Author: Tulunada Surya

ಉಡುಪಿ: ರವಿವಾರ ದಿನಾಂಕ 22-06-2025 ರಂದು ಮದ್ಯಾಹ್ನ 12.30 ಕ್ಕೆ ಉಡುಪಿ ಅಕ್ಷಯ ಟವರ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ನೂತನ ಮಹಿಳಾ ಅಧ್ಯಕ್ಷೆ ಯಾಗಿ ನೇಮಕಗೊಂಡ ಸುನಂದ ಕೋಟ್ಯಾನ್ ರವರ ಅಭಿನಂದನೆ ಕಾರ್ಯಕ್ರಮ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು . ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಸುನಂದ ಕೋಟ್ಯಾನ್ ರವರು ಮಹಿಳಾ ಘಟಕ ಅಧ್ಯಕ್ಷೆ ಯಾಗಿ ನೇಮಕ ಮಾಡಲಾಗಿದೆ. ಅವರು ತುಳುನಾಡ ರಕ್ಷಣಾ ವೇದಿಕೆ ಸಂಘಟನೆ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಸಮರ್ಥ ರಾಗಿ ಕಾರ್ಯ ನಿರ್ವಹಿಸುತ್ತಾರೆ. ಎಂದು ಭರವಸೆ ಮೇಲೆ ಅಧಿಕಾರ ಹಸ್ತಾಂತರಿಸಿದ್ದೇವೆ. ಸಂಘಟನೆಗೆ ಯಾವುದೇ ಕಪ್ಪು ಚುಕ್ಕೆ ಬರದ ರೀತಿಯಲ್ಲಿ ಸಂಘಟನೆ ಸರ್ವ ಕಾರ್ಯಕರ್ತರನ್ನು ತಾಯಿ ಸ್ಥಾನ ದಲ್ಲಿ ನಿಂತು ಉತ್ತಮವಾಗಿ ಜೊತೆ ಯಾಗಿ ಕೊಂಡೊಯ್ಯುವ ಶಕ್ತಿ ದೇವರು ನಿಮಗೆ ಎಂದರು. ವಿವಿಧ ಘಟಕಗಳ…

Read More

ದಿನಾಂಕ 22-06-2025 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಅಕ್ಷಯ ಟವರ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಅಧ್ಯಕ್ಷತೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು . ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರಿಗೆ ಸಸಿ ನೀಡಿ ತಾವು ಉಡುಪಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳಿಗೆ ನೀಡಿ ಅವರು ತಮ್ಮ ತಮ್ಮ ಪ್ರದೇಶದಲ್ಲಿ ಸಸಿ ನೆಟ್ಟು ಅದನ್ನು ಬೆಳೆಸುವ ಪ್ರಯತ್ನ ಮಾಡಬೇಕೆಂದರು. ಆರೋಗ್ಯ ರಕ್ಷಣೆಗೆ ಮರಗಳು ಬೆಳೆಸುವುದು ಅತಿ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಹಮ್ಮಿ ಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ನಮ್ಮ ಕೊಡುಗೆ ನೀಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಕಾರ್ಯಕರ್ತರಿಗೆ ಸಸಿ ನೀಡಲು ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷಜಯ ಪೂಜಾರಿ ಲಕ್ಷ್ಮಿ ನಗರ ರವರು ನೂರಾರು ಸಸಿಯ ವ್ಯವಸ್ಥೆ ಮಾಡಿದರು. ಮಹಿಳಾ ಜಿಲ್ಲಾಧ್ಯಕ್ಷೆ ಸುನಂದ ಕೋಟ್ಯಾನ್ , ಜಿಲ್ಲಾ…

