(ತುಳುನಾಡ ಸೂರ್ಯ) ಮಂಗಳೂರು: ಭರತನಾಟ್ಯದ ಸಂಪ್ರದಾಯವನ್ನು ಹೊಸ ತಲೆಮಾರಿಗೆ ರವಾನಿಸುವ ಭರವಸೆಯೊಂದಿಗೆ ವಿದುಷಿ ಶ್ರೀಯಾ ರಾವ್ ಸಣ್ಣಯ್ಯ ಅವರ ರಂಗಪ್ರವೇಶ ಸಮಾರಂಭ ರವಿವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನೃತ್ಯ ಸುಧಾ ಮಂಗಳೂರು ಸಂಸ್ಥೆಯ ಸ್ಥಾಪಕಿ ಹಾಗೂ ಹಿರಿಯ ನೃತ್ಯಗುರು ವಿದುಷಿ ಸೌಮ್ಯಾ ಸುಧೀಂದ್ರ ರಾವ್ ಅವರ ಪುತ್ರಿ ಮತ್ತು ಶಿಷ್ಯೆ ಆಗಿರುವ ಶ್ರೀಯಾ, ತಮ್ಮ ತಾಯಿಯ ಮಾರ್ಗದರ್ಶನದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ರಂಗಪ್ರವೇಶ ಮಾಡಿ ದರು. ಕಾರ್ಯಕ್ರಮದಲ್ಲಿ ಭರತನಾಟ್ಯದ ಸಂಪ್ರದಾಯ ಬದ್ಧ ಪ್ರದರ್ಶನಗಳನ್ನು ಮುಂದಿಟ್ಟುಕೊಂಡು ಅವರು ತಮ್ಮ ಕಲಾಪ್ರತಿಭೆಯನ್ನು ತೋರಿಸಿದರು.
ಹಿರಿಯ ನೃತ್ಯಗುರು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರು ಮಾತನಾಡಿ, “ಶ್ರೀಯಾ ಕಲೆಯನ್ನೇ ಮೈಗೂಡಿಸಿಕೊಂಡು ಹುಟ್ಟಿದಂತಹ ಕಲಾವಿದೆ. ಸನಾತನ ಭರತನಾಟ್ಯದ ಸಂಪ್ರದಾಯವನ್ನು ಮುಂದುವರೆಸುವ ಶಕ್ತಿ ಮತ್ತು ಭಕ್ತಿ ಅವರಲ್ಲಿದೆ. ರಂಗಪ್ರವೇಶದಲ್ಲಿ ಹಿರಿಯರು ನೀಡಿದ ನೃತ್ಯ ಬಂಧಗಳನ್ನು ಅವರು ಅತ್ಯಂತ ಸುಂದರವಾಗಿ ಉಳಿಸಿಕೊಂಡಿದ್ದಾರೆ” ಎಂದು ಪ್ರಶಂಸಿಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶ್ರೀಯಾ ಅವರ ಭವಿಷ್ಯಕ್ಕೆ ಶುಭ ಹಾರೈಸಿ, “ಭರತನಾಟ್ಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಿ, ದ.ಕ. ಜಿಲ್ಲೆಯ ಹೆಸರು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಲಿ” ಎಂದು ಆಶಿಸಿದರು.
ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ನ ನಿರ್ದೇಶಕ ಪ್ರೊ. ಕೆ. ರಾಮಮೂರ್ತಿ ರಾವ್ ಅವರು, “ಕಲಾವಿದೆಗೆ ಉತ್ಸಾಹವೇ ಮುಖ್ಯ. ಶ್ರೀಯಾ ಅವರಲ್ಲಿ ವರ್ಣದ ಕೊನೆಯವರೆಗೂ ಉತ್ಸಾಹ ಕಡಿಮೆಯಾಗಲಿಲ್ಲ. ನೃತ್ಯಕ್ಕೆ ಭಾಷೆಯ ಬೇಲಿ ಇಲ್ಲದ ಕಾರಣ ಕನ್ನಡ ಸಾಹಿತ್ಯದೊಂದಿಗಿನ ಪ್ರದರ್ಶನ ವಿಶೇಷವಾಯಿತು. ತಾಯಿ-ಮಗಳ ಈ ಸೇವೆ ಮುಂದುವರಿಯಲಿ” ಎಂದು ಹೇಳಿದರು.
