ಮಂಗಳೂರು, ಸೆ.7: ಕಾಞಂಗಾಡ್ನ ಹೊಸದುರ್ಗದಲ್ಲಿರುವ ಭಗವಾನ್ ಶ್ರೀ ನಿತ್ಯಾನಂದಾಶ್ರಮದಲ್ಲಿ ಸೆಪ್ಟೆಂಬರ್ 19ರಂದು ಬೆಳಿಗ್ಗೆ 10.45ರಿಂದ ಮಧ್ಯಾಹ್ನ 1ರವರೆಗೆ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿಯವರ ಅನುಭವ ಕಥನ, ಪುಷ್ಪಪೂಜೆ ಹಾಗೂ ಸತ್ಸಂಗ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಲಿದೆ.
ಮುಂಬೈನ ಸ್ವಾಮಿ ಅವಧೂತಾನಂದರ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಶ್ರೀ ಅವಧೂತಾನಂದ ಸ್ವಾಮೀಜಿಯವರ ಆಧ್ಯಾತ್ಮಿಕ ಜೀವನ, ಅನುಭವಗಳು ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಅಂಗವಾಗಿ ದೀಪ ಪ್ರಜ್ವಲನೆ, ವೇದಪಠಣ, ಪುಷ್ಪಪೂಜೆ, ಸತ್ಸಂಗ ಹಾಗೂ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೆ, ಶ್ರೀ ಅವಧೂತಾನಂದ ಸ್ವಾಮೀಜಿಯವರ ಜೀವನ ಮತ್ತು ಆಧ್ಯಾತ್ಮಿಕ ಸಾಧನೆಗೆ ಸಂಬಂಧಿಸಿದ ವಿಶೇಷ ಚಿತ್ರಣಗಳ ಪ್ರದರ್ಶನವೂ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಶಿವಲಿಂಗ ಸ್ವಾಮೀಜಿ ಅವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಭಕ್ತರು ಹಾಗೂ ಸತ್ಸಂಗೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಕಾರ್ಯಕ್ರಮದ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ ಚಿಂತನೆ, ಸತ್ಸಂಗದ ಮಹತ್ವ ಹಾಗೂ ಶ್ರೀ ಅವಧೂತಾನಂದ ಸ್ವಾಮೀಜಿಯವರ ಸಂದೇಶಗಳನ್ನು ಮತ್ತಷ್ಟು ಪಸರಿಸುವ ಉದ್ದೇಶ ಹೊಂದಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ಸ್ಥಳ: ಶ್ರೀ ನಿತ್ಯಾನಂದಾಶ್ರಮ, ಹೊಸದುರ್ಗ, ಕಾಞಂಗಾಡ್
ದಿನಾಂಕ: ಸೆಪ್ಟೆಂಬರ್ 19, 2026
ಸಮಯ: ಬೆಳಿಗ್ಗೆ 10.45ರಿಂದ ಮಧ್ಯಾಹ್ನ 1ರವರೆಗೆ

ಆಯೋಜಕರು:
ಸ್ವಾಮಿ ಅವಧೂತಾನಂದರ ಟ್ರಸ್ಟ್, ಮುಂಬೈ