Read More

ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದು ಈ ಸಾಧನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹವ್ಯಾಸಿ ಈಜುಗಾರರಾದ ಎ ಚಂದ್ರಹಾಸ ಶೆಟ್ಟಿಯವರು ತಿಳಿಸಿದ್ದಾರೆ. ಸದ್ಯ ತಮಿಳುನಾಡಿನ ಹರಿಣಿತ ಬಿ.ಎಸ್. ಇವರ ಹೆಸರಿನಲ್ಲಿ ಇರುವ 15 ನಿಮಿಷದ ಕಪೋತಾಸನದ ದಾಖಲೆಯನ್ನು ಮುರಿದು ಈ ಸಾಧಕಿ ಒಂದು ಗಂಟೆ ಎರಡು ನಿಮಿಷದ ಅವಧಿಗೆ ಸಾಧಿಸಿ ಈ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ‌. ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿರುವ ಅಂತಾರಾಷ್ಟ್ರೀಯ ಯೋಗಪಟು ಕವಿತಾ ಅಶೋಕ್ ಈಕೆಗೆ ಅತಿ ಚಿಕ್ಕ ವಯಸ್ಸಿನಿಂದಲೇ ತರಬೇತಿಯನ್ನು ಕೊಡುತ್ತಿದ್ದಾರೆ. ಇವರಿಗೆ ಬೆನ್ನೆಲುಬಾಗಿ ಸಹಕರಿಸುತ್ತಿರುವ ಶಾಲೆಯ ಪ್ರಾಂಶುಪಾಲರಾದ ಸಿಸ್ಟ‌ರ್ ಮೇಝಿ ಎ.ಸಿ., ಶಿಕ್ಷಕಿ ವಿನುತಾ ಪ್ರವೀಣ್, ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ವ್ಯವಸ್ಥಾಪಕರಾದ ಶ್ರೀ ರಮೇಶ್ ಬಿಜೈ ಮತ್ತು…

Read More

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರು ಪಾಲಿಕೆ ಅಧಿಕಾರಿಗಳ ಮಹತ್ವದ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಶಾಸಕರು, ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದಾಗಿ ಅನೇಕ ಕಡೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಪ್ರತೀ ವಾರ್ಡ್ ಗೆ 10 ಮನೆಗಳಂತೆ 60 ವಾರ್ಡಿನ ಮನೆಗಳಿಗೂ ತುರ್ತು ದುರಸ್ತಿಗೆ ಸಹಾಯವಾಗುವಂತೆ 40 ಸಾವಿರದವರೆಗೆ ಪರಿಹಾರ ಧನ ನೀಡುವ ನಿರ್ಣಯ ಕೈಗೊಂಡು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಆದರೆ ಇದೀಗ ಬಿಜೆಪಿ ಆಡಳಿತದ ಅವಧಿ ಅಂತ್ಯವಾಗಿದ್ದು, ಪಾಲಿಕೆಯು ಜಿಲ್ಲಾಡಳಿತದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಕಾರಣ ಪರಿಹಾರ ಧನ ಯಾರಿಗೂ ಸಿಗದಿರುವುದು ಅಕ್ಷಮ್ಯ. ಈ ಹಿಂದಿನ ಕೌನ್ಸಿಲ್ ನ ನಿರ್ಣಯವನ್ನು ತಡೆ ಹಿಡಿಯಲು ಯಾರಿಗೂ ಅಧಿಕಾರವಿಲ್ಲ. ಕೂಡಲೇ ಜನರಿಗೆ ಪರಿಹಾರ ಧನ ವಿತರಣೆಯಾಗಬೇಕು. ಅಲ್ಲದೇ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರತಿಭಾವಂತ ಆಟಗಾರರಿಗೆ…

Read More

ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆಯ ಗೌರವಾನ್ವಿತ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಎಂಪಿ ರವರಿಗೆ ಬೀಳ್ಕೋಡುಗೆ ಸಮಾರಂಭ ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನುಅಪಾರ ಜಿಲ್ಲಾಧಿಕಾರಿ ಡಾ.ಸಂತೋಷ ರವರು ಮಾಡಿದ್ದು ,ವೇದಿಕೆಯಲ್ಲಿರುವ ಅಧಿಕಾರಿಗಳನ್ನು ಸ್ವಾಗತಿಸಿದರು. ಬಳಿಕ ಮಾತನಾಡಿದ ನಿವೃತ್ತ ಅಧಿಕಾರಿ ಪ್ರಭಾಕರ್ ಶರ್ಮ ಜಿಲ್ಲಾಧಿಕಾರಿ ಗಳು ಬರ್ತಾ ಇರ್ತಾರೆ ಹೋಗ್ತಾ ಇರ್ತಾರೆ ಯಾವ ಅಧಿಕಾರಿ ಈ ಮಣ್ಣಿನ ವಾಸನೆಯನ್ನು ಗುರುತ್ತಿಸುತ್ತಾರೆ ಅವರ ನೆನಪು ಅಜರಾಮರ,ಈ ಸಂಸ್ಕತಿ ,ಕಲೆ ಇತಿಹಾಸವನ್ನು ಅರ್ಥಮಾಡಿಕೊಳ್ಳುತ್ತಾರೆ ಅವರು ಮಣ್ಣಿನ ಋಣದಲ್ಲಿರುತ್ತಾರೆ.ಅಂತಹ ಅಥಿಕಾರಿಗಳಲ್ಲಿ ಮುಲೈ ಮುಹಿಲನ್ ,ಜಿಲ್ಲೆಯಿಂದ ಹೊರಡುವಾಗ ಭಾವನಾತ್ಮಕ ನೆನಪು ಇರುತ್ತದೆ ಎಂದರು, ಹಳೆಯ ಜಿಲ್ಲಾಧಿಕಾರಿಕಾರಿಗೆ ಹೊಸ ರೂಪ ಕೊಟ್ಟಿದ್ದಾರೆ,ಆ ಕಟ್ಟಡದ ಇತಿಹಾಸವನ್ನು ಪ್ರದರ್ಶನ ಮಾಡಿರುವಂತಹದು ಅದ್ಬುತ ಎಂದರು.ಈ ಬಜೆಟ್ ಅಲ್ಲಿ ಅ ಕಟ್ಟಡವನ್ನು ಹೆರಿಟೆಜ್ ಕಟ್ಟಡನ್ನಾಗಿ ಮಾಡಲು 2 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದರು.ಅವರ ಜೊತೆ ಸಾರ್ವಜನಿಕರು ಆತ್ಮೀಯ ವಾದ ಸಂಭಂದವಿರಿಸಿದ್ದು ಅದು ಜಿಲ್ಲಗೆ ಅವರ ಸೇವೆಗೆ ಸಂದ ಶಾಸ್ವತ…

