ಮುಲ್ಕಿ: ಕೇಂದ್ರ ಶಾಫಿ ಜುಮಾ ಮಸೀದಿ ಜಮಾಅತ್ ಮತ್ತು ಮಸ್ಜಿದ್ ನ್ನೂರ್, ಕಾರ್ನಾಡ್ ಇದರ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆ ನಡೆಸಲಾಯಿತು.
ಅಧ್ಯಕ್ಷರಾಗಿ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಜ|| ಇಕ್ಬಾಲ್ ಅಹ್ಮದ್ ಇಬ್ರಾಹೀಮ್ ರವರನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಇನಾಯತ್ ಅಲಿ ಮುಲ್ಕಿ ಹಾಗೂ ಗೌರವ ಸಲಹೆಗಾರರಾಗಿ ಫಿರೋಜ್ ಖಾನ್ ಕಾರ್ನಾಡ್ ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ. ಹುಸೈನ್, ಕೋಶಾಧಿಕಾರಿಯಾಗಿ ಎಮ್. ರಿಝ್ವಾನ್ ಬಾಪನಾಡ್, ಉಪಾಧ್ಯಕ್ಷರಾಗಿ ಫಾರೂಕ್ ಹಾಜಿ, ಜಂಟಿ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಿದ್ದೀಕ್ ಮತ್ತು ಲೆಕ್ಕಪರಿಶೋಧಕರಾಗಿ ಇಬ್ರಾಹಿಂ ಹಾಜಿ ಆಯ್ಕೆ ಮಾಡಲಾಯ್ತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಂ.ಕೆ. ಸುಹೈಲ್, ಪುತ್ತು ಬಾವ ಕಾರ್ನಾಡ್, ಎಂ.ಎಚ್. ನಝಿರ್ ಹುಸೈನ್, ಅನ್ಸಾರ್ ಅಬ್ಬಾಸ್, ಎಂ.ಕೆ. ಇನಾಯತ್, ಅಬ್ದುಲ್ ರಝ್ಝಾಕ್, ಅಬೂಬಕ್ಕರ್ (ಎನ್ಎಂಪಿಟಿ), ಮೊಹಮ್ಮದ್ ಬಷೀರ್ ಶಿಬಾನ್ ಹಾಗೂ ಮೊಹಿದೀನ್ ಅಮೀರ್ ಅವರನ್ನು ಆಯ್ಕೆ ಮಾಡಲಾಯ್ತು
ನೂತನ ಸಮಿತಿಯು ಮಸೀದಿಯ ಧಾರ್ಮಿಕ ಚಟುವಟಿಕೆಗಳ ಬಲವರ್ಧನೆ, ಸಾಮಾಜಿಕ ಸೇವೆ, ಸಮುದಾಯದ ಏಕತೆ ಹಾಗೂ ಮಸೀದಿಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದ್ದು ಎಲ್ಲರ ಸಹಕಾರದೊಂದಿಗೆ ಸಮುದಾಯದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿ, ಮಸೀದಿಯ ಅಭಿವೃದ್ಧಿ ಹಾಗೂ ಸಮಾಜದ ಏಳಿಗೆಗೆ ಮಹತ್ವದ ಕೊಡುಗೆ ನೀಡಲಿ ಎಂದು ಹಾರೈಸುತ್ತೇವೆ

