ಉಡುಪಿ :ರಜತ ಸಂಭ್ರಮದಲ್ಲಿರುವ ಯುವ ವಿಚಾರ(ರಿ) ಉಪ್ಪೂರು ಕೊಳಲಗಿರಿ ಗೆ 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕಳೆದ 25 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಧಾರ್ಮಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುವುದನ್ನು ಗುರುತಿಸಿ “ಸಾಮಾಜಿಕ ಸೇವೆ” ವಿಭಾಗದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ರವರು ನಮ್ಮ ಅಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿಯವರಿಗೆ ಪ್ರಧಾನ ಮಾಡಿದರು.

ಜಿಲ್ಲಾಧಿಕಾರಿಯವರಾದ ಶ್ರೀಮತಿ ಸ್ವರೂಪ ಟಿ.ಕೆ., ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ SP ಶ್ರೀ ಹರಿರಾಮ್ ಶಂಕರ್, ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್, ರಾಜಕೀಯ ಮುಖಂಡರಾದ ರಮೇಶ್ ಕಾಂಚನ್, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಎಂ.ಎ ಗಪೂರ್, ಅಶೋಕ್ ಕೊಡವೂರು, ದಿನಕರ್ ಹೇರೂರು, ಪ್ರಸಾದ್ ರಾಜ್ ಕಾಂಚನ್, ಮುಂತಾದವರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉಪಸ್ಥಿತಿತರಿದ್ದರು.

ಯುವ ವಿಚಾರ ವೇದಿಕೆಯು ಪ್ರಮುಖವಾಗಿ ಹಡಿಲು ಭೂಮಿ ಕೃಷಿ, ಉಚಿತ ರೇಬೀಸ್ ಲಸಿಕಾ ಶಿಬಿರ, ಪರೀಕ್ಷಾ ಪೂರ್ವಭಾವಿ ಶಿಬಿರ, ರಕ್ತದಾನ, ಶ್ರಮದಾನ, ಮಳೆನೀರು ಕೊಯ್ಲು, ಪಲ್ಸ್ ಪೋಲಿಯೋ ಸ್ವಯಂ ಸೇವಕರಾಗಿ ಭಾಗವಹಿಸುವಿಕೆ, ರಂಗ ತರಬೇತಿ, ಆರೋಗ್ಯ ತಪಾಸಣಾ ಶಿಬಿರ, ಆದಾರ್ ತಿದ್ದುಪಡಿ ಕಾರ್ಯಾಗಾರ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸದಾಶಿವ, ಉಪಾಧ್ಯಕ್ಷರಾದ ಶ್ರೀ ಸುಕೇಶ್, ಕೋಶಾಧಿಕಾರಿ ಅಶೋಕ್, ಯೋಗೀಶ್, ರವೀಂದ್ರ ಕುಮಾರ್, ದಿನೇಶ್ ಶೆಟ್ಟಿ, ಶ್ರೀಮತಿ ಶಕುಂತಲಾ ಸುಕೇಶ್, ರಮೇಶ್ ಕರ್ಕೇರಾ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು. ಪ್ರಶಸ್ತಿ ಸ್ವೀಕರಿಸಿದ ನಂತರ ಸಂಜೆ ಪ್ರಶಸ್ತಿ ಸ್ವೀಕಾರಕ್ಕೆ ಕಾರಣೀಕರ್ತರಾದ ದಾನಿಗಳು, ಮಾರ್ಗದರ್ಶಕರು, ಅಭಿಮಾನಿಗಳು ಹಾಗೂ ಊರ ಪರವೂರ ಪ್ರೋತ್ಸಾಹಕರಿಗೆ ಕೃತಜ್ಞತೆ ಸಲ್ಲಿಸಲು ಸರಳ ಕೃತಜ್ಞತಾ ಮೆರವಣಿಗೆ ಮೂಲಕ ವೇದಿಕೆ ಕಛೇರಿಗೆ ಪ್ರಶಸ್ತಿಯನ್ನು ಸಂಭ್ರಮದಿಂದ ತರಲಾಯಿತು.
ಅತಿಥಿ ರೋಯಲ್ ರತ್ನಾಕರ್ ಡಿ ಶೆಟ್ಟಿ ರವರು ಚಾಲನೆ ನೀಡಿ ಜಯಪ್ರಕಾಶ್ ಮಾಸ್ಟರ್ ಬಾಲಕೃಷ್ಣ ಶೆಟ್ಟಿ ನರ್ನಾಡು ಉಪಸ್ಥಿತರಿದ್ದರು.
ಮೆರವಣಿಗೆಗೆ ಶಿವಪ್ರಸಾದ್ ಶೆಟ್ಟಿ ತೆರೆದ ವಾಹನ ನೀಡುವ ಮೂಲಕ
ಸುನಿಲ್ ಶೆಟ್ಟಿ, ಆಶೀಷ್ ಶೆಟ್ಟಿ, ಸಂದೀಪ್ ಶೆಟ್ಟಿ ಹಾರಾಡಿ, ಡೆಂಜಿಲ್ ಅಮ್ಮುಂಜೆ, ಸಂಪೂರ್ಣ ಸಹಕಾರ ನೀಡಿದರು.



