Author: Tulunada Surya

25 ವರ್ಷದ ಹಿಂದೆ ನಾವು ಎಸ್ಟೇಟ್ ಅಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ನಿಮ್ಮ ಏರಿಯಕ್ಕೆ ಪೊಲೀಸ್ ಬಂದಿದ್ದಾರೆ ಅಂತ ಬೇರೆ ಏರಿಯದವರು ಹೇಳಿದರು. ಆಗ ಪೊಲೀಸ್ ಬಂದರು ಅಂತ ಹೇಳಿದರೆ ಭಯ ಇರುವ ಸಮಯ..ಎಲ್ಲರೂ ಭಯದಿಂದ ಏನಾಗಿರಬಹುದು ಯೋಚಿಸುವಾಗ ತಿಳಿಯಿತು ಇದು ನಮ್ಮ ಏರಿಯಾದ ಉಮೇಶಣ್ಣ ಪೊಲೀಸ್ ಇಲಾಖೆ ಯಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು. ಏರಿಯಾದಲ್ಲಿ ಒಬ್ಬರು ಪೊಲೀಸ್ ಇಲಾಖೆಯಲ್ಲಿ ಕೆಲಸ ಪಡೆದದರು ಎಂಬ ಖುಷಿ ಬೇರೆ.ನಂತರ ತನ್ನ ಕರ್ತವ್ಯದ ಸಮಯದಲ್ಲಿ ಪ್ರತಿಸಲ ಊರಿಗೆ ಸಂಬಂಧಪಟ್ಟಂತಹ ಕೆಲಸಕ್ಕೆ ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಏರಿಯಾದಲ್ಲಿ ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆ ನಡೆದಾಗ ಅದರ ಬಗ್ಗೆ ಗಮನ ಕೊಟ್ಟು ತನ್ನ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದರು. ತಾನು ಇಲಾಖೆಯಲ್ಲಿ ಇದ್ದೇನೆ ಎಂಬುದನ್ನು ಇಲ್ಲಿ ತನಕ ಯಾವುದೇ ಅಹಂಕಾರದಿಂದ ಇವರು ದರ್ಪ ತೋರಿಸಿದ ದಿನವೇ ಇಲ್ಲ. ಆದರೆ ಇವರ ಶಿಸ್ತು, ಮಾತಾಡುವ ರೀತಿ, ಸಮಸ್ಯೆಗಳ ಬಗ್ಗೆ ಕೊಡುವ ಸಲಹೆ ಸ್ವತಹ ನಮಗೆ ಪೊಲೀಸ್ ಇಲಾಖೆಯಲ್ಲಿ ಸೇರಿ ಇವರ…

Read More

ತುಳುನಾಡಿನ ಮಣ್ಣಿನ ದಿಗ್ಗಜರಾದ ಎಂ. ಎನ್. ರಾಜೇಂದ್ರ ಕುಮಾರ್, ರೋಹನ್ ಮೊಂತೆರೊ, ಹಾಗೂ ಕನ್ಯಾನ ಸದಾಶಿವ ಶೆಟ್ಟಿ ಯವರಿಗೆ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ – ಯೋಗೀಶ್ ಶೆಟ್ಟಿ ಜಪ್ಪು ಶುಭಹಾರೈಕೆ ಸಹಕಾರಿ, ಧಾರ್ಮಿಕ, ಉದ್ಯಮ ಸೇರಿದಂತೆ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಉನ್ನತ ಕೊಡುಗೆ ನೀಡಿ ಜನರ ಪ್ರೀತಿಗೆ ಪಾತ್ರರಾದ ತುಳುನಾಡಿನ ಮಣ್ಣಿನ ದಿಗ್ಗಜರಾದ ಎಸ್.ಸಿ. ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ . ಎಂ. ಎನ್. ರಾಜೇಂದ್ರ ಕುಮಾರ್, ರೋಹನ್ ಕಾರ್ಪೋರೇಶನ್ ಮಾಲಕ ರೋಹನ್ ಮೊಂತೆರೊ, ಹಾಗೂ ಹೇರಂಭ ಇಂಡಸ್ಟ್ರೀಸ್ ಮುಂಬೈ ಮಾಲಕ ಕನ್ಯಾನ ಸದಾಶಿವ ಶೆಟ್ಟಿ ಯವರಿಗೆ ದಿನಾಂಕ 29-03-2025 ರಂದು ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಈ ಶುಭ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಪದವಿ ಪುರಸ್ಕೃತರಿಗೆ ಶುಭ ಹಾರೈಸಿದರು

