ರಾಷ್ಟ್ರೀಯ ವೈದ್ಯರ ದಿನಾಚರಣೆಯ ರಾಷ್ಟ್ರ ಪುರಸ್ಕಾರ ಡಾ ಕುಲಾಲ್ ಅವರಿಗೆ
ನೂರು ವರ್ಷಗಳ ಸಂಭ್ರಮದ ಹೊಸ್ತಿಲಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಘ ತನ್ನ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಸಮುದಾಯ ಸೇವಾ ಪುರಸ್ಕಾರಕ್ಕೆ
ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರನ್ನ ಆಯ್ಕೆಮಾಡಿದ್ದು
ಅವರ ಒಡನಾಟದಲ್ಲಿ ಇರುವ ಕರಾವಳಿ ಮಲೆನಾಡು ಹಾಗು ರಾಜ್ಯದ ಎಲ್ಲಾ ವರ್ಗಗಳ ಹಿತೈಷಿಗಳಿಗೆ ಹೆಮ್ಮೆಯ ವಿಚಾರ
ಸಮಾಜ ಮುಖಿ ವೈದ್ಯಕೀಯ ಸೇವೆ, ವೈದ್ಯಕೀಯ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ಸಿಡಿಲಬ್ಬರದ ಸಂಘಟಕ, ನೇರ ಮಿಂಚಿನ ಮಾತು, ದಿಟ್ಟ ಸ್ಪಷ್ಟ ಬರಹ, ಸಾಮಾಜಿಕ ನ್ಯಾಯಕ್ಕಾಗಿ ಬಡಿದಾಟ ಮಾಡಬಲ್ಲ ವೈದ್ಯ ಎಂಬ ಖ್ಯಾತಿಯ ಡಾ ಕುಲಾಲ್, ಐಎಂಎ, ಕುಟುಂಬ ವೈದ್ಯರ ಸಂಘ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕನ್ನಡಕಟ್ಟೆ, ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್, ವೈದ್ಯ ಬರಹಗಾರರ ಬಳಗ, ಯುವ ವೇದಿಕೆ ಸಹಿತ ನೂರಾರು ಸಂಘಟನೆಗಳ ಜೊತೆ ಸದ್ದಿಲ್ಲದೇ ದುಡಿಯುತ್ತಾ, ತನು ಮನ ಧನಗಳ ಸಹಕಾರ ನೀಡುತ್ತಾ, ಮುಗುಳ್ನಗುತ್ತಾ ಸದ್ದಿಲ್ಲದೇ ಸುದ್ದಿಯಾದವರು. ನಾಡಿನ ಶ್ರೇಷ್ಠ ಪುರಸ್ಕಾರ ವಾದ ದೇವರಾಜ ಅರಸು ಪುರಸ್ಕಾರ, ರಾಜ್ಯ
ಐಎಂಎ ರಾಜ್ಯ ಡಾ ಬಿ ಸಿ ರಾಯ್ ಪುರಸ್ಕಾರ, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಹೊಯ್ಸಳ ಪುರಸ್ಕಾರ, ಅಂತರಾಷ್ಟ್ರೀಯ ಆರ್ಯಭಟ ಪುರಸ್ಕಾರ, ಮಂಗಳೂರು ಐಎಂಎ ಯಿಂದ ಜೀವ ಮಾನ ಸಾಧನ ಪುರಸ್ಕಾರ ಸಹಿತ ನೂರಾರು ಗೌರವ ಪಡೆದಿರುವ ಇವರು ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಡಾ ಬಿ ಸಿ ರಾಯ್ ರಾಷ್ಟ್ರ ಪುರಸ್ಕಾರವನ್ನ ಹೊಸದೆಹಲಿಯಲ್ಲಿ ಜುಲೈ ೧೩ ರಂದು ಕೇಂದ್ರಸರಕಾರದ ಪ್ರತಿನಿಧಿ ಯವರ ಉಪಸ್ಥಿತಿ ಯಲ್ಲಿ ರಾಷ್ಟ್ರೀಯ ಐಎಂಎ ನಾಯಕರ ಕೈಯಿಂದ ಸ್ವೀಕರಿಸಲಿದ್ದಾರೆ ಎಂಬುದೇ ಅವರ ಹಿತೈಷಿ ಮಿತ್ರರುಗಳಿಗೆ ಹೆಮ್ಮೆ. ವೈದ್ಯಕೀಯ ವೃತ್ತಿ ಯಲ್ಲಿ ಜೀವ ಮಾನದ ಸಾಧನೆಗೆ ಪಡೆಯುವ ಈ ಪುರಸ್ಕಾರಕ್ಕೆ ಭಾಜನಾಗುವ ಬೆರಳೆಣಿಕೆಯಷ್ಟು ಮಂದಿಯಲ್ಲಿ ಡಾ ಕುಲಾಲ್ ಅತಿ ಕಿರಿಯ ವಯಸ್ಸಿನ ಸಾಧಕರು.
