- ಡಿಸೆಂಬರ್ 25ರಂದು ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಎಂ.ಆರ್.ಜಿ. ಗ್ರೂಪ್ನ ಆಶಾ–ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಸಮಾಜಮುಖಿ ಯೋಜನೆ ‘ನೆರವು–2025’
- ಉಡುಪಿ: ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಪಿಂಪ್ಗಳನ್ನು ಬಂಧಿಸಿದ ಪಡುಬಿದ್ರೆ ಪೊಲೀಸರು
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
- ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕ ಸ್ಥಾನ , ನಿರ್ದೇಶಕರ ಭವಿಷ್ಯ ಕುರಿತಾಗಿ ಚರ್ಚೆಗೂ ದಾರಿ ?
- ಮಂಗಳೂರು: MDMA ಸಾಗಾಟ ಜಾಲ ಭೇದಿಸಿದ ಸಿಸಿಬಿ; ಮೂವರು ಆರೋಪಿಗಳು ಬಂಧನ
- ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸ್ ಕ್ರಮ ಖಂಡನೀಯ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ತೀವ್ರ ಆಕ್ರೋಶ
- ಉಪ್ಪುರು ಪರಾರಿ ಬೊಬ್ಬರ್ಯ ದೈವಸ್ಥಾನದ ನೂತನ ಗರ್ಭಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ–ನಿಧಿಕುಂಭ ಸ್ಥಾಪನೆ ವಿಜೃಂಭಣೆ
- ತುಳುಕೂಟದಿಂದ ತುಳು ತಾಳಮದ್ದೊಲಿ ಸಪ್ತಾಹ
Author: Tulunada Surya
ಎಂ.ಆರ್.ಜಿ. ಗ್ರೂಪ್ನ ಆಶಾ–ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಸಮಾಜಮುಖಿ ಯೋಜನೆ ‘ನೆರವು–2025’ ಡಿಸೆಂಬರ್ 25ರಂದು ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸುಮಾರು 4,000 ಕುಟುಂಬಗಳು ಹಾಗೂ 100ಕ್ಕೂ ಅಧಿಕ ಸಂಘ–ಸಂಸ್ಥೆಗಳಿಗೆ ಒಟ್ಟು ₹9.5 ಕೋಟಿ ಮೊತ್ತದ ನೆರವು ವಿತರಿಸಲಾಗಲಿದೆ ಎಂದು ಎಂ.ಆರ್.ಜಿ. ಗ್ರೂಪ್ನ ಚೇರ್ಮನ್ ಡಾ. ಪ್ರಕಾಶ್ ಶೆಟ್ಟಿ ಪ್ರಕಟಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರವು’ ಯೋಜನೆ ಈ ವರ್ಷ ಏಳನೇ ವರ್ಷಕ್ಕೆ ಕಾಲಿಟ್ಟಿದ್ದು, ಮುಂದಿನ ಮೂರು ವರ್ಷಗಳ ಕಾಲ ಮುಂದುವರಿಯಲಿದೆ ಎಂದು ತಿಳಿಸಿದರು. ದಶಮಾನೋತ್ಸವದ ನಂತರ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಯೋಜನೆಗೆ ಸಾಮೂಹಿಕ ಸ್ವರೂಪ ನೀಡುವ ಚಿಂತನೆ ಇದೆ. ಈ ವಿಸ್ತರಣೆಯಿಂದ ಮುಂದಿನ ದಿನಗಳಲ್ಲಿ ಪ್ರತಿವರ್ಷ ಕನಿಷ್ಠ 14,000 ಕುಟುಂಬಗಳಿಗೆ ನೆರವು ನೀಡುವ ಸಾಧ್ಯತೆ ಇದೆ ಎಂದು ಹೇಳಿದರು. ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿಲ್ಲ ಎಂಬ ವಾಸ್ತವವನ್ನು ಉಲ್ಲೇಖಿಸಿದ ಡಾ. ಶೆಟ್ಟಿ, ಈ ಬಾರಿ…
