ತಲಪಾಡಿ : ಭ್ಯಾರತಿ ಕವಿ, ಸಂಸ್ಕೃತಜ್ಞ ಹಾಗೂ ನಿವೃತ್ತ ಪ್ರಾಂಶುಪಾಲರಾದ ಶ್ರೀ ಸುಬ್ಬ ಪಕ್ಕಳ ಪಂಜಾಳ (80) ಅವರು ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾದರು.
ತಲಪಾಡಿಯ ಕಾರಂತರ ಪಾಲು ಮನೆಯವರಾಗಿ ಪ್ರಸಿದ್ಧರಾಗಿದ್ದ ಶ್ರೀ ಪಂಜಾಳ ಅವರು, ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದು, ನಂತರ ಶಿಕ್ಷಕರಾಗಿ ಹಾಗೂ ಪ್ರಾಂಶುಪಾಲರಾಗಿ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದರು.
1976 ರಿಂದ 1981ರವರೆಗೆ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ (ಈಗಿನ ಪಿ.ಎ. ಕಾಲೇಜು) ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು, ಬಳಿಕ ಬೆಂಗಳೂರು ಸರ್ಕಾರಿ ಕಾಲೇಜಿನಲ್ಲಿ ಮುಖ್ಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ತಲಪಾಡಿ–ದೇವಿಪುರ ಪರಿಸರದಲ್ಲಿ ಹಿರಿಯ ಶಿಕ್ಷಕರಾಗಿ ಗುರುತಿಸಿಕೊಂಡಿದ್ದ ಅವರು, ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಜೀವನಕ್ಕೆ ದಾರಿ ತೋರಿದವರು. ನಿವೃತ್ತಿಯ ನಂತರವೂ ವಿವಿಧ ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳೊಂದಿಗೆ ತಲೆ ಸಂಯೋಜಕರಾಗಿ ಕಾರ್ಯನಿರ್ವಹಿಸಿ, ಉಚಿತ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡುತ್ತಿದ್ದರು.
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅನೇಕ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದ ಅವರು, ತಮ್ಮ ಜೀವಿತಾವಧಿಯಲ್ಲೇ ದೇಹದಾನ ಮಾಡುವ ಕುರಿತು ಕರಾರು ಬರೆದು, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾನ ಮಾಡಿರುವುದು ಗಮನಾರ್ಹವಾಗಿದೆ.
ಮೃತರ ಅಂತಿಮ ಯಾತ್ರೆ ಅವರ ಕೋರಿಕೆಯಂತೆ ಪಿ.ಎ. ಕಾಲೇಜು ಸಮೀಪದ ಅವರ ಸ್ವಂತ ಮನೆಯಿಂದ ಇಂದು ಸಂಜೆ 5.30 ಗಂಟೆಗೆ ನೆರವೇರಲಿದೆ.
ಅವರ ನಿಧನದಿಂದ ಹಾರೋ ವಿಧದ ಸಮುದಾಯಕ್ಕೆ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
Trending
- ಬೆಂಗಳೂರು : ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಚೇರ್ಮೆನ್ ಸಿಜೆ ರಾಯ್ ಆತ್ಮಹತ್ಯೆ – ಉದ್ಯಮ ಲೋಕಕ್ಕೆ ಆಘಾತ
- ಸಂಪೂರ್ಣ ಶ್ರೀ ದೇವಿ ಮಹಾತ್ಮೆ, ಯಕ್ಷೋತ್ಸವ – ಆಪ್ತಮಿತ್ರ ಬಳಗದ ಸೇವಾರ್ಥವಾಗಿ ಫೆಬ್ರವರಿ 1 ಆದಿತ್ಯವಾರ ಕೊಡಗು:ಮೂರ್ನಾಡು ನಲ್ಲಿ ಯಕ್ಷಗಾನ ಕಾರ್ಯಕ್ರಮ
- ಶ್ರೀ ಸುಬ್ಬ ಪಕ್ಕಳ ಪಂಜಾಳ (80) ಸ್ವಗೃಹದಲ್ಲಿ ನಿಧನ
- ಮಂಗಳೂರು ದಸರಾ ಆಚರಣೆಗೆ ರೂ.5 ಕೋಟಿ ವಿಶೇಷ ಅನುದಾನ ಘೋಷಿಸಬೇಕೆಂದು ಮಂಗಳೂರು ಶಾಸಕ ಡಿ. ವೇದವ್ಯಾಸ ಕಾಮತ್ ಮುಖ್ಯಮಂತ್ರಿಗೆ ಮನವಿ
- ಉಡುಪಿ ಸಾಸ್ತಾನ ಟೋಲ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ
- BREAKING NEWS – ಮಹಾರಾಷ್ಟ್ರದಲ್ಲಿ ಭೀಕರ ವಿಮಾನ ದುರ್ಘಟನೆ: ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಎಲ್ಲಾ ಯಾತ್ರಿಕರ ದುರ್ಮರಣ
- ಬಜಗೋಳಿ: ಧರ್ಮಶಾಲೆ ತೀರ್ಥದ ಮೂರನೇ ವಾರ್ಷಿಕೋತ್ಸವ ಭಕ್ತಿಭಾವದಿಂದ ನೆರವೇರಿತು
- ಕೋಡಿ ಬೇಂಗ್ರೇ ಡೆಲ್ಟಾ ಬೀಚ್ ದುರಂತ : ಪ್ರವಾಸೋದ್ಯಮದ ಹೆಸರಿನಲ್ಲಿ ಮಾನವ ಜೀವಗಳೊಂದಿಗೆ ಆಟವಾಡುವ ನಿರ್ಲಕ್ಷ್ಯಕ್ಕೆ ತೆರೆ ಎಳೆಯಬೇಕು — ತುಳುನಾಡ ರಕ್ಷಣಾ ವೇದಿಕೆ ಆಗ್ರಹ