Trending
- ದುಬೈನಲ್ಲಿ ‘ಗಮ್ಮತ್ ಕಲಾವಿದೆರ್’ ನಾಟಕ ತಂಡದ 14ನೇ ವಾರ್ಷಿಕೋತ್ಸವ – ‘ಪೋನಗ ಕೊನೊಪರಾ..?’ ನಾಟಕದ ಪ್ರಥಮ ಪ್ರದರ್ಶನಕ್ಕೆ ಭರ್ಜರಿ ಪ್ರತಿಕ್ರಿಯೆ
- ಖಚಿತ ಮಾಹಿತಿ ಮೇರೆಗೆ ದಾಳಿ – ಮೂಡುಬಿದಿರೆಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಭೇದಿಸಿದ ಪೊಲೀಸರು ನಾಲ್ವರು ಬಂಧನ | ಇಬ್ಬರು ಅಪ್ರಾಪ್ತ ಬಾಲಕಿಯರ ರಕ್ಷಣೆ
- ಕಾರ್ಕಳ ಮಾಜಿ ಶಾಸಕ, ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (40) ಆತ್ಮಹತ್ಯೆ
- “ಕಾಂತಾರ” ಸಿನಿಮಾದಲ್ಲಿ ದೈವಗಳಿಗೆ ಅಪಚಾರ ಆಗಿಲ್ಲ: ಐಕಳ ಹರೀಶ್ ಶೆಟ್ಟಿ ಸ್ಪಷ್ಟನೆ
- ಬಂಟರ ಸಂಘ (ರಿ.) ಬಜಪೆ ವಲಯದ ಅಧ್ಯಕ್ಷರಾಗಿ ಶ್ರೀ ವೇಣುಗೋಪಾಲ್ ಶೆಟ್ಟಿ ಆಯ್ಕೆ
- ಕಂಬಳಕ್ಕೆ 2 ಕೋಟಿ ಅನುದಾನ ಮೀಸಲು : ಐಪಿಎಲ್ ಮಾದರಿಯಲ್ಲಿ ಕಂಬಳ ಆಯೋಜನೆ ಚಿಂತನೆ
- ಮಂಗಳೂರಲ್ಲಿ ಖ್ಯಾತ ಮಲಯಾಳಂ ನಟ ಜಯಕೃಷ್ಣನ್ ಬಂಧನಟೆರರಿಸ್ಟ್ ಎಂದು ಕ್ಯಾಬ್ ಚಾಲಕನಿಗೆ ಅವಮಾನ– ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲು
- ಕಾಪು ಬೀಚ್ನಲ್ಲಿ ಅಪ್ರಾಪ್ತ ಬಾಲಕನಿಗೆ ಮುತ್ತು ನೀಡಿದ ಪ್ರಕರಣ: 47 ವರ್ಷದ ವ್ಯಕ್ತಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು