*ಮಾಲತಿ ಶೆಟ್ಟಿ ಮಾಣೂರು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ * ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಾಹಿತಿ ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ 2026- 27 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಂಗಳೂರಿನ ನೆಹರು ಮೈದಾನದಲ್ಲಿ ನವೆಂಬರ್ 1ರಂದು ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಂಸದರಾದ ಬ್ರಿಜೇಶ್ ಚೌಟರವರು ಹಾಗೂ ಶಾಸಕರಾದ ವೇದವ್ಯಾಸ. ಕಾಮತ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ .ಡಿ .ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ.ಪಿ ಶ್ರೀನಾಥ್ ,ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾದ ವಿಶ್ವಾಸ್ ಕುಮಾರ್ ದಾಸ್ ಹಾಗೂ ವಿವಿಧ ನಿಗಮಗಳ ಅಧ್ಯಕ್ಷರು ವಿವಿಧ ಅಕಾಡೆಮಿಗಳ ಅಧ್ಯಕ್ಷರು . ಜಿಲ್ಲಾಧಿಕಾರಿಗಳಾದ ದರ್ಶನ್ ಸರ್, ಆಯುಕ್ತರಾದ ರಾಹುಲ್ ರತ್ನಪಾಂಡೆ,ಸರ್ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ,ಸರ್,ಪೊಲೀಸ್ ಆಯುಕ್ತರದ ಸುಧೀರ್ ಕುಮಾರ್ ರೆಡ್ಡಿ,ಸರ್, ಉಪಸ್ಥಿತರಿದ್ದರು . ಡಾ.ಮಾಲತಿ ಶೆಟ್ಟಿ ಮಾಣೂರುರವರು ಕಳೆದ 22 ವರುಷಗಳಿಂದ ಸಾಹಿತ್ಯ, ಪತ್ರಿಕೋದ್ಯಮ, ಸಮಾಜ ಸೇವೆ, ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಹಿತ್ಯ ಪರ ಅಮೃತ ಪ್ರಕಾಶ ಪತ್ರಿಕೆಯನ್ನು ಕಳೆದ 13 ವರುಷಗಳಿಂದ ನಡೆಸುತ್ತಿದ್ದಾರೆ. 9 ಕೃತಿಗಳನ್ನು ಬರೆದಿದ್ದಾರೆ. ಪತ್ರಿಕೆಯ ವತಿಯಿಂದ ಹಿರಿಯ ಕಿರಿಯ ಲೇಖಕರ 49 ಕೃತಿಗಳನ್ನು ಸರಣಿ ಕೃತಿ ಬಿಡುಗಡೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಸರಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಸಾಹಿತ್ಯ ಅಭಿರುಚಿ ಮೂಡಿಸುವ ಸಲುವಾಗಿ 120 ಶಾಲಾ-ಕಾಲೇಜುಗಳಲ್ಲಿ ಯಶಸ್ವಿಯಾಗಿ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಮಾಡಿದ್ದಾರೆ .ಹಿರಿಯ ಯಕ್ಷಗಾನ ಕಲಾವಿದ ದಿವಂಗತ ಕಿಟ್ಟಣ್ಣ ಶೆಟ್ಟಿ ಮಾಣೂರು ಹಾಗೂ ರೇವತಿ ಶೆಟ್ಟಿ ಮಾಣೂರು ಅವರ ಸುಪುತ್ರಿ .ಪತಿ ಸತ್ಯ ಪ್ರಕಾಶ್ ಶೆಟ್ಟಿ ಜೊತೆ ವೈದ್ಯನಾಥ ನಗರ ಅತ್ತಾವರ ಸಾಹಿತ್ಯ ನಂದನದಲ್ಲಿ ವಾಸವಾಗಿದ್ದಾರೆ.
Trending
- *ಮಾಲತಿ ಶೆಟ್ಟಿ ಮಾಣೂರು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
- ಖಾಸಗಿ ಸಾರಿಗೆ ಕಾರ್ಮಿಕರ ಹಕ್ಕುಗಳಿಗಾಗಿ ನ.19ರಂದು ದೆಹಲಿಯಲ್ಲಿ ಬಿಎಂಎಸ್ ಮಹಾಧರಣಿ
- ತುಳು ಭಾಷೆಗೆ ರಾಷ್ಟ್ರೀಯ ಸ್ಥಾನ: ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಬಹುಭಾಷಾ ಕವಿಗೋಷ್ಟಿಯಲ್ಲಿ ಅವಕಾಶ
- ನಂದಳಿಕೆಯಲ್ಲಿ 639 ವರ್ಷಗಳ ಹಿಂದಿನ ಶಿಲಾಶಾಸನ ಪತ್ತೆ: ತುಳು ಭಾಷೆಯ ಪ್ರಾಚೀನತೆಗೆ ಮತ್ತೊಂದು ಐತಿಹಾಸಿಕ ಸಾಕ್ಷಿ!
- ಇಸ್ರೇಲ್ನಲ್ಲಿ ನಾಪತ್ತೆಯಾದ ಮಂಗಳೂರಿನ ಶಾಡ್ರಕ್ ಎಮ್ಯಾನುಯೆಲ್ ಪತ್ತೆಗೆ ತುಳುನಾಡ ರಕ್ಷಣಾ ವೇದಿಕೆ ಆಗ್ರಹ ಭಾರತೀಯ ರಾಯಭಾರ ಕಚೇರಿ ತಕ್ಷಣ ಮಧ್ಯಪ್ರವೇಶಿಸಲಿ – ಯೋಗಿಶ್ ಶೆಟ್ಟಿ ಜಪ್ಪು ಮನವಿ
- ಯೋಗಿಶ್ ಶೆಟ್ಟಿ ಜಪ್ಪು ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು
- ರಾಜ್ಯೋತ್ಸವ ಪ್ರಶಸ್ತಿಯಲ್ಲಿ ದಕ್ಷಿಣ ಕನ್ನಡದ ಸಾಧಕರಿಗೆ ಗೌರವದ ಗರಿ! ವಿಶ್ವನಾಥ ಸುವರ್ಣ, ಎ.ಸಿ. ಭಂಡಾರಿ, ಡಾ. ಇಂದಿರಾ ಹೆಗಡೆ ಸೇರಿದಂತೆ ಜಿಲ್ಲೆಯ ಗಣ್ಯರಿಗೆ ರಾಜ್ಯಮಟ್ಟದ ಮನ್ನಣೆ
- ಹೆಬ್ರಿ ತಾಲೂಕಿನಲ್ಲಿ ಸರ್ಕಾರಿ ವ್ಯವಸ್ಥೆಯ ಅವ್ಯವಸ್ಥೆ ಖಂಡಿಸಿ ನ.5ರಂದು ಬೃಹತ್ ಪ್ರತಿಭಟನೆ

