Author: Tulunada Surya

ಮಂಗಳೂರು, : ಎಲ್ಲರೂ ಸಮಾನರಾಗಿ ಬಾಳಿ ಬದುಕಿ, ಸಂಘರ್ಷರಹಿತ ಮತ್ತು ದ್ವೇಷರಹಿತ ಸಮಾಜ ನಿರ್ಮಾಣಕ್ಕೆ ಬಸವೇಶ್ವರರ ಸಂದೇಶ ಇಂದಿನ ಅಗತ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಆನಂದ್ ಹೇಳಿದ್ದಾರೆ. ಅವರು ಬುಧವಾರ ತುಳುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂಖದ ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಸಹಕಾರದೊಂದಿಗೆ ನಡೆದ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರ ತತ್ವಗಳು ಸದಾ ನಮ್ಮೊಂದಿಗೆ ಇರಬೇಕು. ಸಾಮಾಜಿಕ ಸಮಾನತೆಯನ್ನು ಅಂದಿನ ಕಾಲದಲ್ಲಿಯೇ ಪ್ರತಿಪಾದಿಸಿದ್ದ ಅವರು, ಮನುಷ್ಯರಲ್ಲಿ ಮೇಲು ಕೀಳು ಎಂಬ ನಿಲುವನ್ನು ಕಠುವಾಗಿ ವಿರೋಧಿಸಿದ್ದರು. ಇದುವೇ ಉತ್ತಮ ಸಮಾಜಕ್ಕೆ ಬುನಾಧಿಯಾಯಿತು ಎಂದು ಅವರು ಹೇಳಿದರು. ಬಸವಣ್ಣನವರು ಸಂಸ್ಥಾಪಿಸಿದ್ದ ಅನುಭವ ಮಂಟಪವು ಜಗತ್ತಿನ ಮೊದಲ ಸಂಸತ್ ಎಂದೇ ಪ್ರಸಿದ್ಧಿಯಾಗಿದೆ. ಇದು ಸಂಸದೀಯ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡಿತು. ಶ್ರಮ ಮತ್ತು ಸೇವೆಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಅವರು, ಸಮಾಜದ ಪ್ರಗತಿಗೆ ಇದು ಪ್ರಮುಖ ಆಧಾರ ಎಂದು…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಹೊರವಲಯದ ಕುಡುಪು ಸಮೀಪ ರವಿವಾರ ವ್ಯಕ್ತಿಯೊಬ್ಬರನ್ನು ಸುಮಾರು 30ಕ್ಕೂ ಅಧಿಕವಿದ್ದ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿ 15 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕುಡುಪು ಮತ್ತು ಸುತ್ತಮುತ್ತಲಿನ ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೀಶ್ ಕಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಅಲ್ವಾರಿಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ ಎಂದು ಹೇಳಿದರು. ರವಿವಾರ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅನುಮಾನದ ಆಧಾರದಲ್ಲಿ ಸೋಮವಾರ ಶವಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪ್ರಾಥಮಿಕ ವರದಿ ಪ್ರಕಾರ ಮೃತರ…