ಉಡುಪಿ: ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಪಿಂಪ್ಗಳನ್ನು ಪಡುಬಿದ್ರೆ ಪೊಲೀಸರು ಬಂಧಿಸಿ ಮಹಿಳೆಯರನ್ನು ರಕ್ಷಿಸಿದ ಘಟನೆ ಕಾಪು ಠಾಣಾ ವ್ಯಾಪ್ತಿಯ ನಡ್ಸಾಲು ಎಂಬಲ್ಲಿ ನಡೆದಿದೆ. ಉಚ್ಚಿಲ ಪೊಲ್ಯದ ಯತಿರಾಜ ಪೊಲ್ಯ ಶೆಟ್ಟಿ(48), ಮತ್ತು ಕಾಡಿಪಟ್ಣ ನವೀನ್ ಪೂಜಾರಿ(39) ಬಂಧಿತ ಆರೋಪಿಗಳು. ಕಾಪು ತಾಲೂಕು ನಡ್ಸಾಲು ಗ್ರಾಮದ ರಾ.ಹೆ 66ರ ಪಕ್ಕದಲ್ಲಿರುವ ಮಹಾದೇವಿ ಟೂರಿಸ್ಟ್ ಹೋಮ್ ಲಾಡ್ಜ್ನಲ್ಲಿ ಮಹಿಳೆಯರನ್ನು ಇರಿಸಿಕೊಂಡು ವೈಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಖಚಿತ ಮಾಹಿತಿಯಂತೆ ಪಡುಬಿದ್ರಿ ಪೊಲೀಸರು ಕಾಪು ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಧರ್ಮಸ್ಥಳ: ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ 2026–28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಮಹಾ ಚುನಾವಣೆಯು ಇಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಎಸ್ಡಿಎಂ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯೆ ಇಂದು ಮತ ಎಣಿಕೆ ಹಾಗೂ ವಿಜೇತ ಅಭ್ಯರ್ಥಿಗಳ ಘೋಷಣೆಯೊಂದಿಗೆ ಸಂಪೂರ್ಣಗೊಂಡಿತು. ಮತ ಎಣಿಕೆ ಪ್ರಕ್ರಿಯೆಯು ಕಾಲೇಜಿನ ಎರಡನೇ ಮಹಡಿಯಲ್ಲಿ ಶಾಂತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಯಿತು. ಚುನಾವಣೆಯ ಫಲಿತಾಂಶದಂತೆ 2026–28ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ರಾವ್, ಉಪಾಧ್ಯಕ್ಷರಾಗಿ ಉಮೇಶ್ ಗಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಈ ದಿನಕರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಜಯಶ್ರೀ ರಟ್ಟಿಹಳ್ಳಿ, ಸಂಚಾಲಕರಾಗಿ ಅಶ್ವಿನ್ ಹಾಗೂ ವಿನೋದ್ ಕುಮಾರ್ ಎ. ರವರು ಆಯ್ಕೆಯಾಗಿದ್ದಾರೆ. ಎಲ್ಲಾ ವಿಜೇತ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಈ ಸಂದರ್ಭ ನಡೆದ…
ನವದೆಹಲಿ:ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ನಿರ್ದೇಶಕರ ಅವಧಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊರಡಿಸಿರುವ ಇತ್ತೀಚಿನ ಆದೇಶ/ಸುತ್ತೋಲೆ ಹೊಸ ಚರ್ಚೆಗೆ ಕಾರಣವಾಗಿದೆ. ಆಗಸ್ಟ್ 1ರಿಂದ ಜಾರಿಗೊಂಡಿರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ (ತಿದ್ದುಪಡಿ)–2025ರ ಸೆಕ್ಷನ್ 10ಎ(2)(ಜಿ) ಪ್ರಕಾರ, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ಗಳು (ಡಿಸಿಸಿ) ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕರಾಗಿ ಮುಂದುವರಿಯಲು ಅವಕಾಶ ಇರುತ್ತದೆ. ಈ ಅವಧಿ ಮೀರಿದರೆ ಅವರು ಸ್ವಯಂಚಾಲಿತವಾಗಿ ಅನರ್ಹರಾಗುತ್ತಾರೆ. ಈ ಕಾನೂನು ತಿದ್ದುಪಡಿಯ ಅನುಷ್ಠಾನಕ್ಕಾಗಿ ಆರ್ಬಿಐ ಈಗಾಗಲೇ ದೇಶದ ಎಲ್ಲಾ ರಾಜ್ಯಗಳಂತೆ ಕರ್ನಾಟಕದ ಅಪೆಕ್ಸ್, ಡಿಸಿಸಿ ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್ಗಳಿಗೆ ಸುತ್ತೋಲೆ ಜಾರಿ ಮಾಡಿದ್ದು, 2025ರ ಆಗಸ್ಟ್ 1ರಿಂದ ತಿದ್ದುಪಡಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದೆ. ಈ ನಿರ್ದೇಶನದಿಂದ ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ಆಡಳಿತ ಸುಧಾರಣೆ ಹಾಗೂ ಹೊಸ ಮುಖಗಳಿಗೆ ಅವಕಾಶ ಸಿಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು,…