Read More

ತೆಂಕನಿಡಿಯೂರು ಗ್ರಾಮದ ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಇಂದು ನಡೆಯಿತು. ಗ್ರಾಮ ಆಡಳಿತಾಧಿಕಾರಿ ಶ್ರೀಮತಿ ಪವಿತ್ರ ಅವರು ಅಧಿಕಾರ ಹಸ್ತಾಂತರಿಸಿದರು. ಈ ನೂತನ ವ್ಯವಸ್ಥಾಪನಾ ಸಮಿತಿಯಲ್ಲಿ ಅಧ್ಯಕ್ಷರಾಗಿ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಅರ್ಚಕರಾಗಿ ಗೋಪಾಲಕೃಷ್ಣ ಭಟ್, ಸದಸ್ಯರಾಗಿ ಭೋಜ ಶೆಟ್ಟಿ, ವೆಂಕಟೇಶ್ ಕುಲಾಲ್, ಪ್ರಭಾಕರ್ ಅಂಚನ್, ಸತೀಶ್, ಶ್ರೀಮತಿ ಮಮತಾ ಶೆಟ್ಟಿ ಹಾಗೂ ಶ್ರೀಮತಿ ಅನುಷಾ ಅವರು ಅಧಿಕಾರ ಸ್ವೀಕರಿಸಿದರು. ಈ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ಉಪ್ಪೂರು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಸುವರ್ಣ, ತೆಂಕನಿಡಿಯೂರು ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶ್ರೀಮತಿ ಶೋಭಾ ನಾಯ್ಕ್, ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಥ್ವಿರಾಜ್ ಶೆಟ್ಟಿ, ಸತೀಶ್ ನಾಯಕ್, ಸುರೇಶ್ ನಾಯಕ್, ಶರತ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಉದಯ್, ಉಡುಪಿ ಜಿಲ್ಲಾ ಯುವ…

Read More

ಪಡುಬಿದ್ರಿ :- ಪಡುಬಿದ್ರಿ ರಾಗ್ ರಾಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ (ರಿ) ವತಿಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರ ಮಹೋತ್ಸವದ ಅಂಗವಾಗಿ 20 ನೇ ವರ್ಷದ ” ಸ್ಟಾರ್ ನೃೆಟ್” ಸಾಂಸ್ಕೃತಿಕ ಕಾರ್ಯಕ್ರಮವು ವಿಶ್ವಾಸ್ ವಿ.ಅಮೀನ್ ಸಾರಥ್ಯದಲ್ಲಿ ದೇವಸ್ಥಾನದ ವಠಾರದಲ್ಲಿ ಅದ್ದೂರಿ ವೇದಿಕೆಯಲ್ಲಿ ನಡೆಯಿತು “ಸಾಂಸ್ಕೃತಿಕ ನಾಡು ನಮ್ಮ ತುಳುನಾಡಿನ ಊರ ಜಾತ್ರೆಯಲ್ಲಿ ವಿಭಿನ್ನವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಗವಂತನಿಗೆ ಸಮಾರ್ಪಿಸುವ ಒಳ್ಳೆಯ ಕಾರ್ಯವನ್ನು ಸಂಸ್ಥೆ ನಡೆಸುತ್ತಾ ಬರುತಿರುವುದು ಶ್ಲಾಘನೀಯ..”* ಎಂದು ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ”ಸಾಂಸ್ಕೃತಿಕ ಚಟುವಟಿಕೆ ಜೀವನದ ಅವಿಭಾಜ್ಯ ಅಂಗ..ದೇಶ ವಿದೇಶದ ಸಾಂಸ್ಕೃತಿಕ ವೃೆವಿಧ್ಯತೆಗಳು ಒಂದು ಸಾಂಸ್ಕೃತಿಕ ಬೆಳವಣಿಗೆಗೆ ದಾರಿಯಾಗಿದೆ..ನಿರಂತರವಾಗಿ 20 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಿರುವುದು ಹೆಮ್ಮೆಯ ವಿಷಯ ,ಯುವ ಜನತೆ ನಮ್ಮ ದೇಶದ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೃೆವಿಧ್ಯತೆಯನ್ನು ಬೆಳೆಸುವಲ್ಲಿ ತೂಡಗಿಸಿ ಕೊಳ್ಳಬೇಕೆಂದು ..” ಎಂದು ಮಾಜಿ ತಾ.ಪಂ.ಸದಸ್ಯ ನವೀನಚಂದ್ರ ಜೆ ಶೆಟ್ಟಿ…

