ಬೆಂಗಳೂರು:
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್, ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 2025ರ ಅಕ್ಟೋಬರ್ 16ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನದಲ್ಲಿ,
ಗಾಯನ ಕ್ಷೇತ್ರದಲ್ಲಿನ ವಿಶಿಷ್ಟ ಸಾಧನೆ ಹಾಗೂ ಬಹುಮುಖ ಪ್ರತಿಭೆ ಪ್ರದರ್ಶನಕ್ಕಾಗಿ ಶ್ರೀ ಎನ್. ನಾಗೇಂದ್ರ ರವರಿಗೆ ಗೌರವಾನ್ವಿತ “ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಪ್ರಶಸ್ತಿ” ಪ್ರದಾನ ಮಾಡಲಾಯಿತು.

ಈ ಪ್ರಶಸ್ತಿಯನ್ನು ಮಾಜಿ ಲೋಕಾಯುಕ್ತರು ಹಾಗೂ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಡಾ. ಎನ್. ಸಂತೋಷ್ ಹೆಗ್ಡೆ ರವರು ಪ್ರಧಾನ ಮಾಡಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷರು ಡಾ. ಸಿ. ಸೋಮಶೇಖರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಡಾ. ಎಂ. ಎಸ್. ಮುತ್ತುರಾಜ್, ಕರ್ನಾಟಕ ಸವಿತಾ ಸಮಾಜ ಅಧ್ಯಕ್ಷರು, ಶ್ರೀ ಶ್ರೀ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು (ಅಥಣಿ), ಶ್ರೀ ಶ್ರೀ ರಮಾನಂದ ಗುರೂಜಿ (ದೊಡ್ಡನಗುಡ್ಡೆ, ಉಡುಪಿ) ಹಾಗೂ ಎಸ್. ಜಿ. ನಂಜಯ್ಯನಮಠ, ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು (ಕರ್ನಾಟಕ ಸರ್ಕಾರ) ಉಪಸ್ಥಿತರಿದ್ದರು.

ಮೂಲತಃ ಈ ಕಾರ್ಯಕ್ರಮ ಅಕ್ಟೋಬರ್ 15ರಂದು ನವದೆಹಲಿಯ ನೆಹರು ಭವನದಲ್ಲಿ ಜರುಗಬೇಕಾಗಿದ್ದರೂ, ಅನಿವಾರ್ಯ ಕಾರಣಗಳಿಂದಾಗಿ ಅಕ್ಟೋಬರ್ 16ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು.
ಶ್ರೀ ಎನ್. ನಾಗೇಂದ್ರ ರವರ ಈ ಗೌರವ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗಾಯನ ಕ್ಷೇತ್ರದ ಕೀರ್ತಿಗೆ ಹೊಸ ಮೆರುಗು ನೀಡಿದೆ ಎಂದು ಆಯೋಜಕರು ತಿಳಿಸಿದ್ದಾರೆ.



