ಬ್ರಹ್ಮಾವರ:
ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ವೊಂದು ಪೊಲೀಸರು ವಶಕ್ಕೆ ಪಡೆದಿದ್ದು, ಅದರ ಚಾಲಕರನ್ನು ಕೂಡ ಬಂಧಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ದಿನಾಂಕ 10-10-2025ರಂದು ಸಂಜೆ 5:45 ಗಂಟೆ ಸುಮಾರಿಗೆ ಬ್ರಹ್ಮಾವರ ಠಾಣೆಯ ಉಪನಿರೀಕ್ಷಕ ಅಶೋಕ ಮಾಳಾಬಗಿ ಮತ್ತು ಸಿಬ್ಬಂದಿ ವರ್ಗವು ವಾರಂಬಳ್ಳಿ ಗ್ರಾಮದ ಆಕಾಶವಾಣಿ ಜಂಕ್ಷನ್ ಬಳಿ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಕುಂದಾಪುರದತ್ತ ಸಾಗುತ್ತಿದ್ದ KA 47 7766 ಸಂಖ್ಯೆ ಟಿಪ್ಪರ್ನ್ನು ತಪಾಸಣೆಗೊಳಪಡಿಸಲಾಯಿತು.
ಚಾಲಕರನ್ನು ವಿಚಾರಿಸಿದಾಗ, ತಾನು ಮೋಹನ್ ಎಸ್. ಶೆಟ್ಟಿ (52), ಭಟ್ಕಳ ತಾಲ್ಲೂಕಿನ ಮುರುಡೇಶ್ವರದ ನಿವಾಸಿ ಎಂದು ಪರಿಚಯಿಸಿಕೊಂಡ. ಪೊಲೀಸರು ವಾಹನದಲ್ಲಿ ಏನು ಸಾಗಿಸುತ್ತಿರುವಿರಿ ಎಂದು ಕೇಳಿದಾಗ, ಮೂರು ಯುನಿಟ್ ಜಲ್ಲಿಕಲ್ಲು ಇದೆ ಎಂದು ತಿಳಿಸಿದರು. ಆದರೆ, ಅವರು ಈ ಸಾಗಣೆಗೆ ಯಾವುದೇ ಕಾನೂನುಬದ್ಧ ಪರವಾನಗಿ ಹೊಂದಿರಲಿಲ್ಲ. ತಾವು ಕಾರ್ಕಳದ ಬೆಳ್ಮಣ್ ಕ್ರಷರ್ನಿಂದ ಜಲ್ಲಿಕಲ್ಲು ಲೋಡ್ ಮಾಡಿಕೊಂಡು ಬೈಂದೂರಿನತ್ತ ತೆರಳುತ್ತಿದ್ದುದಾಗಿ ಆರೋಪಿಯು ತಿಳಿಸಿದ್ದಾರೆ.
ಪೊಲೀಸರು, ಟಿಪ್ಪರ್ ಮತ್ತು ಅದರಲ್ಲಿದ್ದ ಸುಮಾರು ₹15,000 ಮೌಲ್ಯದ ಜಲ್ಲಿಕಲ್ಲುಗಳನ್ನು ಮಹಜರು ಪ್ರಕ್ರಿಯೆಯ ಮೂಲಕ ವಶಕ್ಕೆ ಪಡೆದುಕೊಂಡಿದ್ದಾರೆ.
ಅನುಮತಿಯಿಲ್ಲದಂತೆ ಸರ್ಕಾರಿ ಸಂಪತ್ತಾದ ಜಲ್ಲಿಕಲ್ಲು ಕದ್ದುಕೊಂಡು ಸಾಗಾಟ ಮಾಡಿರುವ ಆರೋಪದ ಮೇಲೆ, ಮೋಹನ್ ಎಸ್. ಶೆಟ್ಟಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ತನಿಖೆ ಮುಂದುವರಿದಿದೆ.
