ಮಂಗಳೂರು: ಪಶ್ಚಿಮ ವಲಯ ಡಿಐಜಿಪಿ ಆಗಿ ಐಪಿಎಸ್ ಅಧಿಕಾರಿ ಅಮಿತ್ ಸಿಂಗ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಅಮಿತ್ ಸಿಂಗ್ ಅವರನ್ನು ಬರಮಾಡಿಕೊಂಡರು. ಅಮಿತ್ ಸಿಂಗ್ ಅವರು ಮಂಗಳೂರು ಮತ್ತು ಪುತ್ತೂರಿನಲ್ಲಿ ಎಎಸ್ಪಿಯಾಗಿ, ಹಾಸನ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ನಾಲ್ಕು ವರ್ಷ ಕಾರ್ಯನಿರ್ವಹಿಸಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಾದಕ ಪದಾರ್ಥ ಮಾರಾಟ ದಂಧೆ, ಕೋಮು ದ್ವೇಷ ಹರಡುವಿಕೆ ನಿಗ್ರಹಕ್ಕೆ ಆದ್ಯತೆ ನೀಡುತ್ತೇನೆ. ಸೈಬರ್ ಅಪರಾಧ ಚಟುವಟಿಕೆ ನಿಯಂತ್ರಣಕ್ಕೂ ಹೆಚ್ಚಿನ ನಿಗಾ ವಹಿಸಲಾಗುವುದು’ ಎಂದರು. ಹಿಂದಿನ ಡಿಐಜಿ ಚಂದ್ರಗುಪ್ತ ಅವರು ಬೆಂಗಳೂರು ಅಪರಾಧ ವಿಭಾಗದ ಐಜಿಪಿಯಾಗಿ ಬಡ್ತಿ ಪಡೆದಿದ್ದಾರೆ.
Trending
- ಮಂಗಳೂರು : ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ 🗞️
- ಶೀಘ್ರದಲ್ಲಿಯೇ ಮುಳಿಹಿತ್ಲು ರಸ್ತೆ ಅಗಲೀಕರಣ :- ಶಾಸಕ ಕಾಮತ್
- ಮಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಹೊಸ ತಿರುವು — ಉದ್ಯಮಿ ರೋಶನ್ ಸಲ್ದಾನಾ ಅವರ 2.85 ಕೋಟಿ ರೂ. ಆಸ್ತಿ ಇಡಿ ಮುಟ್ಟುಗೋಲು
- ಖ್ಯಾತ ಉದ್ಯಮಿ ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಹಾಗೂ ಯುವ ಉದ್ಯಮಿ ಅಭಿಷೇಕ್ ಆಳ್ವ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ
- “ ಸಹಕಾರ ಸಪ್ತಾಹ” ಅಂಗವಾಗಿ ತೌಳವ ಸಹಕಾರ ಮಾಣಿಕ್ಯ ಪ್ರಶಸ್ತಿ” ಹಾಗೂ “ತೌಳವ ಸಹಕಾರ ರತ್ನ ಪ್ರಶಸ್ತಿ” ಗೆ ಆರ್ಜಿ ಆಹ್ವಾನ
- ಇ-ಖಾತಾ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣು:- ಶಾಸಕ ಕಾಮತ್ ಆಕ್ರೋಶ
- ಐಕ್ಯಂ ವಿಶೇಷ ಮಕ್ಕಳ ಶಾಲೆಯಲ್ಲಿ ದೀಪಾವಳಿ ಆಚರಣೆ
- ಉಮ್ರಾ ಯಾತ್ರೆಗೆ ತೆರಳಿದ ಜರ್ಗುಮ್ ಫೌಂಡೇಶನ್ ಸದಸ್ಯರಿಗೆ ಸನ್ಮಾನ