ಮಂಗಳೂರಿಗೆ ಬೆಂಗಳೂರಿನಿಂದ MDMA ಮಾದಕ ವಸ್ತು ತಂದು ಸ್ಥಳೀಯ ಡ್ರಗ್ ಪೆಡ್ಲರ್ಗಳಿಗೆ ಸರಬರಾಜು ಮಾಡುತ್ತಿದ್ದ ಸಂಘಟಿತ ತಂಡವನ್ನು ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇದಿಸಿದ್ದಾರೆ. ಡಿ.13ರಂದು ಕಾರಿನಲ್ಲಿ ಸಾಗುತ್ತಿದ್ದ ತಂಡವನ್ನು ಅರ್ಕುಳ ಬಳಿ ವಶಕ್ಕೆ ಪಡೆದ ಪೊಲೀಸರು, ಮಲ್ಲೂರು ನಿವಾಸಿ ಅಹಮ್ಮದ್ ಶಾಬೀತ್ (35), ಬಂಟ್ವಾಳ ನಿವಾಸಿ ಮಹಮ್ಮದ್ ಶಂಶೀರ್ (36) ಹಾಗೂ ಬಂಟ್ವಾಳದ ನಿವಾಸಿ ನೌಶೀನ (27) ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 90 ಗ್ರಾಂ MDMA ಮಾದಕ ವಸ್ತು, ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರು (KL-58-W-6342) ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅಹಮ್ಮದ್ ಶಾಬೀತ್ ಬೆಂಗಳೂರಿನಿಂದ ನಿರಂತರವಾಗಿ MDMA ತಂದು ಮಂಗಳೂರಿನ ಡ್ರಗ್ ಪೆಡ್ಲರ್ಗಳಿಗೆ ಪೂರೈಕೆ ಮಾಡುತ್ತಿದ್ದನು. ಶಂಕೆ ತಪ್ಪಿಸಲು ಮಹಿಳೆಯನ್ನು ಜೊತೆಗೆ ಇರಿಸಿಕೊಂಡು ಸಾಗಾಟ ನಡೆಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ತಂಡ ಆರೋಪಿಗಳನ್ನು ಬಂಧಿಸಿ, ಕಂಕನಾಡಿ ನಗರ ಪೊಲೀಸ್…
ಉಡುಪಿ: ಪೊಲೀಸರು ಆರೋಪಿಯನ್ನು ಹುಡುಕುವ ನೆಪದಲ್ಲಿ ಇತರರೊಂದಿಗೆ ಸೇರಿಕೊಂಡು ಕುಮಾರಿ ಅಕ್ಷತಾ ಪೂಜಾರಿ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ, ಬಳಿಕ ನಡೆದ ಪೊಲೀಸ್ ಕ್ರಮ ಸಂಪೂರ್ಣವಾಗಿ ಖಂಡನೀಯವಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆರೋಪಿಸಿದೆ. ಘಟನೆಯ ವೇಳೆ ಹಲ್ಲೆಗೆ ಒಳಗಾದ ಕುಮಾರಿ ಅಕ್ಷತಾ ಪೂಜಾರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯ ಕುರಿತು ಹೇಳಿಕೆ ನೀಡಿದರೂ, ಠಾಣಾಧಿಕಾರಿಗಳು ಆಕೆಯ ದೂರನ್ನು ದಾಖಲಿಸದೆ, ಆರೋಪಿಗಳಾದ ಪೊಲೀಸರನ್ನು ರಕ್ಷಿಸುವ ಉದ್ದೇಶದಿಂದ ಅಕ್ಷತಾ ಪೂಜಾರಿ ಹಾಗೂ ಆಕೆಯ ತಾಯಿಯ ಮೇಲೆ “ಕರ್ತವ್ಯಕ್ಕೆ ಅಡ್ಡಿ” ಎಂಬ ಸುಳ್ಳು ಪ್ರಕರಣ ದಾಖಲಿಸಿರುವುದು ಗಂಭೀರ ಅನ್ಯಾಯವಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಮುಖಂಡ ಪ್ರವೀಣ್ ಪೂಜಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಕಾನೂನಿನ ರಕ್ಷಕರಾಗಿರಬೇಕಾದರೆ, ಇಂತಹ ಅಕ್ರಮ ಪ್ರವೇಶ, ಹಲ್ಲೆ ಹಾಗೂ ನಂತರ ದೂರು ನೀಡಿದ ಮಹಿಳೆಯ ಮೇಲೆಯೇ ಪ್ರತಿಕಾರವಾಗಿ…
