ಮಂಗಳೂರಿನಲ್ಲಿ ಜನಿಸಿದರೂ, ಮುಂಬೈಯನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿರುವ ಪ್ರಭಾ ನಾರಾಯಣ್ ಸುವರ್ಣ ಅವರು ನಿಜವಾದ ಅರ್ಥದಲ್ಲಿ “ಬುಹುಮುಖ ಪ್ರತಿಭೆ” ಎಂದರೆ ಹೇಗಿರಬೇಕು ಎಂಬುದಕ್ಕೆ ಜೀವಂತ ಉದಾಹರಣೆ. ಬಾಲ್ಯದಿಂದಲೇ ಸಮಾಜಸೇವೆಯ ಹಂಬಲ ಬೆಳೆಸಿಕೊಂಡು, ಕಷ್ಟದ ಪರಿಸ್ಥಿತಿಯಲ್ಲಿಯೂ ತಂದೆ-ತಾಯಿ ಹಾಗೂ ಹಿರಿಯರ ಮೌಲ್ಯಾಧಾರಿತ ಸಂಸ್ಕಾರವನ್ನು ಅಳವಡಿಸಿಕೊಂಡು ಜೀವನ ಪಥದಲ್ಲಿ ಮುನ್ನಡೆದಿದ್ದಾರೆ.



ತಂದೆ-ತಾಯಿಯ ಸುಕೃತಫಲದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಪಡೆದ ಅವರು, 35 ವರ್ಷಗಳ ಯಶಸ್ವಿ ಸೇವೆ ನಂತರ ವಾಲೆಂಟರಿ ರಿಟೈರ್ಮೆಂಟ್ ಪಡೆದು, ಇನ್ನಷ್ಟು ಉತ್ಸಾಹದಿಂದ ಸಮಾಜಸೇವೆಯಲ್ಲಿ ತೊಡಗಿದ್ದಾರೆ.

ಸಮಾಜಸೇವೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರಭಾ ಸುವರ್ಣ ಅವರು —
• ಯಂಗ್ ಮೆನ್ಸ್ ನೈಟ್ ಹೈಸ್ಕೂಲ್ನಲ್ಲಿ ಗ್ರ್ಯಾಂಡ್ ಪ್ಯಾಟ್ರನ್,
• ಬ್ರಹ್ಮಕುಮಾರಿ ಸಂಸ್ಥೆಯಲ್ಲಿ ಸೇವಾಧಾರಿಯಾಗಿ,
• ಜಾಗೃತಿ ಬಳಗ ಫೋರ್ಟ್ ಚಾಪ್ಟರ್ ಚೇರ್ ಪರ್ಸನ್ ಆಗಿ,
• ಡಿಗ್ನಿಟಿ ಫೌಂಡೇಶನ್ ಗೌವರ್ನಿಂಗ್ ಕೌನ್ಸಿಲ್ ಸದಸ್ಯೆಯಾಗಿ,
• ಮುಂಬೈ ಹಾಗೂ ಮಾತುಂಗ ಕನ್ನಡ ಸಂಘಗಳು,
• ಸಾಯನ್ ಮೆಸಾನಿಕ್ ಲೇಡೀಸ್ ಆರ್ಗನೈಜೇಶನ್ನಲ್ಲಿ ಉಪಾಧ್ಯಕ್ಷೆಯಾಗಿ ಹಾಗೂ ಆಜೀವ ಸದಸ್ಯೆಯಾಗಿ,
• ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಸೇವೆ ಸಲ್ಲಿಸುವ ಮೂಲಕ ಅಸಂಖ್ಯಾತ ಜನರ ಮನ ಗೆದ್ದಿದ್ದಾರೆ.
ಮೈಲ್ ಸ್ಟೋನ್ ಪೆಜೇಂಟ್ಸ್ ಸೆ. 5 ರಂದು ದುಬೈಯಲ್ಲಿ ಜಾಗತಿಕ ಮಹಿಳಾ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿತ್ತು.
“ಮಗುವಿಗೆ ಶಿಕ್ಷಣ ನೀಡಿ” ಎಂಬ ವಿಷಯದ ಕುರಿತು ವಿವಿಧ ದೇಶಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಭಾರತದಿಂದ ಮುಂಬೈಯ ಪ್ರಭಾ ಎನ್ ಸುವರ್ಣ ಅವರು ಉಪನ್ಯಾಸ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಪ್ರಭಾ ಸುವರ್ಣ ಅವರನ್ನು ಮುಖ್ಯ ಅತಿಥಿ ಬು ಅಬ್ದುಲ್ಲಾಹ್, ಸಮಾವೇಶದ ಆಯೋಜಕರಾದ
ಡಾ. ಮಕ್ ಮಲಿಕ್ ಗೌರವಿಸಿದರು.
ಆಸ್ಟ್ರೇಲಿಯಾ,ಸೌದಿ ಅರೇಬಿಯಾ, ಯುಎಇ, ರಷ್ಯಾ, ಜಪಾನ್, ಇಟಾಲಿಯಿಂದ ಮಹಿಳಾ ಉಪನ್ಯಾಸಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಸಮಾವೇಶದಿಂದಾಗಿ ದುಬೈ ನಗರವು ಮತ್ತೊಮ್ಮೆ ಸ್ಫೂರ್ತಿ, ಸಬಲೀಕರಣ ಮತ್ತು ಜಾಗತಿಕ ಸಹಯೋಗದ ಕೇಂದ್ರವಾಗಿ ಮಾರ್ಪಟ್ಟಿತು, ಏಕೆಂದರೆ ಮೈಲಿಗಲ್ಲು “ಗ್ಲೋಬಲ್ ವುಮೆನ್ ಕಾನ್ಕ್ಲೇವ್ 2025” ಅದ್ಭುತ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿತು. “ಮಗುವಿಗೆ ಶಿಕ್ಷಣ ನೀಡಿ” ಎಂಬ ಪ್ರಬಲ ವಿಷಯದ ಅಡಿಯಲ್ಲಿ ನಡೆದ ಎರಡು ದಿನಗಳ ಅಂತರರಾಷ್ಟ್ರೀಯ ಸಮಾವೇಶವು ಪ್ರಪಂಚದಾದ್ಯಂತದ ಮಹಿಳಾ ನಾಯಕರು, ನೀತಿ ನಿರೂಪಕರು, ಶಿಕ್ಷಣ ತಜ್ಞರು, ಉದ್ಯಮಿಗಳು, ಕಾರ್ಯಕರ್ತರು ಮತ್ತು ದೂರದೃಷ್ಟಿಗಳನ್ನು ಒಟ್ಟುಗೂಡಿಸಿತು, ನಮ್ಮ ಕಾಲದ ಪ್ರಮುಖ ವಿಷಯಗಳಲ್ಲಿ ಒಂದನ್ನು ಚರ್ಚಿಸಲು – ಪ್ರಪಂಚದಾದ್ಯಂತ ಹುಡುಗಿಯರಿಗೆ ಸಮಾನ ಶಿಕ್ಷಣ ಅವಕಾಶಗಳನ್ನು ಖಚಿತಪಡಿಸಿಕೊಳ್ಳುವುದು.
ಶಿಕ್ಷಣವು ಕೇವಲ ಮೂಲಭೂತ ಹಕ್ಕಿಗಿಂತ ಹೆಚ್ಚಾಗಿದೆ; ಇದು ಪರಿವರ್ತಕ ಶಕ್ತಿ. ಒಬ್ಬ ಹುಡುಗಿಗೆ ಶಿಕ್ಷಣ ನೀಡಿದಾಗ, ಅವಳು ತನ್ನ ಕುಟುಂಬವನ್ನು ಉನ್ನತೀಕರಿಸುತ್ತಾಳೆ, ತನ್ನ ಸಮುದಾಯವನ್ನು ಬಲಪಡಿಸುತ್ತಾಳೆ ಮತ್ತು ತನ್ನ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುತ್ತಾಳೆ. ಕಾನ್ಕ್ಲೇವ್ ಈ ನಂಬಿಕೆಯ ಮೇಲೆ ಬೆಳಕು ಚೆಲ್ಲುತ್ತದೆ, 13 ದೇಶಗಳ ಧ್ವನಿಗಳು ತಮ್ಮ ಜ್ಞಾನ, ಅನುಭವಗಳು ಮತ್ತು ಭವಿಷ್ಯವನ್ನು ಸೃಷ್ಟಿಸುವ ಮಾರ್ಗಗಳನ್ನು ಹಂಚಿಕೊಳ್ಳುವ ಜಾಗತಿಕ ವೇದಿಕೆಯನ್ನು ನೀಡುತ್ತದೆ.

