Author: Tulunada Surya

ಪುತ್ತೂರು ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆರ್ಲಪದವು ನಿವಾಸಿ, ಮೇಸ್ತ್ರಿ ಕೆಲಸ ಮಾಡುತ್ತಿರುವ ಶಿವಪ್ಪ ನಾಯ್ಕ ಎಂಬವರ ಪುತ್ರ ವಿಜಯ ಕುಮಾರ್‌ ಎಸ್(25ವ)  ಜೀವಾಂತ್ಎಂಯ ಮಾಡಿಕೊಂಡ ಯುವಕನಾಗಿದ್ಬದಾನೆ. ವಿಜಯ್ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಗೆ ಕಾರಣ ತಿಳಿದು ಬಂದಿಲ್ಲ. ತಂದೆಯ ಜೊತೆ ತಾನು ಮೇಸ್ತ್ರಿಯಾಗಿ ಕೆಲಸಕ್ಕೆ ತೆರಳುತ್ತಿದ್ದ ವಿಜಯ್ ಗುತ್ತಿಗೆದಾರರಾಗಿಯೂ ಕೆಲಸ ಮಾಡುತ್ತಿದ್ದರು. ಅವಿವಾಹಿತರಾಗಿದ್ದ ಮೃತರು ತಂದೆ ಶಿವಪ್ಪ ನಾಯ್ಕ, ತಾಯಿ , ಸಹೋದರ, ಮತ್ತು ಸಹೋದರಿಯನ್ನು ಅಗಲಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಣಿಪಾಲದಿಂದ ಉಡುಪಿಯತ್ತ ತೆರಳುತ್ತಿದ್ದ ಆಂಬುಲೆನ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮೆಡಿಕಲ್ ಶಾಪ್ ಒಳಗೆ ನುಗ್ಗಿದ ಘಟನೆ ಲಕ್ಷ್ಮೀಂದ್ರ ನಗರದ ಬಳಿ ಇಂದು ಮುಂಜಾನೆ ನಡೆದಿದೆ. ಆಂಬುಲೆನ್ಸ್ ನಲ್ಲಿ ಚಾಲಕನ ಹೊರತು ಬೇರೆ ಯಾರು ಇರಲಿಲ್ಲ. ಲಕ್ಷ್ಮೀಂದ್ರ ನಗರದ ಬಳಿ ಬರುತ್ತಿದ್ದಂತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ಒಮ್ಮೆಗೆ ಬಲಕ್ಕೆ ತಿರುಗಿದ ಆಂಬುಲೆನ್ಸ್, ರಸ್ತೆಯ ಪಕ್ಕದಲ್ಲಿದ್ದ ಜನೌಷಧಿ ಕೇಂದ್ರದೊಳಗೆ ನುಗ್ಗಿದೆ. ಪಕ್ಕದ ಅಂಗಡಿಗಳಿಗೂ ಹಾನಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More

ಬಂಟ್ವಾಳ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಚರಂಡಿ ಮೇಲೆ ಹತ್ತಿ ನಿಂತುಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಮಾಣಿ ಸಮೀಪದ ‌ಸೂರಿಕುಮೇರು ಎಂಬಲ್ಲಿ ನಡೆದಿದೆ. ‌‌ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಹೆದ್ದಾರಿ ಬದಿ ಗುಡ್ಡ ಜರಿದು ಬೀಳದಂತೆ ಕಟ್ಟಲಾದ ತಡೆಗೋಡೆಗೆ ಗುದ್ದಿ ಬಳಿಕ ಚರಂಡಿ ಮೇಲೆ ಹತ್ತಿ ನಿಂತುಕೊಂಡಿದೆ. ಘಟನೆಯಿಂದ ಕಾರು ಸಂಪೂರ್ಣ ಜಖಂಗೊಂಡಿದೆ.ಆದರೆ ಅದೃಷ್ಟವಶಾತ್ ಕಾರಿನೊಳಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.ಗಾಯಗೊಂಡ ವ್ಯಕ್ತಿಗಳ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.ಚಾಲಕ ಸಹಿತ ಮೂವರು ಮಹಿಳೆಯರಿದ್ದು, ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

Read More

ಮಂಗಳೂರು: ಆಯುರ್ವೇದ (B.A.M.S) ವೈದ್ಯರುಗಳ ಬಹುದಿನಗಳ ಬೇಡಿಕೆಯಾದ ಮೂಲ ಪದ್ದತಿಯೊಂದಿಗೆ ಅವಶ್ಯಕ ಪ್ರಾಥಮಿಕ ಹಂತದ ಅಲೋಪತಿ ಔಷಧಗಳನ್ನು ನೀಡಲು ಅನುಮತಿ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕ ವತಿಯಿಂದ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧ ಎದುರು ಕ್ಲಾಕ್ ಟವರ್ ಬಳಿ ದಿನಾಂಕ 03-01-2024 ಬುಧವಾರ ಬೆಳ್ಳಿಗೆ 11.00 ರಿಂದ ಪ್ರತಿಭಟನೆ ಸಭೆ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಮತ್ತು ಇತರರಿಗೆ ಮನವಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಆಯುರ್ವೇದ ವೈದ್ಯರ ಸಂಘ ಹಾಗೂ ಇತರ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಪ್ರತಿಭಟನೆ ಹಾಗೂ ಹಕ್ಕೊತ್ತಾಯ ಸಭೆಗಳು ನಡೆಯಲಿವೆ.ಬರುವ ಮೇ ತಿಂಗಳಲ್ಲಿ ವೈದ್ಯರ ಹಲವಾರು ಬೇಡಿಕೆಗಳನ್ನು ಸರಕಾರದ ಗಮನಸೆಳೆಯುವ ದೃಷ್ಟಿಯಿಂದ ಬೃಹತ್ ವೈದ್ಯರ ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದು. ಆ ಸಮಾವೇಶ ದಲ್ಲಿ ಸಾವಿರಾರು ವೈದ್ಯರು ಭಾಗವಹಿಸಲಿರುವರು. ಆ…

