರು 25 ವರ್ಷಗಳಿಂದ ದುಡಿಮೆ ರೂಪದಲ್ಲಿ ಇದನ್ನೇ ಅವಲಂಬಿಸಿದ್ದಾರೆ… ಈಗ ಒಂದು ವಾರದಿಂದ ಇದ್ದಕ್ಕಿದ್ದಂತೆ ಇಲ್ಲಿನ ಟ್ಯಾಂಕರ್ ಮಾಲಕರು without cleaner ಗೆ ಪರ್ಮಿಷನ್ ಗೆ ಪೆಟ್ಟು ಹಿಡಿದ್ದರಿಂದ HCPL ಅಧಿಕಾರಿಗಳು ಇವರ ಬೇಡಿಕೆಗೆ ಕ್ಯಾರೇ ಮಾಡಲಿಲ್ಲ .ಇದರಿಂದ ಒಂದು ವಾರಗಳ ಟ್ಯಾಂಕರ್ ಲೋಡಿಂಗ್ ಆಗದೆ ನಿಂತಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಭರತ್ ಶೆಟ್ಟಿ ಹಾಗೂ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಸುಮಾರ್ ಎಂಟು ನೂರು ಅಧಿಕ ಸ್ಥಳೀಯ…

Read More

ಉಡುಪಿ :ಸ್ಕೂಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಪಲಿಮಾರು ಬಳಿ ಭಾನುವಾರ ರಾತ್ರಿ ನಡೆದಿದೆ. ಮೃತರನ್ನು ಪಲಿಮಾರು ದರ್ಕಾಸ್ತು ನಿವಾಸಿ ಧನ್ ರಾಜ್ ಪಲಿಮಾರು ಎಂದು ಗುರುತಿಸಲಾಗಿದೆ. ಈತ ಪಲಿಮಾರಿನಿಂದ ಸ್ಕೂಟಿಯಲ್ಲಿ ಎರ್ಮಾಳಿನ ಪೂಂದಾಡು ಎಂಬಲ್ಲಿಗೆ ರವಿವಾರ ರಾತ್ರಿ ನಾಟಕ ನೋಡಲು ತೆರಳುತ್ತಿದ್ದಾಗ ಹೆದ್ದಾರಿಯಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸೊಂದು ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನಪ್ಪಿದ್ದಾರೆ. ಈ ವೇಳೆ ಸ್ಕೂಟಿಯಲ್ಲಿದ್ದ ತುಷಾರ್ ಪಲಿಮಾರು ಹಾಗೂ ಕೌಶಿಕ್ ಎರ್ಮಾಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರ್ಕಳ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವ ಸಂದರ್ಭದಲ್ಲಿ ಈ ಅಪಘಾತವು ಸಂಭವಿಸಿದೆ.

Read More

ಪುತ್ತೂರು: ಚಲಿಸುತ್ತಿದ್ದ ಟಾಟಾ ಸುಮೋ ಮೇಲೆ ಬಿದ್ದ ಬೃಹತ್ ಮರ ಬಿದ್ದು ಚಾಲಕ ಸೇರಿ ಇಬ್ಬರು ಗಾಯಗೊಂಡ ಘಟನೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ನಡೆದಿದೆ.ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಬಿದ್ದಿದ್ದು, ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟಾಟಾ ಸುಮೋ ಮೇಲೆ ಮರ ಬಿದ್ದಿದ್ದು, ಟಾಟಾ ಸುಮೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಘಟನೆಯಲ್ಲಿ ಟಾಟಾ ಸುಮೋದ ಚಾಲಕ ಸೇರಿ ಇಬ್ಬರಿಗೆ ಗಾಯಗಳಾಗಿದೆ. ಕಾರಿನ ಜೊತೆಗೆ ರಸ್ತೆಯ ಬದಿಯಲ್ಲಿದ್ದ ಗೂಡಂಗಡಿಯ ಮೇಲೂ ಮರ ಬಿದ್ದಿದ್ದು, ಗೂಡಂಗಡಿ ಸಂಪೂರ್ಣ ಜಖಂಗೊಂಡಿದೆ.