Read More

ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರ ಪ್ರಶಸ್ತಿ 2025 ಪ್ರದಾನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸರ್ವೇ ಜನ ಆರ್ಟ್ಸ್ ಮತ್ತುಕಲ್ಚರ್ ಇದರ ಸಹಭಾಗಿತ್ವದಲ್ಲಿ 8ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಮಹೋತ್ಸವ ಅಂಗವಾಗಿ ನಾಡಿನಗಾಗಿ ನಾಡಿನ ಏಳಿಗೆಗಾಗಿ ಗಣನೀಯ ಸೇವೆ ಸಲ್ಲಿಸಿದ ಪತ್ರಿಕೋದ್ಯಮ, ಸಾಹಿತ್ಯ ,ಸಂಘಟನೆ ಸಮಾಜಸೇವೆಗಾಗಿ ಮಾಜಿ ಮುಖ್ಯಮಂತ್ರಿ ವಿಧಾನಸೌಧ ನಿರ್ಮಾತ್ ದಿವಂಗತ ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನ ರಾಷ್ಟ್ರ ಪ್ರಶಸ್ತಿಯನ್ನು ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ ಬೆಂಗಳೂರಿನ ಕನ್ನಡ ಭವನದಲ್ಲಿ ಇತ್ತೀಚೆಗೆ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಖ್ಯಾತ ಗಾಯಕ ಶಶಿಧರ ಕೋಟೆ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಚಲನ ಚಿತ್ರ ನಟ ಶಿವಕುಮಾರ ಆರಾಧ್ಯ ,ಹೊಸಮಠ ಮಹಾಸ್ವಾಮಿಗಳಾದ ಬಸವ ಶಾಂತಲಿಂಗ ಮಹಾಸ್ವಾಮಿಗಳು ,ಡಾ. ಪುತ್ತೂರಾಯ ಡಾ. ಕೆಂಚನೂರು ಶಂಕರ್. ಲಷೀತಾ ಗಂಗಾವತಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Read More

