ಸಹಕಾರ ಕ್ಷೇತ್ರದ ಸಾಧಕರಿಗೆ “ತೌಳವ ಸಹಕಾರ ಮಾಣಿಕ್ಯ” ಮತ್ತು “ತೌಳವ ಸಹಕಾರ ರತ್ನ” ಪ್ರಶಸ್ತಿಗಳು
ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಮತ್ತು ತುಳುನಾಡ ಸೂರ್ಯ ಪ್ರತಿಕೆ ಸಂಸ್ಥೆಗಳ ವತಿಯಿಂದ ಉರ್ವ ಸ್ಟೋರ್ ಬಳಿಯಿರುವ ತುಳು ಭವನ ದಿನಾಂಕ 16-11-2025 ರಂದು ನಡೆಯುವ “ಸಹಕಾರ ಸಪ್ತಾಹ” ಅಂಗವಾಗಿ ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಸಹಕಾರ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಮತ್ತು ಸಾಧನೆ ತೋರಿದವರಿಗೆ “ತೌಳವ ಸಹಕಾರ ಮಾಣಿಕ್ಯ ಪ್ರಶಸ್ತಿ” ಹಾಗೂ “ತೌಳವ ಸಹಕಾರ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಗುವುದು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೂ ಸನ್ಮಾನ ನಡೆಯಲಿದೆ.
ಈ ಕುರಿತು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುವಂತೆ, ತಮ್ಮ ತಮ್ಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ವ್ಯಕ್ತಿಗಳ ಹೆಸರು ಮತ್ತು ವಿಳಾಸ Bio -data 2025ರ ನವೆಂಬರ್ 10 ಸೋಮವಾರ ಮುಂಚಿತವಾಗಿ ಕಳುಹಿಸಲು ವಿನಂತಿಸಲಾಗಿದೆ. ಶಿಫಾರಸು ಬಂದವರ ಪೈಕಿ ಆಯ್ದ ಕೆಲವರನ್ನು ಪ್ರಶಸ್ತಿ ಮತ್ತು ಸನ್ಮಾನಕ್ಕೆ ಆಯ್ಕೆ ಮಾಡಲಾಗುತ್ತದೆ.
ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-11-2025 ಸೋಮವಾರ
ಹೆಚ್ಚಿನ ಮಾಹಿತಿಗಾಗಿ ತುಳುನಾಡ ರಕ್ಷಣಾ ವೇದಿಕೆ ಅಥವಾ ತುಳುನಾಡ ಸೂರ್ಯ ಪ್ರತಿಕೆ ಕಚೇರಿಯನ್ನು 9019501165 , 6362876286 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


