ಉಪ್ಪಿನಂಗಡಿ: ಮನೆಯ ಶೆಡ್ಡ್ನಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಕ್ಕೆ ಯಾರೋ ಕಿಡಿಕೇಡಿಗಳು ಬೆಂಕಿಹಚ್ಚಿ ನಾಶಪಡಿಸಿದ ಘಟನೆ ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿ ನಡೆದಿದೆ. ಬರಿಮಾರು ಗ್ರಾಮ, ಬಂಟ್ವಾಳ ನಿವಾಸಿ ಲಿಖಿತ್ ಕುಮಾರ್ ಎಂಬವರು ದಿನಾಂಕ: 06-01-2024 ರಂದು ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿರುವ ತನ್ನ ಹೆಂಡತಿ ಮನೆಗೆ ಬಂದಿದ್ದು, ರಾತ್ರಿ ವೇಳೆಗೆ ಲಿಖಿತ್ ರ ಭಾವ ಕೀರ್ತನ್ ಎಂಬವರು ಮನೆಯಿಂದ ಹೊರಗೆ ಹೋದಾಗ, ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ರಸ್ತೆಯಲ್ಲಿ, ಮೋಟಾರು ಸೈಕಲ್ವೊಂದು ಬೆಂಕಿಯಿಂದ ಉರಿಯುತ್ತಿರುವುದನ್ನು ಕಂಡು ಮನೆಯವರಲ್ಲಿ ತಿಳಿಸಿದ ವೇಳೆ, ಮನೆಯಿಂದ ಹೊರಗೆ ಹೋಗಿ ನೋಡಿದಾಗ, ಹೆಂಡತಿಯ ಮನೆಯ ಶೆಡ್ಡ್ನಲ್ಲಿ ನಿಲ್ಲಿಸಿದ್ದ, ಕೆಎ70-ಜೆ-7206 ನೇ ದ್ವಿಚಕ್ರವಾಹವನ್ನು ಯಾರೋ ವ್ಯಕ್ತಿಗಳು ಅಲ್ಲಿಂದ ಕೊಂಡು ಹೋಗಿ, ಮನೆಯಿಂದ 100 ಮೀಟರ್ ದೂರದಲ್ಲಿ ರಸ್ತೆಯಲ್ಲಿ ಬೆಂಕಿಹಚ್ಚಿ ಸುಟ್ಟು ನಾಶಪಡಿಸಿದ್ದು, ಈ ವಾಹನದ ದಾಖಲಾತಿಗಳು ಕೂಡಾ ಇದೇ ವಾಹನದಲ್ಲಿದ್ದು, ಸುಟ್ಟು ಹೋಗಿದ್ದು, ದ್ವಿ ಚಕ್ರ ವಾಹನದ ಅಂದಾಜು ಮೌಲ್ಯ ರೂ 85,000/- ಆಗಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:05/2024 ಕಲಂ: 447.435 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Trending
- ತುಳುನಾಡ ರಕ್ಷಣಾ ವೇದಿಕೆಯ ದುಬೈ ಘಟಕದ ಅಧ್ಯಕ್ಷ, ತುಳು ಕಲಾವಿದ ಅಶೋಕ್ ಬೈಲೂರು ಅವರಿಗೆ ಸನ್ಮಾನ ತುಳು ಭಾಷೆ, ಕಲೆ ಮತ್ತು ಸಂಸ್ಕೃತಿಯ ಉಳಿವಿನಲ್ಲಿ ಕಲಾವಿದರ ಪಾತ್ರ ಮಹತ್ವದ್ದು – ಫ್ರ್ಯಾಂಕಿ ಡಿಸೋಜ ಕೊಳಲಗಿರಿ
- ಜನಪರ ಸೇವೆಗೆ ಫ್ರ್ಯಾಂಕಿ ಡಿಸೋಜ ಅವರ ಕೊಡುಗೆ ಶ್ಲಾಘನೀಯ: ಯೋಗೀಶ್ ಶೆಟ್ಟಿ ಜೆಪ್ಪು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷರ ಹುಟ್ಟುಹಬ್ಬ ಆಚರಣೆ; ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಂದ ಶುಭಾಶಯ
- ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿ ಮತ್ತು ಮಸ್ಜಿದ್ ನ್ನೂರ್, ಕಾರ್ನಾಡ್ ಇದರ ಅಧ್ಯಕ್ಷರಾಗಿ ಮೂಲ್ಕಿ ಇಕ್ಬಾಲ್ ಅಹ್ಮದ್ ಇಬ್ರಾಹೀಮ್ ಆಯ್ಕೆ
- Yogish Shetty Jeppu Leads Karnataka Delegation at National Convention Calls for Organised Fight to Protect Consumer Rights – Delivers an Effective Speech on the National Platform
- ತಂದೆಯ ಅನುಮಾನಾಸ್ಪದ ಸಾವು ಪ್ರಕರಣ: ಎರಡು ತಿಂಗಳ ಬಳಿಕ ಸಮಾಧಿಯಿಂದ ದೇಹದ ಅವಶೇಷ ಹೊರತೆಗೆದು ಪರೀಕ್ಷೆ ಆಸ್ತಿ ವರ್ಗಾವಣೆ, ಕಿರುಕುಳ ಹಾಗೂ ಹತ್ಯೆಯ ಆರೋಪ; ಸಾವಿನ ಸತ್ಯಾಂಶ ಪತ್ತೆಗೆ ಪೊಲೀಸರ ತನಿಖೆ ಚುರುಕು
- ಹಿರಿಯ ನಟ ನಾನಾ ಪಾಟೇಕರ್ ನಿಧನ ಹೃದಯ ಸ್ತಂಭನದಿಂದ 75ನೇ ವಯಸ್ಸಿನಲ್ಲಿ ಅಂತ್ಯ – ಭಾರತೀಯ ಚಿತ್ರರಂಗಕ್ಕೆ ಅಪಾರ ನಷ್ಟ
- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
