ಕಾಪು : ಬದ್ರಿಯ ಜುಮ್ಮಾ ಮಸ್ಜಿದ್ (ರಿ) ಮಲ್ಲಾರು ಮಜೂರು ವತಿಯಿಂದ ಹೊಸದಾಗಿ ಸೌಂದರ್ಯ ಗೊಳಿಸಿದ ಹೊರಗಡೆ ಮಸೀದಿ, ವಜ್ಹು ಖಾನ, ಮಸ್ಜಿದ್ ಎದುರು ವಿಶಾಲವಾದ ಶೀಟ್ ಅಳವಡಿಕೆ ಹಾಗೂ ಇನ್ನಿತರ ಕಾಮಗರಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಮಸ್ಜಿದ್ ವಠಾರದಲ್ಲಿ ಬಿ.ಜೆ.ಎಂ.
ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ಇವರ ಸಭಾಧ್ಯಕ್ಷತೆಯಲ್ಲಿ ಮಾಡಲಾಯಿತು.
ತದ ನಂತರ ಮಾತನಾಡಿದ ಡಾ.ಫಾರೂಕ್ ಈ ಮಸೀದಿಯ ಸಮಗ್ರ ಅಭಿವೃದ್ಧಿಗಾಗಿ ಕಳೆದ ಎರಡು ವರ್ಷದಲ್ಲಿ ಹಲವಾರು ಮಂದಿ ಸಹಕರಿಸಿದ್ದಾರೆ. ಈ ದಿನ ಉದ್ಘಾಟನೆಗೊಂಡ ಆಕರ್ಷನೀಯ ವಝು ಖಾನ ದಾನಿಗಳಾದ ಮರ್ಹೂಂ ಅಹಮದ್ ಹಾಜಿ ಗುಡ್ಡೆಕೇರಿ ಮಕ್ಕಳಾದ ಕಾಸಿಂ ಹಾಜಿ ಹಾಗೂ ರಝಕ್ ಹಾಜಿ ಹಾಗೂ ಮರ್ಹೂಂ ಹಾಜಿ ಬಾವು ಮಾಸ್ಟರ್ ಕುಟುಂಬದವರಿಂದ ಹೊರಗಡೆ ಮಸೀದಿ ಅಭಿವೃದ್ಧಿಗಾಗಿ ಅಬ್ದುಲ್ ಹಮೀದ್, ಯು.ಕೆ ಶಂಶುದ್ದಿನ್, ಯು.ಕೆ ಡಾ.ರಝಕ್ ಯು. ಕೆ, ಹಾಗೂ ಹುಸೇನ್ ಅವರಿಗೆ ಅಲ್ಲಾಹು ತಹಲ ಅವರ ಕುಟುಂಬಕ್ಕೆ ಒಳ್ಳೆದು ಮಾಡಲಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ದಾನಿಗಳ ಕುಟುಂಬದ ಪರ ಹಾಜಿ ಬಾವ ಚಂದ್ರನಗರ ಹಾಗೂ ಅಬ್ದುಲ್ ಹಮೀದ್ ಯು.ಕೆ ಉಡುಪಿ ಇವರನ್ನು ಸನ್ಮಾನಿಸಿ, ಗೌರವಿಸಿ ಮುಂದೆಯೂ ತಮ್ಮ ಸಹಕಾರ ಇದೆ ರೀತಿ ಇರಲಿ ಎಂದು ತಿಳಿಸಿದರು.
ಕಾರ್ಯಕ್ರಮದ ದುವಾ ಹಾಗೂ ಉದ್ಘಾಟನೆಯನ್ನು ಬಿ.ಜೆ.ಎಂ ಮಸ್ಜಿದ್ ಮುದರ್ರಿಸ್ ಮುಹಮ್ಮದ್ ಶಹೀರ್ ಅಲ್-ಹಿಕಮಿ ತಂಗಳ್ ಹಾಗೂ ಬಿ.ಜೆ.ಎಂ ಖತೀಬ್ ಅಬ್ದುಲ್ ರಶೀದ್ ಸಖಾಫಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಹಾಜಿ ಕೆ.ಅಬೂಬಕ್ಕರ್ ಪರ್ಕಳ ,ಬಿ.ಜೆ.ಎಂ ಮಸ್ಜಿದ್ ಉಪಾಧ್ಯಕ್ಷರುಗಳಾದ ಹಸನಬ್ಬ ಮಜೂರು, ಕಾರ್ಯದರ್ಶಿ ಅಶ್ರಫ್ ಮೂಸ, ಅಶ್ರಫ್ ಕರಂದಾಡಿ, ರಜಬ್ ಕರಂದಾಡಿ ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ
ಟಿ.ಐ.ವೈ.ಎ ಅಧ್ಯಕ್ಷ ಸೌಕತ್ ಬಾವ, ಸಿರಾಜುಲ್ ಹುದಾ ದಫ್ ಸಮಿತಿ ಅಧ್ಯಕ್ಷರಾದ ರಹೀಮ್ ಕರಂದಾಡಿ,ಸ್ವಲಾತ್ ಸಮಿತಿ ಕೊಂಬಗುಡ್ಡೆ ಅಧ್ಯಕ್ಷರಾದ ಮೊಯಿದಿನ್ ಸುಲ್ತಾನ್ ನಗರ,ಬಿ.ಜೆ.ಎಂ ಜಮಾತ್ ಕಮಿಟಿ ಸದಸ್ಯರುಗಳು ಬಿ.ಜೆ.ಎಂ ಉಸ್ತಾದರುಗಳು ,ಬಿ.ಜೆ.ಎಂ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು,ಜಮಾತ್ ಹಾಗೂ ಹೊರ ಜಮಾತ್ ಬಾಂದವರು ಉಪಸ್ಥಿತರಿದ್ದರು.