Read More

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ದಿನಾಂಕ 07-01-2024 ರಂದು ಸ್ಥಾಪಕ ಅದ್ಯಕ್ಷತೆ ಯಲ್ಲಿ ಬ್ರಹ್ಮಾವಾರ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು. ಸಭೆಯಲ್ಲಿ ನೂತನ ಅದ್ಯಕ್ಷರಾಗಿ ಆಯ್ಕೆಯಾದ ಸತೀಶ್ ಪೂಜಾರಿ ಕಿಳಿಂಜೆಯವರನ್ನು ಸಂಘಟನೆ ಶಾಲು ಹಾಕಿ ಗೌರವಿಸಲಾಯಿತು. ಅದ್ಯಕ್ಷರಾಗಿ ಆಯ್ಕೆಯಾದ ಸತೀಶ್ ಪೂಜಾರಿ ಯವರು ಮಾತನಾಡುತ್ತಾ ಸಂಘಟನೆಯ ಹಿರಿಯರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯನ್ನು ಇನಷ್ಟು ಬಲಿಷ್ಠ ಗೊಳಿಸಲು ಪ್ರಯತ್ನಿಸುದಾಗಿ ಮತ್ತು ನನ್ನನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಸಮಾಜದ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಜನಪರ ಹೋರಾಟ ನಡೆಸಲು ಅವಕಾಶ ನೀಡಿದ ಯೋಗಿಶ್ ಶೆಟ್ಟಿ ಜಪ್ಪು ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. ಸಭೆಯಲ್ಲಿ ನಿತಿನ್ ಶೆಟ್ಟಿ ಹಾವಂಜೆ, ಸ್ವಸ್ತಿಕ್ ವರಂಗ ಸೇರಿದಂತೆ ಹಲವಾರು ಸಂಘಟನೆಗೆ ಸೇರ್ಪಡೆ ಗೊಂಡರು. ಸಭೆಯಲ್ಲಿ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜ ಉಡುಪಿ ತಾಲೂಕು ಅಧ್ಯಕ್ಷ ಕೃಷ್ಣಕುಮಾರ್, ತಾಲೂಕು ಗೌರವಾಧ್ಯಕ್ಷ ರವಿ ಆಚಾರ್ , ಉಪಾಧ್ಯಕ್ಷರುಗಳಾದ ಜಯರಾಮ ಪೂಜಾರಿ , ಉಮೇಶ್…

Read More

ಬೆಂಗಳೂರು :  ಅದೃಷ್ಟದ ಪಚ್ಚೆ ಕಲ್ಲನ್ನು ಕಡಿಮೆ ಬೆಲೆಗೆ ಖರೀದಿಸಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಬಹುದು ಎಂದು ಆಮಿಷವೊಡ್ಡಿ ಸ್ನೇಹಿತ ಉದ್ಯಮಿಯೊಬ್ಬರಿಂದ ₹52 ಲಕ್ಷ ಪಡೆದು ಅವರ ಸ್ನೇಹಿತರೇ ವಂಚಿಸಿದ್ದಾರೆ.ನಗರದ ರಿಚ್ಮಂಡ್ ಟೌನ್ ನಿವಾಸಿ ಶೌಕತ್‌ ಆಲಿ ವಂಚನೆಗೆ ಒಳಗಾಗಿದ್ದು, ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆಲಿ ಸ್ನೇಹಿತರಾದ ಅಶ್ಪಾಕ್ ಬೇಗ್, ಶಾನವಾಜ್‌ ಮಿರ್ಜಾ ಹಾಗೂ ಸಾಜಿದ್ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಒಂದೂವರೆ ದಶಕಗಳಿಂದ ಆಲಿ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಪರಸ್ಪರ ಹಣಕಾಸು ವ್ಯವಹಾರ ಸಹ ನಡೆದಿತ್ತು. ಹೀಗಿರುವಾಗ ಕಳೆದ ಏಪ್ರಿಲ್‌ನಲ್ಲಿ ಆಲಿಗೆ ಕರೆ ಮಾಡಿದ ಸ್ನೇಹಿತರು, ನಮಗೆ ಪರಿಚಯವಿರುವ ವ್ಯಕ್ತಿ ಬಳಿ ಬೆಲೆ ಬಾಳುವ ಪಚ್ಚೆ ಕಲ್ಲು ಇದೆ. ಅದನ್ನು ಆತ ₹52 ಲಕ್ಷಕ್ಕೆ ಮಾರುತ್ತಿದ್ದಾನೆ. ನಾವೇ ಖರೀದಿಸಿದರೆ ಅದನ್ನು ₹1 ಕೋಟಿಗೆ ಮಾರಾಟ ಮಾಡಬಹುದು ಎಂದು ಹೇಳಿದ್ದರು. ಲಾಭದಾಸೆಗೆ ಆಲಿ ಸಹ ಡೀಲ್‌ಗೆ ಸಮ್ಮತಿ ಸೂಚಿಸಿದ್ದರು. ಆನಂತರ ಹಂತ ಹಂತವಾಗಿ…

