ಹೆಬ್ರಿ, ಆ. 8: ಧನಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸದಸ್ಯರು ಮರುಪಾವತಿಸಿದ ಸಾಲದ ಹಣವನ್ನು ಒಕ್ಕೂಟದ ಖಾತೆಗೆ ಜಮಾ ಮಾಡದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ₹28.19 ಲಕ್ಷ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಕ್ಕೂಟದಲ್ಲಿ ಸುಮಾರು 8 ವರ್ಷಗಳಿಂದ ಮುಖ್ಯ ಪುಸ್ತಕ ಬರಹಗಾರರಾಗಿ (ಮುಖ್ಯ ಬುಕ್ ಕೀಪರ್) ಕಾರ್ಯನಿರ್ವಹಿಸುತ್ತಿದ್ದ ನಂದಿನಿ ಎಂಬವರ ವಿರುದ್ಧ ದೂರು ನೀಡಲಾಗಿದೆ.
ದೂರಿನ ಪ್ರಕಾರ, 2020ರಿಂದ 2026ರವರೆಗೆ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಸಾಲದ ಕಂತು ಹಾಗೂ ಮರುಪಾವತಿ ರೂಪದಲ್ಲಿ ಒಕ್ಕೂಟಕ್ಕೆ ನೀಡಿದ ಹಣವನ್ನು ಸಮರ್ಪಕವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡದೆ, ಎರಡು ಪ್ರತ್ಯೇಕ ಖಾತೆ ಪುಸ್ತಕಗಳು ಹಾಗೂ ರಶೀದಿ ಪುಸ್ತಕಗಳನ್ನು ನಿರ್ವಹಿಸಿ, ವ್ಯತ್ಯಾಸದ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಒಕ್ಕೂಟದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ಸಹಿಗಳನ್ನು ನಕಲು ಮಾಡಿ ದಾಖಲೆಗಳನ್ನು ಸಿದ್ಧಪಡಿಸಿ, ಸದಸ್ಯರಿಂದ ಸಂಗ್ರಹಿಸಲಾದ ಒಟ್ಟು ₹28,19,489 ಹಣವನ್ನು ಸ್ವಂತ ಬಳಕೆಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಮೂಲಕ ಒಕ್ಕೂಟದ ಹಣಕಾಸು ವ್ಯವಹಾರಗಳಲ್ಲಿ ನಂಬಿಕೆ ದ್ರೋಹ, ವಂಚನೆ ಹಾಗೂ ದಾಖಲೆಗಳ ದುರುಪಯೋಗ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಆಧಾರದ ಮೇಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026 ದಾಖಲಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ತನಿಖೆಯ ನಂತರವೇ ಆರೋಪಗಳ ಸತ್ಯಾಸತ್ಯತೆ ಹಾಗೂ ಹಣದ ದುರುಪಯೋಗದ ಸಂಪೂರ್ಣ ವಿವರಗಳು ಸ್ಪಷ್ಟವಾಗಬೇಕಿದೆ
Trending
- Tulunada Rakshana Vedike Urges Reduction in Vehicle Entry and Parking Charges at Mangaluru Airport
- ದೇರಳಕಟ್ಟೆ ಮೆಡಿಕಲ್ ಕಾಲೇಜು ಆವರಣದಿಂದ ವಿದ್ಯಾರ್ಥಿನಿ ಬಲವಂತವಾಗಿ ಕರೆದೊಯ್ದ ಆರೋಪ! ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ – ಯುವತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತಂದರೆ ಕಾನೂನು ಕ್ರಮ: ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ
- ಯಕ್ಷಗಾನ ತಾಳಮದ್ದಳೆ ಸಪ್ತಾಹ–2026: ನವೆಂಬರ್ 22ರಿಂದ 28ರವರೆಗೆ 14ನೇ ವರ್ಷದ ನುಡಿಹಬ್ಬ – ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ
- ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ: 31 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್ ನೇಮಕ – ಬೆಂಗಳೂರಿಗೆ ನೂತನ ಪೊಲೀಸ್ ಆಯುಕ್ತರಾಗಿ ಆರ್. ಹಿತೇಂದ್ರ
- ಮಂಗಳೂರಿನಲ್ಲಿ ‘ತೌಳವ ಸಹಕಾರಿ ಪ್ರಶಸ್ತಿ–2026’ ಪ್ರದಾನ ಸಮಾರಂಭ; ಸಹಕಾರಿಕ್ಷೇತ್ರದ ಸಾಧಕರಿಗೆ ಗೌರವ
- ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಿತ್ತರಂಜನ್ ಬೋಳಾರ್ ಪುನರಾಯ್ಕೆ ಉಪಾಧ್ಯಕ್ಷರಾಗಿ ರಮಾನಾಥ ಸನಿಲ್ ಅವಿರೋಧ ಆಯ್ಕೆ
- ನವೆಂಬರ್ 17ರಂದು ಮಂಗಳೂರಿನ ತುಳುಭವನದಲ್ಲಿ ಸಹಕಾರಿ ಧುರೀಣ ಜಾಕೆ ಮಾಧವ ಗೌಡರಿಗೆ ‘ತೌಳವ ಸಹಕಾರಿ ಮಾಣಿಕ್ಯ’ ಹಾಗೂ ರಾಜ್ಯದ ಹಲವಾರು ಸಹಕಾರಿ ಧುರೀಣರಿಗೆ ತೌಳವ ಸಹಕಾರಿ ಪ್ರಶಸ್ತಿ ಪ್ರದಾನ ಅದ್ದೂರಿ ಸಮಾರಂಭ
- ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನ.15ರಂದು ಕೊಲ್ಲೂರಿಗೆ, 16ರಂದು ಕಾಪು ಮಾರಿಗುಡಿ ಭೇಟಿ