ಸಂಸ್ಥೆಯ ಸ್ಥಾಪಕಿ ವಿದುಷಿ ಸೌಮ್ಯಾ ಸುಧೀಂದ್ರ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಶ್ರೀಯಾ ಅತ್ಯಂತ ಶಿಸ್ತುಬದ್ಧಳು. ನೃತ್ಯ, ಸಹನೆ, ಶಿಸ್ತು ಮತ್ತು ಸಂಸ್ಕಾರಗಳನ್ನು ತನ್ನಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದಾಳೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಯಾ ಅವರು ತಮ್ಮ ಮೃದಂಗ ಗುರು ವಿದ್ವಾನ್ ರವಿಕುಮಾರ್ ಕುಂಜೂರು ಹಾಗೂ ಗುರು-ತಾಯಿ ಸೌಮ್ಯಾ ಸುಧೀಂದ್ರ ರಾವ್ ಅವರಿಗೆ ಭಕ್ತಿಯಿಂದ ಗುರುವಂದನೆ ಸಲ್ಲಿಸಿದರು.
ಸಭೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ, ಚಲನಚಿತ್ರ ಕಲಾವಿದರು ದಯಾ ಶೆಟ್ಟಿ, ವಾಸು ಹರೀಶ್ ಶೆಟ್ಟಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಂಸ್ಥೆಯ ಅಧ್ಯಕ್ಷ ಡಾ. ಸುಧೀಂದ್ರ ರಾವ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ದಾಮೋದರ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ರಂಗಪ್ರವೇಶದ ಮೂಲಕ ಶ್ರೀಯಾ ರಾವ್ ಸಣ್ಣಯ್ಯ ಅವರು ಭರತನಾಟ್ಯದಲ್ಲಿ ತಮ್ಮ ಪಯಣವನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಇದು ಮಂಗಳೂರಿನ ಸಾಂಸ್ಕೃತಿಕ ವಲಯಕ್ಕೆ ಹೊಸ ಆಶಾಕಿರಣವಾಗಿದೆ. ಇವರಿಗೆ ತುಳುನಾಡ ಸೂರ್ಯ ಪತ್ರಿಕೆ ಶುಭ ಹಾರೈಸುತ್ತದೆ.
Trending
- ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ,ನಾರಾಯಣ ಗುರು ಕಾಲೇಜು ಹಳೆ ವಿದ್ಯಾರ್ಥಿ ಸಂಘದಿಂದ ಶೈಕ್ಷಣಿಕ ಪ್ರೋತ್ಸಾಹ
- ದ್ವೇಷ ಮತ್ತು ವೈಮನಸ್ಸು ಪ್ರಚೋದನೆ ಆರೋಪ: ಯೂಟ್ಯೂಬ್ ವಿಡಿಯೊ ವಿರುದ್ಧ ಪೊಲೀಸ್ ಕ್ರಮ
- ಜೆಡಿಎಸ್ ಜಿಲ್ಲಾ ಪದಾಧಿಕಾರಿಗಳ ಮಹಾ ಸಭೆ ಯಶಸ್ವಿಸಂಘಟನೆ ಬಲವರ್ಧನೆಗೆ ಮಹತ್ವದ ನಿರ್ಣಯಗಳು
- ಪ್ರಕೃತಿಯೊಂದಿಗೆ ವಿನಯ ಮತ್ತು ಸಹಬಾಳ್ವೆಯ ಬದುಕು ಅಗತ್ಯ: ಮಾತಾ ಅಮೃತಾನಂದಮಯಿ ದೇವಿ
- ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಂಗಳೂರು, ಉಪ್ಪಿನಂಗಡಿ, ಸುರತ್ಕಲ್ ಠಾಣೆಗಳ ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ ಕೊನೆಗೂ ಪೊಲೀಸರ ವಶಕ್ಕೆ
- ಕರ್ನಾಟಕ ರಾಜಕೀಯದಲ್ಲಿ ಅಸ್ಥಿರತೆ ಹೆಚ್ಚಳ: ಸಿದ್ದರಾಮಯ್ಯ ರಾಜಿನಾಮೆ ಕಾಂಗ್ರೆಸ್ ಒಳಜಗಳದ ಪರಾಕಾಷ್ಠೆಯೇ?
- ಮೇ 30ರಂದು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಪದಾಧಿಕಾರಿಗಳ ಮಹಾ ಸಭೆ ಪಕ್ಷ ಸಂಘಟನೆ ಬಲವರ್ಧನೆ,ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆ ಹಾಗೂ ಜನಪರ ಹೋರಾಟಗಳ ಕುರಿತು ಮಹತ್ವದ ಚರ್ಚೆ
- ಕುಂದಾಪುರ : ರಾಜ್ಯದ ಅಭಿವೃದ್ಧಿಗೆ ಜೆಡಿಎಸ್ ಕೊಡುಗೆ ಅಪಾರ- ಕೃಷ್ಣ ರೆಡ್ಡಿ