ವಿಶ್ವದಾದ್ಯಂತ ಸೇವೆ ಮತ್ತು ಪ್ರತಿಭೆಯ ಮೂಲಕ ಖ್ಯಾತಿ ಪಡೆದಿರುವ ಪ್ರಭಾ ಸುವರ್ಣ ಅವರಿಗೆ ಮಂಗಳೂರು, ಬೆಂಗಳೂರು, ಮುಂಬೈ, ಅಬುಧಾಬಿ, ಮಸ್ಕತ್, ದುಬೈ, ಅಮೇರಿಕಾ, ಯುರೋಪ್, ರಷ್ಯಾ, ಕಝಕಿಸ್ತಾನ್, ಉಜ್ಬೆಕಿಸ್ತಾನ್, ಆಸ್ಟ್ರೇಲಿಯಾ, ಜಪಾನ್, ಕೆನಡಾ, ಫಿಲಿಪೈನ್ಸ್, ವಿಯೆಟ್ನಾಂ ಸೇರಿದಂತೆ 40ಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ. ಅವರಿಗಿರುವ ಹಲವು “ಐಕಾನ್ ಅವಾರ್ಡ್”ಗಳು ಅವರ ಶ್ರೇಷ್ಠತೆಗೆ ಸಾಕ್ಷಿಯಾಗಿವೆ.

ಕ್ರಿಯೇಟಿವ್ ಮೈಂಡ್ನಿಂದ ಕೂಡಿದ ಅವರು, ತ್ರಿಪಲ್ ತಲಾಕ್, ಅಂಗದಾನ ಎಂಬ ಆರ್ಟ್ ಫಿಲ್ಮುಗಳಲ್ಲಿ ಹಾಗೂ ಭೋಜರಾಜ್ ಎಂ.ಬಿ.ಬಿ.ಎಸ್. ಎಂಬ ಕಮರ್ಷಿಯಲ್ ಚಲನಚಿತ್ರದಲ್ಲಿ ಅಭಿನಯಿಸಿ ಹೆಗ್ಗಳಿಕೆ ಪಡೆದಿದ್ದಾರೆ.
“ಏಜ್ ಇಸ್ ಜಸ್ಟ್ ಎ ನಂಬರ್” ಎನ್ನುವ ನಂಬಿಕೆಯಿಂದ ಹಿರಿಯರ ವಿಭಾಗದ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಮಿಸೆಸ್ ಮಂಗಳೂರು ವಿನ್ನರ್, ಮಿಸೆಸ್ ಕರ್ನಾಟಕ ರನ್ನರ್-ಅಪ್, ರಾಜಸ್ಥಾನ ರಣ ಥಂಬೋರ್ ರನ್ನರ್-ಅಪ್ ಹಾಗೂ ಥೈಲ್ಯಾಂಡ್ ಬ್ಯಾಂಕ್ ಆಫ್ ರನ್ನರ್-ಅಪ್ ಪ್ರಶಸ್ತಿಗಳನ್ನು ಗೆದ್ದು ಎರಡು ಕಿರೀಟಗಳ ಹೆಮ್ಮೆಯನ್ನು ಪಡೆದಿದ್ದಾರೆ.
ಈಗ ಐದನೇ ಹಂತದ ಸ್ಪರ್ಧೆಗೆ ತಯಾರಿ ನಡೆಸುತ್ತಿರುವ ಪ್ರಭಾ ನಾರಾಯಣ್ ಸುವರ್ಣ ಅವರು ದೇವರ ದಯೆ, ತಂದೆ-ತಾಯಿ ಆಶೀರ್ವಾದ ಮತ್ತು ಎಲ್ಲರ ಶುಭಾಶಯಗಳೊಂದಿಗೆ ಇನ್ನೂ ಉನ್ನತ ಶಿಖರಗಳನ್ನು ಮುಟ್ಟಲು ಸಜ್ಜಾಗಿದ್ದಾರೆ.

ತಮ್ಮ ಬಿಲ್ಲವ ಸಮಾಜದ ಸಮಿತಿಯ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿರುವುದು ಅವರಿಗೊಂದು ಗೌರವದ ವಿಷಯವಾಗಿದೆ. ಸಮಾಜಸೇವೆ, ಕಲಾ ಕ್ಷೇತ್ರ, ಹಾಗೂ ಸೌಂದರ್ಯ ಲೋಕ — ಎಲ್ಲೆಡೆ ಪ್ರಕಾಶಮಾನವಾಗಿ ತೇಜೋಮಯವಾದ ಪ್ರಭಾ ನಾರಾಯಣ್ ಸುವರ್ಣ ನಿಜಕ್ಕೂ ಹೆಮ್ಮೆಯ ತೌಳವ ಮಹಿಳಾ ಮಣಿ