ಉಪ್ಪುರು ಪರಾರಿ:ಪರಿವಾರ ಸಹಿತ ಬೊಬ್ಬರ್ಯ ದೈವಸ್ಥಾನ, ಉಪ್ಪುರು ಪರಾರಿ ಇದರ ನೂತನ ಗರ್ಭಗುಡಿ ನಿರ್ಮಾಣದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ನಿಧಿಕುಂಭ ಸ್ಥಾಪನಾ ಮಹೋತ್ಸವವು ದಿನಾಂಕ 14-12-2026, ಭಾನುವಾರ ಬೆಳಿಗ್ಗೆ 11 ಗಂಟೆ 05 ನಿಮಿಷಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವು ವೇದಮೂರ್ತಿ ಶ್ರೀ ಗುರುರಾಜ್ ಭಟ್ ಕೊಳಲಗಿರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಲಕ್ಷ್ಮೀಶ್ ಭಟ್ ಪರಾರಿ ಅವರ ಪೌರೋಹಿತ್ಯದಲ್ಲಿ ಪೂಜಾ ವಿಧಿಗಳು ನಡೆಯಲಿದ್ದು, ಹಿರಿಯ ಪುರೋಹಿತರಾದ ಶ್ರೀಯುತ ಅನಂತರಾಮ್ ಭಟ್ ಪರಾರಿ ಅವರು ನಿಧಿಕುಂಭ ಸ್ಥಾಪನೆಯನ್ನು ನೆರವೇರಿಸಿದರು.ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ ಸುವರ್ಣ ಅವರು ಶಿಲಾನ್ಯಾಸ ಕಾರ್ಯಕ್ರಮವನ್ನು ಅಧಿಕೃತವಾಗಿ ನೆರವೇರಿಸಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಸತೀಶ್ ಪೂಜಾರಿ ಕೀಲಂಜೆ, ಗಣಪತಿ ದೇವಸ್ಥಾನ ಆಡಳಿತ ಮುಖ್ಯಸ್ಥರು ಪ್ರಶಾಂತ್ ಸುವರ್ಣ ಮಾಯಾಡಿ, ಉದ್ಯಮಿಗಳು ಹಾಗೂ ಸಮಾಜಸೇವಕರಾದ ನವೀನ್ ಪೆರಡೂರು, ತುಳುನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜಾ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾವಂಜೆಯ ಆಡಳಿತ ಮುಖ್ಯಸ್ಥ ಸುರೇಶ್…
ತಾಳಮದ್ದಳೆ ಮೂಲಕ ಸಾರ್ಥಕ ಸಂಸ್ಮರಣೆ: ಡಾ|ಪ್ರಭಾಕರ ಜೋಶಿ ಮಂಗಳೂರು: ‘ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ದಾಮೋದರ ನಿಸರ್ಗರು ತಮ್ಮ ತಂದೆಯ ಹೆಸರಿನಲ್ಲಿ ನಡೆಸುತ್ತಿದ್ದ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರತಿವರ್ಷ ತಾಳಮದ್ದಳೆ ನಡೆಸುತ್ತಿದ್ದರು. ಅಲ್ಲದೆ ತುಳುಕೂಟದ ಆಶ್ರಯದಲ್ಲಿ ತುಳು ಸಂಸ್ಕೃತಿಗೆ ಸಂಬಂಧಿಸಿ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇದೀಗ ತುಳು ಕೂಟವು ಗರೋಡಿಯ ಬ್ರಹ್ಮ ಬೈದ್ಯರ್ಕಳ ಪುಣ್ಯಸ್ಥಳದಲ್ಲಿ ನಿಸರ್ಗರ ನೆನಪಿನ ಸಪ್ತಾಹ ನಡೆಸುತ್ತಿರುವುದು ಒಂದು ಸಾರ್ಥಕ ಸಂಸ್ಮರಣೆಯೆನಿಸಿದೆ’ ಎಂದು ಹಿರಿಯ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು. ಕುಡ್ಲ ತುಳುಕೂಟವು ದಿ| ದಾಮೋದರ ನಿಸರ್ಗರ ಸ್ಮರಣಾರ್ಥ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ನಡೆಸುತ್ತಿರುವ ‘ತುಳು ತಾಳಮದ್ದೊಲಿ’ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಖ್ಯಾತ ಅರ್ಥಧಾರಿ ಜಬ್ಬಾರ್ ಸಮೋ ಅವರನ್ನು ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಶಾಲು – ಸ್ಮರಣಿಕೆ ನೀಡಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ,…
