ಕಾರವಾರ: ಕರ್ನಾಟಕದ ಭೂಮಾಪನ ಇಲಾಖೆಯಲ್ಲಿ ಹಲವು ತೊಂದರೆಗಳಿಂದ ಸರ್ವೆ ಕಾರ್ಯಗಳು ನಿಂತು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಭೂಮಾಪಕರಲ್ಲಿ ಅಸಮಾಧಾನ ಹೆಚ್ಚಾಗಿದೆ.
ಕಳೆದ ಫೆಬ್ರವರಿ 2026ರಿಂದ ರಾಜ್ಯದಾದ್ಯಂತ ಸುಮಾರು 6,000 ಪರವಾನಗಿ ಭೂಮಾಪಕರು (Licensed Surveyors) ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಭೂಮಿಯ ಅಳತೆ, ದಾಖಲೆ ತಿದ್ದುಪಡಿ ಸೇರಿದಂತೆ ಹಲವಾರು ಪ್ರಮುಖ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಈ ಮುಷ್ಕರದ ನೇರ ಪರಿಣಾಮವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸುಮಾರು 4,87,272 ಭೂಮಾಪನ ಅರ್ಜಿಗಳು ಬಾಕಿ ಉಳಿದಿವೆ ಎಂಬ ಮಾಹಿತಿ ಲಭ್ಯವಾಗಿದೆ.
ದಶಕಗಳಿಂದ ಇಲಾವರಿ ಸೇವೆಯಲ್ಲಿ ನಿರತರಾಗಿದ್ದ ಈ ಭೂಮಾಪಕರು ಇದೀಗ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿಗೆ ತಲುಪಿದ್ದಾರೆ. ಸರಿಯಾದ ವೇತನ ವ್ಯವಸ್ಥೆ, ಕೆಲಸದ ಭದ್ರತೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ.
ಇಲ್ಲಿವರೆಗೆ ಸರ್ಕಾರದಿಂದ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟವಾಗದೇ ಇರುವುದರಿಂದ ಭೂಮಾಪಕರ ಅಸಮಾಧಾನ ಮತ್ತಷ್ಟು ಹೆಚ್ಚುತ್ತಿದೆ. 2002ರಿಂದ 2024ರವರೆಗೆ ಹಲವು ಭರವಸೆಗಳು ನೀಡಲಾಗಿದ್ದರೂ, ಅವು ಕಾರ್ಯರೂಪಕ್ಕೆ ಬಂದಿಲ್ಲವೆಂದು ಭೂಮಾಪಕರು ಆರೋಪಿಸಿದ್ದಾರೆ
ಬೆಂಗಳೂರು ಇವಾಗೆ ಕನಿಷ್ಠ ಸೇವಾ ಭದ್ರತೆಯಾಗಿ ಅಧವಾ ಮಾಸಿಕ ಸಂಬಳವಾಗಿ ಎಲ್ಲದಿರಬೇಕು ಎಂಬುದನ್ನು ರಾಜ್ಯ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಅನಿವಾರ್ಯವಾಗಿದೆ. 2002 ರಿಂದ 2024 ರವರೆಗೆ ನಡೆದ ವಿವಿಧ ಬ್ಯಾಚ್ಗಳ ಭೂಮಾಪಕರು ಇಂದು ಒಂದೇ ವೇದಿಕೆಯಲ್ಲಿ ನಿಂತು, “ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೌಲಭ್ಯ” ನೀಡುವಂತೆ ಆಗ್ರಹಿಸಿದ್ದಾರೆ. ಸರ್ಕಾರಿ ವಲಯಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ತಂದುಕೊಡುವ ಈ ವೃತ್ತಿಗೆ ಕನಿಷ್ಠ ಕಾಳಜಿ ತೋರಬೇಕು ಎಂದು ಆಕ್ರೋಶ ವ್ಯಕ್ತವಾಗಿದೆ.