Read More

ಕಾರ್ಕಳ: ಉದ್ಯಮಿಯೋರ್ವರು ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಕಾರ್ಕಳ ತಾಲೂಕು ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ಮಂಗಳವಾರ ಮುಂಜಾನೆ ನಡೆದಿದೆ. ಕಾರ್ಕಳದ ದಿಲೀಪ್ ಎನ್ ಆರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ದಿಲೀಪ್ ಎನ್ ಆರ್ ಅವರು ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದು, ಮಂಗಳವಾರ ನಸುಕಿನ ಜಾವ ಕಾರ್ಕಳದ ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿಯ ಎಸ್ಟೇಟ್ ಮುಂಭಾಗ ಕಾರು ನಿಲ್ಲಿಸಿ ಕಾರಿನೊಳಗೆ ಕುಳಿತು ಸ್ವಯಂ ತಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಉದ್ಯಮ ನಷ್ಟ ಹಾಗೂ ವಿಪರೀತ ಸಾಲ ಆತ್ಮಹತ್ಯೆಗೆ ಕಾರಣ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಕೆಲ ವರ್ಷಗಳಿಂದ ಕುಟುಂಬದ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದರು ಕಾರಿನಲ್ಲಿ ಸ್ವೀಟ್ ಬಾಕ್ಸ್ , ರಿವಾಲ್ವರ್ ಪತ್ತೆಯಾಗಿದ್ದು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರಿನ ಕೆ ಜಿ ಎಸ್ ಕ್ಲಬ್ ನಲ್ಲಿ ನಡೆದ ರಾಜ್ಯ ಮಟ್ಟದ ಕ್ಲಾಸಿಕ್ ಪವರ್ ಲಿಟ್ಟಿಂಗ್ ಸ್ಪರ್ಧೆಯಲ್ಲಿ M-1 ವಿಭಾಗದ 66 ಕೆಜಿ ಯಲ್ಲಿ 445 ಕೆಜಿ ಭಾರವನ್ನು ಎತ್ತಿ ಚಿನ್ನದ ಪದಕ ಪಡೆದ ಸತೀಶ್ ಖಾರ್ವಿ. ಇವರು ಕುಂದಾಪುರದ ಹರ್ಕ್ಯುಲಸ್ ಜಿಮ್ಮಿನ ವ್ಯವಸ್ಥಾಪಕರಾಗಿರು ಹಾಗೂ ತುಳುನಾಡು ರಕ್ಷಣಾ ವೇದಿಕೆಯ ಕುಂದಾಪುರ ಘಟಕದ ಅಧ್ಯಕ್ಷರಾಗಿರುತ್ತಾರೆ.

Read More

*ಅಂತಾರಾಷ್ಟ್ರೀಯ ತುಳುನಾಡ ರಕ್ಷಣಾ ವೇದಿಕೆ ಗೆ ಅವಳಿ ಪ್ರಶಸ್ತಿಯ ಗರಿ* *ಯೋಗೀಶ್ ಶೆಟ್ಟಿ ಜಪ್ಪು* ರವರಿಗೆ *ರಾಷ್ಟ್ರೀಯ ತೌಳವ ರತ್ನ* ಮತ್ತು *ಫ್ರ್ಯಾಂಕಿ ಡಿಸೋಜ ಕೊಳಲಗಿರಿ* ರವರಿಗೆ *ರಾಷ್ಟ್ರೀಯ ತುಳುನಾಡು ರಕ್ಷಣಾ ರತ್ನ ಪ್ರಶಸ್ತಿ* ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಮತ್ತು ಕಲಾವಿದರ ಬೆಳಕು ಉಡುಪಿ ಇವರ ಸಹಯೋಗದಲ್ಲಿ *ರಾಷ್ಟ್ರೀಯ ಕಲಾ ಪ್ರತಿಭೋತ್ಸವ* ಕಾರ್ಯಕ್ರಮ ದಿನಾಂಕ 27- 04-2025 ರಂದು ಮದ್ಯಾಹ್ನ 2 ಗಂಟೆಗೆ ಶ್ರೀ ಕೃಷ್ಣ ಮಠ ಉಡುಪಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವು ಸೋಮಲಿಂಗೇಶ್ವರ ದೇವಋಷಿಗಳು ನಿಪನಾಳ ರವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಕೃಷ್ಣಮೂರ್ತಿ ಆಚಾರ್ಯ ರವರು ಉದ್ಘಾಟನಾ ಪರ ನುಡಿಗಳನ್ನಾಡಿದರು. ಅಧ್ಯಕ್ಷತೆಯನ್ನು ಬಡವರ ಬಂಧು ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರ ಸಭಾ ಸದಸ್ಯರು ವಿಜಯ್ ಕೋಡವುರು , ಶಿವ ಕುಮಾರ್ ಕರ್ಜೆ , ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ರಾಜ್ಯಾಧ್ಯಕ್ಷ ಪಾಪಣ್ಣ ಉಡುಪಿ,ಶ್ರೀ ಸೋಮಗೌಡ ಮಮ್ಮಿಗಟ್ಟಿ ಹುಬ್ಬಳ್ಳಿ…

