ಬೆಂಗಳೂರು ತುಳುಕೂಟ (ರಿ.) ಅಧ್ಯಕ್ಷರಾದ ಶ್ರೀ ಸುಂದರರಾಜ ರೈ ರವರ ನಿಧನದಿಂದ ತುಳು ಸಮುದಾಯದಲ್ಲಿ ಆಳವಾದ ದುಃಖವಿದೆ. ಶ್ರೀ ಸುಂದರರಾಜ ರೈ ಅವರು ತುಳು ಭಾಷೆಯ ಸಂರಕ್ಷಣೆಗೆ, ಕರಾವಳಿ ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗೆ ಮತ್ತು ಬೆಂಗಳೂರು ಕಂಬಳದ ಯಶಸ್ಸಿಗಾಗಿ ಅನೇಕ ವರ್ಷಗಳ ಶ್ರಮ ಮತ್ತು ಸೇವೆಯನ್ನು ನಿಭಾಯಿಸಿದ್ದರು.
ಅವರ ನಾಯಕತ್ವ, ಧೈರ್ಯ ಮತ್ತು ನಿರಂತರ ಸೇವಾಭಾವ ಹೊಂದಿರುವವರಾಗಿದ್ದಾರೆ. ನಮ್ಮಲ್ಲಿ ಒಬ್ಬ ನಿಜವಾದ ಕ್ರಿಯಾಶೀಲ ನಾಯಕರೊಬ್ಬರನ್ನು ಕಳೆದುಕೊಂಡಿದ್ದೇವೆ — ಅವರು ತುಳು ಮತ್ತು ಕರಾವಳಿ ಪ್ರದೇಶದ ಜನರ ಹಕ್ಕುಗಳು, ಭಾವನೆಗಳು ಮತ್ತು ಹಿತಾಸಕ್ತಿಗಳನ್ನು ಸದಾ ಹೋರಾಟಮಾಡಿ ಕಾಪಾಡಿದರು.
ಶ್ರದ್ಧಾಂಜಲಿ ಸಭೆ:
ದಿನಾಂಕ: 30-10-2025 ಸಮಯ: 4.00
ಸ್ಥಳ: ಉರ್ವ ತುಳು ಭವನ
ಶ್ರೀ ಸುಂದರ ರಾಜ್ ರೈ ಅವರ ಬಂಧುಮಿತ್ರರು, ಗೆಳೆಯರು ಹಾಗೂ ಸಮುದಾಯದ ಪ್ರತಿಯೊಬ್ಬರೂ ಸಭೆಯಲ್ಲಿ ಭಾಗವಹಿಸಿ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವಂತೆ ವಿನಂತಿಸಲಾಗುತ್ತಿದೆ.




