ಪ್ರಶಸ್ತಿ ವಿಜೇತ ಖ್ಯಾತ ತುಳು ಸಾಹಿತಿ ಶ್ರೀಮತಿ ಜಯಂತಿ ಬಂಗೇರ ಇವರ ಪತಿ, ಮೂಡಬಿದ್ರಿ ಸಪಲಿಗ ಸೇವಾ ಸಂಘದ ಮಾಜಿ ಅಧ್ಯಕ್ಷರು , ಮೂಡಬಿದ್ರೆ ಸುಜಯ ಹಾಲೋ ಬ್ಲಾಕ್ ಇಂಡಸ್ಟ್ರಿ ಇದರ ಮಾಲಕರಾದ ಶ್ರೀ ಸದಾಶಿವ ಬಂಗೇರ (72 ವ ) ಇವರು ಅಲ್ಪ ಕಾಲದ ಅಸೌಖ್ಯದಿಂದ ದಿನಾಂಕ 09-03-2025 ರಂದು ನಿಧನ ಹೊಂದಿದರು. ಅಂತ್ಯಕ್ರಿಯೆ ಸಂಜೆ 7.30 ಕೆ ಜರುಗಿತು. ಮೃತರ ಪತ್ನಿ ತುಳು ಸಾಹಿತಿ, ಉಡಲ್ ತುಳು ತ್ರೈಮಾಸಿಕ ಪತ್ರಿಕೆ ಸಂಪಾದಕಿ ಜಯಂತಿ ಬಂಗೇರ, ಪುತ್ರ ಪುತ್ರಿಯರನ್ನು ಅಗಲಿದ್ದಾರೆ. ಸುಮಾರು 13 ವರ್ಷ ಎಂ.ಆರ್.ಪಿ. ಎಲ್ ನಲ್ಲಿ ಉದ್ಯೋಗದಲ್ಲಿದರು. ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಾಗಿದ್ದರು. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರ ಅಗಲುವಿಕೆಯಿಂದ ದುಃಖತಪ್ತ ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ . ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ.ಭಂಡಾರಿ, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ,ತುಳು ವರ್ಲ್ಡ್ ಫೌಂಡೇಶನ್ ಡಾ. ರಾಜೇಶ್ ಆಳ್ವ, ತುಳು ಕೂಟ ಕುಡ್ಲ ಅಧ್ಯಕ್ಷೆ ಹೇಮ ದಾಮೋದರ್ ನಿಸರ್ಗ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ
Trending
- ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಮಫಲಕಗಳಲ್ಲಿ ಶೇಕಡಾ 60% ತುಳು ಲಿಪಿ ಅಳವಡಿಸುವರೇ ಕಾನೂನು ಜಾರಿಗೆ ತರಲು ತುಳುನಾಡ ರಕ್ಷಣಾ ವೇದಿಕೆ ಆಗ್ರಹ
- ತುಳು ಸಾಹಿತಿ “ಉಡಲ್” ತುಳು ಪತ್ರಿಕೆ ಸಂಪಾದಕಿ ಜಯಂತಿ ಬಂಗೇರ ಪತಿ ಸದಾಶಿವ ಬಂಗೇರ ನಿಧನ , ತುಳುನಾಡ ಸಂಘ ಸಂಸ್ಥೆಗಳ ಪ್ರಮುಖರ ಸಂತಾಪ
- ಮಾರ್ಚ್ 12 ಮೂಡುಬಿದಿರೆ ಕ್ಷೇಮ ವೇಣುಪುರ ಮೂಲ ನಾಗ ಸ್ಥಾನ ಪುನರ್ ಜೀರ್ಣೋದ್ದಾರ ಗೊಂಡು ಪುನರ್ ಪ್ರತಿಷ್ಠಾಪನೆ
- ಬಂಟರ ಯಾನೆ ನಾಡವರ ಸಂಘ ಹೊಸನಗರ(ರಿ ), ಬೆಂಗಳೂರು ಬಂಟರ ಸಂಘ ಇವರ ಸಹಭಾಗಿತ್ವದಲ್ಲಿ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ವಿತರಣೆ
- ತುಳು ಭಾಷೆದ ಅಧಿಕೃತ ಸ್ಥಾನಮಾನೋಗಾದ್ ವಿಶೇಷ ಪತ್ರಿಕಾ ಗೋಷ್ಠಿ – ರಾಜರಾಮ ಶೆಟ್ಟಿ
- ‘ಡಿ ಸಿ ಆರ್ ಇ ವಿಶೇಷ ಪೊಲೀಸ್ ಠಾಣೆಗಳಿಗೆ ಹೆಚ್ಚಿನ ಸಿಬ್ಬಂಧಿಗಳು, ಮೂಲಸೌಕರ್ಯ ಒದಗಿಸಿ – ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆಗ್ರಹ
- ಕುಂದಾಪುರ: ಲಕ್ಷ್ಯ ಕ್ಲಿನಿಕ್ ವೈದ್ಯೆ ಡಾ.ಅಮ್ಮಾಜಿ ಯವರಿಗೆ ಸನ್ಮಾನ
- ಮಂಗಳೂರು ; ಪರಂಗಿಪೇಟೆ ನಿವಾಸಿ ದಿಗಂತ್ ನಾಪತ್ತೆ ಪ್ರಕರಣ,ಕೊನೆಗೂ 10 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆ..!