Read More

ತುಮಕೂರು : ಜೀನಿ ಕಂಪನಿ ಮಾಲೀಕನ ವಿರುದ್ಧ ಅತ್ಯಚಾರಕ್ಕೆ ಯತ್ನ ಆರೋಪದ ಮೇಲೆ ಜೀನಿ ಉದ್ಯೋಗಿನಿಯಿಂದ ಮಾಲೀಕ ದಿಲೀಪ್‌ಕುಮಾರ್ ವಿರುದ್ಧ ದೂರು ದಾಖಲಾಗಿದೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಯರಕುಂಟೆ ಗ್ರಾಮದಲ್ಲಿನ ಜೀನಿ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದ್ದು ಉದ್ಯೋಗಿನಿ ಮೇಘನಾ ಜೀನಿ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದಾರೆ. ಸಿರಾ ತಾಲ್ಲೂಕಿನ ದೊಡ್ಡಗೊಳ ನಿವಾಸಿ ಮೇಘನಾ ಜೀನಿ ಫ್ಯಾಕ್ಟರಿಯಲ್ಲಿ ಕಳೆದ 10 ತಿಂಗಳಿಂದ ಕೆಲಸ ಮಾಡುತ್ತಿದ್ದು 6 ತಿಂಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಜೀನಿ ಫ್ಯಾಕ್ಟರಿಯಲ್ಲಿ ಲೈಂಗಿಕ ಕಿರುಕುಳ‌ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿದ್ದು ಸಹಕರಿಸುವಂತೆ ಬೇಡಿಕೆಯಿಟ್ಟು ರಾಣಿ ತರ ನೊಡಿಕೊಳ್ಳುತ್ತೇನೆ ಎಂದು ಕೈ ಹಿಡಿದು ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿದೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಜೀನಿ ಮಾಲೀಕ ದಿಲೀಪ್‌ ಕುಮಾರ್ ವಿರುದ್ಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರಕ್ಕೆ ಯತ್ನ, ಜಾತಿನಿಂದನೆ ಅಡಿ ದೂರು ದಾಖಲಾಗಿದೆ. ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಜೀನಿ ಮಾಲೀಕ ದಿಲೀಪ್…

Read More

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಕಾರ್ಮಿಕ ದಿನಾಚರಣೆ ದಿನಾಂಕ 01-05-2025 ರಂದು ಗುರುವಾರ ಬೆಳಿಗ್ಗೆ 10.30ಕ್ಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ. ಹಿರಿಯ ಕಾರ್ಮಿಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆತುಳುನಾಡ ರಕ್ಷಣಾ ವೇದಿಕೆಕಾರ್ಮಿಕ ಘಟಕಮಹಿಳಾ ಘಟಕಯುವ ಘಟಕವಿವಿಧ ತಾಲೂಕು ಘಟಕಗಳಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಪ್ಪದೇ ಆಗಮಿಸಬೇಕೆಂದು ಪತ್ರಿಕೆ ಪ್ರಕಟಿಣೆ ಮೂಲಕ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ತಿಳಿಸಿದ್ದಾರೆ

Read More

ಮಂಗಳೂರು: ದಿನಾಂಕ 24-04-2025 ರಂದು ಮೊಹಮ್ಮದ್ ಮುಸ್ತಾಕ್ ಎನ್ನುವ ವ್ಯಕ್ತಿಯು ನ್ಯಾಯವಾದಿ ಮಹಮ್ಮದ್ ಅಸ್ಗರ್ ರವರು ಸದ್ರಿ ವ್ಯಕ್ತಿಯ ಪ್ರಕರಣವನ್ನು ನ್ಯಾಯಾಲಯದಲ್ಲಿ ನಡೆಸಲು ನನಗೆ ಸಾಧ್ಯವಿಲ್ಲ ಎಂದು ನಿರಕ್ಷೇಪಣಾ ವಕಾಲತನ್ನು ನೀಡಿದ ಕಾರಣವನ್ನು ಇಟ್ಟುಕೊಂಡು ವಕೀಲರ ಕಚೇರಿಗೆ ಅಕ್ರಮವಾಗಿ ನುಗ್ಗಿ ಬೆದರಿಸಿ ಕಾರಿನ ಕೀಯನ್ನು ಅಕ್ರಮವಾಗಿ ತೆಗೆದು ಕಾರನ್ನು ಅಕ್ರಮವಾಗಿ ತೆಗೆದುಕೊಂಡು ಹೋಗುವುದನ್ನು ತಡೆಯಲು ಹೋದ ವಕೀಲರ ಮೇಲೆ ಕಾರನ್ನು ಹಾಯಿಸಿ ಕೊಲ್ಲುವ ಪ್ರಯತ್ನವನ್ನು ಮಾಡಿರುವ ಬಗ್ಗೆ ಮಂಗಳೂರಿನ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Read More

