ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತೆ ಭಾರಿ ಪ್ರಮಾಣದಲ್ಲಿ ಚಿನ್ನದ ಬೇಟೆಯಾಡಿದ್ದಾರೆ.ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಅಬುಧಾಬಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನ್ನಲ್ಲಿ ಈ ಬೃಹತ್ ಪ್ರಮಾಣದ ಅಕ್ರಮ ಚಿನ್ನ ದೊರೆತಿದೆ. ಅನುಮಾನಾಸ್ಪದ ಚಲನವಲನದ ಆಧಾರದ ಮೇಲೆ ಆತನನ್ನು ವಿಚಾರಣೆ ನಡೆಸಿ ಅವರ ದೇಹವನ್ನು ಪರೀಕ್ಷಿಸುವಾಗ, ಅವರ ಸೊಂಟದ ಪ್ರದೇಶದಲ್ಲಿ ಬೀಪ್ ಶಬ್ದ ಹೊರಹೊಮ್ಮಿದೆ. ಪೇಸ್ಟ್ ರೂಪದಲ್ಲಿ ಚಿನ್ನವನ್ನು ಹೊಂದಿರುವ 5 ಅಂಡಾಕಾರದ ಆಕಾರದ ಕ್ಯಾಪ್ಸೂಲ್ ಗಳನ್ನು ಅವನ ಗುದನಾಳದಲ್ಲಿ ಮರೆಮಾಡಿ ಸಾಗಾಟ ಮಾಡುತ್ತಿರುವುದು ಬಯಲಾಗಿದ್ದು ಆತನಿಂದ ವಶಕ್ಕೆ ಪಡೆಯಲಾಗಿದೆ. ಇದು 24 ಕ್ಯಾರೆಟ್ ಶುದ್ಧತೆಯ ಚಿನ್ನವಾಗಿದ್ದು 1,579.000 ಗ್ರಾಂ ತೂಕ ಹೊಂದಿದೆ. ಇದರ ಮೌಲ್ಯ ಸುಮಾರು ರೂ. 98,68,750 ಆಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.
Trending
- ಉಳ್ಳಾಲ: ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಅಟೋ ಚಾಲಕ ಸೇರಿ ಮೂವರ ಬಂಧನ
- ಪುತ್ತೂರು “ಲೋಕಾಯುಕ್ತ ಜನ ಸಂಪರ್ಕ ಸಭೆ
- ಕಾಂತರಾಜ್ ಆಯೋಗದಿಂದ ಪರಿಶಿಷ್ಟ ಸಮುದಾಯಗಳ ವಿರುದ್ಧ ಸಂವಿಧಾನ ವಿರೋಧಿ ಷಡ್ಯಂತ್ರ – ಲೋಲಾಕ್ಷ
- ಕಿರಣಚಂದ್ರ ರೈ.ಬಿ. ಇವರಿಗೆ ಡಾಕ್ಟರೇಟ್ ಪದವಿ
- ತುಳುನಾಡ್ ಕಾನ್ಕ್ಲೇವ್ ಎಂಬ ತುಳುವಿನ ಅದ್ಭುತ ಕಾರ್ಯಕ್ರಮ
- ಮಂಗಳೂರು ಮತ್ತು ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ , ರಕ್ತದಾನ ಸಪ್ತಾಹ ಆಯೋಜನೆ
- ಎಪ್ರಿಲ್ 14, ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಡಾ. ಬಿ.ಆರ್ . ಅಂಬೇಡ್ಕರ್ ಜಯಂತಿ
- ಉಳ್ಳಾಲದಲ್ಲಿ ಸಮಗ್ರ ಆರೋಗ್ಯ ವ್ಯವಸ್ಥೆ: ಸ್ಪೀಕರ್ ಯು.ಟಿ. ಖಾದರ್