Read More

ದಿನಾಂಕ ಜೂನ್ 18-2025ರಂದು ಪ್ರವೀಣ ಎಂಬ 29 ವರ್ಷ ಪ್ರಾಯದ ಯುವಕನಿಗೆ ಬೆಳಿಗ್ಗೆ ಏಳು ಗಂಟೆಯಿಂದ ಫ್ಯಾಕ್ಟರಿಗೆ ಹೋದಾಗ ಅಲ್ಲಿನಹೆಚ್ ಎ ಆರ್ ಚಂದ್ರಶೇಖರ್ ಎಂಬವರು ಪ್ರವೀಣನನ್ನು ಗೇಟಿನ ಒಳಗೆ ಬಾರದಂತೆ ತಡೆದು ಏರುದನಿಯಿಂದ ಬೆದರಿಸಿ ಬೈಕ್ ಅನ್ನು ತಡೆದು ನಿಲ್ಲಿಸಿ ಫ್ಯಾಕ್ಟರಿ ಮಾಲೀಕ ಸಂಪತ್ ಶೆಟ್ಟಿ ಬರುವವರೆಗೆ ನಿನ್ನನ್ನು ಒಳಗೆ ಬಿಡಬಾರದು ಎಂದು ಹೇಳಿದ್ದಾರೆ ಎಂದು ಗದರಿಸಿ ಅವನ ಬೈಕ್ ಮತ್ತು ಬೈಕ್ ಕೀಯನ್ನು ಕಸಿದುಕೊಂಡು ನಂತರ ಬೆಳಿಗ್ಗೆ 9.30 ಗಂಟೆಗೆ ಮಾಲೀಕರಾದ ಸಂಪತ್ ಶೆಟ್ಟಿ ರವರು ಬಂದು ಆತನನ್ನು ಉದ್ದೇಶಿಸಿ ಬೋಳಿ ಮಗನೆ ನಿನಗೆ ಬೂಟ್ ಕಾಲಲ್ಲಿ ಒದೆಯುತ್ತೇನೆ ಎಂದು ಬೆದರಿಸಿ 9 30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಒಂಟಿಕಾಲಲ್ಲಿ ನಿಲ್ಲು ಇಲ್ಲ ಅಂದ್ರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ನಿಲ್ಲಿಸಿ ಅಮಾನವೀಯ ಕೃತ್ಯವನ್ನು ಈ ಕೃಷ್ಣಪ್ರಸಾದ್ ಕ್ಯಾಶ್ ಇಂಡಸ್ಟ್ರಿಯ ಮಾಲಿಕ ಸಂಪತ್ ಶೆಟ್ಟಿ, ಮತ್ತು ಚಂದ್ರಶೇಖರ್ ಎಸಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಭಾರತೀಯ…