ಆರ್.ವಿ. ದೇಶಪಾಂಡೆಯವರಿಗೆ ಮನವಿ ಸಲ್ಲಿಕೆ:
ಈ ಹಿನ್ನೆಲೆ ನಡೆಯುತ್ತಿರುವ ಹೋರಾಟಕ್ಕೆ ಹೊಸ ಬಲ ಬಂದಿದೆ. ಉನ್ನತ ಕನ್ನಡ ಜಿಲ್ಲಾ ಪರವಾನಗಿ ಭೂಮಾಪಕರ ಸಂಘದ ಅಧ್ಯಕ್ಷರಾದ ಸುರೇಶ್ ತಲಗೆರಿ ಅವರು ಹಿರಿಯ ನಾಯಕರು ಹಾಗೂ ಆದಳಿತ ಸುಧಾರಣಾ ಆಯೋಗದ (ARC) ಅಧ್ಯಕ್ಷರಾದ ಮಾನ್ಯ ಆರ್.ವಿ. ದೇಶಪಾಂಡೆ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ವಿವರಿಸಿ, ಭೂಮಾಪಕರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಲೈಸೆನ್ಸ್ ಸರ್ವೇಯರ್ಗಳು ಖಾಯಂ ನೇಮಕಾತಿ, ಸೇವಾ ಭದ್ರತೆ, ಸಮಾನ ವೇತನ ಮತ್ತು ಪಿಎಫ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಗತ್ಯತೆಯನ್ನು ಕುರಿತಾಗಿ ವಿವರವಾಗಿ ಚರ್ಚಿಸಲಾಯಿತು. ಇದಕ್ಕೆ ಸರ್ಕಾರ ತಕ್ಷಣವಾಗಿ ಸ್ಪಂದಿಸಬೇಕು ಎಂದು ದರಪಂಡೆಯವರು, ಈ ಕುರಿತು ಶೀಘ್ರವೇ ಮುಖ್ಯಮಂತ್ರಿಗಳಿಗೆ ಚರ್ಚಿಸಿ ನ್ಯಾಯ ಕೊಡಿಸಬೇಕೆಂದು ಭರವಸೆ ನೀಡಿದರು.
ಫೆಬ್ರವರಿಯಿಂದ ಇವರೆಗೆ ಒಂದು ಕಡತವೂ ವಿಲೇವಾರಿಯಾಗದ ಕಾರಣ, ಜಮೀನು ಖರೀದಿ-ಮಾರಾಟ ಮಾಡುವವರು ಮತ್ತು ಬ್ಯಾಂಕ್ ಸಾಲಕ್ಕಾಗಿ ನಕ್ಷೆ ನಿರೀಕ್ಷಿಸುತ್ತಿರುವ ಲಕ್ಷಾಂತರ ರೈತರು ಕಚೇರಿಗಳಿಗೆ ಅಲೆಯುವಂತಾಗಿದೆ. ಹಬ್ಬದ ಸಂದರ್ಭದಲ್ಲಿ, ತಕ್ಷಣ ಪ್ರಾಂತ್ಯ 11E ನಕ್ಷೆಗಾಗಿ ತಹಶೀಲ್ದಾರ್ ಕಚೇರಿಗಳಲ್ಲಿ ಸಿಗತೊಡಗಿರುವುದರಿಂದ ರಾಜ್ಯದ ಕೃಷಿ ಮತ್ತು ರಿಯಲ್ ಎಸ್ಟೇಟ್ ವಲಯದ ಮೇಲೆ ದೊಡ್ಡ ಹೊಡೆತ ನೀಡಿದೆ. ಸುಮಾರು 4.87 ಲಕ್ಷಕ್ಕೂ ಅಧಿಕ ಅರ್ಜಿಗಳು ಬಾಕಿ ಇರುವುದರಿಂದ ಕೆಲಸ ಅಂಕಿ-ಅಂಶದಲ್ಲಿ ಇದು ಲಕ್ಷಾಂತರ ಕುಟುಂಬಗಳ ಆರ್ಥಿಕ ಹಕ್ಕುಗಳಿಗೆ ವಿಳಂಬದ ಕಾರಣವಾಗಿದೆ.
ಇದರಿಂದ ಸಾರ್ವಜನಿಕ ಭೂಮಾಪನ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
