ಮಂಗಳೂರು: ಜಾನಪದ ಕಲೆಯ ಹೆಜ್ಜೆ ಗುರುತು ಮೂಡಿಸಿದ ‘ಪಿಲಿ ನಲಿಕೆ’ ಇದರ 10ನೇ ವರ್ಷದ ವಿಜೃಂಭಣೆಯ ಸ್ಪರ್ಧೆ ಅಕ್ಟೋಬರ್ 1ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸ್ಪರ್ಧೆಗೆ ಚಿತ್ರರಂಗ ಹಾಗೂ ಕ್ರೀಡಾ ಕ್ಷೇತ್ರದ ಗಣ್ಯ ಸೆಲೆಬ್ರಿಟಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಬಾಲಿವುಡ್ನ ಸುನೀಲ್ ಶೆಟ್ಟಿ, ಸ್ಯಾಂಡಲ್ವುಡ್ ನಟರು ಕಿಚ್ಚ ಸುದೀಪ್, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ಕ್ರಿಕೆಟಿಗರು ಅಜಿಂಕ್ಯ ರಹಾನೆ, ಜಿತೇಶ್ ಶರ್ಮಾ, ಬಾಕ್ಸಿಂಗ್ ಚಾಂಪಿಯನ್ ವಿಜೇಂದ್ರ ಸಿಂಗ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಮೊದಲಾದವರು ಕಾರ್ಯಕ್ರಮ ವೀಕ್ಷಿಸಲಿದ್ದಾರೆ.

ವಿಶೇಷತೆಗಳು:
• ಸ್ಪರ್ಧೆ ಆರಂಭ: ಬೆಳಗ್ಗೆ 10 ಗಂಟೆ
• ಅಂತ್ಯ: ರಾತ್ರಿ 10 ಗಂಟೆ
• ಪ್ರತೀ ತಂಡಕ್ಕೆ ಕಾಲಾವಕಾಶ: 20 ನಿಮಿಷ
• ಪ್ರೇಕ್ಷಕರಿಗಾಗಿ ಆಸನ ವ್ಯವಸ್ಥೆ: 25,000ಕ್ಕೂ ಅಧಿಕ ಮಂದಿ
ಭಾಗವಹಿಸುವ ತಂಡಗಳು:
ಈ ಬಾರಿ ಸ್ಪರ್ಧೆಗೆ 10 ತಂಡಗಳನ್ನು ಆಯ್ಕೆ ಮಾಡಲಾಗಿದೆ.
ಅವುಗಳೆಂದರೆ:
ಶ್ರೀ ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್, ಮುಳಿಹಿತ್ತು ಗೇಮ್ಸ್ ಟೀಮ್, ಅನಿಲ್ ಕಡಂಬೆಟ್ಟು, ಜೂನಿಯರ್ ಬಾಯ್ಸ್ ಚಿಲಿಂಬಿ, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್, ಟ್ಯಾಲೆಂಟ್ ಟೈಗರ್ಸ್ ತುಳುನಾಡು, ಸೋಮೇಶ್ವರ ಫ್ರೆಂಡ್ಸ್ ಕ್ಲಬ್, ಪೋಳಲಿ ಟೈಗರ್ಸ್, ಗೋರಕ್ಷನಾಥ ಹುಲಿ ಮತ್ತಿತರರು.
ಉದ್ಘಾಟನೆ ಹಾಗೂ ಉಪಸ್ಥಿತಿಗಳು:
ಸ್ಪರ್ಧೆಯನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದರು ಹಾಗೂ ಶಾಸಕರು ವೇದಿಕೆಯಲ್ಲಿ ಉಪಸ್ಥಿತರಿರುವರು.
ಬಹುಮಾನ ವಿವರ:
• ಮೊತ್ತ ಬಹುಮಾನ ಮೊತ್ತ: ₹20 ಲಕ್ಷ
• ಪ್ರಥಮ ಬಹುಮಾನ: ₹10 ಲಕ್ಷ + ಫಲಕ
• ದ್ವಿತೀಯ ಬಹುಮಾನ: ₹5 ಲಕ್ಷ + ಫಲಕ
• ತೃತೀಯ ಬಹುಮಾನ: ₹3 ಲಕ್ಷ + ಫಲಕ
• ಪ್ರತಿ ತಂಡಕ್ಕೆ ಗೌರವಧನ: ₹50,000
• ವೈಯಕ್ತಿಕ ಪ್ರಶಸ್ತಿಗಳು (6): ಪ್ರತಿ ಪ್ರಶಸ್ತಿಗೆ ₹50,000 + ಫಲಕ
ವಿಶೇಷ ಪ್ರಶಸ್ತಿಗಳು: ಕಪ್ಪುಹುಲಿ, ಮರಿಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಮುಂತಾದ ವಿಭಾಗಗಳಲ್ಲಿ ನೀಡಲಾಗಲಿದೆ.
ಸಾಮಾಜಿಕ ಜವಾಬ್ದಾರಿ:
ದಶಕದ ಸಂಭ್ರಮವನ್ನು ಸ್ಮರಣೀಯವಾಗಿಸಲು, ಮೂಡುಬಿದಿರೆ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಮಿಥುನ್ ರೈ ಹೇಳಿದರು.
ಗೌರವ ಸನ್ಮಾನ:
ಕಾರ್ಯಕ್ರಮದ ವೇದಿಕೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ‘ಸಹಕಾರಿ ರತ್ನ’ ಸನ್ಮಾನ ನೀಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಡಾ. ಶಿವಶರಣ್ ಶೆಟ್ಟಿ, ಆನಂದ್ ರಾಜ್ ಶೆಟ್ಟಿ, ಅನಿಲ್ ಪೂಜಾರಿ, ವಿಕಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.






