ಮಂಗಳೂರು :- ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 24/04/2025ರಂದು ಸಂಭವಿಸುತ್ತಿರುವ ಶೂನ್ಯ ನೆರಳಿನ ವಿದ್ಯಮಾನವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ವಿದ್ಯಮಾನದ ಬಗ್ಗೆ ವಿವರಣೆಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಪ್ರಾತ್ಯಕ್ಷಿಕೆಗಳನ್ನು ಆಸಕ್ತ ಸಂದರ್ಶಕರಿಗೆ ಏರ್ಪಡಿಸಲಾಗಿತ್ತು. ಸಂದರ್ಶಕರು ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಸಂದೇಹಗಳನ್ನು ಪರಿಹರಿಸಿಕೊಂಡರು. ಆದರೆ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸುತ್ತಿರುವ ಸಮಯದಲ್ಲಿ ಮೋಡ ಕವಿದ ವಾತಾವರಣವಿದ್ದ ಕಾರಣ ಅದರ ಅನುಭವವನ್ನು ಪಡೆಯಲು ಸಾಧ್ಯವಾಗಲಿಲ್ಲ. ವೀಕ್ಷಕರಿಗೆ ಸೋಲಾರ್ ಫಿಲ್ಟರ್ ಅಳವಡಿಸಿದ ದೂರದರ್ಶಕದ ಮೂಲಕ ಸೌರಕಲೆಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಯಿತು.
ಬೆಂಗಳೂರಿನ ಜವಾಹರ್ಲಾಲ್ ನೆಹರು ತಾರಾಲಯ, ಚೆನ್ನೈನ ಪೆರಿಯಾರ್ ವಿಜ್ಞಾನ ಮತ್ತು ತಂತ್ರಜ್ಞಾನ ಮ್ಯೂಸಿಯಂ ಮತ್ತು ಇನ್ನಿತರ ಕೇಂದ್ರಗಳ ಸಮನ್ವಯತೆಯೊಂದಿಗೆ ಭೂಮಿಯ ಸುತ್ತಳತೆ, ಭೂಮಿ ತಿರುಗುವ ವೇಗ ಮತ್ತು ನಿಜ ಉತ್ತರ ದಿಕ್ಕುಗಳನ್ನು ಕಂಡುಹಿಡಿಯುವ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು.
ಕೇಂದ್ರದ ವೈಜ್ಞಾನಿಕ ಅಧಿಕಾರಿ ವಿಘ್ನೇಶ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು ಹಾಗೂ ಕೇಂದ್ರದ ಸಿಬ್ಬಂದಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವಲ್ಲಿ ಸಹಕರಿಸಿದರು.
Trending
- ಆಟವಾಡುತ್ತಿದ್ದಾಗ ಕುತ್ತಿಗೆಗೆ ಸಿಲುಕಿದ ಹಗ್ಗ: 9 ವರ್ಷದ ಬಾಲಕ ದುರಂತ ಸಾವು ತಂಗಿಯ ಆತಂಕದ ಕೂಗು, ಮನೆಮಂದಿಯ ಧಾವಂತದ ನಡುವೆ ಸಂಭವಿಸಿದ ದುರಂತ
- ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದ ಅಂಗವಾಗಿ 28 ಗಂಟೆಗಳ ನಿರಂತರ ಗಾಯನದ ವಿಶ್ವದಾಖಲೆಯ ಪ್ರಯತ್ನ
- ಪರಿಶಿಷ್ಟ ಜಾತಿಯ ಯುವತಿಗೆ ಕಿರುಕುಳ ಆರೋಪ: 61 ವರ್ಷದ ವ್ಯಕ್ತಿ ಬಂಧನ,ಹಣದ ಆಮಿಷವೊಡ್ಡಿ ಅಸಭ್ಯವಾಗಿ ವರ್ತಿಸಿದ ಆರೋಪ; ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಕಾರ್ಮಿಕರ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ಸಲ್ಲದು: ಸಮಗ್ರ ತನಿಖೆಗೆ ಆಗ್ರಹ. ಸಾಲಿಗ್ರಾಮ ಕಟ್ಟಡ ದುರಂತಕ್ಕೆ ನ್ಯಾಯ ಸಿಗಲಿ: ಯೋಗಿಶ್ ಶೆಟ್ಟಿ ಜಪ್ಪು ನೇತೃತ್ವದಲ್ಲಿ ಹೋರಾಟದ ಎಚ್ಚರಿಕೆ
- ಅದ್ದೂರಿಯಾಗಿ ನೆರವೇರಿದ ಬೆಳ್ತಂಗಡಿ ತರಿಗೆ ಪಾವತಿದಾರರ ಮತ್ತು ತರಿಗೆ ಉಳಿತಾಯಗಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭ
- ಸಹಕಾರಿ ಸಪ್ತಾಹ–2026ರ ಅಂಗವಾಗಿ ತೌಳವ ಸಹಕಾರ ಪ್ರಶಸ್ತಿ ಪ್ರದಾನ ಸಮಾರಂಭ ಸಹಕಾರ ಕ್ಷೇತ್ರದ ಸಾಧಕರಿಗೆ ಗೌರವದ ಸನ್ಮಾನ; ಅರ್ಹ ಸಾಧಕರಿಂದ ಶಿಫಾರಸಿಗೆ ಮನವಿ
- ₹110 ಕೋಟಿ ವೆಚ್ಚದ ನೂತನ ಜಿಲ್ಲಾ ಆಸ್ಪತ್ರೆಗೆ ಹಳೆಯ ವೈದ್ಯಕೀಯ ಪರಿಕರ ಬೇಡ! ₹9 ಕೋಟಿ ಅನುದಾನದ ಬಳಕೆ ಕುರಿತು ಬಹಿರಂಗಪಡಿಸಿ: ತುಳುನಾಡ ರಕ್ಷಣಾ ವೇದಿಕೆ ಆಗ್ರಹ
- ಸಹಕಾರ ಸಪ್ತಾಹದ ಅಂಗವಾಗಿ ರಾಜ್ಯಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನವೆಂಬರ್ 7ರೊಳಗೆ ನೋಂದಣಿಗೆ ಅವಕಾಶ; ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಆಹ್ವಾನ
