ಮಂಗಳೂರು: ಅಂತರರಾಷ್ಟ್ರೀಯ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.), ಮಂಗಳೂರು ಇದರ ವತಿಯಿಂದ ಆಗಸ್ಟ್ 23ರಂದು ಆದಿತ್ಯವಾರ ಗ್ರ್ಯಾಂಡ್ ಬೇ ಮರಾವೂರು ಇಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ “ಮರಿಯಾಳದ ಮಿನದನ” ಕಾರ್ಯಕ್ರಮ/ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಹೋಟೆಲ್ ಕುಡ್ಲ ಪೆವಿಲಿಯನ್ ಸಭಾಂಗಣದಲ್ಲಿ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆಗಸ್ಟ್ 23ರಂದು ಬೆಳಿಗ್ಗೆ 9 ಗಂಟೆಗೆ ಡಾ. ಅತ್ತೂರು ಸದಾನಂದ ಶೆಟ್ಟಿ ಹಾಗೂ ಪದ್ಮಚಿತ್ತರಂಜನ್ ರೈ ದಂಪತಿಗಳು “ಮರಿಯಾಳದ ಮಿನದನ” ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ರೀಡೆಗಳು ಹಾಗೂ ಸ್ಪರ್ಧೆಗಳು ನಡೆಯಲಿವೆ.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಟ್ರಸ್ಟ್ನ ಸಂಸ್ಥಾಪಕಾಧ್ಯಕ್ಷ ಡಾ. ಅತ್ತೂರು ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಮೋಹನ್ ಆಳ್ವ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳು:
ಶಶಿಧರ ಶೆಟ್ಟಿ ಬರೋಡಾ, ಮುಖ್ಯ ಅತಿಥಿಗಳಾಗಿ ಶ್ರೀ ಪಾದೆ ಅಜಿತ್ ರೈ, ಕರುಣಾಕರ ಎಂ. ಶೆಟ್ಟಿ, ಅಜಿತ್ ಹೆಗ್ಡೆ, ವೇಣುಗೋಪಾಲ ಶೆಟ್ಟಿ ಹಾಗೂ ಲೆಫ್ಟಿನೆಂಟ್ ಎಸ್. ಸಂಜೀವ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ಶ್ರೀ ರಾಜೇಶ್ ಖನ್ನಾ, ಮಹಾಪ್ರಬಂಧಕರು ಹಾಗೂ ವಲಯ ಮುಖ್ಯಸ್ಥರು, ಬ್ಯಾಂಕ್ ಆಫ್ ಬರೋಡಾ, ವಲಯ ಕಚೇರಿ, ಮಂಗಳೂರು ಹಾಗೂ ಶ್ರೀ ಮಂಜುನಾಥ ಆಳ್ವ ತೇವುನಾಡು ಗುತ್ತು ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಶ್ರೀ ಸದಾಶಿವ ಶೆಟ್ಟಿ ಮಂಜನಾಡಿ ಅವರಿಗೆ ಟ್ರಸ್ಟ್ ವತಿಯಿಂದ ನೀಡಲಾಗುವ ಮನೆಯ ಕೀಲಿಯನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಗುವುದು.
ಪೋಸ್ಟಲ್ ಇನ್ಸೂರೆನ್ಸ್ ವತಿಯಿಂದ ಅಪಘಾತ ವಿಮೆಯ ವ್ಯವಸ್ಥೆ ಮಾಡಲಾಗಿದ್ದು, ವಿಮೆಯ ಮೊತ್ತವನ್ನು ಪಾಲಿಸಿದಾರರೇ ಭರಿಸಬೇಕಾಗುತ್ತದೆ. ತಾಲೂಕು ಆರೋಗ್ಯ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣೆಯ ವ್ಯವಸ್ಥೆಯನ್ನೂ ಮಾಡಲಾಗಿದೆ.
ಪೂರ್ವಭಾವಿ ಸಭೆಯಲ್ಲಿ ಟ್ರಸ್ಟ್ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳಾದ ರಾಜಗೋಪಾಲ್ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಮಚಂದ್ರ ಆಳ್ವ, ಪ್ರಸಾದ್ ರೈ ಕಲ್ಲಿಮಾರ್, ಜಗನ್ನಾಥ ಶೆಟ್ಟಿ, ಮಹಿಳಾ ಘಟಕದಿಂದ ವಿಜಯಲಕ್ಷ್ಮೀ ಬಿ. ಶೆಟ್ಟಿ, ಆರತಿ ರಾಮಚಂದ್ರ ಆಳ್ವ ಹಾಗೂ ಮಾಧ್ಯಮ ವಕ್ತಾರ ಮುಲ್ಕಿ ಕರುಣಾಕರ ಶೆಟ್ಟಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ :ಮುಲ್ಕಿ ಕರುಣಾಕರ ಶೆಟ್ಟಿ