Read More

ರಾಷ್ಟ್ರೀಯ ವೈದ್ಯರ ದಿನಾಚರಣೆಯ ರಾಷ್ಟ್ರ ಪುರಸ್ಕಾರ ಡಾ ಕುಲಾಲ್ ಅವರಿಗೆನೂರು ವರ್ಷಗಳ ಸಂಭ್ರಮದ ಹೊಸ್ತಿಲಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಘ ತನ್ನ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಸಮುದಾಯ ಸೇವಾ ಪುರಸ್ಕಾರಕ್ಕೆಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರನ್ನ ಆಯ್ಕೆಮಾಡಿದ್ದುಅವರ ಒಡನಾಟದಲ್ಲಿ ಇರುವ ಕರಾವಳಿ ಮಲೆನಾಡು ಹಾಗು ರಾಜ್ಯದ ಎಲ್ಲಾ ವರ್ಗಗಳ ಹಿತೈಷಿಗಳಿಗೆ ಹೆಮ್ಮೆಯ ವಿಚಾರಸಮಾಜ ಮುಖಿ ವೈದ್ಯಕೀಯ ಸೇವೆ, ವೈದ್ಯಕೀಯ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ಸಿಡಿಲಬ್ಬರದ ಸಂಘಟಕ, ನೇರ ಮಿಂಚಿನ ಮಾತು, ದಿಟ್ಟ ಸ್ಪಷ್ಟ ಬರಹ, ಸಾಮಾಜಿಕ ನ್ಯಾಯಕ್ಕಾಗಿ ಬಡಿದಾಟ ಮಾಡಬಲ್ಲ ವೈದ್ಯ ಎಂಬ ಖ್ಯಾತಿಯ ಡಾ ಕುಲಾಲ್, ಐಎಂಎ, ಕುಟುಂಬ ವೈದ್ಯರ ಸಂಘ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕನ್ನಡಕಟ್ಟೆ, ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್, ವೈದ್ಯ ಬರಹಗಾರರ ಬಳಗ, ಯುವ ವೇದಿಕೆ ಸಹಿತ ನೂರಾರು ಸಂಘಟನೆಗಳ ಜೊತೆ ಸದ್ದಿಲ್ಲದೇ ದುಡಿಯುತ್ತಾ, ತನು ಮನ ಧನಗಳ ಸಹಕಾರ ನೀಡುತ್ತಾ, ಮುಗುಳ್ನಗುತ್ತಾ ಸದ್ದಿಲ್ಲದೇ ಸುದ್ದಿಯಾದವರು. ನಾಡಿನ ಶ್ರೇಷ್ಠ ಪುರಸ್ಕಾರ ವಾದ ದೇವರಾಜ ಅರಸು…

Read More

ಬೆಳ್ತಂಗಡಿ: ಮನೆಯೊಂದರಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ ಮತ್ತು ಸಿಬ್ಬಂದಿ ದಾಳಿ ನಡೆಸಿ ಒಂಬತ್ತು ಮಂದಿಯನ್ನು ಬಂಧಿಸಿದ ಘಟನೆ ಓಡಿನ್ನಾಳ ಗ್ರಾಮದ ಪಣೆಜಾಲು ಎಂಬಲ್ಲಿ ನಡೆದಿದೆ. ದಾಳಿ ಸಂದರ್ಭ ಜೂಜಾಟದಲ್ಲಿ ನಿರತರಾಗಿದ್ದ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು, ಜೊತೆಗೆ ಸ್ಥಳದಲ್ಲಿ ಜೂಜಾಟಕ್ಕೆ ಬಳಸಲಾಗಿದ್ದ ಎಲೆಗಳು, 6 ಮೊಬೈಲ್ ಫೋನ್, 2 ಬೈಕ್, 1 ಆಟೋ ರಿಕ್ಷಾ ಹಾಗೂ 26,778 ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ 78,80 KP Act -1963 ಮತ್ತು ಕಲಂ 112(1) BNS 23 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ, ಸಬ್ ಇನ್ಸೆಕ್ಟರ್ ಮುರುಳೀಧರ್ ನಾಯ್ ಸಬ್ ಇನ್ಸ್ಪೆಕ್ಟರ್ ಮಲ್ಲಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Read More

