ತುಳುನಾಡ ರಕ್ಷಣಾ ವೇದಿಕೆ (ರಿ) ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷರು ಯೋಗಿಶ್ ಶೆಟ್ಟಿ ಜಪ್ಪು ಅವರು,
ಬೆಂಗಳೂರು ತುಳುಕೂಟ (ರಿ) ಅಧ್ಯಕ್ಷರಾದ ಶ್ರೀ ಸುಂದರರಾಜ ರೈ ಅವರ ನಿಧನಕ್ಕೆ ಆಳವಾದ ಸಂತಾಪ ಸೂಚಿಸಿದ್ದಾರೆ.
ಶ್ರೀ ಸುಂದರರಾಜ ರೈ ಇವರು ಇಂದು ನಮ್ಮನ್ನಗಲಿರುವುದು ತುಂಬಾ ದುಃಖದ ಸಂಗತಿ.
ಅವರು ಬೆಂಗಳೂರು ಕಂಬಳದ ಯಶಸ್ಸಿಗಾಗಿ ಅಪಾರ ಶ್ರಮವಹಿಸಿ, ತುಳು ಭಾಷೆ ಮತ್ತು ಕರಾವಳಿ ಭಾಗದ ಆಚಾರ–ವಿಚಾರ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರು.
ನಾವು ಜನಪರವಾಗಿ ನಿಲ್ಲುವ, ಜನಮನ ಗೆದ್ದ ನಿಜವಾದ ಕ್ರಿಯಾಶೀಲ ನಾಯಕನನ್ನು ಕಳೆದುಕೊಂಡಿದ್ದೇವೆ.
ಅವರು ತುಳು ಹಾಗೂ ಕರಾವಳಿ ಪ್ರದೇಶದ ಜನರ ಹಕ್ಕುಗಳು, ಭಾವನೆಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಸದಾ ಧ್ವನಿಯಾಗಿದ್ದರು.
ಅವರ ಧೈರ್ಯ, ಸೇವಾಭಾವ ಮತ್ತು ನಿಸ್ವಾರ್ಥ ಹೋರಾಟ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ.
ಶ್ರೀ ಸುಂದರರಾಜ ರೈ ಅವರ ನಿಧನವು ಅತ್ಯಂತ ದುಃಖವನ್ನು ತಂದಿದ್ದು,
ಅವರ ಕುಟುಂಬದವರು ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಯೋಗಿಶ್ ಶೆಟ್ಟಿ ಜಪ್ಪು ಅವರು ಪ್ರಾರ್ಥಿಸಿದ್ದಾರೆ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಓಂ ಶಾಂತಿಃ 🙏




