ಉಡುಪಿ: ಕಟಪಾಡಿಯ ಫಾರೆಸ್ಟ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ತಾಗಿ ಕೌಸ್ತುಬಾ ರೆಸಿಡೆನ್ಸಿ ಕಟ್ಟಡವಿರುತ್ತದೆ ಇದು ಸದಾಕಾಲ ರಾಜ್ಯದ ಹೊರ ರಾಜ್ಯದ ಪ್ರವಾಸಿಗರು ನಿಲ್ಲುವ ತಲವಾಗಿದೆ ಇದು ಜನಜಂಗುಳಿಯಿಂದ ಕೂಡಿದ ತಡವಾಗಿದೆ ಆದರೆ ಇಲ್ಲೇ ಇರುವ ರೆಸಿಡೆನ್ಸಿ ಯವರು ಪರಿಸರದ ಸ್ವಚ್ಛತೆಗೆ ಸಂಬಂಧಿಸಿದ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಕೊಳಚೆ ನೀರು ಹೋಗಲು ಸರಿಯಾದ ಯಾವುದೇ ವ್ಯವಸ್ಥೆ ಕಲ್ಪಿಸದೆ ರಸ್ತೆಯಲ್ಲಿ ಹರಿಯ ಬಿಡುತ್ತಿದ್ದಾರೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ತ್ಯಾಜ್ಯ ವಸ್ತುಗಳನ್ನು ಕಂಡ ಕಂಡಲ್ಲಿ ಹಾಕುತ್ತಿದ್ದು ಪರಿಸ್ಥಿತಿ ಅಸಹನೀಯವಾಗಿದೆ ಕಟ್ಟಡದ ಬದಿಯಲ್ಲಿಯೇ ಪ್ರವಾಸಿಗರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಈ ಬಗ್ಗೆ ಸ್ಥಳೀಯರು ಮೌಖಿಕವಾಗಿ ಪಂಚಾಯಿತಿಗೆ ದೂರಿ ನೀಡಿದ್ದು ಯಾವುದೇ ಕ್ರಮ ಎರಗಿಸಿರುವುದಿಲ್ಲ ಆದ್ದರಿಂದ ತುಳುನಾಡ ರಕ್ಷಣಾ ವೇದಿಕೆ ನಿಯೋಗ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ನೇತೃತ್ವದಲ್ಲಿ ದಿನಾಂಕ 28-10-2025 ರಂದು ಕಟಪಾಡಿ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ನೀಡಿ ಒತ್ತಾಯಿಸಿದ್ದಾರೆ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾದಲ್ಲಿ ಮುಂದಿನ ದಿನದಲ್ಲಿ ಕಟ್ಟಡದ ಎದುರುಗಡೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ತುರವೇ ಮುಖಂಡರು ಎಚ್ಚರಿಕೆ ನೀಡಿದ್ದಾರೆ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ,
ಮಹಿಳಾಧ್ಯಕ್ಷೆ ಸುನಂದ ಟಿ ಕೋಟ್ಯಾನ್, ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರೀತಂ ಡಿಕೋಸ್ಟ , ಮಹಿಳಾ ಪ್ರಧಾನ ಕಾರ್ಯದರ್ಶಿ ಮಮತಾ ಅಮೀನ್, ಮಹಿಳಾ ಕೋಶಾಧಿಕಾರಿ ಗುಣವತಿ , ಮಹಿಳಾ ಗೌರವಧ್ಯಕ್ಷೆ ಗುಲಾಬಿ , ಮಹಿಳಾ ಉಪಾಧ್ಯಕ್ಷೆ ಜ್ಯೋತಿ ಬನ್ನಂಜೆ , ಕಾರ್ಯಕಾರಿ ಸಮಿತಿ ಸದಸ್ಯೆ ಸಾಧನಾ ಕಾಶಿನಾಥ್, ಕಾರ್ಯಕಾರಿ ಸದಸ್ಯರು ರಾಜು, ಬೈರಂಪಳ್ಳಿ ಘಟಕ ಅಧ್ಯಕ್ಷ ಕೃಷ್ಣಾನಂದ ಬೈರಂಪಳ್ಳಿ, ಕಾಪು ತಾಲೂಕು ಉಪಾಧ್ಯಕ್ಷ ಕೃಷ್ಣ ಜಿ, ಸ್ಥಳೀಯ ಮುಖಂಡರಾದ ಶಂಬು ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು






