25 ರಿಂದ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ವೈದ್ಯರು ಶಿಕ್ಷಕರು, ಡೀನ್, ಜಿಲ್ಲಾ ಸರ್ಜನ್, ನಿವಾಸಿ ವೈದ್ಯಾಧಿಕಾರಿಗಳನ್ನ ಸೇರಿಸಿ ಸುಮಾರು 43 ವೈದ್ಯರನ್ನ ಹಿರಿತನದ ಆಧಾರದಲ್ಲಿ ಸನ್ಮಿಸಲಾಗುತ್ತಿದೆ ಮುಂದೆ ಈ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ಇನ್ನಷ್ಟು ವೈದ್ಯರು ನರ್ಸಿಂಗ್ ಆಫೀಸರ್ಸ್ ಸಹಾಯಕ ಸಿಬ್ಬಂದಿಗಳು ಡಿ ಗ್ರೂಪ್ ನೌಕರರನ್ನ ಗುರುತಿಸಿ ಗೌರವಿಸುವ ಯೋಜನೆ ಇದ್ದು ಇದು ಪ್ರಥಮ ಹಂತದ ಸನ್ಮಾನ ಕಾರ್ಯಕ್ರಮ ಅಂತ ಸರ್ವರನ್ನ ಸ್ವಾಗತಿಸಿದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ ಶಿವಪ್ರಕಾಶ್ ಪ್ರಸ್ತಾವನೆಯಲ್ಲಿ ತಿಳಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಹಿರಿಯ ವೈದ್ಯಕೀಯ ಶಿಕ್ಷಕರಾದ ಡಾ ಶಾಂತಾರಾಮ್ ಶೆಟ್ಟಿ ಮಾತಾಡಿ ವೆನ್ಲಾಕ್ ಲೇಡಿಗೋಶನ್ ಹಾಗು ಕೆಎಂಸಿ ಸಂಸ್ಥೆಗಳು ಆರೋಗ್ಯ ಸೇವೆ ನೀಡಲು ಹಾಲು ಜೇನು ಸಕ್ಕರೆ ಹಾಗೆ ಬೇರ್ಪಡಿಸಲು ಆಗದಷ್ಟು ಗಟ್ಟಿ ಸೇವಾ ಬಾಂದವ್ಯ ಹಾಗು ಬದ್ಧತೆಯನ್ನ ಹೊಂದಿದ ವಿಶ್ವ ಮಟ್ಟದ ಸಂಸ್ಥೆಗಳಾಗಿದ್ದು ಈ 175 ರ ಸಂಭ್ರಮದಲ್ಲಿ ವೈದ್ಯರ ದಿನಾಚರಣೆಯ ಸನ್ಮಾನ ಸ್ವೀಕರಿಸಲು ಬಂದಿರುವ ಹಿರಿಯ ವೈದ್ಯರುಗಳು ಸಂಸ್ಥೆಯ ಹಾಗು ಸಂಘಟನೆಯ ಘನತೆಯನ್ನ ಹೆಚ್ಚಿಸಿದ್ದಾರೆ ಎಂದರು. ಕೆಎಂಸಿ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಡೀನ್ ಡಾ ಸುರೇಶ್ ಶೆಟ್ಟಿ ಕೆಎಂಸಿ ವೆನ್ಲಾಕ್ ಲೇಡಿಗೋಶನ್ ನಲ್ಲಿ ಸೇವೆ ಸಲ್ಲಿಸಲು ಸಿಗುವ ಅವಕಾಶವೇ ಒಂದು ಭಾಗ್ಯ, ಹಳೆ ವಿದ್ಯಾರ್ಥಿಗಳು 175 ನೇ ವರ್ಷದ ಆಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಲಿದ್ದಾರೆ

ಎಂದರು. ಹಳೆ ವಿದ್ಯಾರ್ಥಿ ಸಂಘದ ಡಾ ಅಣ್ಣಯ್ಯಕುಲಾಲ್ ಹಾಗು ಡಾ ಕೆ ಆರ್ ಕಾಮತ್ ರವರು ಜಂಟಿಯಾಗಿ ವೆನ್ಲಾಕ್ ಲೇಡಿಗೋಶನ್ ಕೆಎಂಸಿ ಯ ಆಯ್ದ ಸುಮಾರು 43 ಮಂದಿ ಹಿರಿಯ ವೈದ್ಯರ ಹಿರಿತನ ಕಾರ್ಯತತ್ಪರತೆ ಸಾಮಾಜಿಕ ಕಾಳಜಿ ಬದ್ಧತೆಗಳನ್ನ ತಿಳಿಸಿ ಹೇಳಿ ಸನ್ಮಾನಿಸಲು ಸಹಕರಿಸಿದರು.

ಸನ್ಮಾನಿತರ ಪರವಾಗಿ ಡಾ ಎಂ ವಿ ಪ್ರಭು ಡಾ ಆರ್ ಎಂ ಶೆನಾಯ್ ಡಾ ಜೋ ವರ್ಗೀಸ್ ಡಾ ಸದಾಶಿವ ಶಾನುಭೋಗ್ ಡಾ ವತ್ಸಲಾ ಮಲ್ಯ ಮುಂತಾದವರು ಇದೊಂದು ಚಾರಿತ್ರಿಕ ಘಳಿಗೆ ಅಂತ ಮನಬಿಚ್ಚಿ ಸಂತಸ ವ್ಯಕ್ತ ಪಡಿಸಿದರು. ಡಾ ಬಿ ಸಿ ರಾಯ್ ಬಗ್ಗೆ ಡಾ ಕಾಮತ್ ವಿವರಿಸಿದರು. ಲೇಡಿಗೋಶನ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ ದುರ್ಗಾಪ್ರಸಾದ್ ವಂದಿಸಿದರು ಸ್ಮರಣ ಸಂಚಿಕೆ ಸಮಿತಿಯ ಡಾ ಸೀತಾರಾಮ್ ರಾವ್ ಕಾರ್ಯಕ್ರಮ ನಿರ್ವಹಿಸಿದರು, ಮೂರು ಸಂಸ್ಥೆಯ ಪ್ರಮುಖರು, ಹಳೆ ವಿದ್ಯಾರ್ಥಿ ಸಂಘದ ಹಾಗು 175 ನೇ ವರ್ಷಾಚರಣೆಯ ಸಮಿತಿಯ ಪದಾಧಿಕಾರಿಗಳು ಜಂಟಿಯಾಗಿ ಕಾರ್ಯಕ್ರಮವನ್ನ ಸಂಯೋಜಿಸಿದ್ದರು.