Read More

ನವದೆಹಲಿ: ಹೊಸ ವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆಯ 19 ಕೆಜಿ ಎಲ್​ಪಿಜಿ ಸಿಲಿಂಡರ್​​ ಬೆಲೆ ತುಸು ಇಳಿಕೆಯಾಗಿದೆ. ಈ ಮೂಲಕ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ರಾಹಕರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿವೆ. ನವದೆಹಲಿಯಲ್ಲಿ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ವಿವಿಧ ಸಂಸ್ಥೆಗಳಲ್ಲಿ ಬಳಸುವ ವಾಣಿಜ್ಯ ಸಿಲಿಂಡರ್‌ನ ಬೆಲೆ ಇಂದಿನಿಂದ 1,755.50 ರೂ.ನಿಂದ 1,757 ರೂಪಾಯಿಗೆ ಇಳಿದಿದೆ. ಇನ್ನು ಮುಂಬೈನಲ್ಲಿ 1,710 ರೂ.ನಿಂದ 1,708.50 ರೂ.ಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ 5 ರೂ.ಗಳಷ್ಟು ಇಳಿಕೆಯಾಗಿದ್ದು, ಪ್ರಸ್ತುತ ಬೆಲೆ 1,929 ರೂಪಾಯಿಯಿಂದ 1,924 ರೂ.ಗೆ ಇಳಿದಿದೆ. ಇನ್ನು ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 50 ಪೈಸೆ ಏರಿಕೆ ಕಂಡು 1,868.50 ರಿಂದ 1,869 ರೂಪಾಯಿ ಆಗಿದೆ.

Read More

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ ಮಾಡುವುದ್ರಿಂದ ಅನೇಕ ರೋಗಗಳು ಕಡಿಮೆಯಾಗುತ್ತವೆ. ಶೀತ-ನೆಗಡಿ : 2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ಶೀತ-ನೆಗಡಿ ಕಡಿಮೆಯಾಗುತ್ತದೆ. ಕಾಳು ಮೆಣಸಿನ ಪುಡಿಯ ವಾಸನೆಯನ್ನು ತೆಗೆದುಕೊಳ್ಳುವುದ್ರಿಂದ ಸೀನು, ತಲೆನೋವು ನಿಯಂತ್ರಣಕ್ಕೆ ಬರುತ್ತದೆ. ಕಣ್ಣಿನ ಸಮಸ್ಯೆ : ಕಣ್ಣಿನ ದೋಷವಿರುವವರು ಪ್ರತಿದಿನ ಬೆಳಿಗ್ಗೆ ಕಾಳು ಮೆಣಸಿನ ಪುಡಿ ಜೊತೆ ಸಕ್ಕರೆ ಹಾಗೂ ತುಪ್ಪ ಬೆರೆಸಿ ತಿನ್ನುವುದು ಒಳ್ಳೆಯದು. ಇದು ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ರಕ್ತಸ್ರಾವ : ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಕಾಳು ಮೆಣಸಿನ ಪುಡಿಯನ್ನು ಮೊಸರು ಹಾಗೂ ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ರಕ್ತ ಸೋರುವುದು ಕಡಿಮೆಯಾಗುತ್ತದೆ. ಹೊಟ್ಟೆ ಸಮಸ್ಯೆ : ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿರುವವರು ಒಂದು ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಕುಡಿದ್ರೆ ಒಳ್ಳೆಯದು. ಎಸಿಡಿಟಿ…

Read More

ಸುಳ್ಯ : ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಸುಳ್ಯ ಸಮೀಪದ ಭಸ್ಮಡ್ಕ ಪಯಸ್ವಿನಿ ನದಿಯಲ್ಲಿ ರವಿವಾರ ಸಂಭವಿಸಿದೆ. ಮೃತರನ್ನು ಕಾಸರಗೋಡಿನ ವರ್ಕಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಮೀರ್‌ (27) ಎಂದು ಗುರುತಿಸಲಾಗಿದೆ. ಸಮೀರ್‌ ಸುಳ್ಯದಲ್ಲಿ ರೂಮ್‌ ಮಾಡಿಕೊಂಡು ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ರವಿವಾರ ರಜೆ ಹಿನ್ನೆಲೆಯಲ್ಲಿ ಮೂವರು ಯುವಕರು ಬೆಳಗ್ಗೆ ಬಟ್ಟೆ ಒಗೆಯಲು ಪಯಸ್ವಿನಿ ನದಿಗೆ ಇಳಿದಿದ್ದರು. ಸಮೀರ್‌ ಬಟ್ಟೆ ತೊಳೆದು ಸ್ನಾನಕ್ಕೆ ಇಳಿದಿದ್ದು, ಉಳಿದ ಇಬ್ಬರು ಬಟ್ಟೆ ಒಗೆಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸಮೀರ್‌ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯ ಈಜುಗಾರರು ಹಾಗೂ ಅಗ್ನಿ ಶಾಮಕ ದಳದ ತಂಡ ಕಾರ್ಯಚರಣೆ ನಡೆಸಿ ಮೃತಹೇಹ ಮೇಲಕ್ಕೆತ್ತಿದರು. ಸುಳ್ಯ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Read More