ಬಜಪೆ: ಬಂಟರ ಸಂಘ ಬಜಪೆ ವಲಯದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೇಣುಗೋಪಾಲ್ ಶೆಟ್ಟಿ, ಪಡುಮನೆ ಕರಂಬಾರು ರವರಿಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ವಿಮಾನ ನಿಲ್ದಾಣದಿಂದ ಪೋರ್ಕೊಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನವರೆಗೆ ಭವ್ಯ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ಸಂಭ್ರಮದ ನಾದ, ಬಣ್ಣದ ಹೂವಿನ ಅಲಂಕಾರ, ಮತ್ತು ಅಭಿಮಾನಿಗಳ ಘೋಷಣೆಗಳು ಕಂಗೊಳಿಸಿತು.
ಈ ಸಂದರ್ಭದಲ್ಲಿ ಶ್ರೀ ಜಯಶಂಕರ್ ಶೆಟ್ಟಿ ಕರಂಬಾರು ಗುತ್ತು, ಶ್ರೀಮತಿ ವಿಜಯ ಶೆಟ್ಟಿ ಗಂಡೋಟ್ಟು, ಕಿಶನ್ ಶೆಟ್ಟಿ ಮರವೂರು, ಮಂಜು ಪ್ರಸಾದ್ ಶೆಟ್ಟಿ ಕೆಂಜಾರು, ದಿನೇಶ್ ಶೆಟ್ಟಿ ಚಿಕ್ಕ ಪರಾರಿ, ಜಗನಾಥ್ ಸಾಲ್ಯಾನ್ ಕರಂಬಾರು, ಸೂರ್ಯ ಕಾಂತ್ ರೈ, ರಮೇಶ್ ಸುವರ್ಣ, ರಫೀಕ್ ಕೆಂಜಾರು, ಯತೀಶ್ ಪೂಜಾರಿ ಕೆಂಜಾರು, ಚಿತ್ತರಂಜನ್ ರೈ ಕೆಂಜಾರು, ನಿತಿನ್ ಪಕ್ಕಳ ಕೆಂಜಾರು, ರವಿ ಶೆಟ್ಟಿ ಕೆಂಜಾರು ಹಾಗೂ ಬಜಪೆ ಬಂಟರ ಸಂಘದ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ವೇಣುಗೋಪಾಲ್ ಶೆಟ್ಟಿ ಅಭಿಮಾನಿಗಳು ಉಪಸ್ಥಿತರಿದ್ದರು.
ಈ ಸ್ವಾಗತ ಸಮಾರಂಭವು ಬಂಟರ ಸಂಘದ ಒಗ್ಗಟ್ಟು ಮತ್ತು ನೂತನ ನಾಯಕತ್ವದ ಮೇಲಿನ ನಂಬಿಕೆಗೆ ಸಾಕ್ಷಿಯಾಯಿತು.