Read More

ಉಪ್ಪಿನಂಗಡಿ: ಮನೆಯ ಶೆಡ್ಡ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಕ್ಕೆ ಯಾರೋ ಕಿಡಿಕೇಡಿಗಳು ಬೆಂಕಿಹಚ್ಚಿ ನಾಶಪಡಿಸಿದ ಘಟನೆ ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿ ನಡೆದಿದೆ. ಬರಿಮಾರು ಗ್ರಾಮ, ಬಂಟ್ವಾಳ ನಿವಾಸಿ ಲಿಖಿತ್‌ ಕುಮಾರ್‌ ಎಂಬವರು ದಿನಾಂಕ: 06-01-2024 ರಂದು ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿರುವ ತನ್ನ ಹೆಂಡತಿ ಮನೆಗೆ ಬಂದಿದ್ದು, ರಾತ್ರಿ ವೇಳೆಗೆ ಲಿಖಿತ್‌ ರ ಭಾವ ಕೀರ್ತನ್‌ ಎಂಬವರು ಮನೆಯಿಂದ ಹೊರಗೆ ಹೋದಾಗ, ಮನೆಯಿಂದ ಸುಮಾರು 100 ಮೀಟರ್‌ ದೂರದಲ್ಲಿ ರಸ್ತೆಯಲ್ಲಿ, ಮೋಟಾರು ಸೈಕಲ್‌ವೊಂದು ಬೆಂಕಿಯಿಂದ ಉರಿಯುತ್ತಿರುವುದನ್ನು ಕಂಡು ಮನೆಯವರಲ್ಲಿ ತಿಳಿಸಿದ ವೇಳೆ, ಮನೆಯಿಂದ ಹೊರಗೆ ಹೋಗಿ ನೋಡಿದಾಗ, ಹೆಂಡತಿಯ ಮನೆಯ ಶೆಡ್ಡ್‌ನಲ್ಲಿ ನಿಲ್ಲಿಸಿದ್ದ, ಕೆಎ70-ಜೆ-7206 ನೇ ದ್ವಿಚಕ್ರವಾಹವನ್ನು ಯಾರೋ ವ್ಯಕ್ತಿಗಳು ಅಲ್ಲಿಂದ ಕೊಂಡು ಹೋಗಿ, ಮನೆಯಿಂದ 100 ಮೀಟರ್‌ ದೂರದಲ್ಲಿ ರಸ್ತೆಯಲ್ಲಿ ಬೆಂಕಿಹಚ್ಚಿ ಸುಟ್ಟು ನಾಶಪಡಿಸಿದ್ದು, ಈ ವಾಹನದ ದಾಖಲಾತಿಗಳು ಕೂಡಾ ಇದೇ ವಾಹನದಲ್ಲಿದ್ದು, ಸುಟ್ಟು ಹೋಗಿದ್ದು, ದ್ವಿ ಚಕ್ರ ವಾಹನದ ಅಂದಾಜು ಮೌಲ್ಯ ರೂ 85,000/- ಆಗಬಹುದಾಗಿದೆ. ಘಟನೆಗೆ…

Read More

ಉಡುಪಿ: ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸಾಹಿತಿ ಪ್ರೊ. ಅಮೃತ ಸೋಮೇಶ್ವರ ರವರ ಶ್ರದ್ಧಾಂಜಲಿ ಕಾರ್ಯಕ್ರಮವು ಉಡುಪಿಯ ಎಂ ಜಿ. ಎಂ ಕಾಲೇಜು ಬಳಿಯಲ್ಲಿರುವ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಇಂದು (07-01-2024 ) ನಡೆಯಿತು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರು ಮಾತನಾಡುತ್ತಾ ಅಮೃತ ಸೋಮೇಶ್ವರ ಅವರು 1935ರ ಸೆಪ್ಟಂಬರ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ ಜನಿಸಿದರು. ತಂದೆ ಚಿರಿಯಂಡ ಮತ್ತು ತಾಯಿ ಅಮುಣಿ. ಮಾತೃಭಾಷೆ ಮಲಯಾಳಂ ಆದರೂ ತುಳು ಹಾಗೂ ಕನ್ನಡದಲ್ಲಿ ಬರೆದರು.ಅಮೃತ ಸೋಮೇಶ್ವರ ಅವರ ಪ್ರಾರಂಭಿಕ ಶಿಕ್ಷಣ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ, ಪ್ರೌಢಶಿಕ್ಷಣ ಆನಂದಾಶ್ರಮದಲ್ಲಿ, ಮತ್ತು ಪದವಿ ಶಿಕ್ಷಣ ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಾಯಿತು.ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದು ತಾವು ಓದಿದ ಅಲೋಷಿಯಸ್‌ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಸೇರಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.…

Read More

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯಪದವು ಕನ್ನಡ್ಕದಲ್ಲಿ ನಡೆದಿದೆ. ಕನ್ನಡ್ಕ ನಿವಾಸಿ, ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ (16) ಮೃತ ಯುವತಿ. ದೀಕ್ಷಾ ಮನೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಇನ್ನು ದೀಕ್ಷಾ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದು, ನಾಳೆ ಅವರಿಗೆ ಲ್ಯಾಬ್ ಪರೀಕ್ಷೆಯಿತ್ತು ಎಂದು ವರದಿಯಾಗಿದೆ. ಈಶ್ವರಮಂಗಲ ಹೊರಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More