ಮಂಗಳೂರು: ಯಸ್ ಬಿ ಗ್ರೂಪ್ಸ್ ಅರ್ಪಣೆ ಹಾಗೂ ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ, ಪ್ರತೀಕ್ ಯು. ಪೂಜಾರಿ (ಕಾವೂರು) ನಿರ್ಮಾಣದ ಹಾಗೂ ಭರತ್ ಶೆಟ್ಟಿ ಅವರ ಕಥೆ–ಪರಿಕಲ್ಪನೆ–ನಿರ್ದೇಶನದ ಬಹುನಿರೀಕ್ಷಿತ ತುಳು ಸಿನಿಮಾ “ಪಿಲಿಪಂಜ” ಮಂಗಳೂರಿನ ಭಾರತ್ ಮಾಲ್ನ ಬಿಗ್ ಸಿನಿಮಾಸ್ನಲ್ಲಿ ಭವ್ಯವಾಗಿ ಬಿಡುಗಡೆಯಾಯಿತು. ಚಿತ್ರ ಬಿಡುಗಡೆ ಸಮಾರಂಭವನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ನಾಟಕಗಳು ಮತ್ತು ಸಿನಿಮಾಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಾಟಕ ಹಾಗೂ ಚಿತ್ರಗಳ ಮೂಲಕ ತುಳು ಭಾಷೆ ಇಂದು ಎಲ್ಲೆಡೆ ಪಸರಿಸಿದ್ದು, ತುಳು ಭಾಷೆಯಲ್ಲಿ ನಿರ್ಮಾಣವಾಗುವ ಪ್ರತಿಯೊಂದು ಸಿನಿಮಾಗಳನ್ನೂ ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ಆರ್. ಪದ್ಮರಾಜ್ ಪೂಜಾರಿ ಮಾತನಾಡಿ, ತುಳು ಭಾಷೆಯ ಸಿನಿಮಾಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಶಕ್ತಿಯನ್ನು ಹೊಂದಿವೆ. ಮುಂದಿನ ದಿನಗಳಲ್ಲಿ ತುಳು ಚಿತ್ರರಂಗದಲ್ಲಿ ಇನ್ನೂ…
ಶರತ್ ಕುಮಾರ್ ಬಜಾಲ್ – ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿಹರೀಶ್ ಶೆಟ್ಟಿ ಜಪ್ಪಿನಮೊಗರು – ಸಂಘಟನಾ ಕಾರ್ಯದರ್ಶಿ ಮಂಗಳೂರು:ತುಳುನಾಡದ ಗೌರವ, ಪರಂಪರೆ, ಸಂಸ್ಕೃತಿ ಮತ್ತು ಕನ್ನಡ–ತುಳು ಭಾವನೆಯನ್ನು ಉಳಿಸಿ ಬೆಳೆಸುವ ಅಭಿಯಾನದ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತುಳುನಾಡ ರಕ್ಷಣಾ ವೇದಿಕೆ ಕಳೆದ 16 ವರ್ಷಗಳಿಂದ ಜನಪರ ಚಟುವಟಿಕೆಗಳ ಮೂಲಕ ಕರಾವಳಿಯಲ್ಲಿ ಮಾತ್ರವಲ್ಲ, ದೇಶ–ವಿದೇಶಗಳಲ್ಲೂ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ನಿರ್ಮಿಸಿಕೊಂಡಿದೆ. ಸಂಸ್ಥೆಯು ಸ್ಥಾಪನೆಯಾದ ದಿನದಿಂದಲೂ “ಮಾನವ ಸೇವೆಯೇ ಮಾಧವ ಸೇವೆ” ಎಂಬ ತತ್ವವನ್ನು ಅನುಸರಿಸಿ, ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶಿಕ್ಷಣ ಮತ್ತು ತುರ್ತು ಸೇವಾ ಕ್ಷೇತ್ರಗಳಲ್ಲಿ ಜನರಿಗೆ ನೆರವಾಗುತ್ತಾ ಬರುತ್ತಿದೆ. ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ಪ್ರಾಕೃತಿಕ ವಿಪತ್ತುಗಳು, ಅಗ್ನಿ ಅವಘಡಗಳು, ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ರೋಗಿಗಳಿಗೆ ಔಷಧಿ–ಆರ್ಥಿಕ ಸಹಾಯ, ರಕ್ತದಾನ ಶಿಬಿರಗಳು, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು, ದೇವಾಲಯ–ಸಮುದಾಯ ಕೇಂದ್ರಗಳ ಅಭಿವೃದ್ಧಿ ಸೇರಿದಂತೆ ನೂರಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಸಂಸ್ಥೆ ವಿಶಿಷ್ಟ ಸ್ಥಾನ ಪಡೆದಿದೆ. ದೇಶ–ವಿದೇಶಗಳಲ್ಲಿ ಕಾರ್ಯಕರ್ತರ ಜಾಲ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
