ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಬದಿಗಳಲ್ಲಿ ಮತ್ತು ವಿದ್ಯುತ್ ಕಂಬಗಳಲ್ಲಿ ಪರವಾನಗಿ ಪಡೆಯದೇ ಕೇಬಲ್ ವಯರ್ ಗಳನ್ನು ಅಳವಡಿಸಿದ್ದರೆ ಎಲ್ಲವನ್ನೂ ತೆರವು ಮಾಡಬೇಕೆಂದು ಪಾಲಿಕೆ ಸೂಚಿಸಿದೆ. ಮಹಾನಗರ ಪಾಲಿಕೆಯ ಅನುಮತಿ ಪಡೆದು ಕೇಬಲ್ ವಯರ್ ಅಳವಡಿಸಿಕೊಂಡಿದ್ದರೆ ಈ ಕೂಡಲೇ ಉಪ ಆಯುಕ್ತರು ಅಥವಾ ಕಂದಾಯ ಅಧಿಕಾರಿಗೆ ಪರವಾನಗಿಯನ್ನು ಪರಿಶೀಲನೆಗೆ ನೀಡಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿನ ರಸ್ತೆಗಳ ಬದಿಯಲ್ಲಿ ಮಣ್ಣಿನ ಒಳಗೆ ಕೇಬಲ್ ವಯರ್ ಗಳನ್ನು ಅನುಮತಿ ಪಡೆಯದೆ ಅಳವಡಿಸಿಕೊಂಡಿದ್ದರೆ ಅವನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಪಾಲಿಕೆಯೇ ತೆಗೆದು ಹಾಕಿ ದಂಡ ವಿಧಿಸಲಾಗುವುದು ಎಂದು ಪಾಲಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
©2021 Tulunada Surya | Developed by CuriousLabs