ಉಡುಪಿ: ತುಳು ಭಾಷೆಯ ಉಳಿವು-ಅಳಿವು, ಮುಂದಿನ ಪೀಳಿಗೆಗೆ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಪಸರಬೇಕೆಂಬ ಉದ್ದೇಶದಿಂದ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್(ರಿ.) ಆಯೋಜಿಸುತ್ತಿರುವ “ತುಳುನಾಡ್ ಕಾನ್ಕ್ಲೇವ್ -2025″ರ ಮೊದಲ ಸಮಾವೇಶ ಕಟಪಾಡಿ ವಿಶ್ವನಾಥ ಕ್ಷೇತ್ರದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಎಪ್ರೀಲ್ 13ರಂದು ಆದಿತ್ಯವಾರ ನಡೆಯುವುದು. ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ ತುಳುನಾಡಿನ ಕಾಸರಗೋಡಿನಿಂದ ಉಡುಪಿಯವರೆಗೆನ ಅನೇಕ ವಿದ್ವಾಂಸರು ತುಳು ಭಾಷೆ, ಸಂಸ್ಕೃತಿ, ಜನಪದ, ಹೋರಾಟ, ಸಾಹಿತ್ಯ ಮತ್ತು ಲಿಪಿಯ ಬಗೆಗೆ ತಮ್ಮ ವಿಚಾರವನ್ನು ಮಂಡಿಸಲಿರುವರು. ತುಳುವಿನ ಸಾಹಿತ್ಯಕ್ಕೆ ಸತತ ಕೊಡುಗೆ ನೀಡುತ್ತಾ ಕಳೆದ ವರ್ಷ 6 ತುಳು ಪುಸ್ತಕಗಳನ್ನು ತುಳು ಲಿಪಿಯಲ್ಲಿ ಬಿಡುಗಡೆ ಮಾಡಿರುವ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಸಂಸ್ಥೆ, ಈ ಬಾರಿ ಸಮಾವೇಶದಲ್ಲಿ 5 ಹೊಸ ತುಳು ಪುಸ್ತಕಗಳನ್ನು ಬಿಡುಗಡೆ ಮಾಡಲಿದೆ. ಶ್ರೀ ಫ್ರಹ್ಲಾದ್ ಪಿ. ತಂತ್ರಿಯವರು ಅಭಿವೃದ್ದಿ ಪಡಿಸಿರುವ ಯುನಿಕೋಡ್ ಸಹ್ಯ ತುಳುವಿನ ಆಸ್ಕಿ ಫಾಂಟ್ “ಮಲ್ಲಿಗೆ” ಹಾಗೆಯೇ ತುಳು…

Read More

ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ-2025 ದಿನಾಂಕ 23-03-2025 ರಂದು ದೇವಮ್ಮ ಕಾಂಪ್ಲೆಕ್ಸ್ ಸುಳ್ಯ ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಇವರು ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2025 ನೇ ಸಾಲಿನ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ಯನ್ನು ಯುವ ಸಾಹಿತಿಪ್ರಿಯಾ ಸುಳ್ಯ ರವರಿಗೆ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.ಇವರು, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಸೇವೆಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಚಿಗುರೆಲೆ ಸಾಹಿತ್ಯ ಬಳಗ ಇದರ ಸದಸ್ಯರಾಗಿರುತ್ತಾರೆ.ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು. ಸಮಾರಂಭ ಕಾರ್ಯಕ್ರಮದಲ್ಲಿ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ಸುಳ್ಯ , ಹಿರಿಯ ಸಾಹಿತಿ ಶ್ರೀ ಶ್ರೀ ಯೋಗೇಶ್ವರನಂದ ಸರಸ್ವತಿ ಸ್ವಾಮೀಜಿ, ಹಿರಿಯ ಸಾಹಿತಿ ನಾರಾಯಣ ಕುಕ್ಕುವಳ್ಳಿ,ಶ್ರೀ ಮೋಹನ್ ನಂಗಾರು,ಶ್ರೀ ಚೆನ್ನಕೇಶವ ಜಾಲ್ಸೂರು ,ಶ್ರೀ.ಪಿ ವೆಂಕಟೇಶ್ ಬಾಗವಾಡ…

Read More

ಮಂಗಳೂರು ಮಾ. 22 :- ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವುದಕ್ಕೆ ಮಾತ್ರ ಸೀಮಿತವಾಗದೆ ಭವಿಷ್ಯದ ಉತ್ತಮ ಪ್ರಜೆಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಹೊಂದಿವೆ. ಈ‌ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕಾರ್ಯವನ್ನು ಶಾಲಾ ಕಾಲೇಜುಗಳು ವಹಿಸಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು ಹೇಳಿದ್ದಾರೆ. ಅವರು ಶನಿವಾರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿಶ್ವವಿದ್ಯಾನಿಲಯ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಡೆದಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ-ವಿಚಾರ ಸಂಕಿರಣವನ್ನು ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಮಾದಕ ವ್ಯಸನಗಳ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಕೇವಲ ಓದುವ ಕಡೆಗೆ ಗಮನ ಕೊಡಬೇಕು. ಮಾದಕ ವ್ಯಸನ ರೂಪಿಸಲು ಅನೇಕ ಜಾಲಗಳಿವೆ. ಅಂತಹ ಯಾವುದೇ ರೀತಿಯ ಹಾದಿ ತಪ್ಪಿಸುವ ದುಶ್ಚಟಗಳಿಗೆ ಒಳಗಾಗಬಾರದು ಎಂದು ಅವರು ಹೇಳಿದರು.ಇತ್ತೀಚೆಗೆ ಮಂಗಳೂರು ನಗರ…