ಪಿರ್ಯಾದಿದಾರರ ತಾಯಿ ತನ್ನ ಹೆಸರಿನಲ್ಲಿರುವ ಕಂಕನಾಡಿ ಗ್ರಾಮದ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ಫೆಬ್ರವರಿ 2025 ರಂದು ಮಂಗಳೂರು ಯು.ಪಿ.ಓ.ಆರ್ ಕಛೇರಿಗೆ ಅರ್ಜಿ ಸಲ್ಲಿಸಿದ್ದು, ಪಿರ್ಯಾದಿದಾರರ ತಾಯಿಗೆ ವಯಸ್ಸಾಗಿರುವುದರಿಂದ ಪಿರ್ಯಾದಿದಾರರು ಮಂಗಳೂರು ಯು.ಪಿ.ಓ.ಆರ್ ಕಛೇರಿಗೆ ಹೋಗಿ ಕಡತದ ಬಗ್ಗೆ ವಿಚಾರಿಸಿರುತ್ತಾರೆ. ಅಲ್ಲಿನ ಸರ್ವೆಯರ್ ನಂದೀಶ್ ರವರು ಏಪ್ರಿಲ್ 2025 ರಂದು ಸರ್ವೆ ನಡೆಸಿ ನಂತರ ರೂ 6500/- ಲಂಚದ ಹಣವನ್ನು ತಾನು ಸ್ವೀಕರಿಸಿದ್ದು ಹಾಗೂ ರೂ 20,000/- ಲಂಚದ ಹಣವನ್ನು ದಿವಾಕರ್, ಬಿಜೈ, ಮಂಗಳೂರು ಮಧ್ಯವರ್ತಿಯವರ ಮೂಲಕ ಪಡೆದುಕೊಂಡಿರುತ್ತಾರೆ. ನಂತರ ಸರ್ವೆಯರ್ ನಂದೀಶ್ ರವರು ಬಜಾಲ್ ಮತ್ತು ಕಂಕನಾಡಿ ಗ್ರಾಮದ ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ ರೂ 18,000/- ಲಂಚದ ಹಣವನ್ನು ನೀಡುವಂತೆ ಪಿರ್ಯಾದಿದಾರರಿಗೆ ಒತ್ತಾಯಿಸಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ಸಾಕ್ಷಿ ಪುರಾವೆಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಂಗಳೂರು…

Read More

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಕೊಳಂಬೆ ಇಲ್ಲಿಯ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಬ್ಯಾಗ್ ವಿತರಣೆ ಮಾಡಲಾಯಿತು. ಸರಕಾರದ ವತಿಯಿಂದ ಸಮವಸ್ತ್ರ, ವಿನೋಧರ್ ವಕೀಲರು ಮತ್ತು ಸರಿತಾ ಚಾರಿಟೇಬಲ್ ಟ್ರಸ್ಟ್, ಶ್ರೀ ನಾರಾಯಣ ನಿವೃತ್ತ ಕೇಂದ್ರ ಸರಕಾರಿ ನೌಕರರು ಇವರ ವತಿಯಿಂದ ಬರೆಯುವ ಪುಸ್ತಕ. ಪ್ರವೀಣ್ ಚಂದ್ರ ರೈ ಕೊಲ್ಪೆ ಇವರ ಸಹಭಾಗಿತ್ವದಲ್ಲಿ ಅಧನಿ ಗ್ರೂಪ್ ಆಫ್ ಕಂಪನಿ ವತಿಯಿಂದ ಮಕ್ಕಳಿಗೆ ಶಾಲೆಗೆ ಬರುವ ರಿಕ್ಷಾದ ಖರ್ಚು ವೆಚ್ಚ, ಯಶವಂತ್ ಫ್ರೆಂಡ್ಸ್ ಸರ್ಕಲ್ ಕೊಳಂಬೆ ಇವರ ವತಿಯಿಂದ ಬ್ಯಾಗ್ ಹಾಗೂ ಯಶವಂತ್ ಫ್ರೆಂಡ್ಸ್ ಸರ್ಕಲ್ ಸದಸ್ಯ ಕಾರ್ತಿಕ್ ಇವರಿಂದ ಟೈ ಮತ್ತು ಐಡಿಗೆ ಬೇಕಾಗುವ ಖರ್ಚು ವೆಚ್ಚ ನೀಡಿದರು. . ವೇದಿಕೆಯಲ್ಲಿ ಪ್ರವೀಣಚಂದ್ರ ರೈ ಕೊಲ್ಪೆ. ಮುಖ್ಯ ಅಥಿತಿಗಳಾಗಿ ವಿನೋಧರ್ ವಕೀಲರು, ಶ್ರೀ ನಾರಾಯಣ ಕೇಂದ್ರ ಸಹಕಾರಿ ನೌಕರರು .ಅತಿಥಿಗಳಾಗಿ ಯಶವಂತ್ ಫ್ರೆಂಡ್ಸ್ ಸರ್ಕಲ್ ಸದಸ್ಯರು ಸುಶೀಲ, ತೇಜಸ್, ಮುರಳಿ, ಜಯಂತ್ ಹಾಗೂ ಮುಖ್ಯ್ಯೊಪಾಧ್ಯಾರಾದ ಮೊಲಿ ಮೇರಿನ ಲೈಸಾ,…

Read More