10 ರ ಹರೆಹದ ಸನ್ನಿಧಿ ಕಾಶಕೋಡಿ ಕನ್ನಡ ತುಳು ಅಷ್ಟೇ ಅಲ್ಲದೆ ಮಲಯಲಂ ಇಂಗ್ಲಿಷ್ ಹಿಂದಿ ಹೀಗೆ ಆರುಭಾಷೆಗಳಲ್ಲಿ ಮತದಾನ ಜಾಗೃತಿ ನಡೆಸಿದ್ದು ಉಳಿದಂತೆ ತುಳು ಕನ್ನಡ ಭಾಷೆಗಳಲ್ಲಿ ಆರೋಗ್ಯ ಜಾಗೃತಿ, ಪರಿಸರಸ್ನೇಹಿ ಹಬ್ಬ ಆಚರಣೆ ಕುರಿತಂತೆ ಜಾಗೃತಿ ಮೂಡಿಸಿ ಎಲ್ಲರ ಪ್ರಸಂಶೆಗೆ ಪಾತ್ರಳಾಗಿರುತ್ತಾಳೆ. ಬಾಲಕಿಯ
ವಿನೂತನ ರೀತಿಯಲ್ಲಿ ಪರಿಸರ ಸ್ನೇಹಿ ಗಣಪ. ಸ್ವಚ್ಛತೆಯ ಅಭಿಯಾನ ಹೀಗೆ ಹಲವು ಜಾಗೃತಿಯನ್ನು ಮನೆ ಮನೆಗೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಆರಿವು ಮೂಡಿಸಿದ ಈ ಕೆಲಸ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್
ಗೃಹ ಮಂತ್ರಿ ಡಾ. ಪರಮೇಶ್ವರ್ ಜಿ.
ಕೇಂದ್ರ ರೈಲ್ವೆ ಖಾತೆಯ ಸಹಾಯಕ ಸಚಿವರಾದ ಸೋಮಣ್ಣ
ಸ್ಕೌಟ್ & ಗೈಡ್ಸ ಸಂಸ್ಥೆಯ ರಾಜ್ಯ ಉಸ್ತುವಾರಿಯಾದ ಪಿ. ಜಿ. ಆರ್ ಸಿಂಧ್ಯಾ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಸಂಸದರಾದ ಬ್ರಿಜೇಶ್ ಚೌಟ
ಗೌರವಿಸಿದರು. ಹಾಗೆಯೇ ದಿನಾಂಕ 08-12-2024 ರಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೇಶ್ ಶೆಟ್ಟಿ ಜಪ್ಪು ರವರು ತುಳುನಾಡ ರಕ್ಷಣಾ ವೇದಿಕೆ ಕೇಂದ್ರ ಕಚೇರಿಯಲ್ಲಿ ತುಳುನಾಡ ಶಾಲನ್ನು ಹಾಕಿ ಹೂಗುಚ್ಛ ನೀಡಿ ಗೌರವಿಸಿದರು ಹಾಗೂ ಸನ್ನಿಧಿಗೆ ಬೆಂಬಲವನ್ನು ವ್ಯಕ್ತಪಡಿಸಿ ಬಾಲಕಿಯ ಮುಂದಿನ ಜೀವನ ದಲ್ಲಿ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು. ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸನ್ನಿಧಿ ಕಶೆಕೋಡಿ ನನಗೆ ಹಲವಾರು ಸನ್ಮಾನಗಳು ದೊರೆತ್ತಿದೆ. ಆದರೆ ಇಂದು ತುಳು ಸಾಲು ಹಾಕಿ ನೀಡಿದ ಸನ್ಮಾನ ತುಂಬಾ ಸಂತೋಷ ತಂದಿದೆ. ಹಾಗೂ ತಮ್ಮ ಆಶೀರ್ವಾದ ಸಹಕಾರ ನನ್ನ ಮೇಲೆ ಇರಲಿ ಎಂದು ಮುಗ್ದತೆಯಿಂದ ಮಾತನಾಡಿದಳು.