Read More

ಎಸ್.ಡಿ.ಎಮ್ ಕಾನೂನು ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ , ಕೆ.ಎಂ.ಸಿ.ಆಸ್ಪತ್ರೆ, ಪ್ರಸಾದ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ , ಆಶ್ರಯದಲ್ಲಿ, ಮಂಗಳೂರಿನ ಎಸ್.ಡಿ.ಎಮ್ . ಕಾನೂನು ಕಾಲೇಜಿನಲ್ಲಿ ಬೃಹತ್ ರಕ್ತದಾನ ಹಾಗೂ ಕಣ್ಣಿನ ತಪಾಸಣೆ ಶಿಬಿರ ನಡೆಯಿತು. ಡಾ.ವಿಕ್ರಂ ಜೈನ್ , ಡಾ.ದೇವರಾಜ್ .ಕೆ ಡಾ.ಸಿಂಚನ , ಸತೀಶ್ ಬಿ.ಕೆ, ಡಾ. ತಾರಾನಾಥ ಶೆಟ್ಟಿ, ಪ್ರೊ.ಪುಷ್ಪರಾಜ್ .ಕೆ, ಡಾ.ಡಿಂಪಲ್ ,ಅಪೂರ್ವ ಶೆಟ್ಟಿ, ರಾಘವೇಂದ್ರ ರಾವ್, ಅಮಿತ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Read More

ದಿನಾಂಕ 23-03-2025 ರಂದು ಆದಿತ್ಯವಾರ ಸಂಜೆ 3 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಉಡುಪಿ ಜಿಲ್ಲಾ ಘಟಕ ಸಭೆ ನಡೆಯಲಿದೆ. ಸಭೆ ಮುಖ್ಯಾಂಶಗಳು : 👉 ತುಳುನಾಡ ರಕ್ಷಣಾ ವೇದಿಕೆ ಸಂಘಟನೆಗೆ ಹಲವಾರು ಗಣ್ಯರ ಸೇರ್ಪಡೆ ಇದೆ. 👉 ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ತುಳುನಾಡ ರಕ್ಷಣಾ ವೇದಿಕೆ 15 ವರ್ಷ ನಿರಂತರ ಸೇವೆ ಸಲ್ಲಿಸಿ 16 ನೇ ವರ್ಷಾಚರಣೆ ಅಂಗವಾಗಿ ತುಳು ಸಮ್ಮೇಳನ ನಡೆಸುವ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರನ್ನು ಆಹ್ವಾನಿಸುವುದು ಸೇರಿದಂತೆ ಮತ್ತಿತರರ ಮಹತ್ವದ ವಿಷಯಗಳ ಸಮಾಲೋಚನೆ 👉 ಜಿಲ್ಲಾ ಘಟಕ ಅಭಿವೃದ್ಧಿ ದೃಷ್ಟಿಯಿಂದ ಕೆಲವು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಈ ಸಭೆಗೆ ಜಿಲ್ಲಾ ಘಟಕ, ಕಾರ್ಮಿಕ ಘಟಕ, ಮಹಿಳಾ ಘಟಕದ ಅಧ್ಯಕ್ಷರು ಮತ್ತು ಜಿಲ್ಲೆಯ ಎಲ್ಲಾ ತಾಲೂಕುಗಳು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತಪ್ಪದೇ ಆಗಮಿಸಬೇಕೆಂದು ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ…

Read More