ಉಡುಪಿಯಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಧಿಕಾರಿ ಸ್ವರೂಪ ಅವರು ನಿರ್ದಿಷ್ಟ ದಿನಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ (Dry Days) ಮಹತ್ವದ ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರಮುಖ ವಿವರಗಳು ಹಾಗೂ ದಿನಾಂಕಗಳು:
ಸೆಪ್ಟೆಂಬರ್ 14 (ಇಡೀ ದಿನ): ಬೆಳಿಗ್ಗೆ 6.00 ರಿಂದ ರಾತ್ರಿ 12.00 ರವರೆಗೆ ಉಡುಪಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಸಂಪೂರ್ಣ ಬಂದ್.
ಸೆಪ್ಟೆಂಬರ್ 16 (ಉಡುಪಿ ನಗರ): ಮಧ್ಯಾಹ್ನ 2.00 ರಿಂದ ರಾತ್ರಿ 12.00 ರವರೆಗೆ ಉಡುಪಿ ನಗರ ವ್ಯಾಪ್ತಿಯಲ್ಲಿ ಮಾತ್ರ ಮದ್ಯ ಮಾರಾಟ ನಿಷೇಧ.
ಸೆಪ್ಟೆಂಬರ್ 18 (ವಿಸರ್ಜನಾ ಸ್ಥಳಗಳು): ಗಣೇಶ ಮೂರ್ತಿ ವಿಸರ್ಜನೆ ನಡೆಯುವ ವಿವಿಧ ಪೋಲೀಸ್ ಠಾಣಾ ವ್ಯಾಪ್ತಿಗಳಲ್ಲಿ (ಗಂಗೊಳ್ಳಿ, ಕುಂದಾಪುರ ನಗರ ಹಾಗೂ ಕಾಪು ಠಾಣೆ ವ್ಯಾಪ್ತಿಯ ನಿರ್ದಿಷ್ಟ ಗ್ರಾಮಗಳು) ಮಧ್ಯಾಹ್ನ 2.00 ರಿಂದ ರಾತ್ರಿ 12.00 ರವರೆಗೆ ಮದ್ಯ ಮಾರಾಟ ಇರುವುದಿಲ್ಲ.
ಸೂಚನೆ: ನಿಗದಿತ ದಿನ ಮತ್ತು ಸಮಯಗಳಲ್ಲಿ ಜಿಲ್ಲೆಯ ಎಲ್ಲಾ ವೈನ್ಶಾಪ್, ಬಾರ್ ಹಾಗೂ ಮದ್ಯ ಮಾರಾಟ ಮಾಡುವ ಇತರ ಯಾವುದೇ ಸಂಸ್ಥೆಗಳು ಕಡ್ಡಾಯವಾಗಿ ವಹಿವಾಟು ಸ್ಥಗಿತಗೊಳಿಸಬೇಕೆಂದು ಜಿಲ್ಲಾಡಳಿತ ಸ್ಪಷ್ಟಪಡಿಸಿ

