ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ ಎರಡು ಮೂರು ವರ್ಷಗಳಿಂದ ಏಕೆ ನಿವೇಶನಕ್ಕೆ ಪರವಾನಿಗೆಗೆ ಅರ್ಜಿ ಸಲ್ಲಿಸಿದ್ದರೂ ಇದುವರಿಗೂ ಜನರಿಗೆ ಏಕೆ ನಿವೇಶನ ವಿನ್ಯಾಸ ಅನುಮತಿ ಸಿಗದಿದ್ದದ್ದು ಜನರಿಗೆ ತುಂಬಾ ಸಂಕಷ್ಟಕ್ಕೆ ಈಡು ಮಾಡಿದೆ. ಸ್ವಂತ ಮನೆ ನಿರ್ಮಾಣ ಮಾಡುವುದು ಅಸಾಧ್ಯವಾಗಿದ್ದು ಜನರು ಬಾಡಿಗೆ ಮನೆಯಲ್ಲಿ ಆಶ್ರಯಿಸುವಾಂತಾಗಿದೆ. ಈ ಸಮಸ್ಯೆಯನ್ನು ತ್ವರಿತ ಗತಿಯಲ್ಲಿ ಪರಿಹರಿಸಲು ಆದ್ಯತೆ ನೀಡಬೇಕಾಗಿದೆ.
ಕೃಷಿ ವಲಯದಲ್ಲಿ 10 ಸೆನ್ಸ್ ವರೆಗೆ ಏಕ ನಿವೇಶನ ಬರವಣಿಗೆ ನೀಡುವ ಪ್ರಕ್ರಿಯೆಯನ್ನು ನಗರ ಅಭಿವೃದ್ಧಿ ಪ್ರಾಧಿಕಾರ ಸ್ಥಗಿತಗೊಳಿಸಿದಾರೆ. ಇದರಿಂದ ಜನಸಾಮಾನ್ಯರಿಗೆ ಮನೆ ಕಟ್ಟಲು ಸಾಧ್ಯವಾಗದೆ ಪರದಾಡುವಂತಾಗಿದೆ ಈ ಮೊದಲಿನಂತೆ ಇದ್ದ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋದಲ್ಲಿ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ. ಅಲ್ಲದೇ ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಬೇಡಿಕೆಗನುಸಾರವಾಗಿ ಸ್ಪಂದಿಸಲು ಸಾಕಷ್ಟು ಪೂರ್ಣ ಪ್ರಮಾಣದ ಸಿಬ್ಬಂದಿ ಮತ್ತು ಅಧಿಕಾರಿವರ್ಗದ ಕೊರತೆ ಇದ್ದು ಜನರ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಅಗತ್ಯ ಪ್ರಮಾಣದ ಸಿಬ್ಬಂದಿ ಮತ್ತು ಅಧಿಕಾರಿ ವರ್ಗಗಳನ್ನು ನಿಯೋಜಿಸ ಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ನಿಯೋಗದಲ್ಲಿ
ಜಿಲ್ಲಾ ಅಧ್ಯಕ್ಷ ಕೃಷ್ಣಕುಮಾರ್,
ಉಡುಪಿ ಜಿಲ್ಲಾ ವೀಕ್ಷಕರ ಫ್ರಾಂಕಿ ಡಿಸೋಜ ಕೊಳಲಗಿರಿ,
ಉಡುಪಿ ಜಿಲ್ಲಾ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ
ಮಹಿಳಾ ಜಿಲ್ಲಾಧ್ಯಕ್ಷ ಶೋಭಾ ಪಾಂಗಳ, ಕಾರ್ಮಿಕ ಘಟಕ ಜಿಲ್ಲಾ ಉಪಾಧ್ಯಕ್ಷ ಕುಶಲ ಆಮೀನ್, ಕಾರ್ಮಿಕ ಘಟಕ ಜೊತೆ ಕಾರ್ಯದರ್ಶಿ ಮಹಮ್ಮದ್ ಮಜೀದ್, ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್, ಜ್ಯೋತಿ ಉಡುಪಿ ಮತ್ತಿತರರು ಉಪಸ್ಥಿತರಿದ್ದರು
Trending
- ಡಿಸೆಂಬರ್ 5 ರಂದು ಬೆಳಿಗ್ಗೆ 8.55ಕ್ಕೆ ಶಿಲಾನ್ಯಾಸ ಕಾರ್ಯಕ್ರಮ
- ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಾರೋಪ – ಯಕ್ಷಾಂಗಣ ಪ್ರಶಸ್ತಿ ಪ್ರದಾನ
- “ಎಂಸಿಎಫ್ ಹೆಸರು ಉಳಿಸಿ” ಅಭಿಯಾನ – ಐತಿಹಾಸಿಕ ಮೊದಲ ಸಭೆ ಮಂಗಳೂರಿನಲ್ಲಿ ಯಶಸ್ವಿ
- ಕಾಪು : ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಭೀಕರ ಅಪಘಾತ – ನಾಲ್ವರು ಸ್ಥಳಾಂತರಿಸುವ ವೇಳೆ ಮೃತ್ಯು
- ತೀಯಾ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಅಗತ್ಯ – ಸದಾಶಿವ ಉಳ್ಳಾಲ್
- ಡಿ.ಕೆ. ಟ್ರಾನ್ಸ್ಪೋರ್ಟ್ & ಲಾಜಿಸ್ಟಿಕ್ ಸರ್ವೀಸಸ್ – ಹೊಸ ಕಚೇರಿ ಉದ್ಘಾಟನೆ
- ಪಿಲಿಪಂಜ” ತುಳು ಚಲನಚಿತ್ರದ ಎರಡನೇ ಹಾಡಾದ ಫ್ರೆಂಡ್ಷಿಪ್ ಸಾಂಗ್, ಭಾನುವಾರ ಮಂಗಳೂರಿನ ಭಾರತ್ ಮಾಲ್ನಲ್ಲಿ ಅದ್ಧೂರಿಯಾಗಿ ಬಿಡುಗಡೆ
- ಉಡುಪಿ: ಪ್ರಧಾನಿ ನರೇಂದ್ರ ಮೋದಿ ಭವ್ಯ ರೋಡ್ ಶೋ – ಜನಸಾಗರದ ನಡುವೆ ಭಾವಪೂರ್ಣ ಸ್ವಾಗತ

