ಕೋಟೆಕಾರು :ಮಾಡೂರು ಮಾರಿಯಣ್ಣ ಪಾಲ್ ನ ಶ್ರೀ ಶಿವದುರ್ಗಂಭ ಮಠದಲ್ಲಿ ದಿನಾಂಕ 01-03-2026 ರಂದು ಬೆಳಿಗ್ಗೆ 11 ಗಂಟೆಗೆ ಮಠದ ಜೀರ್ಣೋದ್ಧಾರ ಕಾರ್ಯ ನಿಮಿತ್ತ ಭಕ್ತಾದಿಗಳ ಸಹಕಾರದಿಂದ ನಿಧಿ ಸಂಗ್ರಹ ಕಾರ್ಯಕ್ರಮವು ಮಠದ ಅವರಣದಲ್ಲಿ ಸಭಾಂಗಣದಲ್ಲಿ ಭಕ್ತಿಭಾವಪೂರ್ಣವಾಗಿ ನಡೆಯಿತು.

ಮಠದ ಅಭಿವೃದ್ಧಿ ಹಾಗೂ ಧಾರ್ಮಿಕ ಪರಂಪರೆಯ ಸಂರಕ್ಷಣೆಯನ್ನು ಉದ್ದೇಶಿಸಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಬೋಳಿಯಾರ್ ಅವರು ಸ್ವಾಗತ ಭಾಷಣ ಮಾಡಿದರು. ಮಠದ ಇತಿಹಾಸ, ಅದರ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿ, ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು.
ಮಠ ಆಡಳಿತ ಮುಕ್ತೇಶರಾದ ಚಂದ್ರಶೇಖರ್ ಉಚ್ಚಿಲ ಅವರು ಮಾತನಾಡಿ, ಮಠವು ಅನೇಕ ವರ್ಷಗಳಿಂದ ಭಕ್ತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದ್ದು, ಭೌತಿಕ ಸೌಕರ್ಯಗಳ ಅಭಿವೃದ್ಧಿ ಅವಶ್ಯಕತೆಯಾಗಿದೆ ಎಂದರು. ಟ್ರಸ್ಟಿ ಯಶವಂತ ಆಳ್ವ ಅವರು ಮಠದ ಭವಿಷ್ಯ ರೂಪರೇಖೆಯನ್ನು ವಿವರಿಸಿ, ದಾನಿಗಳ ಸಹಕಾರದಿಂದ ಶೀಘ್ರದಲ್ಲೇ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅವರು ಕಾರ್ಯಯೋಜನೆ ಹಾಗೂ ಅಂದಾಜು ವೆಚ್ಚದ ವಿವರಗಳನ್ನು ಮಂಡಿಸಿದರು. ರವೀಂದ್ರ ಶೆಟ್ಟಿ ಉಳಿದೊಟ್ಟು, ಯೋಗಿಶ್ ಶೆಟ್ಟಿ ಜಪ್ಪು, ವಿಟ್ಲ ಅರಮನೆ ರವಿವರ್ಮ ಬಲ್ಲಾಳ್, ಜನಾರ್ದನ ಬಲ್ಲಾಳ್, ಸುರೇಶ್ ಕೆ.ಪಿ.,ಕೋಟೆಕಾರು ಟೌನ್ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಶೆಟ್ಟಿ, ಅಮಿತ ಆಶ್ವಿನ್ , ಪಿ.ಕೆ. ರಾಜಗೋಪಾಲ್ ಬಲ್ಲಾಳ್, ದೇವದಾಸ್ ಕೊಲ್ಯ, ಪುರುಷೋತ್ತಮ ಗಟ್ಟಿ , ರಾಘವ ಉಚ್ಚಿಲ, ಜಯಂತ ಕೊಂಡಾಣ, ಪುರುಷೋತ್ತಮ ಅಂಚನ್, ರಾಘವ ಗಟ್ಟಿ, ಸುಮನ ಶೆಟ್ಟಿ, ಕೈಲಾಶ್ ಬಾಬು, ರಾಜಗೋಪಾಲ್, ಹರಿಪ್ರಸಾದ್ ಕಾಪಿಕಾಡ್, ಸತೀಶ್ ದೀಪಂ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಾನಿಗಳಿಂದ ಸ್ವಯಂಪ್ರೇರಿತವಾಗಿ ನಿಧಿ ಸಂಗ್ರಹಿಸಲಾಯಿತು. ಮಠದ ಜೀರ್ಣೋದ್ಧಾರ ಕಾರ್ಯವು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಸಮಿತಿ ಸದಸ್ಯರು ತಿಳಿಸಿದರು. ಭಕ್ತಾದಿಗಳ ಸಕ್ರಿಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕೊನೆಯಲ್ಲಿ ಸಮಿತಿ ವತಿಯಿಂದ ಎಲ್ಲಾ ದಾನಿಗಳು ಹಾಗೂ ಉಪಸ್ಥಿತರಾದ ಗಣ್ಯರಿಗೆ ಕೃತಜ್ಞತೆ ಸಲ್ಲಿಸಲಾಯಿತು.