ಉಡುಪಿ: ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೋಡಗಿರುವ ಮೂವರು ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ. ಅವರಿಂದ ನಗದು, ಕಾರು ಮತ್ತು ಮೊಬೈಲ್ ಸೇರಿ ಒಟ್ಟು 12,16,700 ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಕುಂದಾಪುರ ಕೊರ್ಗಿಯ ಸಂದೀಪ್ (34), ಕುಂದಾಪುರ ಬೇಳೂರಿನ ಶ್ರೀರಾಜ್ (33) ಹಾಗೂ ಮೊಳಹಳ್ಳಿಯ ಮಧುಕರ್ (44) ಎಂದು ಗುರುತಿಸಲಾಗಿದೆ. ಇವರು ಐಪಿಎಲ್ ಪಂದ್ಯಗಳ ಅಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಾ, ಇತರೇ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರವರ ತಂಡ ತಿಳಿಸಿ ಅವರಿಂದ ಹಣವನ್ನು ಸಂಗ್ರಹ ಮಾಡುತ್ತಾ ಅವರಿಗೆ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿಕೊಟ್ಟು ಅವರಿಂದ ಹಣವನ್ನು ಸಂಗ್ರಹಿಸುತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಈ ಮೂವರು ಸಂಜೆ ಅಜ್ಜರಕಾಡಿನ ಭುಜಂಗ ಪಾರ್ಕ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಪಾರ್ಕರ್ ಎಂಬ ಬೆಟ್ಟಿಂಗ್ ಮೊಬೈಲ್ ಆ್ಯಪ್ ಸಹಾಯದಿಂದ ತಮ್ಮ ಸ್ಮಾರ್ಟ್ ಫೋನ್ ಮೂಲಕ ಐಪಿಎಲ್‌ನಲ್ಲಿ ಹೈದರಾಬಾದ್‌ನ ಸನ್‌ರೈಸರ್ ಹಾಗೂ ಮುಂಬಯಿ ಇಂಡಿಯನ್ಸ್ ತಂಡಗಳ ನಡುವೆ ನಡೆದ…

Read More

  ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರಗಾಮಿ ದಾಳಿ ಮಾನವೀಯತೆಯ ಮೇಲೆ ನಡೆದ ಘೋರ ದಾಳಿಯಾಗಿದೆ. ತುಳುನಾಡ ರಕ್ಷಣಾ ವೇದಿಕೆ ಇದನ್ನು ತೀವ್ರ ಕಠಿಣವಾಗಿ ಖಂಡಿಸುತ್ತದೆ.       *ಕಾಶ್ಮೀರ ಕಣಿವೆ ಸಹಜತೆಗೆ ಮರಳಿದೆ ಎಂಬ ಧೈರ್ಯ ವಿಶ್ವಾಸ ಹೆಚ್ಚಾಗುತ್ತಿರುವ ಮಧ್ಯೆಯೇ ಈ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ನಿಸ್ಸಹಾಯಕ ಮಹಿಳೆ ಮತ್ತು ಮಕ್ಕಳೆದುರು ಅವರ ತಂದೆಯನ್ನು , ಪತ್ನಿ ಮುಂದೆ ಗಂಡಂದಿರನ್ನು ಕೊಲ್ಲುವವರು ಮನುಷ್ಯರೇ ಅಲ್ಲ.       ಕಾಶ್ಮೀರದಲ್ಲಿ ಪ್ರವಾಸೋದ್ಯಮ ನಂಬಿ ಬದುಕುವ ಜನರು ಇಂತಹ ಘಟನೆಯಿಂದ ಕಂಗಾಲಾಗಿದ್ದಾರೆ. ಬದುಕಿನ ಕೆಲ ದಿನಗಳನ್ನು ಸಂತೋಷ ಮೋಜು ಮಾಡಲು ದೇಶ ವಿದೇಶಗಳಿಂದ ಬರುವ ಭೂಲೋಕದ ಸ್ವರ್ಗ ಎಂಬ ಖ್ಯಾತಿಯ ಕಾಶ್ಮೀರದಲ್ಲಿ ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೇಂದ್ರ ಸರಕಾರ ಕೈಗೊಳ್ಳಬೇಕೆಂದು‌ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಆಗ್ರಹಿಸಿದರು ಎಂದು ತುಳುನಾಡ ರಕ್ಷಣಾ ವೇದಿಕೆ ಪ್ರಕಟನೆ ತಿಳಿಸಿದೆ      

Read More