ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಮತ್ತು ತುಳುನಾಡ ಸೂರ್ಯ ಪತ್ರಿಕೆಗಳ ಸಂಯುಕ್ತಾಶ್ರಯದಲ್ಲಿ ಸಹಕಾರ ಸಪ್ತಾಹ–2025ರ ಅಂಗವಾಗಿ ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ತುಳುಭವನದ ಸಿರಿ ಚಾವಡಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುನಾಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ವಹಿಸಿದ್ದರು.

ಮೂಡಬಿದಿರೆ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
“ಮಾನವನು ಸಹಕಾರ ತತ್ವದಿಂದಲೇ ಬದುಕನ್ನು ಶ್ರೀಮಂತಗೊಳಿಸಿದ್ದಾನೆ. ಇಂದಿನ ಸಹಕಾರಿ ಸಂಘಗಳು ಮನುಕುಲೋದ್ಧಾರಕ್ಕೆ ಇನ್ನಷ್ಟು ಕೊಡುಗೆ ನೀಡಲಿ,” ಎಂದು ಅವರು ಆಶಿಸಿದರು.
ಮಾಡೂರಿನ ಶಿವ ದುರ್ಗಾಂಬ ಮಠದ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಶುಭಾಶಯ ಕೋರಿದರು.

ಶಾಸಕ ವೇದವ್ಯಾಸ್ ಕಾಮತ್ online photo ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.
ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ, ಸಹಕಾರಿ ಸಪ್ತಾಹ ತುಳುನಾಡ ಸೂರ್ಯ ಪ್ರತಿಕೆ ವಿಶೇಷಾಂಕ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ. ಭಂಡಾರಿ, ಧರ್ಮಾವಲೋಕನ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಪರಿಶಿಷ್ಟ ಜಾತಿ – ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಂಗಯ್ಯ ಸ್ವಾಮಿ, ಕೆದಂಬಡಿ ರಾಮಯ್ಯಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಕಿರಣ್ ಬುಡ್ಡೆಗುತ್ತು, ತುಳುನಾಡ ರಕ್ಷಣಾ ವೇದಿಕೆ ವಕೀಲರ ಘಟಕ ಅಧ್ಯಕ್ಷ ರಾಘವೇಂದ್ರ ರಾವ್, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ವಕೀಲ ದಿನಕರ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಸಹಿತ ಗಣ್ಯರು ಹಾಜರಿದ್ದರು.
ಸಹಕಾರ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಕಾರ ಧುರೀಣರಿಗೆ 5 ತೌಳವ ಸಹಕಾರ ಮಾಣಿಕ್ಯ ಮತ್ತು 5 ತೌಳವ ಸಹಕಾರ ರತ್ನ ಪ್ರಶಸ್ತಿ ಪ್ರದಾನ ನಡೆಯಿತು
ಪ್ರಶಸ್ತಿ ಪುರಸ್ಕೃತರ ಪಟ್ಟಿ :
ತೌಳವ ಸಹಕಾರಿ ಮಾಣಿಕ್ಯ :
• ಶ್ರೀ ಕೃಷ್ಣ ಪಾಲೆಮಾರ್ – ಮಾಜಿ ಸಚಿವರು, ಅಧ್ಯಕ್ಷರು: ಶ್ರಿ ಲಕ್ಷ್ಮಣಾನಂದ ವಿವಿದ್ದೋದೇಶ ಸಹಕಾರಿ ಬ್ಯಾಂಕ್ (ನಿ)

• ಅನಿಲ್ ಲೋಬೋ – ಅಧ್ಯಕ್ಷರು, MCC ಬ್ಯಾಂಕ್ ಮಂಗಳೂರು

• ಚಿತ್ತರಂಜನ್ ಬೋಳಾರ್ – ಅಧ್ಯಕ್ಷರು, ಆತ್ಮಶಕ್ತಿ ವಿವಿದ್ದೋದೇಶ ಸಹಕಾರಿ ಸಂಘ (ನಿ.)

