ಉಪ್ಪಿನಂಗಡಿ: ಮನೆಯ ಶೆಡ್ಡ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಕ್ಕೆ ಯಾರೋ ಕಿಡಿಕೇಡಿಗಳು ಬೆಂಕಿಹಚ್ಚಿ ನಾಶಪಡಿಸಿದ ಘಟನೆ ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿ ನಡೆದಿದೆ. ಬರಿಮಾರು ಗ್ರಾಮ, ಬಂಟ್ವಾಳ ನಿವಾಸಿ ಲಿಖಿತ್ ಕುಮಾರ್ ಎಂಬವರು ದಿನಾಂಕ: 06-01-2024 ರಂದು ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿರುವ ತನ್ನ ಹೆಂಡತಿ ಮನೆಗೆ ಬಂದಿದ್ದು, ರಾತ್ರಿ ವೇಳೆಗೆ ಲಿಖಿತ್ ರ ಭಾವ ಕೀರ್ತನ್ ಎಂಬವರು ಮನೆಯಿಂದ ಹೊರಗೆ ಹೋದಾಗ, ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ರಸ್ತೆಯಲ್ಲಿ, ಮೋಟಾರು ಸೈಕಲ್‌ವೊಂದು ಬೆಂಕಿಯಿಂದ ಉರಿಯುತ್ತಿರುವುದನ್ನು ಕಂಡು ಮನೆಯವರಲ್ಲಿ ತಿಳಿಸಿದ ವೇಳೆ, ಮನೆಯಿಂದ ಹೊರಗೆ ಹೋಗಿ ನೋಡಿದಾಗ, ಹೆಂಡತಿಯ ಮನೆಯ ಶೆಡ್ಡ್‌ನಲ್ಲಿ ನಿಲ್ಲಿಸಿದ್ದ, ಕೆಎ70-ಜೆ-7206 ನೇ ದ್ವಿಚಕ್ರವಾಹವನ್ನು ಯಾರೋ ವ್ಯಕ್ತಿಗಳು ಅಲ್ಲಿಂದ ಕೊಂಡು ಹೋಗಿ, ಮನೆಯಿಂದ 100 ಮೀಟರ್ ದೂರದಲ್ಲಿ ರಸ್ತೆಯಲ್ಲಿ ಬೆಂಕಿಹಚ್ಚಿ ಸುಟ್ಟು ನಾಶಪಡಿಸಿದ್ದು, ಈ ವಾಹನದ ದಾಖಲಾತಿಗಳು ಕೂಡಾ ಇದೇ ವಾಹನದಲ್ಲಿದ್ದು, ಸುಟ್ಟು ಹೋಗಿದ್ದು, ದ್ವಿ ಚಕ್ರ ವಾಹನದ ಅಂದಾಜು ಮೌಲ್ಯ ರೂ 85,000/- ಆಗಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:05/2024 ಕಲಂ: 447.435 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
©2021 Tulunada Surya | Developed by CuriousLabs