ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರಗಾಮಿ ದಾಳಿ ಮಾನವೀಯತೆಯ ಮೇಲೆ ನಡೆದ ಘೋರ ದಾಳಿಯಾಗಿದೆ. ತುಳುನಾಡ ರಕ್ಷಣಾ ವೇದಿಕೆ ಇದನ್ನು ತೀವ್ರ ಕಠಿಣವಾಗಿ ಖಂಡಿಸುತ್ತದೆ.
*ಕಾಶ್ಮೀರ ಕಣಿವೆ ಸಹಜತೆಗೆ ಮರಳಿದೆ ಎಂಬ ಧೈರ್ಯ ವಿಶ್ವಾಸ ಹೆಚ್ಚಾಗುತ್ತಿರುವ ಮಧ್ಯೆಯೇ ಈ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ನಿಸ್ಸಹಾಯಕ ಮಹಿಳೆ ಮತ್ತು ಮಕ್ಕಳೆದುರು ಅವರ ತಂದೆಯನ್ನು , ಪತ್ನಿ ಮುಂದೆ ಗಂಡಂದಿರನ್ನು ಕೊಲ್ಲುವವರು ಮನುಷ್ಯರೇ ಅಲ್ಲ.
ಕಾಶ್ಮೀರದಲ್ಲಿ ಪ್ರವಾಸೋದ್ಯಮ ನಂಬಿ ಬದುಕುವ ಜನರು ಇಂತಹ ಘಟನೆಯಿಂದ ಕಂಗಾಲಾಗಿದ್ದಾರೆ. ಬದುಕಿನ ಕೆಲ ದಿನಗಳನ್ನು ಸಂತೋಷ ಮೋಜು ಮಾಡಲು ದೇಶ ವಿದೇಶಗಳಿಂದ ಬರುವ ಭೂಲೋಕದ ಸ್ವರ್ಗ ಎಂಬ ಖ್ಯಾತಿಯ ಕಾಶ್ಮೀರದಲ್ಲಿ ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೇಂದ್ರ ಸರಕಾರ ಕೈಗೊಳ್ಳಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಆಗ್ರಹಿಸಿದರು ಎಂದು ತುಳುನಾಡ ರಕ್ಷಣಾ ವೇದಿಕೆ ಪ್ರಕಟನೆ ತಿಳಿಸಿದೆ
Trending
- ಬಿಗ್ಬಾಸ್ ಸೀಸನ್–12 ರನ್ನರ್ಅಪ್ ರಕ್ಷಿತಾ ಶೆಟ್ಟಿಗೆ ಹುಟ್ಟೂರಿನಲ್ಲಿ ರಾಜಮರ್ಯಾದೆ ಸ್ವಾಗತ
- ಬಂಟ್ಸ್ ಅಸೋಸಿಯೇಷನ್ ಪುಣೆ ವತಿಯಿಂದ 14ನೇ ವಾರ್ಷಿಕ ಸಮಾವೇಶ – ಫೆಬ್ರವರಿ 6ರಂದು
- ರಿಶೆಲ್ ಡಿಸೋಜ ಪ್ರಕರಣಕ್ಕೆ ನ್ಯಾಯ ಬೇಕು: ತನಿಖೆ ವಿಫಲವಾದರೆ ರಾಜ್ಯವ್ಯಾಪಿ ಹೋರಾಟ – ಅಲ್ವಿನ್ ಡಿಸೋಜ
- ತುಳು ಭಾಷೆಗೆ ಅಧಿಕೃತ ಸ್ಥಾನಮಾನ | ಆಂಧ್ರ ಮಾದರಿಯ ಅಧ್ಯಯನ
- ಎಂ.ಆರ್.ಪಿ.ಎಲ್. (MRPL) ಘಟಕದಲ್ಲಿ ಬೆಂಕಿ ಅವಘಡ
- ಮಂಗಳೂರು ನಗರದಲ್ಲಿ ರೈಲು ಓಡಾಟ–ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹತ್ವದ ಸಭೆ
- ಗಮ್ಮತ್ ಕಲಾವಿದೆರ್ ದುಬೈಗೆ ಹೊಸ ಸಾರಥಿ – ವಾಸುಕುಮಾರ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆ
- ಪರಿಶಿಷ್ಟ ಜಾತಿಯ 10 ಕುಟುಂಬಗಳ ಏಕೈಕ ರಸ್ತೆ ಸಂಪರ್ಕಕ್ಕೆ ಭಾರಿ ಅಪಾಯ -ರಘು ಕೆ. ಎಕ್ಕಾರು