• ರಮೇಶ್ ಶೆಟ್ಟಿ – ಅಧ್ಯಕ್ಷರು, ಉಪ್ಪುರು ವ್ಯವಸಾಯ ಸೇವಾ ಸಹಕಾರಿ ಸಂಘ, ಉಡುಪಿ
• ಬಿ. ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ – ಅಧ್ಯಕ್ಷರು, ರೈತರ ಸಹಕಾರಿ ಸಂಘ (ಅ.) ಹಿರಿಯಡಕ

ತೌಳವ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು:
• ಸಂತೋಷ್ ಕುಲಾಲ್ – ಅಧ್ಯಕ್ಷರು, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ, ಪೆರ್ಡೂರು

• ದೇವದಾಸ್ ಕೊಲ್ಯ – ಉಪಾಧ್ಯಕ್ಷರು, ಭಗವತಿ
ಬ್ಯಾಂಕ್

• ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು – ಅಧ್ಯಕ್ಷರು, ಕೋಟೆಕಾರು ವ್ಯವಸಾಯ ಸಹಕಾರಿ ಸಂಘ (ನಿ.)
• ಆನಂದ್ ಶೆಟ್ಟಿ ಅಡ್ಯಾರ್ – ಅಧ್ಯಕ್ಷರು, ನಾಗುರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್

• ರಾಜೇಶ್ ಹೆಗ್ಡೆ – ಪ್ರಧಾನ ವ್ಯವಸ್ಥಾಪಕರು, ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್

ಸಹಕಾರಿ ಸಾಧಕ ಸನ್ಮಾನ
• ಅಶ್ವಿನ್ ಜೋಯಲ್ ನೊರೊನ್ಹಾ – ವ್ಯವಸ್ಥಾಪಕ ನಿರ್ದೇಶಕರು, ದ.ಕ. ಮ್ಯೂಚುಯಲ್ ಬೆನಿಫಿಟ್ ನಿಧಿ ಲಿ.; ಸ್ಥಾಪಕರು, DK Group of Companies

• ಶ್ರೀಮತಿ ಹೇಮಾವತಿ – ಅಧ್ಯಕ್ಷರು, ಡಾ. ಬಿ.ಆರ್. ಅಂಬೇಡ್ಕರ್ ಸಹಕಾರ ಸಂಘ, ಉರ್ವ ಮಂಗಳೂರು

ವಿಶೇಷ ಸನ್ಮಾನಿತರು
• ದಿನಕರ್ ಬಾಬು – ಮಾಜಿ ಅಧ್ಯಕ್ಷರು, ಉಡುಪಿ ಜಿಲ್ಲಾ ಪಂಚಾಯತ್

• ಡಿ.ಕೆ. ಶೆಟ್ಟಿ ಸೂರಿಂಜೆ – ಉದ್ಯಮಿ ಹಾಗೂ ತುಳುಲಿಪಿ ಪೋಷಕರು

• ಪುಷ್ಪರಾಜ್ ಶೆಟ್ಟಿ – ಅಧ್ಯಕ್ಷರು, ದ.ಕ. ಜಿಲ್ಲಾ ಪತ್ರಕರ್ತರ ಸಂಘ

• ಡಾ. ಪೂರ್ವಿ – ಬಾಲ ಪ್ರತಿಭೆ

ಕಾರ್ಯಕ್ರಮದಲ್ಲಿ ಪ್ರಶಾಂತ್ ಭಟ್ ಕಡಬ ಸ್ವಗತಿಸಿದರು. ಕ್ಲೀಟಸ್ ಲೋಬೊ ವಂದನೆ ಸಲ್ಲಿಸಿದರು.
ಮಂಜುಳಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಧಾನ ಕಾರ್ಯದರ್ಶಿ ಕೆ. ವಿವೇಕಾನಂದ ರಾವ್ ಸೇರಿ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







