ಧಾರವಾಡ, ಜುಲೈ 19: ಧಾರವಾಡ ಜಿಲ್ಲೆಯ ಅಳ್ನಾವರ ಸಮೀಪದ ಕಸ್ತೂರಬಾ ಬಾಲಕಿಯರ ವಸತಿ ಶಾಲೆಯಲ್ಲಿ 34 ವಿದ್ಯಾರ್ಥಿನಿಯರು ಏಕಾಏಕಿ ಅಸ್ವಸ್ಥಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರು 10 ರಿಂದ 15 ನಿಮಿಷಗಳಿಗೊಮ್ಮೆ ಒದ್ದಾಡುವುದು, ಚೀರಾಡುವುದು ಹಾಗೂ ಅಸಹಜವಾಗಿ ವರ್ತಿಸುವಂತಹ ಲಕ್ಷಣಗಳನ್ನು ತೋರಿಸುತ್ತಿದ್ದು, ಪೋಷಕರು ಮತ್ತು ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪ್ರಾಥಮಿಕ ವೈದ್ಯಕೀಯ ಮಾಹಿತಿಯ ಪ್ರಕಾರ, ವೈರಲ್ ಜ್ವರದ ಹಿನ್ನೆಲೆಯಲ್ಲೇ ಈ ಲಕ್ಷಣಗಳು ಕಾಣಿಸಿಕೊಂಡಿರುವ ಸಾಧ್ಯತೆ ಇದ್ದು, ಇನ್ಫ್ಲೂಯೆನ್ಸಾ A ಮತ್ತು B ಸೋಂಕು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸೋಂಕಿತ ವಿದ್ಯಾರ್ಥಿನಿಯರ ಪೈಕಿ 8 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಕೆಲ ವಿದ್ಯಾರ್ಥಿನಿಯರಿಗೆ ಅಳ್ನಾವರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಆಸ್ಪತ್ರೆಯಲ್ಲಿಯೂ ವಿದ್ಯಾರ್ಥಿನಿಯರು ಒದ್ದಾಡುವುದು ಹಾಗೂ ಚೀರಾಡುತ್ತಿರುವ ದೃಶ್ಯಗಳು ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. ಮಕ್ಕಳ ಆರೋಗ್ಯದ ಬಗ್ಗೆ ನಿಖರ ಮಾಹಿತಿ ನೀಡುವಂತೆ ಪೋಷಕರು ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.
ಘಟನೆಯ ಬೆನ್ನಲ್ಲೇ ವಸತಿ ನಿಲಯದ ವಾರ್ಡನ್ ನಿರ್ಲಕ್ಷ್ಯದಿಂದ ಸೋಂಕು ಹೆಚ್ಚಿನ ಮಕ್ಕಳಿಗೆ ಹರಡಿರಬಹುದು ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿನಿಯರ ಆರೋಗ್ಯ ಸಮಸ್ಯೆಗೆ ನಿಖರ ಕಾರಣ ಪತ್ತೆಹಚ್ಚಲು ವೈದ್ಯಕೀಯ ಪರೀಕ್ಷೆಗಳು ಮತ್ತು ಮಾದರಿ ಸಂಗ್ರಹ ಕಾರ್ಯ ಮುಂದುವರಿದಿದೆ.
ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಿರುವ ಅಧಿಕಾರಿಗಳು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆಗಳ ವರದಿ ಬಂದ ಬಳಿಕವೇ ಅಸ್ವಸ್ಥತೆಗೆ ನಿಖರ ಕಾರಣ ಸ್ಪಷ್ಟವಾಗಲಿದೆ.
Trending
- ಪರಮಜ್ಯೋತಿ ಭಜನಾ ಮಂಡಳಿ ವತಿಯಿಂದ ಸಂಭ್ರಮದಿಂದ ಆಟಿ ದೊಂಜಿ ದಿನ ಆಚರಣೆ,ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ: ಯೋಗಿಶ್ ಶೆಟ್ಟಿ ಜಪ್ಪು
- ತುಳುನಾಡ ರಕ್ಷಣಾ ವೇದಿಕೆ – ಉಡುಪಿ ಜಿಲ್ಲಾ ಘಟಕದ ಜಿಲ್ಲಾ ಮಟ್ಟದ ಸಭೆ ಯಶಸ್ವಿ ಆಟಿ ದೊಂಜಿ ದಿನ ಕಾರ್ಯಕ್ರಮದ ಸಿದ್ಧತೆ ಕುರಿತು ಮಹತ್ವದ ಚರ್ಚೆ – ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಕಾರ್ಯತಂತ್ರ ರೂಪಣೆ
- ಮಾತೃಸ್ವರೂಪಿ ಶ್ರೀಮತಿ ಚನ್ನಮ್ಮನವರ ನಿಧನಕ್ಕೆ ಎಂ. ಬಿ. ಸದಾಶಿವರಿಂದ ತೀವ್ರ ಸಂತಾಪ
- ಚೆನ್ನಮ್ಮ ದೇವೇಗೌಡರ ಅಗಲಿಕೆ: ಪಕ್ಷಕ್ಕೂ, ಕುಟುಂಬಕ್ಕೂ ತುಂಬಲಾರದ ನಷ್ಟ – ಯೋಗಿಶ್ ಶೆಟ್ಟಿ ಜೆಪ್ಪು
- ಧಾರವಾಡ ವಸತಿ ಶಾಲೆಯಲ್ಲಿ 34 ವಿದ್ಯಾರ್ಥಿನಿಯರಿಗೆ ಆರೋಗ್ಯ ಸಮಸ್ಯೆ – 8 ಮಂದಿಯ ಸ್ಥಿತಿ ಗಂಭೀರ, ಪೋಷಕರಲ್ಲಿ ತೀವ್ರ ಆತಂಕ
- ಲಯನ್ಸ್ ತಾರಾನಾಥ್ ಎಚ್.ಎಂ ಅವರಿಗೆ ಅಧಿಕಾರ ಹಸ್ತಾಂತರ
- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಅಂತಿಮ ನಮನ
- ಚೆನ್ನಮ್ಮ ದೇವೆಗೌಡ ಅವರ ನಿಧನಕ್ಕೆ ತೀವ್ರ ಸಂತಾಪ: ಜಾಕೆ ಮಾಧವ ಗೌಡ

