ಉಡುಪಿ: ಖಗೋಳಾಸಕ್ತರಿಗೆ ವಿಶೇಷ ಸಂತಸದ ಸುದ್ದಿ—ಏಪ್ರಿಲ್ 1ರಂದು ಆಕಾಶದಲ್ಲಿ ಅಪರೂಪದ ‘ಪಿಂಕ್ ಸೂಪರ್ ಮೂನ್’ ದರ್ಶನವಾಗಲಿದೆ. ಈ ಚಂದ್ರನು ಸಾಮಾನ್ಯ ಚಂದ್ರನಿಗಿಂತ ಸುಮಾರು 30% ಹೆಚ್ಚು ಪ್ರಕಾಶಮಾನವಾಗಿ ಹಾಗೂ ದೊಡ್ಡದಾಗಿ ಕಾಣಿಸಿಕೊಳ್ಳಲಿದ್ದು, ವಸಂತಕಾಲದ ಹೂವುಗಳ ಅರಳುವಿಕೆಯನ್ನು ಸಂಕೇತಿಸುವ ವಿಶೇಷತೆಯನ್ನು ಹೊಂದಿದೆ.
ಈ ಅಪೂರ್ವ ಖಗೋಳ ಘಟನೆ ವೀಕ್ಷಿಸಲು ಕೊಳಲಗಿರಿಯಲ್ಲೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 1ರಂದು ಸಂಜೆ 6:30ರಿಂದ ಕೊಳಲಗಿರಿಯ ಎತ್ತರ ಪ್ರದೇಶವಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎದುರು (ಗೋ ಆಸ್ಪತ್ರೆ ಸಮೀಪ) ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ವಿಶೇಷತೆ ಎಂದರೆ, ವಿಶ್ವ ದಾಖಲೆ ಮಾನ್ಯತೆ ಪಡೆದ ಮಣಿಪಾಲದ ಆರ್. ಮನೋಹರ್ ಅವರು ಆವಿಷ್ಕರಿಸಿದ ಶಕ್ತಿಶಾಲಿ ದೂರದರ್ಶಕದ ಮೂಲಕ ಚಂದ್ರನನ್ನು ನೇರವಾಗಿ ವೀಕ್ಷಿಸುವ ಅಪೂರ್ವ ಅವಕಾಶ ಲಭ್ಯವಾಗಲಿದೆ.
ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉದ್ಯಮಿ ಪ್ರಕಾಶ್ ಭಂಡಾರಿ ಸಹ ಉಪಸ್ಥಿತರಿರುವರು. ಕಾರ್ಯಕ್ರಮವನ್ನು ಗಣೇಶ್ ರಾಜ್ ಸರಳಬೆಟ್ಟು ಹಾಗೂ ಜಯ ಶೆಟ್ಟಿ ಬನ್ನಂಜೆ ಸಂಯೋಜಿಸಿದ್ದಾರೆ.
ಸ್ಥಳೀಯರಲ್ಲಿ ಖಗೋಳ ಶಾಸ್ತ್ರದ ಬಗ್ಗೆ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ದೂರದರ್ಶಕದ ಮೂಲಕ ಉಚಿತ ವೀಕ್ಷಣೆಯ ಅವಕಾಶ ನೀಡಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
👉 ಅಪರೂಪದ ‘ಪಿಂಕ್ ಸೂಪರ್ ಮೂನ್’ ದರ್ಶನವನ್ನು ತಪ್ಪಿಸಿಕೊಳ್ಳಬೇಡಿ!



